/newsfirstlive-kannada/media/media_files/2025/08/30/tumakuru-dowry-harassment-case-2025-08-30-16-48-26.jpg)
ಪ್ರೇರಣಾ -ಪ್ರಜ್ವಲ್ ಜಯಶಂಕರ್ ಮದುವೆ ಪೋಟೋಗಳು
ಕಳೆದ ವಾರದ ಅಂತ್ಯದಲ್ಲಿ ತುಮಕೂರು ನಗರದ ಸಪ್ತಗಿರಿ ಬಡಾವಣೆಯ ಪ್ರಜ್ವಲ್ ಜಯಶಂಕರ್ ಮನೆ ಮುಂದೆ ಆತನ ಪತ್ನಿ ಪ್ರೇರಣಾ ಧರಣಿ ಸತ್ಯಾಗ್ರಹ ನಡೆಸಿದ್ದಳು. ನನ್ನ ಗಂಡ ಹಾಗೂ ಆತನ ಪೋಷಕರು ತನಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ. ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ. ಮದುವೆ ವೇಳೆಯಲ್ಲಿ ನನ್ನ ಪೋಷಕರು ನೀಡಿದ್ದ ಚಿನ್ನದ ಒಡವೆಗಳನ್ನು ಗಂಡ, ಮನೆಯವರು ಇಟ್ಟುಕೊಂಡಿದ್ದಾರೆ, ಅವುಗಳನ್ನು ವಾಪಸ್ ಕೊಡಬೇಕೆಂದು ಮನೆಯ ಹೊರಗೆ ಧರಣಿ ನಡೆಸಿದ್ದರು.
ಈ ಕೇಸ್ ಗೆ ಈಗ ಟ್ವಿಸ್ಟ್ ಸಿಕ್ಕಿದೆ. ಪ್ರೇರಣಾ ಪತಿ ಪ್ರಜ್ವಲ್ ಜಯಶಂಕರ್ ಪತ್ನಿ ಪ್ರೇರಣಾ ಆರೋಪವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ.
ಪ್ರೇರಣಾ ಪತಿ ಪ್ರಜ್ವಲ್ ಜಯಶಂಕರ್ ನೇರವಾಗಿ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ರು. ಆ ಆರೋಪಗಳೆಲ್ಲಾ, ಸುಳ್ಳು, ನಮಗೆ ವರದಕ್ಷಿಣೆ ಪಡೆಯೋ ಮನಸ್ಥಿತಿಯೇ ಇಲ್ಲ. ನಾವೇ ಮದುವೆಗೆಂದು ಲಕ್ಷಾಂತರು ರೂ ಖರ್ಚು ಮಾಡಿಕೊಂಡಿದ್ದೇವೆ, ಮದುವೆ ಬಳಿಕ ಆಕೆಯನ್ನು ನಾನೇ ನನ್ನ ಸ್ವಂತ ಖರ್ಚಿನಲ್ಲಿ ಎಂಬಿಎ ಓದೋಕು ಕೂಡ ಸೇರಿಸಿದ್ದೆ.. ಹಾಗೇನಾದ್ರೂ ನಮ್ಮ ಮೇಲೆ ಆ ತರ ಅನುಮಾನ ಇದ್ರೆ ನ್ಯಾಯಾಲಯದಲ್ಲಿ ಸಾಬೀತುಪಡಿಸಲಿ. ನಾವು ವರದಕ್ಷಿಣೆ ಕಿರುಕುಳ ನೀಡಿದ್ದೇವೆ ಎಂಬುದಕ್ಕೆ ಯಾವುದೇ ಸಾಕ್ಷಿ ಇಲ್ಲ ಅಂತ ಪ್ರಜ್ವಲ್ ಹೇಳಿದ್ರು.
ಪತ್ನಿ ಪ್ರೇರಣಾ ಹಾಗೂ ಪೋಷಕರು ನಮ್ಮಿಂದ ಹಣ, ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ್ದರು. ನನ್ನ ಪ್ರಾಣ ಹಾನಿಗೆ ಯತ್ನಿಸಿದ್ದರು. ಆದರೇ, ದೇವರ ದಯೆ,ನನ್ನ ಬುದ್ದಿವಂತಿಕೆಯಿಂದ ಆ ಅಪಾಯದಿಂದ ಪಾರಾದೆ. ನಮ್ಮ ಮಾನಹಾನಿ ಮಾಡುವ ದುರುದ್ದೇಶದಿಂದ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಾನು ಉದ್ಯೋಗದಲ್ಲಿ ಇಲ್ಲ ಅನ್ನೋದು ಗೊತ್ತಿದ್ದರೂ, ನಮ್ಮ ಅಪ್ಪ, ಅಮ್ಮ ಸರ್ಕಾರಿ ಉದ್ಯೋಗದಲ್ಲಿದ್ದಾರೆ, ಕೋಟ್ಯಾಂತರ ರೂಪಾಯಿ ಆಸ್ತಿ ಇದೆ ಎಂದು ಮದುವೆ ಮಾಡಿದ್ದೇವು ಎಂದು ಪತ್ನಿ ಪ್ರೇರಣಾ ಪೋಷಕರು ಹೇಳಿದ್ದಾರೆ. ಇದರಲ್ಲೇ ಅವರ ಉದ್ದೇಶ ಏನೆಂಬುದು ಅರ್ಥವಾಗುತ್ತೆ. ನಾವು ಯಾವುದೇ ವರದಕ್ಷಿಣೆ ಕೇಳಿಲ್ಲ. ನಾವು ಯಾವುದೇ ಒಡವೆಗಳನ್ನು ಪಡೆದಿಲ್ಲ ಎಂದು ಪತಿ ಪ್ರಜ್ವಲ್ ಜಯಶಂಕರ್ ಸ್ಪಷ್ಟವಾಗಿ ಹೇಳಿದ್ದಾರೆ.
ಇತ್ತ ಪ್ರಜ್ವಲ್ ಪತ್ರಿಕಾಗೋಷ್ಟಿ ಬೆನ್ನಲ್ಲೇ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಜ್ವಲ್ ಹಾಗೂ ಆತನ ಪೋಷಕರು ವಿರುದ್ಧ ಪ್ರೇರಣಾ ವರದಕ್ಷಿಣೆ ಕಿರುಕುಳ ನೀಡಿದ ಆರೋಪದಡಿ ಕೇಸ್ ದಾಖಲಿಸಿದ್ದಾರೆ. ಪತಿ ಪ್ರಜ್ವಲ್ ಹಾಗೂ ಪೋಷಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ಈಗ ಮುಂದೇನಾಗುತ್ತೆ, ಸುಪ್ರೀಂಕೋರ್ಟ್ ನಿರ್ದೇಶನವೇನು ಗೊತ್ತಾ?
ಆದರೇ, ವರದಕ್ಷಿಣೆ ಕಿರುಕುಳದ ಕೇಸ್ ದಾಖಲಾದ ತಕ್ಷಣವೇ ಆರೋಪಿಗಳನ್ನು ಬಂಧಿಸಬಾರದೆಂದು ಸುಪ್ರೀಂಕೋರ್ಟ್ 2017 ರಲ್ಲೇ ಎಲ್ಲ ರಾಜ್ಯಗಳ ಪೊಲೀಸರಿಗೂ ನಿರ್ದೇಶನ ನೀಡಿದೆ. ಹೀಗಾಗಿ ಪತಿ ಪ್ರಜ್ವಲ್ ಜಯಶಂಕರ್ ಕುಟುಂಬವನ್ನು ತಕ್ಷಣವೇ ಬಂಧಿಸಲು ಸಾಧ್ಯವಾಗಲ್ಲ. ಕೇಸ್ ಅನ್ನು ಕುಟುಂಬ ಕಲ್ಯಾಣ ಸಮಿತಿಗೆ ವರ್ಗಾಯಿಸಬೇಕು. ಈ ಕುಟುಂಬ ಕಲ್ಯಾಣ ಸಮಿತಿಯು ಪತಿ ಹಾಗೂ ಪತ್ನಿ ಕಡೆಯವರನ್ನು ಕರೆಸಿ ಮಾತುಕತೆ ನಡೆಸಬೇಕು. ನಿಜಕ್ಕೂ ವರದಕ್ಷಿಣೆ ಕಿರುಕುಳ ನೀಡಲಾಗಿದೆಯೇ ಇಲ್ಲವೇ ಎಂಬುದರ ಪರಿಶೀಲನೆ ನಡೆಸಬೇಕು. ಕುಟುಂಬ ಕಲ್ಯಾಣ ಸಮಿತಿ ನೀಡುವ ವರದಿ ಆಧಾರದ ಮೇಲೆ ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಪತಿಯ ಮನೆಯವರಿಗೂ ನಿರೀಕ್ಷಣಾ ಜಾಮೀನು ಪಡೆಯಲು ಕಾಲಾವಕಾಶ ಕೂಡ ಸಿಗುತ್ತೆ. ಪತಿಯ ಮನೆಯವರಿಗೆ ನೋಟೀಸ್ ಕೊಟ್ಟು ಲಿಖಿತ ಉತ್ತರವನ್ನು ಪೊಲೀಸರು ಪಡೆಯಬೇಕಾಗುತ್ತೆ.
ಕೋರ್ಟ್ ಗೆ ನಿರೀಕ್ಷಣಾ ಜಾಮೀನು, ಜಾಮೀನು ಕೋರಿ ಅರ್ಜಿ ಸಲ್ಲಿಸಿದರೇ, ಬೇಗನೇ ಅರ್ಜಿ ವಿಚಾರಣೆ ನಡೆಸಿ, ಆದೇಶ ನೀಡಬೇಕೆಂದು ಸುಪ್ರೀಂಕೋರ್ಟ್ ಈ ಹಿಂದೆಯೇ ನಿರ್ದೇಶನ ನೀಡಿದೆ. ಹೀಗಾಗಿ ಪ್ರಜ್ವಲ್ ಜಯಶಂಕರ್ ಹಾಗೂ ಪೋಷಕರು ಧೈರ್ಯವಾಗಿ ಕಾನೂನು ಹೋರಾಟವನ್ನು ನಡೆಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.