/newsfirstlive-kannada/media/media_files/2025/09/05/west-bengal-two-escapes-with-lover-2025-09-05-12-57-17.jpg)
ಅರೀಫ್ ಮೊಲ್ಲಾ ಜೊತೆ ಎಸ್ಕೇಪ್ ಆಗಿದ್ದ ಕುಲ್ಚನ್ ಮಲ್ಲಿಕ್, ನಜ್ಮಾ ಮಂಡಲ್
ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬಾಗ್ಡಾ ಪೊಲೀಸ್ ಠಾಣೆ ವ್ಯಾಪ್ತಿಯ ಮಾಲಿಡಾ ಗ್ರಾಮದಲ್ಲಿ ಸೋಮವಾರ ಅಂದರೆ ಸೆಪ್ಟೆಂಬರ್ 01 ರಂದು ಈ ವಿಚಿತ್ರ ಘಟನೆ ನಡೆದಿದೆ. ವಾರಗಿತ್ತಿಯರು ಇಬ್ಬರು ಪಕ್ಕದ ಮನೆಯ ಯುವಕನೊಂದಿಗೆ ಓಡಿ ಹೋಗಿದ್ದಾರೆ. ಈ ಇಬ್ಬರೂ ಮಹಿಳೆಯರು ಒಂದೇ ಯುವಕ ಪ್ರೀತಿಯಲ್ಲಿ ಬಿದ್ದಿದ್ದು, ಸೋಮವಾರ ಮನೆಯಲ್ಲಿದ್ದ ಅತ್ತೆ, ಮಾವ, ಮೂವರು ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟು, ಮನೆ ಬಿಟ್ಟು ಪರಾರಿಯಾಗಿದ್ದಾರೆ. ಈ ವಾರಗಿತ್ತಿಯರಿಬ್ಬರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದಾರೆ .
ಸೊಸೆಯಂದಿರು ತಂದ ದೌರ್ಭಾಗ್ಯ !
ಒಂದೇ ಮನೆ ಇಬ್ಬರು ಸೊಸೆಯಂದಿರು ಒಂದೇ ದಿನ ನಾಪತ್ತೆಯಾಗಿದ್ದಾರೆ. ಯಾಸಿನ್ ಶೇಖ್ & ಅನಿಸೂರ್ ಶೇಖ್‌ರ ಪತ್ನಿಯರು ನಾಪತ್ತೆಯಾಗಿದ್ದಾರೆ. ಅನಿಸೂರ್ ಗ್ಯಾರೇಜ್ ಕೆಲಸ ಮಾಡುತ್ತಿದ್ದರೇ, ಯಾಸಿನ್ ಶೇಖ್ ವಿದೇಶದಲ್ಲಿದ್ದ. ಯಾಸಿನ್ ಶೇಖ್ ಪತ್ನಿ ಕುಲ್ಚನ್ ಮಲ್ಲಿಕ್ & ನಜ್ಮಾ ಮಂಡಲ್ ಎಂಬ ಇಬ್ಬರು ನಾಪತ್ತೆಯಾಗಿದ್ದಾರೆ. ಪಕ್ಕದ ಮನೆಯ ಆರಿಫ್ ಮೊಲ್ಲಾ ಎಂಬಾತನ ಜೊತೆ ಈ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರಂತೆ. ಈ ಬಗ್ಗೆ ಬಾಗ್ಡಾ ಪೊಲೀಸ್ ಠಾಣೆಗೆ ಮಹಿಳೆಯ ಪತಿ ದೂರು ನೀಡಿದ್ದಾರೆ.
ಕುಲ್ಚನ್ ಮಲ್ಲಿಕ್ ಮತ್ತು ನಜ್ಮಾ ಮಂಡಲ್ ರನ್ನು ಪತ್ತೆ ಹಚ್ಚಿದ ಪೊಲೀಸರು
ದೂರು ಆಧರಿಸಿ ಮಹಿಳೆಯರನ್ನ ಪೊಲೀಸರು ಪತ್ತೆ ಹಚ್ಚಿದ್ದಾರೆ. ಮೊಬೈಲ್ ನೆಟ್ವರ್ಕ್ ಮಾಹಿತಿ ಆಧರಿಸಿ ಮಹಿಳೆಯರ ಪತ್ತೆ ಮಾಡಲಾಗಿದೆ. ವಿಚಾರಣೆ ವೇಳೆ ಭಯಾನಕ ಸತ್ಯವನ್ನು ಮಹಿಳೆಯರು ಬಾಯ್ಬಿಟ್ಟಿದ್ದಾರೆ. ನೆರೆಮನೆಯ ಒಬ್ಬನೇ ಯುವಕನ ಪ್ರೀತಿಯಲ್ಲಿ ಇಬ್ಬರು ಬಿದ್ದಿದ್ದೇವು ಎಂದಿದ್ದಾರೆ.
ಇಬ್ಬರೂ ಒಂದೇ ಮನೆಯ ಅಣ್ಣ-ತಮ್ಮಂದಿರ ಪತ್ನಿಯರಾಗಿದ್ರು. ಅತ್ತೆ, ಮಾವ, ಮಕ್ಕಳಿಗೆ ಚಹಾದಲ್ಲಿ ನಿದ್ರೆ ಮಾತ್ರೆ ಹಾಕಿ ಎಸ್ಕೇಪ್ ಆಗಿದ್ದರು. ಎಲ್ಲರೂ ಎಚ್ಚರಗೊಂಡಾಗ ಮಹಿಳೆಯರು ನಾಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಓಡಿಹೋಗಿದ್ದವರು ಈಗ ಪತ್ತೆಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.