/newsfirstlive-kannada/media/media_files/2025/09/07/vij_wife-2025-09-07-20-11-59.jpg)
ಪತಿ ಬೀರಪ್ಪ ಪೂಜಾರಿ ಹತ್ಯೆಗೆ ಯತ್ನಿಸಿದ ಸುಂದರಿ ಪತ್ನಿ ಸುನಂದಾ ಈಗ ಅಂದರ್!
ಮಲಗಿದ್ದಾಗ ಗಂಡನಿಗೆ ಗುಂಡಿ ತೋಡಿದ್ದ ಸುಂದರಿ!.. ಬಿಡಬ್ಯಾಡ.. ಬಿಡಬ್ಯಾಡ ಅಂತ ಕ್ರೌರ್ಯ..ಗಂಡ ಗಡಗಡ! .. 12 ವರ್ಷ ಸಂಸಾರ.. 2 ಮಕ್ಕಳು.. ‘ಆ’ ಮೋಹಿ ಸಿಕ್ಕಿದ್ದೇಗೆ?
ಗಂಡಂದಿರಿಗೆ ಗಂಡಾಂತರ ಇನ್ನಷ್ಟು ಮುಂದುವರೆದಿದೆ. ಇಲ್ಲೊಬ್ಬ ಗಂಡನಿಗೆ, ಒಂದ್ಕಡೆ ಗ್ರಹಣದಿಂದ ಗಂಡಾಂತರ ಎದುರಾಗ್ತಿದೆ ಅನ್ನೋ ಸೂಚನೆ ಇದ್ದಾಗ್ಲೇ.. ಹೆಂಡ್ತಿಯಿಂದ ಪ್ರಾಣ ಗಂಡಾಂತರ ಎದುರಾಗಿದೆ. ಆ ರಾತ್ರಿ ಎದೆ ಮೇಲೆ ಕೂತು ಕತ್ತು ಹಿಸುಕುತ್ತಿದ್ದವಱರು ಅನ್ನೋ, ಭಯದ ಪ್ರಶ್ನೆ ನಡುವೆನೇ.. ತನ್ನ ಪತ್ನಿಯ ಒಂದು ಕ್ರೌರ್ಯದ ಕೂಗು, ಆ ಪತಿಯನ್ನ ಆ ಕ್ಷಣವೇ ಕೊಂದಂತಾಗಿತ್ತು. ಅಷ್ಟಕ್ಕೂ ಏನೀ ಮತ್ತೊಂದು ಕ್ರೈಂ ಕಥೆ..?
ಅದು ಸೆಪ್ಟೆಂಬರ್ನ ಮೊದಲ ದಿನ.. ಸರಿಯಾಗಿ ಇಡೀ ಗ್ರಾಮ ನಿದ್ರೆಯ ಬಾಗಿಲಲ್ಲಿದ್ದ ಸಮಯ. ಬೀರಪ್ಪ ಅನ್ನೋ ಒಬ್ಬ ವ್ಯಕ್ತಿ, ತನ್ನ ಬೆಡ್ ರೂಮ್ನಲ್ಲಿ ಲೈಟ್ ಆನ್ ಮಾಡಿಟ್ಕೊಂಡೇ ನಿದ್ರೆಗೆ ಜಾರಿದ್ದ.. ಸರಿಯಾಗಿ ಮಧ್ಯರಾತ್ರಿಯ ಕಗ್ಗತ್ತಲು ಆವರಿಸುತ್ತಿದ್ದಾಗಲೇ, ಯಾರೋ ಎದೆ ಮೇಲೆ ಕೂತು ಕತ್ತು ಹಿಸುಕುತಿದ್ರು. ಒಬ್ಬರು ಕಾಲು ಹಿಡಿದುಕೊಂಡು, ಮರ್ಮಾಂಗವನ್ನ ಹಿಂಡಿತಿದ್ರು.. ಇನ್ನೇನು ಜೀವ ಹೋಗ್ತಿದೆ.. ಸೆಪ್ಟೆಂಬರ್ನ ಮೊದಲ ದಿನವೇ, ನನ್ನ ಅಂತ್ಯದ ದಿನ ಅನ್ನೋ ಸ್ಥಿತಿ ಆ ವ್ಯಕ್ತಿಯದ್ದು. ಯಾರೋ ಕಳ್ಳರಿರ್ಬೋದು ಅನ್ಕೊಂಡು ಒದ್ದಾಡ್ತಿದ್ದ ಬೀರಪ್ಪ, ಕಿರುಚಾಡೋಕೆ ಟ್ರೈ ಮಾಡಿದಾಗ, ಎದೆ ಮೇಲಿದ್ದವನು ಮುಖಕ್ಕೆ ಗುದ್ದಿದ್ದಾನೆ.. ಯಾರಿದು.. ಯಾರೋ ನೀನು ಅಂತ ಮುನುಗ್ತಿದ್ದ ಬೀರಪ್ಪಗೆ, ಸಿದ್ಧು ಕೊಂದುಬಿಡು.. ಬಿಡ್ನ್ಯಾಡ ಅವ್ನನ್ನ, ಕೊಂದಾಕು ಅನ್ನೋ ಪತ್ನಿಯ ಕೂಗು ಕೇಳಿಸಿದೆ.. ಆ ಕೂಗು ಕೇಳಿ ಬೀರಪ್ಪನಿಗೆ ಗರಬಡಿಸಿತ್ತು. ಆ ಕ್ರೌರ್ಯದ ಕೂಗು ಇಲ್ನೋಡಿ ಈ ಸುಂದರಿಯದ್ದೇ.
ನೋಡೋಕೆ ಬೆಳ್ ಬೆಳಗ್ಗೆ ಸ್ನಾನ ಮಾಡಿ, ತುಳಸಿಕಟ್ಟೆ ಸುತ್ತಿ, ಗಂಡನಿಗೆ ಕಾಫಿ ಕೊಡೋಣ ಹಾಗೆ ಇರೋ ಈಕೆ.. ಮೂರ್ಮೂರು ಗಂಡ್ ಮಕ್ಳ ಸಾವಾಸ ಮಾಡೋ ಶೂರ್ಪಣಕಿ ಅಂತ ಒಬ್ಬ ವಿಡಿಯೋ ಮಾಡಿ ಹೇಳ್ತಿದಾನೆ. ಮೇಲ್ನೋಟಕ್ಕೆ ಮಾತ್ರ, ಇವಳು ನಾಲ್ಕೇ ಮೋಳ ಇರ್ಬೋದು, ಸೀರೆ ಎಂಟು ಮೊಳ.. ಕಣ್ಣು ಕಾಸಗಲ.. ಆಸೆ ಮಾತ್ರ ಪಕ್ಕದೂರಗಲ ಇತ್ತಂತೆ. ಮುಖ ನೋಡಿ ತಾವರೆಯ ಹೂವು ಅನ್ಕೊಂಡೋರಿಗೆ ಈಕೆ ಬಲು ಮಾಗಿದ ಮಾವು.. ಇವ್ಳನ್ನ ಕಟ್ಕೊಂಡೋಗಿಗೆ ಮಾತ್ರ ಬಾವು ಅನ್ನುವಂತೆ ಮಾಡಿದಾಳೆ.
ಈ ಹೆಣ್ಣಿನ ಹೆಸ್ರು ಸುನಂದಾ.. ಎರಡು ಮಕ್ಳಿದ್ರೂ ಇನ್ನೂ ಮಾಸಿರ್ಲಿಲ್ಲ ಈಕೆಯ ಅಂದ. ಇವ್ಳ ಪರಿಮಳದ ಗಂಧ.. ಊರೆಲ್ಲಾ ಹಬ್ಬಿದಾಗ, ಅದ್ರಿಂದ ಒಬ್ಬನಿಗಾಗಿತ್ತು ಆನಂದ.. ಅವ್ಳ ಅಂದ ಚಂದಕೇ ಮನಸೋತು, ಸಕ್ರಮದ ಬದುಕಿಗೆ ಎಂಟ್ರಿ ಕೊಟ್ಟು, ಅಕ್ರಮದ ಅಟ್ಟಹಾಸ ಮೆರೆದಿದ್ದ. ಅವ್ನೇ ಈ ಸಿದ್ದಪ್ಪ ಕ್ಯಾತಕೇರಿ.
ನಾದ ಕೆಡಿ ಸುಂದ್ರಿ ಇಂಡಿ ಗಂಡನಿಗೆ ಗುಂಡಿ ತೋಡಿದ್ದಳು!
ಬಿಡಬ್ಯಾಡ.. ಬಿಡಬ್ಯಾಡ ಅಂತ ಕ್ರೌರ್ಯ.. ಗಂಡ ಗಡಗಡ!
12 ವರ್ಷ ಸಂಸಾರ.. 2 ಮಕ್ಕಳು.. ‘ಆ’ ಮೋಹಿ ಸಿಕ್ಕಿದ್ದೇಗೆ?
ಅದು 2013.. ಬೀರಪ್ಪ ಮಾಯಪ್ಪ ಪೂಜಾರಿ ವೆಡ್ಸ್ ಸುನಂದಾ ಅಂತ ಧೂಂ ಧಾಂ ಅಂತ ಮದುವೆ ನಡೆದಿತ್ತು. ಕಟ್ ಮಾಡಿದ್ರೆ ಇಬ್ರು ಮಕ್ಕಳಾದ್ರು. ನಾದ ಕೆಡಿ ಗ್ರಾಮದಿಂದ ಸುನಂದಾಳನ್ನ, ಬೀರಪ್ಪ ವಿಜಯಪುರ ಜಿಲ್ಲೆಯ ಇಂಡಿಗೆ ಕರ್ಕೊಂಡು ಬಂದು.. ಅಕ್ಕಮಹಾದೇವಿ ನಗರದಲ್ಲೇ ಒಂದು ಮನೆ ಬಾಡಿಗೆ ಪಡೆದು ಒಲವೇ ಜೀವನ ಸಾಕ್ಷಾತ್ಕಾರ ಅಂತ ಹೊಸ ಜೀವನ ಶುರು ಮಾಡಿದ್ರು. ಬಟ್ ಅದೇ ಊರಲ್ಲಿ ಬೀರಪ್ಪನಿಗೆ ಪರಿಚಯವಾಗಿದ್ದ ಈ ಸಿದ್ಧಪ್ಪ.. ಅವ್ರ ಸಂಸಾರದಲ್ಲಿ ಬಿರುಗಾಳಿ ಎಬ್ಬಿಸಿಬಿಟ್ಟಿದಾನೆ.
ಹೇಳಿ ಕೇಳಿ ಸುನಂದಾ ಹಳ್ಳಿ ಸೊಬಗು ತುಂಬಿಕೊಂಡ ಸುಂದ್ರಿ.. ಗಂಡ ಬೀರಪ್ಪನಿಗೆ ಪರಿಚಯವಾಗಿ ಸಿದ್ಧ, ಪ್ರತಿ ದಿನ ಏನೋ ಒಂದು ನೆಪದಲ್ಲಿ ಮನೆಗೆ ಬರ್ತಿದ್ದ. ಹಾಗೆ ಸುನಂದಾಗೂ, ಸಿದ್ಧನಿಗೆ ಕಣ್ಣು ಕಣ್ಣು ಪ್ಲಸ್ ಆಗಿ.. ಅವ್ರು ಇವ್ರು ಕಾಣದೇ ಮೈನಸ್ ಆಗಿ.. ಊರೂರು ಸುತ್ತಿ ಮಿಲನೋತ್ಸವದಲ್ಲಿ ಇಂಟೂ ಇಂಟೂ ಆಗ್ಬಿಟ್ಟಿದ್ರು. ದಿನ ಕಳೆದಂತೆ, ಬೀರಪ್ಪನಿಗೆ ಡೌಟ್ ಬಂದು, ಫೋನ್ ಚೆಕ್ ಮಾಡಿದ್ರೆ.. ಸಿದ್ಧನ ಜೊತೆ ತನ್ನ ಹೆಂಡ್ತಿ ಇಟ್ಕೊಂಡ ಅಕ್ರಮದ ಕತೆ ಬಯಲಾಗಿತ್ತು.
ಏನೋ ಕೆಟ್ಟ ಗಳಿಗೆ ಹೆಂಡ್ತಿ ತಪ್ಪು ಮಾಡಿಬಿಟ್ಟಿದಾಳೆ. ಮಕ್ಕಳಿರೋದ್ರಿಂದ ಆಕೆಗೆ ಬುದ್ಧಿವಾದ ಹೇಳಿ.. ಸಿದ್ಧನ ಜೊತೆ ಫ್ರೆಂಡ್ಶಿಪ್ ಕಟ್ ಮಾಡ್ಕೊಂಡು, ಅವ್ನಿಗೂ ವಾರ್ನಿಂಗ್ ಮಾಡಿ ಬೀರಪ್ಪ ಸುಮ್ಮನಾಗಿದ್ದ. ಬಟ್ ರುಚಿಗೆ ಅಭ್ಯಾಸವಾಗಿದ್ದ ಸುನಂದಾ ಮನಸ್ಸು.. ಮತ್ತೆ ಸಿದ್ಧನ ಜೊತೆ ಸಹಿ ನುಂಗೋಕೆ ಸಿದ್ದವಾಗಿತ್ತು. ಈ ಬಾರಿನೂ ಈ ಇಬ್ಬರು ಬೀರಪ್ಪನ ಕಣ್ಣಿಗೆ ಬಿದ್ದಿದಾರೆ.. ಅಷ್ಟೇ ಆ ದಿನವೇ ಸುನಂದಾಳನ್ನ ಗಂಡ ಹೊರದೊಬ್ಬಿದ್ದ.
ಗಂಡ ಬಿಟ್ಟವಳನ್ನ ಕಂಡ್ರೆ ಊರ್ ತುಂಬಾ ಗಂಡಸ್ರೆ ಹುಟ್ಕೊಂಡ್ಬಿಡ್ತಾರೆ ಅಂತ ಮರ್ಯಾದೆಗೆ ಅಂಜಿ.. ಗಂಡನ ಮನೆ ಮುಂದೆ ಮೊಸಳೆ ಕಣ್ಣೀರಾಕ್ತಾ ಇದೆ ಕೊನೆ.. ಇನ್ಯಾವತ್ತೂ ಅವ್ನ ಜೋಡಿ ಮಾತಂಡಿಗಿಲ್ರೀ ಅಂತ ಬೇಡಿಕೊಂಡು.. ಅಂತೂ ಗಂಡನ ಮನಸ್ಸನ್ನ ಕರಗಿಸಿದ್ಲು. ಇಲ್ಲಿಂದ ಶುರುವಾಗಿದ್ದೇ ಸುನಂದಾಳ ಅಸಲೀ ಮೋಹಪರ್ವ.
ಅದು ಅಕ್ಟೋಬರ್ 31.. ತನ್ನೂರಿನ ಸೊಸೈಟಿ ಎಲೆಕ್ಷನ್ ಇದ್ದ ಕಾರಣ.. ಬೀರಪ್ಪ ಅಲ್ಲೋಗಿ ವಾಪಸ್ ಬರುವಷ್ಟರಲ್ಲಿ ರಾತ್ರಿ ಹತ್ತುಕ್ಕಾಲ್ ಆಗಿತ್ತು. ಹೆಂಡ್ತಿ ಇನ್ನೂ ಕೆಲ್ಸ ಮಾಡ್ತಿದ್ದರಿಂದ, ಬೀರಪ್ಪ ಬೆಡ್ ರೂಮ್ ಲೈಟ್ ಆನ್ನಲ್ಲಿಟ್ಟೇ ನಿದ್ರೆಗೆ ಜಾರಿದ.. ಮುಂದಾಗಿದ್ದೇನು? ಅವ್ನ ಬೆಡ್ರೂಮ್ಗೆ ನುಗ್ಗಿದ್ಯಾರು? ಬೀರಪ್ಪನ ಮಾತಲ್ಲೇ ಕೇಳಿ.
ಇದೇ.. ಇಷ್ಟು ಭಯಾನಕ ಸ್ಥಿತಿ ಬೀರಪ್ಪನಿಗೆ ಎದುರಾಗಿತ್ತು. ಎದೆ ಮೇಲೆ ಕೂತು ಕತ್ತು ಹಿಸುಕುತಿರೋದು ಯಾರು? ಕಾಲಿಡಿದ್ಕೊಂಡಿರೋದು ಯಾರು? ಇಲ್ಲೆನಾಗ್ತಿದೆ ಅನ್ನೋವಷ್ಟರಲ್ಲಿ ಕೂಲರ್ ಕೆಳೆಗೆ ಬಿದ್ದು ಸೌಂಡಾಗಿದೆ.. ಆ ಟೈಮ್ನಲ್ಲಿ ಒಂದು ಧ್ವನಿ ಕೇಳುತ್ತೆ.. ಸಿದ್ಧ ಬಿಡ್ಯಾಡ ಅವ್ನ ಖಲ್ಲಾಸ್ ಮಾಡ್ಬಿಡು ಅಂತ.. ಆ ಧ್ವನಿ ಇದೇ ಸುಂದ್ರಿ.. ಸುನಂದಾಳದ್ದಾಗಿತ್ತು.
ಖಲ್ಲಾಸ್ ಮಾಡಿಬಿಡು ಸಿದ್ಧ.. ಬಿಡಬೇಡ ಮುಗಿಸಿಬಿಡು ಅಂತ ಹೆಂಡ್ತಿ ಕೂಗ್ತಿದ್ಲು ಎಂದು ಬೀರಪ್ಪ ಪೂಜಾರಿ ಹೇಳಿದ್ದಾರೆ.
ಇವತ್ತು ಬೀರನನ್ನ ಮುಗಿಸ್ಲೇಬೇಕು ಅಂತ ಬಂದವರೂ ಹಳೆ ಶತ್ರುಗಳಲ್ಲ.. ಸಾಲ ಕೊಟ್ಟು ಕಿರಿಕಿರಿ ಅನುಭವಿಸಿದವ್ರೂ ಅಲ್ಲ.. ಇದೇ ಸಿದ್ಧಪ್ಪ ಕ್ಯಾತಕೇರಿ. ಸಿದ್ಧಪ್ಪನೇ ತನ್ನನ್ನ ಕೊಲೆ ಮಾಡೋಕೆ ಬಂದಿದಾನೆ ಅಂತ ಕನ್ಫರ್ಮ್ ಆಗಿದ್ದು.. ಸುನಂದಾ ಸಿದ್ಧು ಬಿಡ್ಯಾಡ ಅವ್ನ, ಖಲ್ಲಾಸ್ ಮಾಡು ಅಂದಾಗ. ಹಾಗಾದ್ರೆ
ಬೀರಪ್ಪ ಬಚಾವ್ ಆಗಿದ್ದೇಗೆ?
ಮನೆ ಓನರ್ ಬಂದಿರ್ಲಿಲ್ಲ ಅಂದರೇ, ನಾನು ಉಳಿಯೋಕೆ ಸಾಧ್ಯವೇ ಇರ್ಲಿಲ್ಲ ಅಂತ ಬೀರಪ್ಪ ಪೂಜಾರಿ ಹೇಳಿದ್ದಾರೆ.
ಆ ದಿನ ಮನೆಯಲ್ಲಿ ಮಗ ಮಾತ್ರ ಇದ್ದ. ಮಗಳು ಹಾಸ್ಟಲ್ನಲ್ಲಿದ್ದು ಓದ್ತಾ ಇದ್ಲು.ಬೀರಪ್ಪನ ಮೇಲೆ ಅಟ್ಯಾಕ್ ಆದಾಗ.. ಅಷ್ಟು ಶಬ್ಧ ಆದ್ರೂ ಮಗ ಎಚ್ಚರಗೊಂಡಿಲ್ಲ. ಬಟ್ ಯಾವಾಗ ಓನರ್ ಓಡಿ ಬಂದು, ಕೂಗಿ ಕರೆದ್ರೋ ಆವಾಗ ಮಗ ಎದ್ದು ಡೋರ್ ಓಪನ್ ಮಾಡಿದ್ನಂತೆ. ಓನರ್ ಒಳಗೆ ಬಂದಿದ್ದಕ್ಕೆ ಸಿದ್ಧಪ್ಪ ಮತ್ತವನ ಫ್ರೆಂಡ್ ಎಸ್ಕೇಪ್ ಆಗಿದ್ರಂತೆ. ಈಗ ಬೀರಪ್ಪ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ತಗೊಳ್ತಿದಾನೆ. ಪತ್ನಿ, ಸಿದ್ಧಪ್ಪನ ಮೇಲೆ ಕಂಪ್ಲೆಂಟ್ ಕೊಟ್ಟಾಗಿದೆ. ಈ ನಡುವೆ ತಲೆ ಮರೆಸಿಕೊಂಡಿದ್ದ ಸಿದ್ಧ ವಿಡಿಯೋ ಮೂಲಕ ಪ್ರತ್ಯಕ್ಷನಾಗಿದ್ದ.
ಕೊಲೆಗೆ ನಡೆಸಿದ್ದ ಪ್ರತಿ ಪ್ಲ್ಯಾನನ್ನೂ ಸುನಂದಾ ಪ್ರಿಯಕರ ಬಿಡಿಸಿಟ್ಟಿದಾನೆ. ಬೀರಪ್ಪನ ಕೊಲೆಯ ಸೂತ್ರಧಾರಿ ಸುನಂದಾಳೆ ಅನ್ನೋದನ್ನ ನೀಟಾಗಿ ಎಕ್ಸ್ಪ್ಲೇನ್ ಮಾಡಿದ್ದಾನೆ. ಪ್ಲ್ಯಾನ್ ಫೇಲ್
ಬೀರಪ್ಪನಿಗೆ ಈಗ ಫುಲ್ ಕ್ಲಾರಿಟಿ ಇದೆ.. ಇದು ತನ್ನ ಹೆಂಡ್ತಿ ಮತ್ತವಳ ಪ್ರಿಯಕರ ಸಿದ್ಧ ಸೇರಿ ಮಾಡಿದ್ದ ಅಟ್ಯಾಕ್ ಅಂತ ಗೊತ್ತಾಗಿ ಕಂಪ್ಲೇಂಟ್ ಕೊಟ್ಟಾಗಿದೆ. ಬಟ್ ಈಗ ಅತ್ತ ಸಿದ್ಧ, ಇತ್ತ ಸುನಂದಾ ಇಬ್ರು ಒಬ್ಬರ ಮೇಲೊಬ್ಬರು ಆರೋಪ ಮಾಡ್ಕೊಳ್ತಾ ಸುತ್ತಾಡಿದ್ರು. ಒಬ್ರೆ ಇದ್ರೆ ಹೆದರಿ ಸಾಯ್ತ್ತಾರೆ, ಇಬ್ಬರಿದ್ರೆ ಹೊಡೆದಾಡಿ ಸಾಯ್ತಾರೆ ಅನ್ನೋ ಹಾಗೆ. ಇಬ್ಬರು ದೂರ ದೂರ ಇದ್ದೇ ಇದೆಲ್ಲಾ ನಡೆಸ್ತಿದಾರೆ.
ಸದ್ಯಕ್ಕೆ ಇಂಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ. ಬೀರಪ್ಪನ ಪತ್ನಿ ಸುನಂದಾಳನ್ನ ಇಂಡಿ ಪೊಲೀಸರಿಂದ ಬಂಧಿಸಲಾಗಿದೆ. ಪರಾರಿಯಲ್ಲಿರೋ ಪ್ರಿಯಕರ ಸಿದ್ಧನಿಗಾಗಿ ಶೋಧ ನಡಿತಿದೆ. ಇಷ್ಟು ದಿನ ತವರಲ್ಲಿದ್ದ ಸುನಂದಾ ತವರಿಗೆ ಕಳಂಕ ತಂದಿದಾಳೆ.. ತಾನು ಕೆಟ್ಟಿರ್ಬೋದು, ತವರು ಕೆಟ್ಟು ಇರಲಾರದು ಅಲ್ವಾ.. ಈ ಕೇಸ್ನಲ್ಲಿ ಮತ್ತಷ್ಟು ಟ್ವಿಸ್ಟ್ಗಳು ತೆರೆದುಕೊಳ್ಳೊ ಚಾನ್ಸ್ ಇದೆ. ಈ ಸಂಶಯ ಬರೋದಕ್ಕೆ ಕಾರಣ.. ಸಿದ್ಧಪ್ಪನ ಆ ವಿಡಿಯೋ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.