/newsfirstlive-kannada/media/media_files/2025/09/04/jito-zewar-expo-2025-09-04-17-46-39.jpg)
ಜೀತೋ ಜೀವಾರ್ ಎಕ್ಸ್ ಪೋ ನಾಳೆಯಿಂದ 3 ದಿನ ನಡೆಯಲಿದೆ
‘ಚಿನ್ನಾಭರಣ’ ವಜ್ರಾಭರಣ ಅಂದ್ರೆ ಯಾರಿಗ್​ ತಾನೇ ಇಷ್ಟ ಇಲ್ಲ ಹೇಳಿ.. ಹೆಣ್ಮಕ್ಕಳಿಗಂತೂ ಅಚ್ಚು ಮೆಚ್ಚು.. ಇದು ನಿಮಗಾಗಿಯೇ ಇರೋ ಸುವರ್ಣವಕಾಶ.. ಒಂದೇ ಸೂರಿನಡಿ ವೈರಟಿ ಡಿಸೈನ್ ಚಿನ್ನ, ವಜ್ರ, ಟೆಂಪಲ್​ ಜ್ಯುವೆಲ್ಲರಿ, ಆಕರ್ಷಕ ಉಡುಗರೆ ನಿಮಗಾಗಿ ಕಾದಿದೆ.. ಸೋ ಎಲ್ಲಿ ಏನೂ ಅಂದ್ರಾ? ಇಲ್ಲಿದೆ ಕಂಪ್ಲೀಟ್​ ಡಿಟೇಲ್​​
ಕಣ್ಣು ಸೆಳೆಯೋ ವಜ್ರಾಭರಣಗಳು... ಮನಸೂರೆಗೊಳಿಸೋ ಚಿನ್ನಾಭರಣಗಳು.. ಆಕರ್ಷಕ, ಮನ ಮೆಚ್ಚೋ ಟೆಂಪಲ್​​ ಒಡವೆಗಳು.. ಇದು ಕಾಲ, ಕಲ್ಪನೆಗೂ ಮೀರಿದ ಆಭರಣಗಳ ಸಂಭ್ರಮೋತ್ಸವ.. ಪಾರಂಪರಿಕ, ಸಮಕಾಲೀನ ಡಿಸೈನ್​ಗಳ ಸಮಾಗಮ. ಬೆಂಗಳೂರಿನಲ್ಲಿ ನಡೆಯುತ್ತಿದೆ ಅತೀ ದೊಡ್ಡ ಜ್ಯುವೆಲ್ಲರಿ ಎಕ್ಸ್​​ಪೋ ಹಾಗೂ ಬ್ರೈಡಲ್​ವೇರ್​​ಗಳ ಮಹಾಸಂಗಮ ಅದುವೇ JITO ZEWAR JEWELLERY EXPO.
ಸೆಪ್ಟೆಂಬರ್ 5 ರಿಂದ ಮೂರು ದಿನ ನಡೆಯುವ ಎಕ್ಸ್ ಪೋ
ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಲ್ಲಿ ಎಕ್ಸ್ ಪೋ ಆಯೋಜನೆ
ಹೌದು, ಇದೇ ಸೆಪ್ಟೆಂಬರ್​ 5, 6, ಮತ್ತು 7ರಂದು ಬೆಂಗಳೂರಿನ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಅತಿದೊಡ್ಡ ಎಕ್ಸ್​ಕ್ಲೂಸಿವ್ ಜ್ಯೂವೆಲ್ಲರಿ ಎಕ್ಸ್​ಪೋ ಮತ್ತು ಬ್ರೈಡಲ್ ಉಡುಪುಗಳ ಸಂಭ್ರಮ ನಡೆಯಲಿದೆ.. ಒಂದೇ ವೇದಿಕೆಯಲ್ಲಿ ಗೋಲ್ಡ್​, ಡೈಮಂಡ್, ಪೊಲ್ಕಿ, ಟೆಂಪಲ್ ಜ್ಯೂವೆಲ್ಲರಿ, ಮನಸೂರೆಗೊಳ್ಳುವ ಹೆರಿಟೇಜ್ ಹಾಗೂ ಕಾಂಟೆಂಪೊರರಿ ಡಿಸೈನ್​ಗಳ ಪ್ರದರ್ಶನ ಮತ್ತು ಮಾರಾಟ ನಿಮಗೋಸ್ಕರ ನಡೆಯಲಿದೆ.. ಸರಿಸುಮಾರು 120ಕ್ಕೂ ಅಧಿಕ ಸ್ಟಾಲ್ಸ್​​ ಇಲ್ಲಿವೆ.. ನವನವೀನ ರೀತಿಯ ಮದುವೆ ಉಡುಪುಗಳ ಎಕ್ಸ್​ಕ್ಲೂಸಿವ್ ಕಲೆಕ್ಷನ್ ಇಲ್ಲಿ ಲಭ್ಯವಿದೆ..
ಇಷ್ಟೆಲ್ಲಾ ವೈರೆಟಿ ಒಂದೇ ವೇದಿಕೆಯಲ್ಲಿ ಸಿಗ್ತಾ ಇದೆ ಅಂದಾಗ ಆಕರ್ಷಕ ಉಡುಗೊರೆಯು ಇರಬೇಕಲ್ಲವೇ.. ಹೌದು ಮೊದಲ 1 ಸಾವಿರ ವಿಸಿಟರ್ಸ್​ಗೆ ವಿಶೇಷ ಉಡುಗೊರೆ ಕಾದಿದೆ.. ಪ್ರತಿ ದಿನ ಚಿನ್ನದ ಸರ, ವಜ್ರದ ಉಂಗುರು ಹಾಗೂ ಕಾರು ಗೆಲ್ಲುವ ಸುವರ್ಣವಕಾಶ ಇಲ್ಲಿ ಸಿಗಲಿದೆ.. ಝೀತೋ ಜೇವರ್​​ ಬೆಂಗಳೂರು ನಾರ್ತ್​​ ಚಾಪ್ಟರ್​​ ಪೌಂಡೇಶನ್​ ವತಿಯಿಂದ ಈ ಎಕ್ಸ್​ಪೋವನ್ನ ಆಯೋಜಿಸಲಾಗಿದೆ.. ಹೆಚ್​ಎನ್​ಐಗಳು, ಸೆಲೆಬ್ರಿಟಿಗಳು ಇನ್​ಫ್ಲೂಯೆನ್ಸರ್ಸ್​ ವೆಡ್ಡಿಂಗ್ ಪ್ಲಾನರ್​​ಗಳ ಮಹಾಸಂಗಮ ಇಲ್ಲಿ ನಡೆಯಲಿದೆ..​
‘ಒಂದೇ ವೇದಿಕೆಯಲ್ಲಿ ಎಲ್ಲವೂ ಇದೆ’
‘ಎಲ್ಲರೂ ಪ್ಯಾಮೀಲಿ ಸಮೇತ ಬನ್ನಿ
ಒಟ್ಟಾರೆ, ಮದುವೆ ಸೀಸನ್​ ಹತ್ತಿರ ಬರ್ತಿದೆ.. ಹಾಗಾಗಿ ಮದುವೆಗಾಗಿ ಖರೀದಿ ಮಾಡೋರಿಗೆ ಇದೊಂದು ಉತ್ತಮ ವೇದಿಯಾಗಿದ್ದು, ಫ್ರೀ ಎಂಟ್ರಿ ಇರೋದ್ರಿಂದ ಎಲ್ಲರೂ ಸದುಪಯೋಗ ಪಡೆದುಕೊಳ್ಳಿ.. ಸೋ ಡೋಂಟ್​​ ಮಿಸ್​ ಇಟ್​
ಅಂಕಿತಾ ರೈ, ನ್ಯೂಸ್​ ಫಸ್ಟ್​ ಬೆಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us