/newsfirstlive-kannada/media/media_files/2025/10/02/elephant-theft-case-in-up-2025-10-02-12-35-58.jpg)
ಜಯಮತಿ ಎಂಬ ಹೆಣ್ಣಾನೆಯ ಕಳ್ಳತನ ಕೇಸ್ ಗೆ ಟ್ವಿಸ್ಟ್
ಜಾರ್ಖಂಡ್‌ನ ಪಲಮು ಜಿಲ್ಲೆಯಿಂದ ಕದ್ದು 27 ಲಕ್ಷ ರೂ.ಗೆ ಮಾರಾಟ ಮಾಡಲಾಗಿತ್ತು ಎನ್ನಲಾದ ಹೆಣ್ಣು ಆನೆಯನ್ನು ಬಿಹಾರದ ಚಪ್ರಾ ಜಿಲ್ಲೆಯಿಂದ ರಕ್ಷಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ನರೇಂದ್ರ ಕುಮಾರ್ ಶುಕ್ಲಾ ಅವರು ಸೆಪ್ಟೆಂಬರ್ 12 ರಂದು ಜಾರ್ಖಂಡ್‌ನ ಪಲಮು ಜಿಲ್ಲೆಯ ಚುಕುರ್ ಪ್ರದೇಶದಿಂದ 'ಜಯಮತಿ' ಎಂಬ ಹೆಣ್ಣು ಆನೆಯನ್ನು ಕಳ್ಳತನ ಮಾಡಿದ್ದಾರೆ ಎಂದು ಪೊಲೀಸ್ ದೂರು ದಾಖಲಿಸಿದ್ದರು.
ನರೇಂದ್ರ ಕುಮಾರ್ ಶುಕ್ಲಾ ಅವರು ರಾಂಚಿಯಿಂದ 40 ಲಕ್ಷ ರೂ.ಗೆ ಆನೆಯನ್ನು ಖರೀದಿಸಿದ್ದರು.
ಮೇದಿನಿನಗರದ ಎಸ್‌ಡಿಪಿಒ ಮಣಿಭೂಷಣ್ ಪ್ರಸಾದ್ ಅವರು, "ಕಳ್ಳತನದ ಪ್ರಕರಣವನ್ನು ಸದರ್ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸೋಮವಾರ, ಕಾಣೆಯಾದ ಆನೆ ಬಿಹಾರದ ಚಪ್ರಾದ ಪಹಾದ್‌ಪುರದಲ್ಲಿದೆ ಎಂಬ ಸುಳಿವು ನಮಗೆ ಸಿಕ್ಕಿತು. ಸಹಾಯಕ್ಕಾಗಿ ನಾವು ಬಿಹಾರ ಪೊಲೀಸರಿಗೆ ವಿನಂತಿಸಿದ್ದೇವೆ. ತನಿಖೆಯ ಸಮಯದಲ್ಲಿ, ಅದನ್ನು ಚಪ್ರಾದಿಂದ ವಶಪಡಿಸಿಕೊಳ್ಳಲಾಗಿದೆ." ಪ್ರಕರಣದಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ ಮತ್ತು ಅಪರಾಧಿಗಳನ್ನು ಬಂಧಿಸಲು ಹುಡುಕಾಟ ನಡೆಯುತ್ತಿದೆ ಎಂದು ಅವರು ಹೇಳಿದರು.
ಆದರೇ, ಈ ಹೆಣ್ಣಾನೆ ಕಳ್ಳತನ ಕೇಸ್ ಗೆ ಟ್ವಿಸ್ಟ್ ಸಿಕ್ಕಿದೆ. ನರೇಂದ್ರ ಕುಮಾರ್ ಶುಕ್ಲಾ ಒಬ್ಬರೇ ಈ ಆನೆಯನ್ನು ಖರೀದಿಸಿರಲಿಲ್ಲ. ನಾಲ್ವರು ವ್ಯಕ್ತಿಗಳು ಒಗ್ಗೂಡಿ ಪಾರ್ಟನರ್ ಷಿಪ್ ನಲ್ಲಿ ಹೆಣ್ಣಾನೆ ಖರೀದಿಸಿದ್ದರು. ಪಾರ್ಟನರ್ ಗಳಲ್ಲೇ ಯಾರಾದರೂ ಒಬ್ಬರು ಆನೆಯನ್ನು ಬಿಹಾರದ ವ್ಯಕ್ತಿಗೆ ಮಾರಾಟ ಮಾಡಿರಬಹುದು. ಬಿಹಾರದ ಚಪ್ರಾ ಜಿಲ್ಲೆಯಲ್ಲಿ ಆನೆ ಖರೀದಿಸಿದ ವ್ಯಕ್ತಿಯ ಬಳಿ ಆನೆ ಖರೀದಿಗೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳು ಸಿಕ್ಕಿವೆ. ಹೀಗಾಗಿ ಆನೆಯನ್ನು ಯಾರು ಮಾರಾಟ ಮಾಡಿದ್ದರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹೆಣ್ಣಾನೆಯು ಜಾರ್ಖಂಡ್ ರಾಜ್ಯದಾಗಿದ್ದು, ಉತ್ತರ ಪ್ರದೇಶದ ವ್ಯಕ್ತಿಗಳು ಖರೀದಿಸಿದ್ದಾರೆ. ಆದರೇ, ಆನೆ ಬಿಹಾರದಲ್ಲಿ ಪತ್ತೆಯಾಗಿದೆ. ಹೀಗೆ ಮೂರು ರಾಜ್ಯಗಳಿಗೆ ಹೆಣ್ಣಾನೆಯ ಕಳ್ಳತನದ ಕೇಸ್ ತನಿಖೆ ವ್ಯಾಪಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.