ಒಂದೇ ವಾರದಲ್ಲಿ 100 ಗ್ರಾಂ ಚಿನ್ನದ ಬೆಲೆ 77 ಸಾವಿರ ರೂಪಾಯಿ ಇಳಿಕೆ! ಬೆಂಗಳೂರಿನಲ್ಲಿ ಇಂದು ಚಿನ್ನದ ಬೆಲೆ ಎಷ್ಟಿದೆ ಗೊತ್ತಾ?

2025 ರಲ್ಲಿ ಚಿನ್ನದ ಬೆಲೆಯೂ ಶೇ.60 ರಷ್ಟು ಏರಿಕೆ ಕಂಡಿದೆ. ಬೆಳ್ಳಿ ಬೆಲೆಯೂ ಶೇ.70 ರಷ್ಟು ಏರಿಕೆ ಕಂಡಿದೆ. ಆದರೇ, ಈಗ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಇಳಿಮುಖವಾಗುತ್ತಿವೆ. ಒಂದೇ ವಾರದಲ್ಲಿ 100 ಗ್ರಾಂ ಚಿನ್ನದ ಬೆಲೆ 77 ಸಾವಿರ ರೂಪಾಯಿ ಇಳಿಕೆಯಾಗಿದೆ.

author-image
Chandramohan
₹1 ಲಕ್ಷ ದಾಟಿದ ಚಿನ್ನದ ಬೆಲೆ.. ಅಕ್ಷಯ ತೃತೀಯಗೆ ಬಂಗಾರ ಮತ್ತಷ್ಟು ದುಬಾರಿ; ಕಾರಣವೇನು?

ಒಂದೇ ವಾರದಲ್ಲಿ 100 ಗ್ರಾಂ ಚಿನ್ನದ ಬೆಲೆ 77 ಸಾವಿರ ರೂ. ಇಳಿಕೆ

Advertisment
  • ಒಂದೇ ವಾರದಲ್ಲಿ 100 ಗ್ರಾಂ ಚಿನ್ನದ ಬೆಲೆ 77 ಸಾವಿರ ರೂ. ಇಳಿಕೆ
  • ಇಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಗ್ರಾಂಗೆ 12,506 ರೂಪಾಯಿ
  • ನಿನ್ನೆಗಿಂತ ಇಂದು ಪ್ರತಿ ಗ್ರಾಂಗೆೆ 380 ರೂಪಾಯಿ ಏರಿಕೆ
  • ಬೆಳ್ಳಿ ಬೆಲೆ ಇಂದು ಪ್ರತಿ ಕೆಜಿಗೆ 1,59,000 ರೂಪಾಯಿ

ಭಾರತದಲ್ಲಿ ಏರುಮುಖದಲ್ಲಿದ್ದ ಚಿನ್ನದ ಬೆಲೆ ಈಗ ಇಳಿಮುಖವಾಗುತ್ತಿದೆ. ಇಂದು ( ಅಕ್ಟೋಬರ್ 24, 2025)  24 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಮ್‌ಗೆ 12,506 ರೂಪಾಯಿಗೆ ಇಳಿದಿದೆ.  
24 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯೂ  1,25,460 ರೂಪಾಯಿ ಇದೆ. ನಿನ್ನೆಗಿಂತ ಇಂದು 380 ರೂಪಾಯಿ ಹೆಚ್ಚಾಗಿದೆ. 
ಬೆಂಗಳೂರಿನಲ್ಲಿ ಇಂದು 24 ಕ್ಯಾರೆಟ್ ಚಿನ್ನದ ಬೆಲೆಯೂ  ಪ್ರತಿ ಗ್ರಾಂಗೆ 12,546 ರೂಪಾಯಿ ಇದೆ. 
ಇನ್ನೂ 22 ಕ್ಯಾರೆಟ್ ಚಿನ್ನದ ಬೆಲೆ ಭಾರತದಲ್ಲಿ ಪ್ರತಿ ಗ್ರಾಂಗೆ 11,645 ಗ್ರಾಮ್ ಗೆ ಇಳಿದಿದೆ.   
ಇನ್ನೂ 18 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 9,381 ರೂಪಾಯಿಗೆ ಇಳಿದಿದೆ. 

ಇನ್ನೂ ಭಾರತದಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆಯೂ ಕಳೆದ 7 ದಿನಗಳಲ್ಲಿ 100 ಗ್ರಾಂ ಚಿನ್ನದ ಬೆಲೆಯೂ 77 ಸಾವಿರ ರೂಪಾಯಿ ಕುಸಿದಿದೆ.  2025 ರಲ್ಲಿ ಚಿನ್ನದ ಬೆಲೆಯೂ ಬರೋಬ್ಬರಿ ಶೇ.60 ರಷ್ಟು ಏರಿಕೆ ಕಂಡಿತ್ತು.  ಗೋಲ್ಡ್ ಇನ್ ವೆಸ್ಟ್ ಮೆಂಟ್ ನಲ್ಲಿ 2025 ಉತ್ತಮ ವರ್ಷವಾಗಿತ್ತು.  ಈಗ ಚಿನ್ನದ ಬೆಲೆಯ ಇಳಿಕೆಯೂ ಆರಂಭವಾಗಿದೆ. 

SILVER PRICE RISE


ಇನ್ನೂ ಬೆಳ್ಳಿ ಬೆಲೆಯೂ ದೀಪಾವಳಿ ಹಬ್ಬ ಮುಗಿದ ಬಳಿಕ ಕುಸಿಯುತ್ತಿದೆ. ಬೆಳ್ಳಿ ಬೆಲೆ ಪ್ರತಿ ಕೆಜಿಗೆ 1,59,000 ರೂಪಾಯಿಗೆ ಕುಸಿದಿದೆ. 2025 ರಲ್ಲಿ ಬೆಳ್ಳಿ ಬೆಲೆಯೂ ಶೇ.70 ರಷ್ಟು ರಿಟರ್ನ್ಸ್ ಅನ್ನು ಹೂಡಿಕೆದಾರರಿಗೆ ನೀಡಿತ್ತು.  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

gold rate
Advertisment