/newsfirstlive-kannada/media/media_files/2025/08/20/the-new-indian-times-award-2025-08-20-17-34-20.jpg)
ದಿ ನ್ಯೂ ಇಂಡಿಯನ್ ಟೈಮ್ಸ್ ನಿಂದ ವಾರ್ಷಿಕ ಪ್ರಶಸ್ತಿ ನೀಡಿಕೆ
ಸಾಮಾನ್ಯ ಜನರ ಧ್ವನಿಯಾಗಿ ಕೆಲಸ ಮಾಡುವ ಪ್ರತಿಯೊಬ್ಬ ಪತ್ರಕರ್ತನಿಗೂ ತನ್ನ ಪ್ರತಿಭೆ, ಶ್ರಮವನ್ನ ಎಲ್ಲರೂ ಗುರುತಿಸಬೇಕು ಅನ್ನೋ ಆಸೆ ಇರುತ್ತೆ. ಅದೇ ನಿಟ್ಟಿನಲ್ಲಿ ಸತತ ಎಂಟನೇ ಬಾರಿಗೆ ಮತ್ತೊಮ್ಮೆ ಮಾಧ್ಯಮ ಕ್ಷೇತ್ರದ ವಿವಿಧ ಭಾಗಗಳಲ್ಲಿ ಕಾರ್ಯನಿರ್ವಹಿಸುವ ಇಂತಹ ಪ್ರತಿಭೆಗಳನ್ನ ಗುರುತಿಸಿ ದಿ ನ್ಯೂ ಇಂಡಿಯನ್ ಟೈಮ್ಸ್ ಪ್ರಶಸ್ತಿ ನೀಡಿ ಗೌರವಿಸೋಕೆ ಸಜ್ಜಾಗಿದೆ.
ಮತ್ತೆ ಬಂತು ಆ ಕ್ಷಣ. ಪತ್ರಕರ್ತರನ್ನ ಗೌರವಿಸೋ ಸುಮಧುರ ಕ್ಷಣ. ವರ್ಷಗಳ ಶ್ರಮಕ್ಕೆ ಗೌರವ ಸಿಗೋ ಅರ್ಥಪೂರ್ಣ ಕ್ಷಣ. ಪ್ರತಿ ವರ್ಷದಂತೆ ಈ ವರ್ಷವೂ ಸುದ್ದಿಲೋಕದ ತೆರೆ ಹಿಂದಿನ, ತೆರೆ ಮುಂದಿನ ಪ್ರತಿಭೆಗಳನ್ನ ಗುರುತಿಸಿ ಸನ್ಮಾನ ಮಾಡೋಕೆ ದಿ ನ್ಯೂ ಇಂಡಿಯನ್ ಟೈಮ್ಸ್ ಮತ್ತೆ ಬಂದಿದೆ.
TNIT ಮೀಡಿಯಾ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಕೌಂಟ್ಡೌನ್
40ಕ್ಕೂ ಹೆಚ್ಚು ಸುದ್ದಿ ಮಾಧ್ಯಮ, ಕಾರ್ಯಕ್ರಮ ಎಲ್ಲಿ? ಯಾವಾಗ?
ಕಳೆದ ಬಾರಿ ಮೊಟ್ಟ ಮೊದಲ ಬಾರಿಗೆ ದಕ್ಷಿಣ ಭಾರತದ 40ಕ್ಕೂ ಹೆಚ್ಚು ಸುದ್ದಿ ಮಾಧ್ಯಮಗಳಲ್ಲಿನ ಸಾಧಕರನ್ನ ಹುಡುಕಿ ಸನ್ಮಾನಿಸಿದ್ದ ದಿ ನ್ಯೂ ಇಂಡಿಯನ್ ಟೈಮ್ಸ್ ಈ ವರ್ಷವೂ ದಕ್ಷಿಣ ಭಾರತದ ಮಾಧ್ಯಮ ಕ್ಷೇತ್ರದ ಸಾಧಕರನ್ನ ಸನ್ಮಾನಿಸೋಕೆ ತಯಾರಿ ಮಾಡ್ಕೊಂಡಿದೆ. ಹಾಗಾದ್ರೆ, ಎಲ್ಲಿ? ಯಾವಾಗ? ನಡೆಯಲಿದೆ ಅನ್ನೋ ಎಲ್ಲ ಮಾಹಿತಿ ಇಲ್ಲಿದೆ ನೋಡಿ..
TNIT ಅವಾರ್ಡ್ಸ್
ಆಗಸ್ಟ್ 23 ಮ.3ಗಂಟೆಗೆ ನಡೆಯಲಿರುವ ಕಾರ್ಯಕ್ರಮ
ಶೃಂಗಾರ್ ಪ್ಯಾಲೇಸ್ ಗಾರ್ಡನ್, ಪ್ಯಾಲೇಸ್ ಗ್ರೌಂಡ್ ಗೇಟ್ ನಂ.8
ಬೆಸ್ಟ್ ಆ್ಯಂಕರ್, ರಿಪೋರ್ಟರ್ & ವಿಡಿಯೋ ಎಡಿಟರ್
ಬೆಸ್ಟ್ ವಾಯ್ಸ್ ಓವರ್ ಆರ್ಟಿಸ್ಟ್ & ಕ್ಯಾಮರಮ್ಯಾನ್
ಅನೇಕ ವಿಭಾಗಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ
ಕನ್ನಡ, ತೆಲುಗು, ತಮಿಳು ಮಲಯಾಳಂ ಸ್ಟಾರ್‌ಗಳು ಭಾಗಿ
ಮಾಧ್ಯಮ ಕ್ಷೇತ್ರದ ಹಿರಿಯ ಪತ್ರಕರ್ತರು ಭಾಗಿಯಾಗಲಿದ್ದಾರೆ.
ಇದೇ ಆಗಸ್ಟ್ 23ರಂದು ಮಧ್ಯಾಹ್ನ 3 ಗಂಟೆಗೆ ಟಿಂಟ್ ಅವಾರ್ಡ್ ಫಂಕ್ಷನ್ ನಡೆಯಲಿದೆ. ಸ್ಥಳ ಎಲ್ಲಿ ಅಂದ್ರೆ, ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ಶೃಂಗಾರ್ ಪ್ಯಾಲೇಸ್ ಗಾರ್ಡನ್. ಗೇಟ್ ನಂಬರ್ 8. ಇನ್ನು, ಯಾವೆಲ್ಲಾ ವಿಭಾಗಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗ್ತಿದೆ ಅಂದ್ರೆ, ಈ ವರ್ಷದ ಬೆಸ್ಟ್ ಆ್ಯಂಕರ್, ರಿಪೋರ್ಟರ್, ವಿಡಿಯೋ ಎಡಿಟರ್, ಕಾಪಿ ಎಡಿಟರ್, ಬೆಸ್ಟ್ ವಾಯ್ಸ್ ಓವರ್ ಆರ್ಟಿಸ್ಟ್, ಬೆಸ್ಟ್ ಕ್ಯಾಮರಮ್ಯಾನ್, ಹೀಗೆ ಇನ್ನೂ ಅನೇಕ ವಿಭಾಗಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಸ್ಟಾರ್‌ಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು. ಮಾಧ್ಯಮ ಕ್ಷೇತ್ರದ ಹಿರಿಯ ಪತ್ರಕರ್ತರು ಭಾಗವಹಿಸಲಿದ್ದಾರೆ.
ಕಳೆದ ವರ್ಷ ನ್ಯೂಸ್ ಫಸ್ಟ್ ನ ಐವರಿಗೆ TNIT ಪ್ರಶಸ್ತಿ ನೀಡಿಕೆ.
ಇದೊಂದು ಖುಷಿ ವಿಚಾರ. ಮಾಧ್ಯಮ ಮಿತ್ರರು ಎಲೆಮರೆ ಕಾಯಿಗಳಂತೆ ಉಳಿಯಬಾರದು ಅನ್ನೋ ಕಾರಣಕ್ಕೆ ಈ ರೀತಿಯ ಕಾರ್ಯಕ್ರಮ ಮಾಡ್ತಿರೋದು ನಿಜಕ್ಕೂ ಗಮನಾರ್ಹ. ಈ ವಿಶೇಷ ಕಾರ್ಯಕ್ರಮಕ್ಕೆ ಇನ್ನು ಮೂರೇ ದಿನ ಉಳಿದಿದ್ದು, ಯಾರಿಗೆಲ್ಲಾ ಅವಾರ್ಡ್ ಸಿಗುತ್ತೋ ಕಾದು ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.