ಉದ್ಯಮಿ ಕಿಡ್ನಾಪ್ ಕೇಸ್​ನಲ್ಲಿ ಸ್ಟಾರ್ ಡೈರೆಕ್ಟರ್​​ ನಂದ ಕಿಶೋರ್​​ಗೆ ಸಂಕಷ್ಟ..!

ಬೆೆಂಗಳೂರಿನ ಜಯನಗರದ ಉದ್ಯಮಿ ಮನೋಜ್ ಅವರು ಸಿನಿಮಾ ನಿರ್ದೇಶಕ ನಂದಕಿಶೋರ್ ಗೆ ಹಣವನ್ನು ಸಾಲವಾಗಿ ನೀಡಿದ್ದರು. ಆ ಹಣವನ್ನು ಕೊಡಿಸಿದ್ದ ರಾಜೇಶ್‌ಗೆ ಹಣ ವಾಪಸ್ ಕೊಡಿಸುವಂತೆ ಉದ್ಯಮಿ ಮನೋಜ್ ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ರಾಜೇಶ್, ಉದ್ಯಮಿ ರಾಜೇಶ್ ರನ್ನು ಕಿಡ್ನ್ಯಾಪ್ ಮಾಡಿದ್ದಾನೆ.

author-image
Chandramohan
bangalore ccb office

ಕಿಡ್ನ್ಯಾಪ್ ಆರೋಪಿ ರಾಜೇಶ್ @ ಅಪ್ಪಿ ಹಾಗೂ ಸಿಸಿಬಿ ಕೇಂದ್ರ ಕಚೇರಿ

Advertisment
  • ಸಿನಿಮಾ ನಿರ್ದೇಶಕ ನಂದಕಿಶೋರ್ ಗೆ ಮನೋಜ್‌ ರಿಂದ ಸಾಲ ಕೊಡಿಸಿದ್ದ ರಾಜೇಶ್
  • ಆದರೇ, ನಂದಕಿಶೋರ್ ಹಣ ಕೊಡದೇ ಇದ್ದಾಗ ರಾಜೇಶ್‌ಗೆ ಹಣ ಕೊಡಿಸುವಂತೆ ಪಟ್ಟು
  • ಸಿಟ್ಟಿಗೆದ್ದು, ಸಾಲ ಕೊಟ್ಟಿದ್ದ ಮನೋಜ್‌ರನ್ನೇ ಕಿಡ್ನ್ಯಾಪ್ ಮಾಡಿದ್ದ ರಾಜೇಶ್!

ಸಿನಿಮಾ ನಿರ್ದೇಶಕ ನಂದಕಿಶೋರ್​ಗೆ ಹಣ ಕೊಟ್ಟಿದ್ದ ತಪ್ಪಿಗೆ ಉದ್ಯಮಿಯನ್ನು  ಕಿಡ್ನಾಪ್ ಮಾಡಲಾಗಿದೆ. ಮನೋಜ್ ಎಂಬ ಉದ್ಯಮಿಯನ್ನು ರೌಡಿ ಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ ಎಂಬಾತ ಕಿಡ್ನ್ಯಾಪ್ ಮಾಡಿದ್ದಾನೆ. ಉದ್ಯಮಿ ಮನೋಜ್ ನೀಡಿದ ದೂರಿನ ಮೇರೆಗೆ ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿಯನ್ನು ಪೊಲೀಸರು ಈಗ ಬಂಧಿಸಿದ್ದಾರೆ. ನಿರ್ದೇಶಕ ನಂದಕಿಶೋರ್​ಗೆ ಈಗ ಪೊಲೀಸ್ ವಿಚಾರಣೆಯ ಬಿಸಿ ತಟ್ಟಲಿದೆ.

ಯಾರಿಗೋ ಸಹಾಯ ಮಾಡಲು ಹೋಗಿ ಉದ್ಯಮಿ ಮನೋಜ್ , ರೌಡಿಶೀಟರ್​ಗಳಿಂದ ಕಿಡ್ನ್ಯಾಪ್ ಆಗಿ ಹಣ ಕಳೆದುಕೊಂಡು ಈಗ ಪೊಲೀಸ್ ಠಾಣೆಗೆ ಅಲೆಯಬೇಕಾದ ಪರಿಸ್ಥಿತಿಯನ್ನು ತಂದುಕೊಂಡಿದ್ದಾರೆ. ಈಗಿನ ಕಾಲದಲ್ಲಿ ಬೇರೆಯವರಿಗೆ ಸಹಾಯ ಮಾಡುವುದು ಕೂಡ ಒಂದು ರೀತಿಯಲ್ಲಿ ತಪ್ಪು ಅಂತ ಉದ್ಯಮಿ ಮನೋಜ್ ಸ್ಥಿತಿಯನ್ನು ನೋಡಿದರೇ ಅನ್ನಿಸದೇ ಇರೋದು. 

ಉದ್ಯಮಿ ಮನೋಜ್ ರನ್ನು ಕಿಡ್ನ್ಯಾಪ್ ಮಾಡಿದ್ದ ಕೇಸ್​ನಲ್ಲಿ ರೌಡಿಶೀಟರ್ ರಾಜೇಶ್ ಅಂಡ್ ಗ್ಯಾಂಗ್ ಅನ್ನು  ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಜಯನಗರದ ಉದ್ಯಮಿ ಮನೋಜ್ ಎಂಬುವವರನ್ನು  ರೌಡಿಶೀಟರ್ ರಾಜೇಶ್ ಅಲಿಯಾಸ್ ಅಪ್ಪಿ ಗ್ಯಾಂಗ್ ಕಿಡ್ನ್ಯಾಪ್ ಮಾಡಿತ್ತು. ರಾಜೇಶ್, ಬೇಕರಿ ರಘು ಅಣ್ಣ ಸೀನಾ ಅಲಿಯಾಸ್ ಶ್ರೀನಿವಾಸ್, ನವೀನ ಬಂಧಿತ ಆರೋಪಿಗಳು ಆಗಿದ್ದಾರೆ. ಈ ಮುಂಚೆಯೇ ಉದ್ಯಮಿ ಮನೋಜ್ ಗೆ  ರೌಡಿಶೀಟರ್ ರಾಜೇಶ್ಅಲಿಯಾಸ್ ಅಪ್ಪಿ  ಪರಿಚಯ ಇತ್ತು.

ಒಂದು ವರ್ಷದ ಹಿಂದೆ ಮನೋಜ್ ನಿಂದ ನಟ, ನಿರ್ದೇಶಕ ನಂದ ಕಿಶೋರ್​ಗೆ ಹಣ ರಾಜೇಶ್ ಕೊಡಿಸಿದ್ದರು. ಮನೋಜ್ ರಿಂದ ನಿರ್ದೇಶಕ ನಂದಕಿಶೋರ್​ಗೆ 1ಲಕ್ಷದ  20 ಸಾವಿರ ರೂಪಾಯಿ ಹಣವನ್ನು ಸಾಲವಾಗಿ ರಾಜೇಶ್  ಕೊಡಿಸಿದ್ದ. ನಂತರ ಉದ್ಯಮಿ ಮನೋಜ್‌ಗೆ ಹಣ ಕೊಡದೆ ನಿರ್ದೇಶಕ ನಂದ ಕಿಶೋರ್ ಸತಾಯಿಸಿದ್ದರು. ನಿರ್ದೇಶಕ ನಂದಕಿಶೋರ್ ಗೆ ಹಣವನ್ನು ಕೊಡಿಸಿದ್ದ ರೌಡಿ ಶೀಟರ್ ರಾಜೇಶ್ ಗೆ ಹಣವನ್ನು ವಾಪಸ್ ಕೊಡಿಸುವಂತೆ ಉದ್ಯಮಿ ಮನೋಜ್ ಬೆನ್ನು ಬಿದ್ದಿದ್ದರು.

 ಇದರಿಂದಾಗಿ ಮನೋಜ್ ಕಾಟ ಜಾಸ್ತಿ ಆಯಿತು ಎಂದು ಕೋಪಗೊಂಡ ರೌಡಿಶೀಟರ್ ರಾಜೇಶ್, ಉದ್ಯಮಿ ಮನೋಜ್ ರನ್ನೇ ಕಿಡ್ನ್ಯಾಪ್ ಮಾಡಲು ನಿರ್ಧರಿಸಿದ್ದ. 1 ಲಕ್ಷದ 20 ಸಾವಿರ ರೂಪಾಯಿ ಹಣವನ್ನು ವಾಪಸ್ ಕೊಡುವುದಾಗಿ ಹೇಳಿ, ಉದ್ಯಮಿ ಮನೋಜ್ ರನ್ನು ಬೆಂಗಳೂರಿನ ಬಸವೇಶ್ವರ ನಗರದ ಮೋದಿ ಆಸ್ಪತ್ರೆ ಬಳಿಗೆ ಕರೆಸಿಕೊಂಡಿದ್ದಾರೆ. ಅಲ್ಲಿಂದಲೇ ಕಾರಿನಲ್ಲಿ ಉದ್ಯಮಿ ಮನೋಜ್ ರನ್ನು ಕಾರಿನಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ.

Director Nanda kishore

ಸಾಲ ಪಡೆದಿದ್ದ ಸಿನಿಮಾ ನಿರ್ದೇಶಕ ನಂದಕಿಶೋರ್. 

ಬಳಿಕ ಮನೋಜ್ ರಿಂದ 3 ಲಕ್ಷ ರೂಪಾಯಿ ಹಣವನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. 10 ಲಕ್ಷ ರೂಪಾಯಿ ಹಣ ಕೊಡುವಂತೆ ಉದ್ಯಮಿ ಮನೋಜ್‌ಗೆ ಬೇಡಿಕೆ ಇಟ್ಟಿದ್ದಾರೆ. ಹಣವನ್ನು ಹೊಂದಿಸುವುದಾಗಿ ಸ್ನೇಹಿತರಿಗೆ ಕಾಲ್ ಮಾಡಿದ್ದ  ಉದ್ಯಮಿ ಮನೋಜ್, ಸೀದಾ ಸಿಸಿಬಿಗೆ ದೂರು ಕೊಡಿಸಿದ್ದಾರೆ. ಬಳಿಕ ಕೇಸ್ ದಾಖಲಿಸಿಕೊಂಡ ಸಿಸಿಬಿ ಪೊಲೀಸರು ರೌಡಿಶೀಟರ್  ರಾಜೇಶ್ ಮತ್ತು ಗ್ಯಾಂಗ್ ಅನ್ನು ಬಂಧಿಸಿದ್ದಾರೆ. ಮುಂದಿನ ಹಂತದಲ್ಲಿ ನಿರ್ದೇಶಕ ನಂದ ಕಿಶೋರ್​ರನ್ನು ಸಿಸಿಬಿ ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುವರು. ನಂದ ಕಿಶೋರ್​ಗೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Director Nanda kishore loan not return and kidnap case
Advertisment