Advertisment

ಯಲಹಂಕ ಲಾಡ್ಜ್ ನಲ್ಲಿ ಬೆಂಕಿ ಕೇಸ್‌ಗೆ ಟ್ವಿಸ್ಟ್ : ಸತ್ತ ಇಬ್ಬರು ಲವ್ವರ್ ಗಳಾಗಿರುವ ಶಂಕೆ

ನಿನ್ನೆ ಸಂಜೆ ಯಲಹಂಕದ ಲಾಡ್ಜ್ ಒಂದರಲ್ಲಿ ಬೆಂಕಿ ಬಿದ್ದು ಇಬ್ಬರು ಸಾವನ್ನಪ್ಪಿದ್ದರು. ಇಬ್ಬರ ಬಗ್ಗೆಯೂ ಈಗ ಹೊಸ ಮಾಹಿತಿ ಬೆಳಕಿಗೆ ಬಂದಿವೆ. ಮೃತ ಯುವತಿ ಕಾವೇರಿ ಬಡಿಗೇರ್, ಯುವಕ ಗದಗ್ ಮೂಲದ ರಮೇಶ್ ಎಂದು ಗೊತ್ತಾಗಿದೆ. ಇಬ್ಬರು ಲವ್ವರ್ ಗಳಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

author-image
Chandramohan
Bengalore lovers

ಲಾಡ್ಜ್ ನಲ್ಲಿ ಮೃತ ಯುವತಿ ಕಾವೇರಿ ಬಡಿಗೇರ್

Advertisment

ಪ್ರೀತಿಗೆ ಸಾವಿಲ್ಲ ಅಂತಾರೆ.. ಆದ್ರೆ ಪ್ರೀತಿ ತಮ್ಮ ಪಾಲಾಗಿಲ್ಲ ಅಂದ್ರೆ ಜೋಡಿ ನಾವ್​ ಸತ್ರೂ ಪರ್ವಾಗಿಲ್ಲ, ಪ್ರೀತಿ ಸಾಯಬಾರದು ಅಂತ ಸಾವಿನ ಮನೆ ಸೇರುತ್ತಾರೆ.. ಇಲ್ಲೊಬ್ಬ ಪ್ರೇಮಿ ಕೂಡ ಪ್ರೀತಿ ಸಿಗಲ್ಲ ಅಂತ ಗೊತ್ತಾಗ್ತಿದ್ದಂತೆ ಸಾವಿನ ಕದ ತಟ್ಟಿದ್ದು, ಪ್ರೇಯಸಿ ಕೂಡ ಅವನ ಹಾದಿಯನ್ನೇ ಹಿಡಿದಿದ್ದಾಳೆ. ಆದ್ರೆ ಇವರಿಬ್ಬರೂ ಸತ್ತಿದ್ದೂ ಯಾಕೇ ಅನ್ನೋದು ನಿಗೂಢವಾಗಿದೆ..
ಪೆಟ್ರೋಲ್​ ಸುರಿದುಕೊಂಡು ಲವ್​​ ಬರ್ಡ್ಸ್​​​ ಸೂಸೈಡ್​!?
ಬೆಂಗಳೂರಿನ ಯಲಹಂಕ ನ್ಯೂಟೌನ್​​ನಲ್ಲಿರೋ ಕೂಲ್ ಕಂಫರ್ಟ್ ಎಂಬ ಚಿಕ್ಕ ಲಾಡ್ಜ್, ಇದೇ ಲಾಡ್ಜ್​​ನ ರೂಂನಲ್ಲಿ ನಿನ್ನೆ ಸಂಜೆ 5 ಗಂಟೆಗೆ ಬೆಂಕಿ ಅವಘಡ ಸಂಭವಿಸಿದೆ. ಈ ಬೆಂಕಿ ಅನಾಹುತದಲ್ಲಿ 30 ವರ್ಷದ ರಮೇಶ್ ಮತ್ತು ಕಾವೇರಿ ಎಂಬ ಇಬ್ಬರು ಸಾವನ್ನಪ್ಪಿದ್ದಾರೆ. ಅವನದ್ದು ಗದಗ ಮತ್ತು ಆಕೆಯದ್ದು ಬಾಗಲಕೋಟೆಯ ಹುನಗುಂದ. ಈ ಇಬ್ಬರು ಒಂದು ವಾರದಿಂದ ಇದೇ ಲಾಡ್ಜ್​​ನಲ್ಲಿ ವಾಸವಿದ್ದರಂತೆ.  ನಿನ್ನೆ ಬೆಳಗ್ಗೆ ಇಬ್ಬರಿಗೂ ಜಗಳ ಆಗಿದೆ ಎನ್ನಲಾಗಿದೆ. ಮಧ್ಯಾಹ್ನ ಹೊರಗಡೆ ಹೋಗಿ ವಾಪಸ್ ಬರುವಾಗ ರಮೇಶ್, ಪೆಟ್ರೋಲ್ ತುಂಬಿದ ಬಾಟಲ್ ಹಿಡಿದು ವಾಪಸ್​ ಬಂದಿದ್ದ.
ಬೆಂಕಿಯಲ್ಲಿ ಬೆಂದ ‘ಪ್ರೀತಿ’
ಮನೆಯಲ್ಲಿ ಪ್ರೀತಿಗೆ ಒಪ್ಪಿಗೆ ಸಿಗ್ಲಿಲ್ಲ ಅನ್ನೋ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.  ಸ್ಪಾನಲ್ಲಿ ಯುವತಿ ಕೆಲಸ, ಖಾಸಗಿ ಕಂಪನಿಯಲ್ಲಿ ಯುವಕ ಕೆಲಸ ಮಾಡುತ್ತಿದ್ದ.  ರೂಮಿನಲ್ಲಿ ಏನಾಯ್ತೋ ಏನೋ ರಮೇಶ್​ ಬೆಂಕಿ ಹಚ್ಚಿಕೊಂಡಿದ್ದಾನೆ.  ಆದರೆ ಕಾವೇರಿ ಬಾತ್ ರೂಂಗೆ ಹೋಗಿ ಲಾಕ್ ಮಾಡಿಕೊಂಡಿದ್ದಾಳೆ. ಕೆಲಸ ಮಾಡ್ತಿದ್ದ ಸ್ಪಾ ಓನರ್​ಗೆ ಯುವತಿ ಫೋನ್ ಮಾಡಿ ಮಾಹಿತಿ ನೀಡಿದ್ದಾಳೆ. ಅವರು ಬರುವ ಅಷ್ಟೊತ್ತಿಗಾಗಲೇ ಇಡೀ ಲಾಡ್ಜ್​​ಗೆ ಬೆಂಕಿಯ ಹೊಗೆ ವ್ಯಾಪಿಸಿದೆ. ಬಳಿಕ ಅಗ್ನಿಶಾಮಕ ದಳ, ಪೊಲೀಸರಿಗೆ ಲಾಡ್ಜ್ ಮಾಲೀಕ ಮಾಹಿತಿ ನೀಡಿದ್ದಾನೆ. 

Advertisment

ಪೊಲೀಸರ ತನಿಖೆ ವೇಳೆ ಆಶ್ಚರ್ಯಕರ ಸಂಗತಿ ಬೆಳಕಿಗೆ..

ಮೃತ ಮಹಿಳೆ ಕಾವೇರಿಗೆ ಮದುವೆಯಾಗಿ ಮೂರು ಮಕ್ಕಳು..


ಪತಿ ಹಾಗೂ ಮಕ್ಕಳನ್ನ ಬಿಟ್ಟು ಕೆಲಸ ಮಾಡ್ತೇನೆಂದು ಬೆಂಗಳೂರಿಗೆ  ಮೃತ ಕಾವೇರಿ ಬಂದಿದ್ದಳು.  ಲಾಡ್ಜ್ ನಲ್ಲಿ ಸಾವನ್ನಪ್ಪಿದವರು ಗದಗ ಮೂಲದ ರಮೇಶ್ ಹಾಗೂ ಹುನಗುಂದ ಮೂಲದ ಕಾವೇರಿ ಬಡಿಗೇರ್ ಎಂದು ತನಿಖೆ ವೇಳೆ ಗೊತ್ತಾಗಿದೆ.  ಗದಗ ಮೂಲದ ರಮೇಶ್ ಜೊತೆ ಮೃತ ಕಾವೇರಿ ಅನೈತಿಕ ಸಂಬಂಧ ಶಂಕೆ ಇದೆ. ಮದುವೆ ವಿಚಾರಕ್ಕೆ ರಮೇಶ್ ಒತ್ತಡ ಹೇರಿರಬಹುದು ಎಂಬ ಶಂಕೆ ಪೊಲೀಸರಿಂದ ವ್ಯಕ್ತವಾಗುತ್ತಿದೆ. ಮಹಿಳೆ ಕಾವೇರಿ ಒಪ್ಪದಿರೋದಕ್ಕೆ ಪೆಟ್ರೋಲ್ ಸುರಿದುಕೊಂಡು ಬೆದರಿಕೆ ಹಾಕಲು ಹೋಗಿ ಬೆಂಕಿಗೆ ಆಹುತಿಯಾಗಿದ್ದಾನೆ.  ಈ ವೇಳೆ ಬಾತ್ ರೂಮ್ ಕ್ಲೋಸ್ ಮಾಡಿಕೊಂಡ ಯುವತಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ . ಬಾತ್ ರೂಮ್ ಕ್ಲೋಸ್ ಮಾಡಿ ಮೊದಲು ಸ್ಪಾ ಮಾಲೀಕನಿಗೆ ಕರೆ ಮಾಡಿದ್ದ ಯುವತಿ ಈ ಬೆಂಕಿಯ ಬಗ್ಗೆ ಮಾಹಿತಿ ನೀಡಿದ್ದಳು. ಬಳಿಕ ಸ್ಪಾ ಮಾಲೀಕನಿಂದ ಪೊಲೀಸರಿಗೆ ಮಾಹಿತಿ ನೀಡಿದ್ದ.  ಸ್ಪಾಟ್ ಗೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಬರುವಷ್ಟರಲ್ಲಿ ಇಬ್ಬರು  ಸಾವನ್ನಪ್ಪಿದ್ದಾರೆ. ಒಬ್ಬರ ಮೊಬಲ್  ನ್ನು ವಶಕ್ಕೆ ಪಡೆದು ಪೊಲೀಸರು ಪರಿಶೀಲನೆ  ನಡೆಸಿದ್ದಾರೆ. ಮೃತ ರಮೇಶ್ ಮೊಬೈಲ್ ನೀರಲ್ಲಿ ಮುಳಗಿದ್ದು,ಆನ್ ಆಗ್ತಿಲ್ಲ. ಯುವತಿ ಮೊಬೈಲ್   ಅನ್ನು ಯಲಹಂಕ ಟೌನ್ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

Bengalore lovers (1)
ಸಾಂದರ್ಭಿಕ ಫೋಟೋ Photograph: (AI)



ಮೃತ ಕಾವೇರಿ ಬಡಿಗೇರ್‌ಗೆ 2016 ರಲ್ಲಿ  ಬಾಗಲಕೋಟೆ ಜಿಲ್ಲೆಯ ಹುನಗುಂದಲ್ಲಿ ಮದುವೆಯಾಗಿದ್ದು, ಮೂವರು ಮಕ್ಕಳು ಇದ್ದಾರೆ.  ಎರಡು ತಿಂಗಳ ಹಿಂದೆಯಷ್ಟೇ ಕಾವೇರಿ ಬಡಿಗೇರ್‌ ಬೆಂಗಳೂರಿಗೆ ಬಂದಿದ್ದಳು.  ಆ ಬಳಿಕ ಊರಿಗೆ ವಾಪಸ್  ಆಗಿದ್ದು, ವಾರದ ಹಿಂದೆ ನಗರಕ್ಕೆ ಬಂದಿದ್ದಳು.  ಯಲಹಂಕ ನ್ಯೂ ಟೌನ್ ಠಾಣಾ ವ್ಯಾಪ್ತಿಯಲ್ಲಿ ಸ್ಪಾ ದಲ್ಲಿ ಕೆಲಸ ಮಾಡುತ್ತಿದ್ದಳು. ಈ  ಇಬ್ಬರ ನಡುವೆ ಮತ್ತೋರ್ವನ ಎಂಟ್ರಿಯ ಅನುಮಾನವೂ ಇದೆ.  ಲಾಡ್ಜ್ ನಲ್ಲಿ ರಮೇಶ್ ಮತ್ತು ಕಾವೇರಿ ಇದ್ದಾಗ ಮತ್ತೋರ್ವ ಯುವಕ ಬಂದು ಹೋಗಿದ್ದಾನೆ. ಹೀಗಾಗಿ ಆತನ ಪತ್ತೆಕಾರ್ಯವನ್ನು ಪೊಲೀಸರು ನಡೆಸುತ್ತಿದ್ದಾರೆ. ಆತ ಯಾರೆಂದು ಪೊಲೀಸರಿಗೆ ಇನ್ನೂ ಮಾಹಿತಿ ಸಿಕ್ಕಿಲ್ಲ. ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ತಾಯಿ ಕಾವೇರಿ ಬಡಿಗೇರ್ ಕಳೆದುಕೊಂಡು ಮೂವರು ಮಕ್ಕಳು ಪರಿತಪಿಸುತ್ತಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

love birds death in lodge
Advertisment
Advertisment
Advertisment