/newsfirstlive-kannada/media/media_files/2025/08/14/darshan-case-advocates-in-sc-022-2025-08-14-12-30-06.jpg)
ಪ್ರಾಸಿಕ್ಯೂಷನ್ ಪರ ವಾದಿಸಿದ ಸಿದ್ದಾರ್ಥ ಲೂತ್ರಾ ಅಂಡ್ ಟೀಮ್
ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ , ಗೆಳತಿ ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳ ಜಾಮೀನು ರದ್ದಾಗಿದೆ. ಹೈಕೋರ್ಟ್ ನೀಡಿದ್ದ ಜಾಮೀನು ಅನ್ನು ಸುಪ್ರೀಂಕೋರ್ಟ್ ರದ್ದುಪಡಿಸಿದೆ. ಸುಪ್ರೀಂಕೋರ್ಟ್ ನ ಜಸ್ಟೀಸ್ ಜೆ.ಬಿ.ಪರ್ದಿವಾಲಾ ಮತ್ತು ಜಸ್ಟೀಸ್ ಆರ್.ಮಹದೇವನ್ ಅವರ ಪೀಠವು ನಟ ದರ್ಶನ್ ಗೆ ನೀಡಿದ್ದ ಜಾಮೀನು ಅನ್ನು ರದ್ದುಪಡಿಸಿ ಇಂದು ಮಹತ್ವದ ಆದೇಶ ನೀಡಿದೆ.
ಸುಪ್ರೀಂಕೋರ್ಟ್ ನಲ್ಲಿ ನಟ ದರ್ಶನ್ ಗೆ ಜಾಮೀನು ರದ್ದಾಗಲು ಪ್ರಾಸಿಕ್ಯೂಷನ್ ಪರ ವಕೀಲರ ಪ್ರಬಲ ವಾದಮಂಡನೆೆಯೇ ಕಾರಣ. ಪ್ರಾಸಿಕ್ಯೂಷನ್ ಪರವಾಗಿ ಸುಪ್ರೀಂಕೋರ್ಟ್ ನಲ್ಲಿ ವಾದಿಸಿದ್ದು ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ. ಸುಪ್ರೀಂಕೋರ್ಟ್ ಗೆ ದರ್ಶನ್ ವಿರುದ್ಧದ ಕೊಲೆ ಕೇಸ್ , ಕಿಡ್ನ್ಯಾಪ್ ಆರೋಪ, ಸಾಕ್ಷ್ಯ ನಾಶ ಸೇರಿದಂತೆ ಎಲ್ಲವನ್ನೂ ಮನವರಿಕೆ ಮಾಡಿಕೊಟ್ಟಿದ್ದು ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ. ಸುಪ್ರೀಂಕೋರ್ಟ್ ನಲ್ಲಿ ಸಾಕಷ್ಟು ವರ್ಷಗಳಿಂದ ವಾದಿಸಿದ ಅನುಭವ ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ ಅವರಿಗೆ ಇದೆ. ಸಿದ್ದಾರ್ಥ ಲೂತ್ರಾ ಅವರಿಗೆ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ವಿರುದ್ಧದ ಆರೋಪಗಳ ಬಗ್ಗೆ ಎಲ್ಲ ಮಾಹಿತಿಯನ್ನು ನೀಡಿದ್ದು ಕರ್ನಾಟಕದ ಹಿರಿಯ ವಕೀಲ ಪ್ರಸನ್ನ ಕುಮಾರ್ ಅವರು. ಪ್ರಸನ್ನ ಕುಮಾರ್ ಬೆಂಗಳೂರಿನ ಕೆಳ ನ್ಯಾಯಾಲಯದಲ್ಲಿ ಪ್ರಾಸಿಕ್ಯೂಷನ್ ಪರ ವಕೀಲರಾಗಿ ವಾದ ಮಂಡಿಸುತ್ತಿದ್ದಾರೆ.ನಟ ದರ್ಶನ್ ಜಾಮೀನು ರದ್ದಾಗಲು ಪ್ರಾಸಿಕ್ಯೂಷನ್ ಪರ ವಕೀಲರ ಪ್ರಬಲ ವಾದಮಂಡನೆಯೇ ಕಾರಣ. ಹೀಗಾಗಿ ನಟ ದರ್ಶನ್ ಜಾಮೀನು ರದ್ದಾದ ಸಂಪೂರ್ಣ ಕ್ರೆಡಿಟ್ ವಕೀಲರಾದ ಸಿದ್ದಾರ್ಥ ಲೂತ್ರಾ ಮತ್ತು ಪ್ರಸನ್ನ ಕುಮಾರ್ ಅವರಿಗೆ ಸಲ್ಲುತ್ತೆ.
ಇಂದು ಸುಪ್ರೀಂಕೋರ್ಟ್ ನಟ ದರ್ಶನ್ ಗೆ ನೀಡಿದ್ದ ಜಾಮೀನು ರದ್ದುಪಡಿಸಿದ ಮೇಲೆ, ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ ಮತ್ತು ಪ್ರಸನ್ನಕುಮಾರ್ ಸಿಜೆಐ ಕೋರ್ಟ್ ಮುಂದೆ ನಿಂತು ಪೋಟೋಗೆ ಪೋಸ್ ನೀಡಿದ್ದಾರೆ. ಈ ಪೋಟೋ ನ್ಯೂಸ್ ಫಸ್ಟ್ ಲಭ್ಯವಾಗಿದೆ.
ಇಲ್ಲಿದೆ ನೋಡಿ ವಕೀಲರು ಇಂದು ಸುಪ್ರೀಂಕೋರ್ಟ್ ಸಿಜೆಐ ಕೋರ್ಟ್ ಹಾಲ್ ಮುಂದೆ ನಿಂತು ಗೆಲುವಿನ ನಗೆ ಬೀರಿದ ಪೋಟೋ.
ಹಿರಿಯ ವಕೀಲ ಸಿದ್ದಾರ್ಥ ಲೂತ್ರಾ ಅಂಡ್ ಟೀಮ್ ಗೆಲುವಿನ ನಗೆ ಬೀರಿದ ಪೋಟೋ.
ಹೀಗಾಗಿ ಸುಪ್ರೀಂಕೋರ್ಟ್ ಗೆ ನಟ ದರ್ಶನ್ ಗೆ ನೀಡಿರುವ ಜಾಮೀನು ರದ್ದು ಕೋರಿ ಮೇಲ್ಮನವಿ ಸಲ್ಲಿಸುವಂತೆ ಪೊಲೀಸ್ ಇಲಾಖೆಗೆ ಹಿರಿಯ ವಕೀಲ ಪ್ರಸನ್ನ ಕುಮಾರ್ ಸಲಹೆ ನೀಡಿದ್ದರು. ಈ ಸಲಹೆ ಆಧಾರದ ಮೇಲೆ ಹಿಂದಿನ ಪೊಲೀಸ್ ಕಮೀಷನರ್ ದಯಾನಂದ್ ಅವರು ಮೇಲ್ಮನವಿ ಸಲ್ಲಿಕೆಗೆ ರಾಜ್ಯ ಸರ್ಕಾರದ ಅನುಮತಿ ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಸುಪ್ರೀಂಕೋರ್ಟ್ ನಲ್ಲಿ ಪ್ರಾಸಿಕ್ಯೂಷನ್ ಪರ ವಾದಿಸಲು ಓರ್ವ ಅನುಭವಿ, ಹಿರಿಯ ವಕೀಲರು ಬೇಕೆಂಬ ಕಾರಣದಿಂದ ಸಿದ್ದಾರ್ಥ ಲೂತ್ರಾರನ್ನು ಬೆಂಗಳೂರು ಪೊಲೀಸರು ನೇಮಿಸಿಕೊಂಡಿದ್ದರು.
ಹೀಗಾಗಿ ಸಿದ್ದಾರ್ಥ ಲೂತ್ರಾ ಅವರಿಗೆ ಕೇಸ್ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಪ್ರಬಲ ವಾದ ಮಂಡನೆಗೆ ನೆರವಾಗಿದ್ದು ಹಿರಿಯ ವಕೀಲ ಪ್ರಸನ್ನ ಕುಮಾರ್ ಅವರು. ಹಿರಿಯ ವಕೀಲರಾದ ಸಿದ್ದಾರ್ಥ ಲೂತ್ರಾ ಮತ್ತು ಪ್ರಸನ್ನ ಕುಮಾರ್ ಅಂಡ್ ಟೀಮ್ ನ ಪ್ರಬಲ ವಾದಮಂಡನೆಯ ಕಾರಣದಿಂದಲೇ ಇಂದು ನಟ ದರ್ಶನ್ ಅಂಡ್ ಟೀಮ್ ನ ಜಾಮೀನು ರದ್ದಾಗಿದೆ. ಹೀಗಾಗಿ ಇಂದು ಸುಪ್ರೀಂಕೋರ್ಟ್ ನಟ ದರ್ಶನ್ ಅಂಡ್ ಗ್ಯಾಂಗ್ ನ ಜಾಮೀನು ರದ್ದುಪಡಿಸಿರುವುದರ ಕ್ರೆಡಿಟ್ ಹಿರಿಯ ವಕೀಲರಾದ ಸಿದ್ದಾರ್ಥ ಲೂತ್ರಾ ಮತ್ತು ಪ್ರಸನ್ನ ಕುಮಾರ್ ಅವರಿಗೆ ಸಲ್ಲುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.