/newsfirstlive-kannada/media/media_files/2025/10/01/usa-govt-shutdown-2025-10-01-13-10-12.jpg)
ವಿಶ್ವದ ದೊಡ್ಡಣ್ಣ ಅಮೆರಿಕಾದ ಸರ್ಕಾರವೇ ತನ್ನ ಖರ್ಚುಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಅಮೆರಿಕಾ ಸರ್ಕಾರಕ್ಕೆ ಈಗ ಯಾವುದೇ ಖರ್ಚುಗಳನ್ನು ಮಾಡಲು, ಹಣ ಬಿಡುಗಡೆ ಮಾಡಲು ಅವಕಾಶವೇ ಇಲ್ಲ. ಅಮೆರಿಕಾದ ಸರ್ಕಾರವೇ ಅಧಿಕೃತವಾಗಿ ತನ್ನ ಹಣಕಾಸಿನ ಕಾರ್ಯಾಚರಣೆಗಳನ್ನೆಲ್ಲಾ ಸ್ಥಗಿತಗೊಳಿಸಿದೆ. ಡೋನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಸರ್ಕಾರದ ಸ್ಟಾಪ್ ಗ್ಯಾಪ್ ನಿಧಿ ಪ್ಯಾಕೇಜ್ ಗೆ ಡೆಮಾಕ್ರಟಿಕ್ ಪಕ್ಷ ಒಪ್ಪಿಗೆ ನೀಡಿಲ್ಲ. ಇಂದು ಮಧ್ಯರಾತ್ರಿಯಾಗುತ್ತಿದ್ದಂತೆ, ಸರ್ಕಾರದ ನಿಧಿಯಿಂದ ಹಣ ಖರ್ಚು ಮಾಡಲು ಸಾಧ್ಯವಿಲ್ಲ. ಅಮೆರಿಕಾದ ಹಣಕಾಸಿನ ಇಲಾಖೆಯ ಕ್ಯಾಪಿಟಲ್ ನೊಳಗೆ ಏನಾಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ.
ಕಳೆದ 6 ವರ್ಷದ ಅವಧಿಯಲ್ಲಿ ಇದು ಮೊದಲ ಸರ್ಕಾರದ ಖರ್ಚು ಸ್ಥಗಿತದ ಕ್ರಮವಾಗಿದೆ. 2018-19 ರಲ್ಲಿ ಡೋನಾಲ್ಡ್ ಟ್ರಂಪ್ ಅವರ ಮೊದಲ ಅವಧಿಯಲ್ಲಿ ಐದು ವಾರಗಳ ಕಾಲ ಸರ್ಕಾರಕ್ಕೆ ಹಣಕಾಸು ಖರ್ಚಿಗೆ ಅವಕಾಶ ಇರಲಿಲ್ಲ.
ಅಮೆರಿಕಾದ ಸಂಸತ್ ನಲ್ಲಿ ರಿಪಬ್ಲಿಕನ್ ಸಂಸದರು ಅಫರ್ಡಬಲ್ ಕೇರ್ ಆ್ಯಕ್ಟ್ ಅನ್ನು ವಿಸ್ತರಿಸಬೇಕೆಂದು ಬೇಡಿಕೆ ಇಟ್ಟಿದ್ದರು. ಅಫರ್ಡಬಲ್ ಕೇರ್ ಆ್ಯಕ್ಟ್ ಅನ್ನು ಸ್ಟಾಪ್ ಗ್ಯಾಪ್ ಫಂಡಿಂಗ್ ಬಿಲ್ ನಲ್ಲಿ ಸೇರಿಸಬೇಕೆಂದು ಒತ್ತಾಯಿಸಿದ್ದರು. ಆರೋಗ್ಯ ಕ್ಷೇತ್ರಕ್ಕೆ ಸಬ್ಸಿಡಿ ನೀಡಬೇಕು. ಆರೋಗ್ಯ ಕಾರ್ಯಕ್ರಮಗಳಲ್ಲಿ ಯಾವುದೇ ಹಣ ಕಡಿತ ಮಾಡಬಾರದೆಂದು ಆಗ್ರಹಿಸಿದ್ದರು. ಸೆನೆಟ್ ನಲ್ಲಿ ರಿಪಬ್ಲಿಕನ್ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸರ್ಕಾರದ ಖರ್ಚಿನಲ್ಲಿ ಇವುಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಬೇಕೆಂದು ಆಗ್ರಹಿಸಿದ್ದರು. ಆದರೆ, ಡೆಮಾಕ್ರಟಿಕ್ ಸಂಸದರು ಇದನ್ನು ವಿರೋಧಿಸಿದ್ದರು. ಇದರಿಂದಾಗಿ ಡೋನಾಲ್ಡ್ ಟ್ರಂಪ್ ಸರ್ಕಾರಕ್ಕೆ ಖರ್ಚು ಮಾಡಲು ಸೆನೆಟ್ ನ ಒಪ್ಪಿಗೆ ಸಿಕ್ಕಿಲ್ಲ. ಹೀಗಾಗಿ ಅಮೆರಿಕಾದ ಸರ್ಕಾರದ ಖರ್ಚುಗಳನ್ನೆಲ್ಲಾ ಸ್ಥಗಿತಗೊಳಿಸಲಾಗಿದೆ.
ಇನ್ನೂ ಡೋನಾಲ್ಡ್ ಟ್ರಂಪ್ ಸರ್ಕಾರವು ಅನೇಕ ಇಲಾಖೆಗಳಲ್ಲಿ ಉದ್ಯೋಗಿಗಳಿಗೆ ತಾತ್ಕಾಲಿಕ ಲೇ ಆಫ್ ಅಲ್ಲ, ಬದಲಿಗೆ ಶಾಶ್ವತ ಲೇ ಆಫ್ ನೀಡಿ ಮನೆಗೆ ಕಳಿಸುವಂತೆ ಸೂಚಿಸಿದೆ.
ಇನ್ನೂ ಅಮೆರಿಕಾದಲ್ಲಿ ಈಗ ಸರ್ಕಾರಕ್ಕೆ ಯಾವುದಕ್ಕೆ ಖರ್ಚು ಮಾಡಬೇಕು, ಯಾವುದಕ್ಕೆ ಹಣ ಖರ್ಚು ಮಾಡಬಾರದು ಎಂಬ ಬಗ್ಗೆ ಆಡಳಿತ, ಪ್ರತಿಪಕ್ಷದ ನಡುವೆ ಭಿನ್ನಾಭಿಪ್ರಾಯ ತಲೆದೋರಿದ ಕಾರಣದಿಂದ ಸ್ಟಾಪ್ ಗ್ಯಾಪ್ ಫಂಡಿಂಗ್ ಬಿಲ್‌ಗೆ ಒಪ್ಪಿಗೆ ಸಿಕ್ಕಿಲ್ಲ.
ಅಮೆರಿಕಾದ ಫೆಡರಲ್ ಸರ್ಕಾರದ ಏಳೂವರೆ ಲಕ್ಷ ನೌಕರರನ್ನು ತಾತ್ಕಾಲಿಕವಾಗಿ ಲೇ ಆಫ್ ನೀಡಿ ಮನೆಗೆ ಕಳಿಸಬಹುದು ಎಂಬ ಅಂದಾಜಿದೆ.
ಇನ್ನೂ ಈಗ ಅಮೆರಿಕಾ ಸರ್ಕಾರದಲ್ಲಿ ಅಗತ್ಯವಲ್ಲದ ಸೇವೆಯ ನೌಕರರು ಕೆಲಸ ಮಾಡುವಂತಿಲ್ಲ.
ಇನ್ನೂ ಅಮೆರಿಕಾದಲ್ಲಿ ಸರ್ಕಾರದ ಖರ್ಚು ವೆಚ್ಚಕ್ಕೆ ಒಪ್ಪಿಗೆ ಸಿಗದೇ, ಸರ್ಕಾರವೇ ಬಂದ್ ಆಗುವಂಥ ಸ್ಥಿತಿ ನಿರ್ಮಾಣವಾಗಿರೋದು ಇದೇ ಮೊದಲೇನೂ ಅಲ್ಲ. 1976 ರಿಂದ ಇದುವರೆಗೂ 21 ಭಾರಿ ಸರ್ಕಾರವೇ ಬಂದ್ ಆಗಿದೆ.
ಇನ್ನೂ ನಮ್ಮ ಭಾರತದಲ್ಲಿ ಕೇಂದ್ರ ಸರ್ಕಾರದ ಖರ್ಚು ವೆಚ್ಚಗಳಿಗೆ ಸಂಸತ್ ಒಪ್ಪಿಗೆ ನೀಡುತ್ತೆ. ರಾಜ್ಯದಲ್ಲಿ ವಿಧಾನಸಭೆಯ ಒಪ್ಪಿಗೆ ಪಡೆದು ಸರ್ಕಾರ ಖರ್ಚುವೆಚ್ಚಗಳನ್ನು ಮಾಡುತ್ತೆ. ಸಂಸತ್ ಮತ್ತು ವಿಧಾನಸಭೆ ಅಧಿವೇಶನದ ವೇಳೆ ಅಗತ್ಯ ಖರ್ಚುವೆಚ್ಚಗಳಿಗೆ ಒಪ್ಪಿಗೆ ಪಡೆಯಲಾಗಿರುತ್ತೆ. ಹೀಗಾಗಿ ಭಾರತದಲ್ಲಿ ರೀತಿಯ ಸಮಸ್ಯೆ ಹೆಚ್ಚಾಗಿ ಉದ್ಭವಿಸಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.