/newsfirstlive-kannada/media/media_files/2025/10/23/bmtc-ev-bus-2025-10-23-13-38-27.jpg)
BMTC EV ಬಸ್ ಗಳ ಅಪಘಾತಕ್ಕೆ ಕಾರಣ ಏನು ಗೊತ್ತಾ?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಗಳು ಹೆಚ್ಚು ಆಕ್ಸಿಡೆಂಟ್ ಗಳನ್ನು ಮಾಡುತ್ತಿವೆ. ಆಕ್ಸಿಡೆಂಟ್ ಗಳಿಂದಾಗಿ ಪಾದಚಾರಿಗಳು, ವಾಹನ ಸವಾರರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಗಳೇ ಯಮದೂತರಾಗಿವೆ. ಈ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಗಳನ್ನು ವೇಗದೂತ ಅಂತ ಕರೆಯುತ್ತಿದ್ದೇವು. ಆದರೇ, ಇವು ಯಮದೂತ ಆಗಿರೋದು ಜನರನ್ನು ಸಂಕಷ್ಟಕ್ಕೀಡು ಮಾಡಿದೆ.
ಇದಕ್ಕೆ ಮುಖ್ಯವಾಗಿ ಬೇರೆ ಬೇರೆ ಕಾರಣಗಳಿವೆ. ಎಲೆಕ್ಟ್ರಿಕ್ ಬಸ್ ಗಳ ಚಾಲಕರಾಗಿ ನೇಮಕ ಮಾಡಿಕೊಳ್ಳುತ್ತಿರುವ ಚಾಲಕರಿಗೆ ಸರಿಯಾದ ತರಬೇತಿ ಇಲ್ಲದೇ ಇರೋದೇ ಕಾರಣ ಅಂತ ಇದುವರೆಗೂ ಹೇಳಲಾಗುತ್ತಿತ್ತು. ಆದರೇ, ಈಗ ಎಲೆಕ್ಟ್ರಿಕ್ ಬಸ್ ಗಳ ಅಪಘಾತಕ್ಕೆ ಹೊಸ ಕಾರಣವೊಂದನ್ನು ಎಲೆಕ್ಟ್ರಿಕ್ ಬಸ್ ಚಾಲಕರುಗಳೇ ನೀಡಿದ್ದಾರೆ.
ಎಲೆಕ್ಟ್ರಿಕ್ ಬಸ್ ಗಳ ಅಪಘಾತಕ್ಕೆ ಚಾಲಕರಿಗೆ ತರಬೇತಿ ಇಲ್ಲದೇ ಇರೋದು ಕಾರಣವಲ್ಲ..! ಚಾಲಕರಿಗೆ ಕೊಟ್ಟಿರೋ ಟಾರ್ಗೆಟ್ ನಿಂದಲೇ ಹೆಚ್ಚು ಅಪಘಾತ ಸಂಭವಿಸುತ್ತಿವೆ ಎಂದು ಚಾಲಕರು ಹೇಳಿದ್ದಾರೆ.
ಟಾರ್ಗೆಟ್ ಒತ್ತಡ ಕಮ್ಮಿ ಆಗಿಲ್ಲ ಅಂದ್ರೆ ಇನ್ನೂ ಆ್ಯಕ್ಸಿಡೆಂಟ್ ಗಳು ಆಗೇ ಆಗುತ್ತೆ ಎಂದು ಕೂಡ ಚಾಲಕರು ಹೇಳುತ್ತಿದ್ದಾರೆ. ಎಲೆಕ್ಟ್ರಿಕ್ ಬಸ್ ಚಾಲಕರೇ ತಮಗೆ ಇರೋ ಮೆಂಟಲ್ ಫ್ರೆಶರ್ ಸಮಸ್ಯೆಯನ್ನು ಬಿಚ್ಚಿಟ್ಟಿದ್ದಾರೆ. ಎಲೆಕ್ಟ್ರಿಕ್ ಬಸ್ ಗಳಿಂದ 3 ವರ್ಷದಲ್ಲಿ ಅಂದಾಜು 40 ಜನ ಸಾವನ್ನಪ್ಪಿದ್ದಾರೆ. ಪದೇ ಪದೇ ಎಲೆಕ್ಟ್ರಿಕ್ ಬಸ್ ಗಳಿಂದ ಅಪಘಾತ ಸಂಭವಿಸುತ್ತಿವೆ.
/filters:format(webp)/newsfirstlive-kannada/media/media_files/2025/10/23/bmtc-ev-bus03-2025-10-23-13-40-20.jpg)
ಬೆಂಗಳೂರಿನಲ್ಲಿ ಬಿಎಂಟಿಸಿಯ ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸುವ ಗುತ್ತಿಗೆಯನ್ನು ಬಿವಿಜಿ ಸಂಸ್ಥೆ ಗುತ್ತಿಗೆ ಪಡೆದಿದೆ. ಬಿವಿಜಿ ಸಂಸ್ಥೆ ಚಾಲಕರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ. ಜೊತೆಗೆ ಟಾರ್ಗೆಟ್ ರೀಚ್ ಆಗುವಂತೆ ಒತ್ತಡ ಕೂಡ ಹೇರಲಾಗುತ್ತಿದೆ.
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬಸ್ ಚಾಲಕರು ಒಂದು ಶಿಫ್ಟ್ ನಲ್ಲಿ 8 ಗಂಟೆ ಅವಧಿಯಲ್ಲಿ 130 ಕಿಲೋಮೀಟರ್ ವರೆಗೂ ಎಲೆಕ್ಟ್ರಿಕ್ ಬಸ್ ಗಳನ್ನು ಓಡಿಸಬೇಕು ಎಂದು ಟಾರ್ಗೆಟ್ ನೀಡಲಾಗಿದೆ. ಬೆಂಗಳೂರಿನ ಟ್ರಾಫಿಕ್ ಜಾಮ್ ಮಧ್ಯೆ ಕೇವಲ 8 ಗಂಟೆಯಲ್ಲಿ 130 ಕಿಲೋಮೀಟರ್ ವರೆಗೂ ಬಸ್ ಓಡಿಸುವುದೇ ದೊಡ್ಡ ಸವಾಲು. ಇದರಿಂದಾಗಿ ಚಾಲಕರಿಗೆ ಮಾನಸಿಕ ಒತ್ತಡ ಎದುರಾಗಿದೆ. ಟಾರ್ಗೆಟ್ ರೀಚ್ ಆಗುವ ಭರದಲ್ಲಿ ಬಸ್ ಗಳನ್ನು ವೇಗವಾಗಿ ಓಡಿಸಲೇಬೇಕಾಗುತ್ತೆ. ವೇಗವಾಗಿ ಹೋದಾಗ ಆಕ್ಸಿಡೆಂಟ್ ಗಳು ಆಗೋದು ಸಾಮಾನ್ಯ . ನಿಧಾನವಾಗಿ ಬಸ್ ಚಲಾಯಿಸಿದರೇ, 130 ಕಿಲೋಮೀಟರ್ ಟಾರ್ಗೆಟ್ ರೀಚ್ ಆಗಲು ಸಾಧ್ಯವಿಲ್ಲ. ಟಾರ್ಗೆಟ್ ಕೊಟ್ಟು ರೀಟ್ ಮಾಡಿ ಎಂದು ಬಿಎಂಟಿಸಿ, ಬಿವಿಜಿ ಸಂಸ್ಥೆ ಹೇಳುತ್ತೆ. ಹೀಗಾಗಿ ವೇಗವಾಗಿ ಬಸ್ ಗಳನ್ನು ಚಲಾಯಿಸಲೇಬೇಕು. ವೇಗದ ಚಾಲನೆಯಿಂದ ಆಕ್ಸಿಡೆಂಟ್ ಆಗುತ್ತಿವೆ ಎಂದು ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರು ಹೇಳಿದ್ದಾರೆ.
ಎಲೆಕ್ಟ್ರಿಕ್ ಬಸ್ ಗಳಿಗೆ ಕಂಡಕ್ಟರ್ ಗಳನ್ನು ಬಿಎಂಟಿಸಿ ನೇಮಕ ಮಾಡಿದೆ. ಚಾಲಕರನ್ನು ಮಾತ್ರವೇ ಗುತ್ತಿಗೆ ಪಡೆದಿರುವ ಬಿವಿಜಿ ಸಂಸ್ಥೆ ನೇಮಕ ಮಾಡಿದೆ.
ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲಕರಿಗೆ ಯಾವುದೇ ಟಾರ್ಗೆಟ್ ಕೊಡದೇ ಇದ್ದರೇ, ಯಾವುದೇ ಆಕ್ಸಿಡೆಂಟ್ ಗಳೂ ಆಗಲ್ಲ. ಡ್ರೈವರ್ ಗಳು ಆರಾಮಾಗಿ ಬಸ್ ಚಾಲನೆ ಮಾಡುತ್ತಾರೆ. ಬಿಎಂಟಿಸಿ ಹಾಗೂ ಬಿವಿಜಿ ಸಂಸ್ಥೆ ನೀಡಿರುವ ಟಾರ್ಗೆಟ್ ರೀಚ್ ಆಗುವ ಧಾವಂತದಲ್ಲೇ ಆಕ್ಸಿಡೆಂಟ್ ಗಳು ಆಗುತ್ತಿವೆ ಎಂಬ ಹೊಸ ವಿಷಯವನ್ನು ಈಗ ಎಲೆಕ್ಟ್ರಿಕ್ ಬಸ್ ಚಾಲಕರು ಬಿಚ್ಚಿಟ್ಟಿದ್ದಾರೆ.
/filters:format(webp)/newsfirstlive-kannada/media/media_files/2025/10/23/bmtc-ev-bus02-2025-10-23-13-40-32.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us