Advertisment

ರಂಗಭೂಮಿ ಕಲಾವಿದ, ನಿರ್ದೇಶಕ ಯಶವಂತ ಸರದೇಶಪಾಂಡೆ ವಿಧಿವಶ!

ರಂಗಭೂಮಿ ಕಲಾವಿದ, ನಿರ್ದೇಶಕ ಯಶವಂತ್ ಸರದೇಶಪಾಂಡೆ ಇಂದು ಬೆಳಿಗ್ಗೆ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ. ನಿನ್ನೆ ರಾತ್ರಿ ಧಾರವಾಡದಲ್ಲಿ ನಾಟಕದಲ್ಲಿ ಅಭಿನಯಿಸಿದ್ದ ಯಶವಂತ್ ಸರದೇಶಪಾಂಡೆ ಇಂದು ಬೆಳಿಗ್ಗೆ ಬೆಂಗಳೂರಿಗೆ ಆಗಮಿಸಿದ್ದರು. ಹೃದಯಾಘಾತವಾದ ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.

author-image
Chandramohan
YESHWANTH SARDESHPANDE NO MORE

ರಂಗಭೂಮಿ ನಿರ್ದೇಶಕ ಯಶವಂತ್ ಸರದೇಶಪಾಂಡೆ ನಿಧನ

Advertisment
  • ರಂಗಭೂಮಿ ನಿರ್ದೇಶಕ ಯಶವಂತ್ ಸರದೇಶಪಾಂಡೆ ನಿಧನ
  • ಬೆಂಗಳೂರಿನಲ್ಲಿ ಹೃದಯಾಘಾತದಿಂದ ಯಶವಂತ ಸರದೇಶಪಾಂಡೆ ನಿಧನ
  • 60 ಕ್ಕೂ ಹೆಚ್ಚು ನಾಟಕ ನಿರ್ದೇಶನ ಮಾಡಿದ್ದ ಯಶವಂತ್ ಸರದೇಶಪಾಂಡೆ

ರಂಗಭೂಮಿ ಕಲಾವಿದ ಯಶವಂತ ಸರದೇಶಪಾಂಡೆ ಇನ್ನಿಲ್ಲ. ರಂಗಕರ್ಮಿ ಯಶವಂತ ಸರದೇಶಪಾಂಡೆ ತೀವ್ರ ಹೃದಯಾಘಾತದಿಂದ ಇಂದು ನಿಧನವಾಗಿದ್ದಾರೆ. ಯಶವಂತ್ ಸರ್‌ದೇಶಪಾಂಡೆ ಅವರಿಗೆ 60 ವರ್ಷ ವಯಸ್ಸಾಗಿತ್ತು.  ಮುಂದಿನ ತಿಂಗಳು ಅಂದರೆ ಅಕ್ಟೋಬರ್ ತಿಂಗಳಲ್ಲಿ ಪಂ.ಪ್ರವೀಣ ಗೋಡಖಿಂಡಿ ಅವರೊಂದಿಗೆ 'ಕೊಳಲು' ನಾಟಕದಲ್ಲಿ ಅಭಿನಯಿಸಬೇಕಿತ್ತು. ಇದಕ್ಕಾಗಿ ನಾಟಕ ಅಭ್ಯಾಸದಲ್ಲಿ ಯಶವಂತ ಸರದೇಶಪಾಂಡೆ ತೊಡಗಿಸಿಕೊಂಡಿದ್ದರು. ಆದರೇ, ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 
ನಿನ್ನೆ ರಾತ್ರಿ ಧಾರವಾಡದಲ್ಲಿ ನಾಟಕ ಪ್ರದರ್ಶನ ನೀಡಿದ್ದ ಯಶವಂತ್ ಸರದೇಶಪಾಂಡೆ , ಇಂದು ಬೆಳಿಗ್ಗೆ ಬೆಂಗಳೂರುಗೆ ಆಗಮಿಸಿದ್ದರು. ಹೃದಯಾಘಾತ ಸಂಭವಿಸಿದ ತಕ್ಷಣವೇ ಯಶವಂತ್ ಸರದೇಶಪಾಂಡೆ ಅವರನ್ನು ಅಪೋಲೋ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಬೆಳಿಗ್ಗೆ 10 ಗಂಟೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 
ಯಶವಂತ್ ಸರದೇಶಪಾಂಡೆ ಅವರ ಆಲ್‌ ದಿ ಬೆಸ್ಟ್ ನಾಟಕ ಹೆಚ್ಚು ಜನಪ್ರಿಯವಾಗಿತ್ತು. 
ಯಶವಂತ್ ಸರದೇಶಪಾಂಡೆ  ಅವರು ಮೂಲತಃ ವಿಜಯಪುರ ಜಿಲ್ಲೆಯವರು. ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದವರು.  
ಶಿವಮೊಗ್ಗದ ಹೆಗ್ಗೋಡಿನ ನೀನಾಸಂ ನಿಂದ ನಾಟಕದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದರು. 
ಯಶವಂತ್ ಸರದೇಶಪಾಂಡೆ ಅವರು 60 ಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ. ಅನೇಕ ನಾಟಕಗಳಲ್ಲಿ ಯಶವಂತ್ ಸರದೇಶಪಾಂಡೆ ಅವರು ಅಭಿನಯಿಸಿದ್ದಾರೆ. 
ಯಶವಂತ್ ಸರದೇಶಪಾಂಡೆ ಅವರ ಪತ್ನಿ ಮಾಲತಿ ಸರದೇಶಪಾಂಡೆ ಅವರು ಕೂಡ ರಂಗಭೂಮಿ ಕಲಾವಿದರಾಗಿದ್ದಾರೆ. ಪತಿ-ಪತ್ನಿ ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಹೆಸರು ಗಳಿಸಿದ್ದಾರೆ. 
ಧಾರವಾಹಿಗಳ ಸಂಭಾಷಣೆಕಾರರಾಗಿಯೂ ಯಶವಂತ್ ಸರದೇಶಪಾಂಡೆ ಕೆಲಸ ಮಾಡಿದ್ದಾರೆ. ರಾಮ ಶ್ಯಾಮ ಭಾಮ ಸಿನಿಮಾದ ಸಂಭಾಷಣೆಯನ್ನು ಯಶವಂತ್ ಸರದೇಶಪಾಂಡೆ ಬರೆದಿದ್ದರು. ಈ ಹಾಸ್ಯಸಿನಿಮಾ ಸಾಕಷ್ಟು ಹಿಟ್ ಆಗಿತ್ತು. ಈ ಸಿನಿಮಾದಲ್ಲಿ ಕಮಲ್ ಹಾಸನ್ ಕೂಡ ನಟಿಸಿದ್ದರು. ಇನ್ನೂ ಯಶವಂತ್ ಸರದೇಶಪಾಂಡೆ ಅವರು  ಅತಿಥಿ , ಮರ್ಮ, ಜೂಜಾಟ ಹಾಗೂ  ಸ್ಟುಡೆಂಟ್, ಅಮೃತಧಾರೆ ಸಿನಿಮಾಗಳಲ್ಲಿ ನಟಿಸಿದ್ದಾರೆ. 
ಆಲ್ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್ ನಾಟಕಗಳನ್ನು ನಿರ್ದೇಶನ ಮಾಡಿದ್ದಾರೆ.  
ದ.ರಾ.ಬೇಂದ್ರೆ ಅವರ ನಾಟಕಗಳನ್ನು ರಂಗಭೂಮಿಗೆ ತಂದ ಪ್ರಚುರಪಡಿಸಿದ ಕೀರ್ತಿ ಯಶವಂತ್ ಸರದೇಶಪಾಂಡೆ ಅವರಿಗೆ ಸಲ್ಲುತ್ತೆ. ಇಂಥ ಕಲಾವಿದ, ರಂಗಭೂಮಿ ನಿರ್ದೇಶಕ ಯಶವಂತ್ ಸರದೇಶಪಾಂಡೆ ಇಂದು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
yeshwanth sardeshpande is no more
Advertisment
Advertisment
Advertisment