/newsfirstlive-kannada/media/post_attachments/wp-content/uploads/2025/07/sarojadevi2.jpg)
ದಿವಂಗತ ನಟಿ ಬಿ.ಸರೋಜಾದೇವಿ ಅವರಿಗೆ ಕರ್ನಾಟಕ ರತ್ನ ನೀಡಲು ನಿರ್ಧಾರ
ಸಿಎಂ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವೊಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಪಂಚ ಭಾಷಾ ತಾರೆ ದಿವಂಗತ ಬಿ.ಸರೋಜಾದೇವಿ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪುರಸ್ಕಾರ ನೀಡಲು ಕ್ಯಾಬಿನೆಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಬಿ.ಸರೋಜಾದೇವಿ ಅವರು ಇತ್ತೀಚೆಗೆ ಬೆಂಗಳೂರಿ ಮಲ್ಲೇಶ್ವರದಲ್ಲಿ ವಿಧಿವಶರಾಗಿದ್ದರು. ಬಳಿಕ ಅವರ ಸ್ವಂತ ಊರಾದ ಚನ್ನಪಟ್ಟಣ ತಾಲ್ಲೂಕಿನ ದಶಾವರ ಗ್ರಾಮದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿತ್ತು.
ದಿವಂಗತ ನಟಿ ಬಿ.ಸರೋಜಾ ದೇವಿ
ಇಂದು ದಿವಂಗತ ನಟ ವಿಷ್ಣುವರ್ಧನ್ ಮತ್ತು ಬಿ.ಸರೋಜಾದೇವಿ ಇಬ್ಬರಿಗೂ ಕರ್ನಾಟಕ ರತ್ನ ಪುರಸ್ಕಾರ ನೀಡಲು ಕ್ಯಾಬಿನೆಟ್ ನಲ್ಲಿ ಒಪ್ಪಿಗೆ ನೀಡಲಾಗಿದೆ.
ಕನ್ನಡ ಚಿತ್ರರಂಗದ ಅನೇಕ ಗಣ್ಯರು ಬಿ.ಸರೋಜಾ ದೇವಿ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು. ಕನ್ನಡ ಸಿನಿ ಪ್ರೇಕ್ಷಕರು ಹಾಗೂ ಗಣ್ಯರ ಅಭಿಪ್ರಾಯ, ಮನವಿಗೆ ಕರ್ನಾಟಕ ಸರ್ಕಾರ ಕೊನೆಗೆ ಮನ್ನಣೆ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ