/newsfirstlive-kannada/media/media_files/2025/11/01/madduru-police-station-2025-11-01-18-06-49.jpg)
ಕಳೆದ ಸೋಮವಾರ ಮಂಡ್ಯದ ಮನೆಯೊಂದರ ಎಲ್ಲೆಡೆ ನಿಗೂಢ ರಕ್ತ ಚೆಲ್ಲಿತ್ತು. ಏಕಾಏಕಿ ಮನೆ ತುಂಬೆಲ್ಲ ನೆತ್ತರು ಕಂಡು ಮನೆಯಲ್ಲಿದ್ದ ದಂಪತಿ ಹಾಗೂ ಸ್ಥಳೀಯರು ಅಕ್ಷರಶಃ ಬೆಚ್ಚಿಬಿದ್ದಿದ್ರು. ಗ್ರಾಮಸ್ಥರು ಕೂಡ ಆತಂಕಗೊಂಡಿದ್ರು. ಯಾರೋ ವಾಮಾಚಾರ ಮಾಡಿ ಪ್ರಾಣಿಯ ರಕ್ತ ಸುರಿದಿದ್ದಾರೆ ಅಂತ ಶಂಕಿಸಿದ್ರು. ಆದ್ರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಭಯಾನಕರ ಅಂಶ ಬಯಲಾಗಿದ್ದು, ಅದು ಪ್ರಾಣಿ ಅಥವಾ ಪಕ್ಷಿಯ ರಕ್ತವಲ್ಲ, ಬದಲಾಗಿ ಮನುಷ್ಯನ ರಕ್ತ ಎಂಬುದು ಗೊತ್ತಾಗಿದೆ. ಅಷ್ಟೇ ಅಲ್ಲ ಮನೆಯವರ ಮೇಲೆ ಅನುಮಾನ ಹುಟ್ಟೋಕೆ ಕಾರಣವಾಗಿದೆ. ಈ ಕುರಿತ ಒಂದು ರಿಪೋರ್ಟ್ ಇಲ್ಲಿದೆ.
ರಕ್ತ.. ನಡುಮನೆ, ಗೋಡೆ, ಟಿವಿ, ಫ್ಯಾನ್​​.. ಬಾತ್​ ರೂಮ್​.. ಎಲ್ಲೆಲ್ಲೂ ನೆತ್ತರು.. ಹಾಗಂತ ಇಲ್ಲಿ ಯಾವುದೇ ಹತ್ಯೆ ಆಗಿಲ್ಲ.. ಆದ್ರೆ ರಕ್ತ ಹರಿದಿದೆ.. ಪೊಲೀಸರಿಗೂ ಈ ಪ್ರಕರಣ ವಿಚಿತ್ರವಾಗಿ ಕಾಣಿಸಿದೆ..
ಹೊಂಬಾಳೇಗೌಡನ ದೊಡ್ಡಿ.. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಹಳ್ಳಿ.. ವಿಚಿತ್ರ ಘಟನೆಯೊಂದು ಇಡೀ ಗ್ರಾಮವನ್ನೇ ನಡುಗಿಸಿದೆ.. ಸತೀಶ್, ಸೌಮ್ಯ ದಂಪತಿಯ ಮನೆಯಲ್ಲಿ ಕಳೆದ ಸೋಮವಾರ ಬೆಳಿಗ್ಗೆ ಹೀಗೆ ನಿಗೂಢವಾಗಿ ರಕ್ತ ಕಾಣಿಸಿತ್ತು.. ಬ್ಲಡ್​​ ಬಾತ್​​​ ಕಂಡವರಲ್ಲಿ ನಡುಕ ಹುಟ್ಟಿಸಿತ್ತು.. ಮೇಲ್ನೋಟಕ್ಕೆ ವಾಮಾಚಾರ.. ಪ್ರಾಣಿ ಬಲಿಕೊಟ್ಟು ರಕ್ತವನ್ನ ಸುರಿದು ಪರಾರಿಯಾದ ಬಗ್ಗೆ ಶಂಕಿಸಿದ್ರು. ಆದ್ರೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಅದು ಪ್ರಾಣಿಯ ನೆತ್ತರಲ್ಲ, ಬದಲಿಗೆ ಮನುಷ್ಯನ ರಕ್ತ ವೆಂಬುದು ಗೊತ್ತಾಗಿದೆ.
ಮನೆಯಲ್ಲಿ ನಿಗೂಢ ರಕ್ತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್.!
ಅದು ಪ್ರಾಣಿ, ಪಕ್ಷಿಯ ನೆತ್ತರಲ್ಲ, ಮನುಷ್ಯನ ರಕ್ತ!
ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ಬಯಲಾಯ್ತು ಭಯಾನಕ ಸತ್ಯ.!
ಅಂದಹಾಗೇ ಸತೀಶ್, ಸೌಮ್ಯ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವ್ರು ಹಾಸ್ಟೆಲ್ ನಲ್ಲಿದ್ದುಕೊಂಡು
ವಿದ್ಯಾಭ್ಯಾಸ ಮಾಡುತ್ತಿರೋದ್ರಿಂದ ಮನೆಯಲ್ಲಿ ದಂಪತಿ ಮಾತ್ರ ಇದ್ದಾರೆ. ಸೋಮವಾರ ಎಂದಿನಂತೆ ಸೌಮ್ಯ ಬೆಳಿಗ್ಗೆ ಬೇಗ ಎದ್ದು ಮನೆ ಕಸ ಗುಡಿಸಿ, ಒರೆಸಿ ಸ್ವಚ್ಛಗೊಳಸಿ ಹಾಗತಾನೆ ಕುಳಿತುಕೊಂಡಿದ್ರು. ಅಷ್ಟರಲ್ಲಿ ಜಮೀನಿನಿಂದ ಗಂಡನಿಗೆ ಉಪಹಾರ ಸಿದ್ದಪಡಿಸಲು ಅಡುಗೆ ಕೋಣೆಗೆ ತೆರೆಳಿದ್ರು. ಇತ್ತ ಸತೀಶ್ ಕೈಕಾಲು ತೊಳೆಯಲು ಬಾತ್ ರೂಂಗೆ ಹೋದಾಗ ಅಲ್ಲಿ ರಕ್ತ ಕಂಡು ಗಾಬರಿಯಾಗಿದ್ದಾರೆ. ಅಷ್ಟರಲ್ಲಿ ಮನೆಯ ಹಾಲ್, ಟಿವಿ, ಫ್ಯಾನ್ ಮೇಲೆಲ್ಲ ರಕ್ತ ಅಂಟಿತ್ತು.
ಇನ್ನು ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸರು ಆಗಮಿಸಿದ್ರು. ತಕ್ಷಣ FSL ಹಾಗೂ ಶ್ವಾನದಳದ ಸಿಬ್ಬಂದಿಗಳನ್ನ ಕರೆಸಿ ಪರಿಶೀಲನೆ ನಡೆಸಿದ್ರು. ಸದ್ಯ ರಕ್ತದ ಮಾದರಿ ಸಂಗ್ರಹಿಸಿ ಲ್ಯಾಬ್‌ಗೆ ರವಾನಿಸಲಾಗಿದೆ. ಎಫ‌್‌ಎಸ್‌ಎಲ್ ವರದಿ ಬರೋದು ತಡವಾಗುವ ಹಿನ್ನಲೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತೊಡಗಿದ್ದಾರೆ. ಆದ್ರೆ ತನಿಖೆಗಿಳಿದ ಖಾಕಿ ಪಡೆಗೆ ಇದೀಗ ಶಾಕ್ ಒಂದು ಎದುರಾಗಿದೆ. ಮನೆಯಲ್ಲಿ ಹರಡಿದ್ದು, ಯಾವುದೊ ಪ್ರಾಣಿ ಅಥವಾ ಪಕ್ಷಿಯ ರಕ್ತವಲ್ಲ. ಬದಲಿಗೆ ಮನುಷ್ಯನ ರಕ್ತ ಎಂಬುದು ತಿಳಿದು ಬಂದಿದೆ.
ಇನ್ನು ಪ್ರಾಥಮಿಕ ತನಿಖೆಯಲ್ಲಿ ಯಾವಾಗ ಮನುಷ್ಯನ ರಕ್ತ ಎಂದು ಗೊತ್ತಾಯ್ತೋ ಪೊಲೀಸರಿಗೆ ಅನುಮಾನಗಳ ಹುತ್ತವೇ ಬೆಳೆದು ನಿಂತಿದೆ. ಪ್ರಾಣಿ ಪಕ್ಷಿ ರಕ್ತ ಅಲ್ಲ ಎಂದ ಮೇಲೆ ಮನೆಯಲ್ಲಿ ಸುರಿದಿದ್ದ ನೆತ್ತರು ಯಾವ ವ್ಯಕ್ತಿಯದ್ದು ಎಂದು ಪ್ರಶ್ನೆ ಸದ್ಯ ಉದ್ಭವವಾಗಿದೆ. ವಾಮಾಚಾರಕ್ಕೆ ಪ್ರಾಣಿ ಪಕ್ಷಿ ರಕ್ತ ಹರಡೋದು ಕಾಮನ್, ಆದ್ರೆ ಮನುಷ್ಯನ ರಕ್ತವನ್ನ ವಾಮಾಚಾರಕ್ಕೆ ಬಳಿಸಿದ್ದಾರೆ. ಬಳಸಿರೋರು ಯಾರು ಎಂಬ ತನಿಖೆಗೆ ಸದ್ಯ ಪೊಲೀಸರು ಇಳಿದಿದ್ದಾರೆ.
ಅಲ್ಲದೇ ಮನೆಯವರು ಹೇಳ್ತಿರುವಂತೆ ಕುಟುಂಬಸ್ಥರ ನಡುವೆ ಜಮೀನು ವಿವಾದ ಇತ್ತು ಎಂದಿದ್ದಾರೆ. ಅದರ ನಡುವೆ ಇದೀಗ ಆರೋಪ ಮಾಡಿದ ದಂಪತಿಗಳ ಮೇಲೆಯೇ ಅನುಮಾನ ಮೂಡಲು ಶುರುವಾಗಿದೆ. ಹೌದು, ಜಮೀನು ಕ್ಯಾತೆ ತೆಗೆದಿದ್ದ ಸಂಬಂಧಿಗಳನ್ನ ಹೆದರಿಸಲು ಸತೀಶ್, ಸೌಮ್ಯ ದಂಪತಿ ಮನೆಯಲ್ಲಿ ರಕ್ತ ಸುರಿದು ಡ್ರಾಮಾ ಮಾಡಿದ್ರಾ ಎನ್ನುವ ಅನುಮಾನ ಮೂಡ್ತಿದೆ. ತಾವೇ ರಕ್ತ ಸುರಿದು ವಾಮಾಚಾರ ಕಥೆ ಕಟ್ಟುದ್ರಾ ಎನ್ನುವ ಸಂದೇಹ ಮೂಡ್ತಿದೆ. ಆದ್ದರಿಂದ ಪೊಲೀಸರು ಮನೆಯಲ್ಲಿದ್ದ ದಂಪತಿಯನ್ನ ಕರೆಸಿ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಆದ್ರೆ ಸತೀಶ್ ಗೆ ಹೃದಯ ಸಂಬಂಧಿ ಕಾಯಿಲೆ ಇರುವುದರಿಂದ ಹಾಗೂ ಇನ್ನೂ ಎಫ್‌ಎಸ್‌ಎಲ್ ಅಧಿಕೃತ ವರದಿ ಬಾರದ ಹಿನ್ನಲೆ ಇನ್ನೆರಡು ಮೂರು ದಿನದಲ್ಲಿ ವಿಚಾರಣೆ ನಡೆಸಲು ತೀರ್ಮಾನಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/01/madduru-police-station02-2025-11-01-18-08-50.jpg)
ಇನ್ನೂ ಪೊಲೀಸರು ಮತ್ತೊಂದು ಅನುಮಾನ ಕೂಡ ಕಾಡಲು ಆರಂಭಿಸಿದೆ. ಮನುಷ್ಯ ರಕ್ತ ಅಷ್ಟೊಂದು ಸುರಿಯಲು ಹೇಗೆ ಸಾಧ್ಯ. ಎಲ್ಲಿಂದಲೋ ಮನುಷ್ಯನ ರಕ್ತ ಸಂಗ್ರಹಿಸಿ ದಂಪತಿ ಅಥವಾ ದಂಪತಿಗಳ ಸಂಬಂಧಿ ಮನೆಯಲ್ಲಿ ಸುರಿದಿದ್ದಾರಾ ಎಂಬ ಅನುಮಾನ ಕೂಡ ಬರ್ತಿದೆ.
ಒಟ್ಟಾರೆ ಮಂಡ್ಯ ಮನೆಯೊಂದರಲ್ಲಿ ಹರಿದ ನಿಗೂಢ ರಕ್ತ ಪ್ರಕರಣ ಸದ್ಯ ನಿಗೂಢತೆಯನ್ನ ಹೆಚ್ಚಿಸುವ ಜೊತೆಗೆ ಅನುಮಾನಗಳನ್ನ ಹುಟ್ಟುಹಾಕಿದೆ. ಆದ್ರೆ ಬೆಸಗರಹಳ್ಳಿ ಪೊಲೀಸರ ತನಿಖೆ ಪೂರ್ಣಗೊಂಡ ಬಳಿಕವಷ್ಟೇ ರಕ್ತದ ರಹಸ್ಯ ಬಯಲಾಗಲಿದೆ.
ನಂದೀಶ್, ನ್ಯೂಸ್ ಫಸ್ಟ್, ಮಂಡ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us