/newsfirstlive-kannada/media/media_files/2025/09/08/pushpa-cinema-director-sukumar-2025-09-08-18-21-39.jpg)
ಪುಷ್ಪ ಸಿನಿಮಾ ನಿರ್ದೇಶಕ ಸುಕುಮಾರ್
ಅಲ್ಲು ಅರ್ಜುನ್ ಜೊತೆ 'ಪುಷ್ಪ 3' ಮಾಡುವುದಾಗಿ ನಿರ್ದೇಶಕ ಸುಕುಮಾರ್ ಘೋಷಿಸಿದ್ದಾರೆ.
ಅಲ್ಲು ಅರ್ಜುನ್ ನಟನೆಯ `ಪುಷ್ಪ ದಿ ರೈಸ್’ ಹಾಗೂ ‘ಪುಷ್ಪ ದಿ ರೂಲ್’ ಸಿನಿಮಾ ಬಾಕ್ಸಾಫೀಸ್ನಲ್ಲಿ ಮಿಂಚಿದ ದಕ್ಷಿಣ ಭಾರತದ ಹೆಸರಾಂತ ಸೀಕ್ವೆಲ್ ಸಿನಿಮಾ. ಈ ಹಿಟ್ ಸರಣಿ ಮುಂದುವರೆಯುವ ಸುಳಿವನ್ನ ಎರಡನೇ ಭಾಗದ ಅಂತ್ಯದಲ್ಲಿ ಚಿತ್ರತಂಡ ತೋರಿಸಿತ್ತು. ಆದ್ರೆ ಯಾವಾಗ ಪುಷ್ಪ 3 ಬರುತ್ತೆ? ಅಥವಾ ಚಮಕ್ ಕೊಟ್ಟಿರೋದಾ? ಹೀಗೆ ಪುಷ್ಪ ಅಭಿಮಾನಿಗಳ ಯಾವುದೇ ಪ್ರಶ್ನೆಗೂ ಪುಷ್ಪ ರಿಲೀಸ್ ಬಳಿಕ ಚಿತ್ರತಂಡ ಉತ್ತರಿಸಿರಲಿಲ್ಲ.
ಸದ್ಯ ಅಲ್ಲು ಅರ್ಜುನ್ ಹಾಗೂ ನಿರ್ದೇಶಕ ಸುಕುಮಾರ್ ಇಬ್ಬರೂ 'ಪುಷ್ಪ 3' ಮಾಡುವುದಾಗಿ ಹೇಳಿದ್ದಾರೆ.
ಶನಿವಾರ ದುಬೈನಲ್ಲಿ ನಡೆದ ಸೈಮಾ ಚಿತ್ರೋತ್ಸವದಲ್ಲಿ ಅಲ್ಲು ಅರ್ಜುನ್‌ಗೆ ಅತ್ಯುತ್ತಮ ನಟ ಪ್ರಶಸ್ತಿ, ರಶ್ಮಿಕಾ ಮಂದಣ್ಣಗೆ ಅತ್ಯುತ್ತಮ ನಟಿ ಪ್ರಶಸ್ತಿ, ಸುಕುಮಾರ್ ಅವರಿಗೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ, ದೇವಿ ಪ್ರಸಾದ್ ಅವರಿಗೆ ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿ ಮತ್ತು ಶಂಕರ್ ಬಾಬು ಕಂದುಕುರಿ ಅವರಿಗೆ ಅತ್ಯುತ್ತಮ ಗಾಯಕ ಪ್ರಶಸ್ತಿ ಲಭಿಸಿದ್ದು, 'ಪುಷ್ಪ 2: ದಿ ರೂಲ್' ಚಿತ್ರತಂಡವು ಐದು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.
ಸೈಮಾ ಪ್ರಶಸ್ತಿಗಳನ್ನು ಸ್ವೀಕರಿಸಿದ ಪುಷ್ಪಾ ಸಿನಿಮಾ ತಂಡದ ಸ್ಟೈಲ್
ಪ್ರಶಸ್ತಿಯನ್ನ ಗೆದ್ದ ನಂತರ ಪುಷ್ಪ ತಂಡ ವೇದಿಕೆಗೆ ಬಂದಿದ್ದು, ಈ ವೇಳೆ ನಿರೂಪಕರು ಪುಷ್ಪ 3 ಅನ್ನು ಮಾಡ್ತಿರಾ ಎಂದು ಸುಕುಮಾರ್ ಅವರನ್ನು ಕೇಳಿದ್ದಾರೆ. ಈ ವೇಳೆ ಸುಕುಮಾರ್ ಮಾತನಾಡಿ , ಖಂಡಿತವಾಗಿಯೂ, ಪುಷ್ಪ 3 ಬರಲಿದೆ ಎಂದು ಹೇಳಿದ್ದಾರೆ.ಜೊತೆಗೆ ಅಲ್ಲು ಅರ್ಜುನ್ ಕೂಡ`ಪುಷ್ಪ 3′ ಖಂಡಿತ ಬರುತ್ತೆ ಎಂದಿದ್ದಾರೆ.
ಇಬ್ಬರೂ ಒಟ್ಟಿಗೆ ‘ಪುಷ್ಪ3’ ತಯಾರಾಗ್ತಿರೋ ಬಗ್ಗೆ ಕನ್ಫರ್ಮೇಷನ್ ಕೊಟ್ಟಿದ್ದು, ಫ್ಯಾನ್ಸ್‌ಗೆ ಸಂತೋಷ ತಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ