/newsfirstlive-kannada/media/media_files/2025/09/12/delhi-high-court-and-bombay-hc-2025-09-12-13-56-03.jpg)
ದೆಹಲಿ ಹಾಗೂ ಬಾಂಬೆ ಹೈಕೋರ್ಟ್
ದೆಹಲಿ ಮತ್ತು ಬಾಂಬೆ ಹೈಕೋರ್ಟ್ ಗಳಿಗೆ ಇಂದು ಬಾಂಬ್ ಬೆದರಿಕೆ ಕರೆ ಬಂದಿದೆ. ಇದರಿಂದಾಗಿ ಬಾಂಬೆ ಹೈಕೋರ್ಟ್ ಮತ್ತು ದೆಹಲಿ ಹೈಕೋರ್ಟ್ ನಲ್ಲಿ ಎಲ್ಲರನ್ನೂ ಖಾಲಿ ಮಾಡಿಸಿ ಬಾಂಬ್ ತಪಾಸಣೆಯನ್ನು ಮಾಡಲಾಗುತ್ತಿದೆ. ದೆಹಲಿ ಹೈಕೋರ್ಟ್ ಗೆ ಬಂದಿರುವ ಬಾಂಬ್ ಬೆದರಿಕೆ ಲೆಟರ್ ನಲ್ಲಿ ಜಡ್ಜ್ ಗಳ ರೂಮುನಲ್ಲಿ ಬಾಂಬ್ ಸ್ಪೋಟಕವನ್ನು ಇಡಲಾಗಿದೆ. ಜೊತೆಗೆ ಹೈಕೋರ್ಟ್ ನ ಬೇರೆ ಬೇರೆ ಸ್ಥಳಗಳಲ್ಲೂ ಬಾಂಬ್ ಇಡಲಾಗಿದೆ. ಮಧ್ಯಾಹ್ನ 2 ಗಂಟೆಗೆ ಬಾಂಬ್ ಸ್ಪೋಟವಾಗುತ್ತೆ ಎಂದು ಎಚ್ಚರಿಸಲಾಗಿದೆ. ಹೀಗಾಗಿ 2 ಗಂಟೆಯೊಳಗೆ ಹೈಕೋರ್ಟ್ ನಲ್ಲಿದ್ದ ಎಲ್ಲರನ್ನೂ ತೆರವುಗೊಳಿಸಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ, ಬಾಂಬ್ ಪತ್ತೆ ದಳ ಶೋಧ ಕಾರ್ಯ ನಡೆಸುತ್ತಿವೆ.
ಪಾಕಿಸ್ತಾನದ ಐಎಸ್‌ಐ ಸೆಲ್ ಗಳ ಜೊತೆ ನಮಗೆ ಸಂಪರ್ಕ ಇದೆ. ಇಂದು ಮಧ್ಯಾಹ್ನದ ನಮಾಜ್ ಮುಗಿದ ಬಳಿಕ ಜಡ್ಜ್ ಚೇಂಬರ್ ಸ್ಪೋಟವಾಗುತ್ತೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಇನ್ನೂ ಇಂದು ದೆಹಲಿ ಹೈಕೋರ್ಟ್ ನಲ್ಲಿ ಎಲ್ಲ ಕೋರ್ಟ್ ಕಲಾಪಗಳನ್ನು ನಿಲ್ಲಿಸಲಾಗಿದೆ. ಜಡ್ಜ್ ಮತ್ತು ವಕೀಲರನ್ನು ಕೋರ್ಟ್ ಹಾಲ್ ಗಳಿಂದ ತೆರವುಗೊಳಿಸಲಾಗಿದೆ.
ದೆಹಲಿ ಹೈಕೋರ್ಟ್
ಇನ್ನೂ ಇದೇ ರೀತಿ ಬಾಂಬೆ ಹೈಕೋರ್ಟ್ ಗೂ ಬಾಂಬ್ ಬೆದರಿಕೆಯ ಲೆಟರ್ ಮತ್ತು ಇ ಮೇಲ್ ಬಂದಿದೆ. ಮುಂಬೈನಲ್ಲಿರುವ ಬಾಂಬೆ ಹೈಕೋರ್ಟ್ ಕಲಾಪವನ್ನು ಸ್ಥಗಿತಗೊಳಿಸಲಾಗಿದೆ.
ಮೊನ್ನೆ ಮಂಗಳವಾರ ಕೂಡ ದೆಹಲಿಯ ಮುಖ್ಯಮಂತ್ರಿ ಸೆಕ್ರೇಟೇರಿಯೇಟ್ ಮತ್ತು ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿಗೆ ಬಾಂಬ್ ಬೆದರಿಕೆ ಕರೆ ಬಂದಿತ್ತು. ಬಳಿಕ ಅದು ಹುಸಿ ಬಾಂಬ್ ಬೆದರಿಕೆ ಕರೆ ಎಂಬುದು ದೃಢಪಟ್ಟಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.