/newsfirstlive-kannada/media/media_files/2025/08/09/delhi-karwal-nagar-triple-murder-2025-08-09-13-45-35.jpg)
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತ್ರಿವಳಿ ಕೊಲೆಯಾಗಿದೆ. ದೆಹಲಿಯ ಕರ್ವಾಲ್ ನಗರದಲ್ಲಿ ಕಳೆದ ರಾತ್ರಿ ಮನೆಯ ಯಜಮಾನನೇ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಕೊಂದಿದ್ದಾನೆ. ಪತ್ನಿ ಜಯಶ್ರೀ ಜೊತೆ ಕಳೆದ ಕೆಲ ದಿನಗಳಿಂದ ಗಂಡ ವಾಗ್ವಾದ ನಡೆಸುತ್ತಿದ್ದ. ವಾಗ್ವಾದವೇ ವಿಕೋಪಕ್ಕೆ ತಿರುಗಿ ಕೊಲೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಪತ್ನಿ ಹಾಗೂ ಇಬ್ಬರ ಮಕ್ಕಳನ್ನು ಕೊಂದ ಬಳಿಕ ಪತಿ ಪರಾರಿಯಾಗಿದ್ದಾನೆ. ಕೊಲೆಗೆ ನಿಖರ ಕಾರಣವೇನೆಂದು ಪೊಲೀಸರಿಗೂ ಗೊತ್ತಾಗಿಲ್ಲ. ಕೊಲೆಯ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೊಲೆಯ ಕಾರಣವೇ ನಿಗೂಢವಾಗಿದೆ.
ಪತಿಯ ವಿರುದ್ಧ ಮೂವರ ಕೊಲೆ ಆರೋಪದ ಕೇಸ್ ದಾಖಲಾಗಿದೆ. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಜಿಟಿಬಿ ಆಸ್ಪತ್ರೆಗೆ ರವಾನಿಸಲಾಗಿದೆ.
ನೆರೆಹೊರೆಯವರ ಹೇಳುವ ಪ್ರಕಾರ, ದಂಪತಿ ನಿರಂತರವಾಗಿ ಜಗಳವಾಡುತ್ತಿದ್ದಾರಂತೆ.
ನಮಗೆ ಈ ಕೊಲೆಯ ಬಗ್ಗೆ ಬೆಳಿಗ್ಗೆ 6 ಗಂಟೆಗೆ ಗೊತ್ತಾಯಿತು. ನಾವು ಅವರ ಮನೆಯ ಡೋರ್ ಓಪನ್ ಮಾಡಿದಾಗ, ತಾಯಿ ಮತ್ತು ಇಬ್ಬರು ಮಕ್ಕಳು ಬೆಡ್ ನ ಮೇಲೆ ಕೊಲೆಯಾದ ಸ್ಥಿತಿಯಲ್ಲಿದ್ದರು. ಗಂಡ- ಹೆಂಡತಿ ಯಾವಾಗಲೂ ಜಗಳವಾಡುತ್ತಿದ್ದರು ಎಂದು ನೆರೆಹೊರೆಯವರು ಹೇಳಿದ್ದಾರೆ. ರಕ್ಷಾ ಬಂಧನದ ದಿನವೇ ತ್ರಿವಳಿ ಕೊಲೆಯಾಗಿದೆ. ತಂದೆಯೇ ಮನುಷ್ಯತ್ವ ಮರೆತು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದಿದ್ದಾನೆ. ಇಬ್ಬರು ಮುದ್ದಾದ ಮಕ್ಕಳ ಮುಖ ನೋಡಿಯೂ ತಂದೆಗೆ ಕರುಣೆಯೇ ಬಂದಿಲ್ಲ. ಮಕ್ಕಳ ಜೀವವನ್ನಾದರೂ ತಂದೆ ಉಳಿಸಬೇಕಾಗಿತ್ತು ಎಂಬ ಮಾತು ಅನ್ನು ದೆಹಲಿಯ ಕರ್ವಾಲ್ ನಗರದ ಜನರು ಇಂದು ಬೆಳಿಗ್ಗೆ ಆಡುತ್ತಿದ್ದರು. ಹಣಕಾಸಿನ ವಿಚಾರಕ್ಕಾಗಿ ಪತಿ- ಪತ್ನಿಯ ನಡುವೆ ಗಲಾಟೆಯಾಗಿರಬಹುದು ಎಂಬ ಶಂಕೆಯೂ ಮೇಲ್ನೋಟಕ್ಕೆ ವ್ಯಕ್ತವಾಗುತ್ತಿದೆ.