ಡೋನಾಲ್ಡ್ ಟ್ರಂಪ್ ಗೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ತವಕ, ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಹೇಗೆ ನಡೆಯುತ್ತೆ?

ಅಮೆರಿಕಾದ ಹಾಲಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನೊಬೆಲ್ ಶಾಂತಿ ಪ್ರಶಸ್ತಿ ಪಡೆಯುವ ತವಕದಲ್ಲಿದ್ದಾರೆ. ವಿವಿಧ ದೇಶಗಳು ನೊಬೆಲ್ ಶಾಂತಿ ಪ್ರಶಸ್ತಿಗೆ ಟ್ರಂಪ್ ಹೆಸರು ಅನ್ನು ನಾಮನಿರ್ದೇಶನ ಮಾಡಿವೆ. ಹಾಗಾದರೇ, ನೊಬೆಲ್ ಶಾಂತಿ ಪ್ರಶಸ್ತಿಯ ಆಯ್ಕೆ ಹೇಗೆ ನಡೆಯುತ್ತೆ? ಪ್ರಶಸ್ತಿಯ ಮೊತ್ತ ಎಷ್ಟು ಎನ್ನುವ ವಿವರ ಇಲ್ಲಿದೆ, ಓದಿ.

author-image
Chandramohan
USA PREZ DONALD TRUMP
Advertisment
  • ಜಗತನಲ್ಲಿ ಯುದ್ಧಗಳನ್ನು ನಿಲ್ಲಿಸಿದ್ದಕ್ಕಾಗಿ ತನಗೆ ನೊಬೆಲ್ ಶಾಂತಿ ಪ್ರಶಸ್ತಿ ಬೇಕೆಂದ ಟ್ರಂಪ್
  • ನೊಬೆಲ್ ಶಾಂತಿ ಪ್ರಶಸ್ತಿ ತನಗೆ ಕೊಡಲ್ಲ ಎಂದು ಹೇಳಿಕೊಂಡ ಟ್ರಂಪ್
  • ಹಾಗಾದರೇ, ನೊಬೆಲ್ ಶಾಂತಿ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ?


ನೊಬೆಲ್ ಶಾಂತಿ ಪ್ರಶಸ್ತಿ ಪಡೆದುಕೊಳ್ಳಲು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತುದಿಗಾಲಿನ ಮೇಲೆ ನಿಂತಿದ್ದಾರೆ.  ಇನ್ನೂ   ಒಂದು ಹೆಜ್ಜೆ ಮುಂದೆ ಹೋಗಿ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಡೊನಾಲ್ಡ್ ಟ್ರಂಪ್ ಗೆ ಶಾಂತಿ ನೊಬೆಲ್ ಪ್ರಶಸ್ತಿ ನೀಡಬೇಕು ಎಂದು ಹೇಳಿಕೆ ನೀಡಿದ್ದಾರೆ.  
ಡೋನಾಲ್ಡ್ ಟ್ರಂಪ್,  ಭಾರತ ಮತ್ತು ಪಾಕಿಸ್ತಾನ, ಇಸ್ರೇಲ್ ಮತ್ತು ಇರಾನ್, ರುವಾಂಡ ಮತ್ತು ಕಾಂಗೋ, ಈಜಿಪ್ಟ್ ಮತ್ತು ಇಥಿಯೋಪಿಯಾ ದೇಶಗಳ ನಡುವಿನ ಸಂಘರ್ಷ ನಿಲ್ಲಿಸಿ ಶಾಂತಿ ಮೂಡಿಸಿದ್ದಾರೆ. ಈ ಹಿನ್ನಲೆ ಟ್ರಂಪ್ ಗೆ ನೊಬೆಲ್ ಪ್ರಶಸ್ತಿ ನೀಡಬೇಕು ಎಂದಿದ್ದಾರೆ.
ಹಾಗಿದ್ರೆ ನೋಬಲ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ..? ಯಾರು ಪ್ರಶಸ್ತಿಗೆ ಶಿಫಾರಸ್ಸು ಮಾಡಬಹುದು..? ಶಾಂತಿ ನೋಬಲ್ ಪ್ರಶಸ್ತಿ ಹುಟ್ಟಿದ್ದು ಯಾವಾಗ ಅಂತ ನೋಡೋಣ. 
ನೊಬೆಲ್ ಪ್ರಶಸ್ತಿಗಳ ಆಯ್ಕೆ ಪ್ರಕ್ರಿಯೆಯು ಕಟ್ಟುನಿಟ್ಟಾದ ಮತ್ತು ರಹಸ್ಯವಾದ ವಿಧಾನದ ಮೂಲಕ ನಡೆಯುತ್ತೆ.  ನೊಬೆಲ್ ಪ್ರಶಸ್ತಿಯ ನೀಡಿಕೆ, ಆಯ್ಕೆ ಎಲ್ಲವನ್ನೂ  ನೊಬೆಲ್ ಫೌಂಡೇಶನ್‌ನಿಂದ ನಿರ್ವಹಿಸಲಾಗುತ್ತೆ. ಈ ಪ್ರಶಸ್ತಿಗಳು ಭೌತಶಾಸ್ತ್ರ, ರಸಾಯನಶಾಸ್ತ್ರ, ವೈದ್ಯಕೀಯ, ಸಾಹಿತ್ಯ, ಶಾಂತಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆಗಳಿಗೆ ನೀಡಲಾಗುತ್ತದೆ. ಶಾಂತಿ ನೊಬೆಲ್ ಪ್ರಶಸ್ತಿಯು 1901 ರಲ್ಲಿ ಆರಂಭವಾಯಿತು.  ಆಲ್ಫ್ರೆಡ್ ನೊಬೆಲ್‌ರ ಇಚ್ಛೆಯಂತೆ, ರಾಷ್ಟ್ರಗಳ ನಡುವೆ ಶಾಂತಿ ಉತ್ತೇಜಿಸುವ ಕೆಲಸಕ್ಕಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗೌರವಿಸಲು ಈ ಪ್ರಶಸ್ತಿಯನ್ನ ನೀಡಲಾಗುತ್ತೆ.
ಶಾಂತಿ ನೊಬೆಲ್ ಪ್ರಶಸ್ತಿಯ ಆಯ್ಕೆ ಪ್ರಕ್ರಿಯೆ ಇತರ ನೊಬೆಲ್ ಪ್ರಶಸ್ತಿಗಳಿಗಿಂತ ಭಿನ್ನವಾಗಿದೆ. ಏಕೆಂದರೆ ಇದನ್ನು ನಾರ್ವೇಜಿಯನ್ ನೊಬೆಲ್ ಸಮಿತಿಯು ನಾರ್ವೆಯ ಓಸ್ಲೋದಲ್ಲಿ ಆಯ್ಕೆ  ಪ್ರಕ್ರಿಯೆ ನಡೆಸುತ್ತೆ. ಆಲ್ಫ್ರೆಡ್ ನೊಬೆಲ್‌ರ ಇಚ್ಛೆಯಂತೆ, ಈ ಪ್ರಶಸ್ತಿಯನ್ನು ರಾಷ್ಟ್ರಗಳ ನಡುವೆ ಶಾಂತಿ ಮತ್ತು ಸಹೋದರತ್ವ ಉತ್ತೇಜಿಸುವ ಕೆಲಸಕ್ಕಾಗಿ ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ನೀಡಲಾಗುತ್ತದೆ. 

Nobel peace prize shield222


ಹಾಗಾದ್ರೆ ಆಯ್ಕೆ ಪ್ರಕ್ರಿಯೆ ಹೇಗಿರುತ್ತೆ ಅಂತ ಸಂಕ್ಷಿಪ್ತವಾಗಿ ನೋಡೊದಾದ್ರೆ, ಈ ಪ್ರಶಸ್ತಿಗೆ  ನಾಮನಿರ್ದೇಶನ ಮಾಡಲಾಗುತ್ತೆ. ಉದಾಹರಣೆಗೆ, ಸಂಸದೀಯ ಸದಸ್ಯರು, ಸರ್ಕಾರದ ಮುಖ್ಯಸ್ಥರು, ಹಿಂದಿನ ಶಾಂತಿ ಪ್ರಶಸ್ತಿ ವಿಜೇತರು, ಕೆಲ ಆಯ್ದ ಕ್ಷೇತ್ರದ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಮತ್ತು ಅಂತಾರಾಷ್ಟ್ರೀಯ ನ್ಯಾಯಾಲಯದ ಸದಸ್ಯರು ನಾಮನಿರ್ದೇಶನ ಸಲ್ಲಿಸಬಹುದು. ಇದರಲ್ಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಎರಡೂ ಅರ್ಹವಾಗಿರುತ್ತಾರೆ. 
ಇನ್ನು ನಾಮನಿರ್ದೇಶನಗಳಿಗೆ ಸಮಯದ ಗಡುವನ್ನ ನೀಡಲಾಗಿದೆ. ಪ್ರತಿ ವರ್ಷ ಫೆಬ್ರವರಿ 1 ಕ್ಕೆ ಗಡುವು ಮುಕ್ತಾಯಗೊಳ್ಳಲಿದೆ. ಶಾಂತಿ ನೊಬಲ್ ಪ್ರಶಸ್ತಿ ಆಯ್ಕೆ ಪ್ರಕ್ರಿಯೆಯಲ್ಲಿ ನಾರ್ವೇಜಿಯನ್ ನೊಬೆಲ್ ಸಮಿತಿಯ ಐದು ಸದಸ್ಯರ ತಂಡವು ನಾಮನಿರ್ದೇಶನಗಳನ್ನು ಪರಿಶೀಲನೆ ನಡೆಸುತ್ತೆ.  ಈ ಐದು ಜನರನ್ನ ನಾರ್ವೇಜಿಯನ್ ಸಂಸತ್ತಿನಿಂದ ನೇಮಕ ಮಾಡಲಾಗುತ್ತೆ. ಈ ಸಮಿತಿಯು ತಜ್ಞರ ಸಲಹೆ ಪಡೆಯೊದರ ಜೊತೆಗೆ ನಾಮನಿರ್ದೇಶನಗೊಂಡವರ ಕೊಡುಗೆಗಳನ್ನು ಮೌಲ್ಯಮಾಪನ ಮಾಡುತ್ತದೆ. ಪ್ರಮುಖವಾಗಿ ಶಾಂತಿ ಒಪ್ಪಂದಗಳು, ಮಾನವ ಹಕ್ಕುಗಳು, ಸಂಘರ್ಷ ತಡೆಗಟ್ಟುವಿಕೆ ಸೇರಿ ಹಲವು ಆಯಾಮಗಳಲ್ಲಿ ಗಮನಹರಿಸುತ್ತೆ. ನಂತರ ಸಮಿತಿಯ ಸದಸ್ಯರು ಚರ್ಚೆ ನಡೆಸಿ, ರಹಸ್ಯ ಮತದಾನದ ಮೂಲಕ ಅಂತಿಮ ವಿಜೇತರನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯನ್ನ ಸಾಮಾನ್ಯವಾಗಿ ಅಕ್ಟೋಬರ್‌ನ ಎರಡನೇ ವಾರದಲ್ಲಿ ಘೋಷಣೆ ಮಾಡಲಾಗುತ್ತೆ
ಇನ್ನು ಈ ಪ್ರಕ್ರಿಯೆಯು ಪೂರ್ತಿಯಾಗಿ ರಹಸ್ಯವಾಗಿಡೊದರ ಜೊತೆಗೆ ದಾಖಲೆಗಳನ್ನ 50 ವರ್ಷಗಳವರೆಗೆ ಬಹಿರಂಗ ಮಾಡೊದಿಲ್ಲ. ಇನ್ನು ಪ್ರಶಸ್ತಿಯನ್ನ ಡಿಸೆಂಬರ್ 10 ರಂದು ಓಸ್ಲೋದಲ್ಲಿ ನಡೆಯೋ ಕಾರ್ಯಕ್ರಮದಲ್ಲಿ ನೀಡಲಾಗುತ್ತೆ. ಪ್ರಶಸ್ತಿಯ ವಿಜೇತರಿಗೆ ಪದಕ, ಪ್ರಶಸ್ತಿ ಪತ್ರ, ಮತ್ತು ನಗದು ಬಹುಮಾನವನ್ನು ಒಳಗೊಂಡಿರುತ್ತೆ.. 2024 ರಲ್ಲಿ 9 ಕೋಟಿ 80 ಲಕ್ಷ ರೂಪಾಯಿ ನಗದು ಮೌಲ್ಯವನ್ನು  ಪ್ರಶಸ್ತಿಯು  ಒಳಗೊಂಡಿತ್ತು.
ಈ ಶಾಂತಿ ಪ್ರಶಸ್ತಿಯನ್ನು ವ್ಯಕ್ತಿಗಳು ಮತ್ತು ಸಂಸ್ಥೆಗಳಿಗೆ ನೀಡಬಹುದಾಗಿದೆ. ಗರಿಷ್ಠ ಮೂವರು ವ್ಯಕ್ತಿಗಳು ಅಥವಾ ಸಂಸ್ಥೆಗಳು ಒಂದೇ ಪ್ರಶಸ್ತಿಯನ್ನು ಹಂಚಿಕೊಳ್ಳಬಹುದುದಾಗಿದೆ.

Nobel peace prize shield


ಪ್ರಶಸ್ತಿ ಪ್ರಕ್ರಿಯೆಯು ಸ್ವತಂತ್ರವಾಗಿ ಮತ್ತು ರಾಜಕೀಯ ಒತ್ತಡದಿಂದ ಮುಕ್ತವಾಗಿರಲು ವಿನ್ಯಾಸಗೊಳಿಸಲಾಗಿದೆ, ಆದರೂ ಕೆಲವೊಮ್ಮೆ ಆಯ್ಕೆಗಳು ವಿವಾದಕ್ಕೆ ಕಾರಣವಾಗಿವೆ.. 2024 ರವರೆಗೆ, 141 ಶಾಂತಿ ಪ್ರಶಸ್ತಿಗಳನ್ನು 112 ವ್ಯಕ್ತಿಗಳು ಮತ್ತು 29 ಸಂಸ್ಥೆಗಳಿಗೆ ನೀಡಲಾಗಿದೆ. ಇದರಲ್ಲಿ 19 ಮಹಿಳೆಯರು ಪ್ರಶಸ್ತಿಯನ್ನ ಪಡೆದುಕೊಂಡಿದ್ದು, ಹಲವು ವಿವಾದಗಳಿಗೆ ಮತ್ತು  ಟೀಕೆಗೆ ಗುರಿಯಾಗಿದೆ, ಮೊದಲು ವಿವಾದ ಗುರಿಯಾಗಿದ್ದು 1973 ರಲ್ಲಿ ಹೆನ್ರಿ ಕಿಸಿಂಗರ್ ಆಯ್ಕೆ ಬಗ್ಗೆ ಟೀಕೆ ಕೇಳಿಬಂದಿತ್ತು.. ನಂತರ  2009 ರಲ್ಲಿ ಬರಾಕ್ ಒಬಾಮಾ ಆಯ್ಕೆಯೂ ಭಾರಿ ಚರ್ಚೆಗೆ ಕಾರಣವಾಗಿತ್ತು.. 
ಇನ್ನು 2025 ರ ಶಾಂತಿ ಪ್ರಶಸ್ತಿಯ ಘೋಷಣೆ ಇನ್ನೂ ಆಗಿಲ್ಲ, ಹಾಗಾಗೆ ಟ್ರಂಪ್ ಈ ಬಾರಿ ಶಾಂತಿ ನೊಬೆಲ್  ಪಡೆಯೋ ತವಕದಲ್ಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Pm Narendra Modi DONALD TRUMP NOBEL PEACE PRIZE
Advertisment