/newsfirstlive-kannada/media/media_files/2025/08/26/greater-bengalore-pradhikara-2025-08-26-16-57-37.jpg)
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಸ್ತಿತ್ವಕ್ಕೆ ತಂದ ರಾಜ್ಯ ಸರ್ಕಾರ
ರಾಜ್ಯ ಸರ್ಕಾರದಿಂದ ಅಂತಿಮ ಜಿಬಿಎ ಅದೇಶ ಪ್ರಕಟವಾಗಿದೆ. ಬಿಬಿಎಂಪಿ ಅನ್ನು ರದ್ದು ಮಾಡಿ ಜಿಬಿಎ ಅಡಳಿತವನ್ನು ಕಾಂಗ್ರೆಸ್ ಸರ್ಕಾರ ತಂದಿದೆ. ಜಿಬಿಎ ಅಂದರೇ, ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿ ಅಂತಿಮ ಅಧಿಸೂಚನೆ ಪ್ರಕಟವಾಗಿದೆ. ರಾಜ್ಯದ ಗೆಜೆಟ್ ನಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಗೆ ತರುವ ಅಧಿಸೂಚನೆ ಇಂದು ಪ್ರಕಟವಾಗಿದೆ. ನಾಳೆಯಿಂದ ಬಿಬಿಎಂಪಿ ಬದಲು ಜಿಬಿಎ ಅಸ್ತಿತ್ವಕ್ಕೆ ಬರಲಿದೆ. ಗ್ರೇಟರ್ ಬೆಂಗಳೂರು ಅಥಾರಿಟಿ ಜಾರಿಗೆ ತರಲು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ಜಿಬಿಎ ಜಾರಿಗೆ ಅಧಿಕೃತ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಅಥಾರಿಟಿ ಅಡಿ ಐದು ಹೊಸ ಪಾಲಿಕೆಗಳು ಆಸ್ತಿತ್ವಕ್ಕೆ ಬರಲಿವೆ. ಪೂರ್ವ ಪಾಲಿಕೆ, ಪಶ್ಚಿಮ ಪಾಲಿಕೆ, ಉತ್ತರ ಪಾಲಿಕೆ ಹಾಗೂ ದಕ್ಷಿಣ ಪಾಲಿಕೆ ಹಾಗೂ ಕೇಂದ್ರ ಪಾಲಿಕೆ ಎಂಬ ಐದು ಹೊಸ ನಗರ ಪಾಲಿಕೆಗಳು ಆಸ್ತಿತ್ವಕ್ಕೆ ಬರಲಿವೆ.
ಬಿಬಿಎಂಪಿ ಕೇಂದ್ರ ಕಚೇರಿಯೇ ಇನ್ನೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಕೇಂದ್ರ ಕಚೇರಿಯಾಗಲಿದೆ.
ಐದು ಹೊಸ ಪಾಲಿಕೆ ಆಸ್ತಿತ್ವಕ್ಕೆ ತರುವ ಬಗ್ಗೆ ಇಂದು ಗೆಜೆಟ್ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದ ನಗರಾಭಿವೃದ್ದಿ ಇಲಾಖೆಯು ಗ್ರೇಟರ್ ಬೆಂಗಳೂರು ಅಥಾರಿಟಿಯನ್ನು ಆಸ್ತಿತ್ವಕ್ಕೆ ತರುವ ಅಧಿಕೃತ ಗೆಜೆಟ್ ಅಧಿಸೂಚನೆಯನ್ನು ಹೊರಡಿಸಿದೆ. ಐದು ಪಾಲಿಕೆಗಳಿಗೂ ಈಗಾಗಲೇ ಗಡಿಯನ್ನು ಗುರುತಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಸಿಎಂ ಅಧ್ಯಕ್ಷರು. ಡಿಸಿಎಂ ಡಿಕೆಶಿ ಉಪಾಧ್ಯಕ್ಷರು. ಬೆಂಗಳೂರಿನ ಎಲ್ಲ ಶಾಸಕರು, ವಿಧಾನಪರಿಷತ್ ಸದಸ್ಯರು, ಲೋಕಸಭಾ ಸದಸ್ಯರು ಸದಸ್ಯರಾಗಿದ್ದಾರೆ. ಬೆಂಗಳೂರಿನ ವಿಳಾಸದಲ್ಲಿ ವಾಸ ಇರುವ ರಾಜ್ಯಸಭಾ ಸದಸ್ಯರಿಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯ ಸ್ಥಾನ ನೀಡಲಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ 75 ಮಂದಿ ಸದಸ್ಯರಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.