/newsfirstlive-kannada/media/media_files/2025/08/03/arina_bangalore-2025-08-03-17-58-07.jpg)
ಬೆಂಗಳೂರು: ಎಲ್ಲೆಲ್ಲಿಂದಲೋ ಎಷ್ಟೋ ಜನರು ಉದ್ಯಾನ ನಗರಿಗೆ ಬಂದು ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಇದರಲ್ಲಿ ಕೆಲವರು ಯಶಸ್ಸು ಆಗಿದ್ರೆ, ಇನ್ನು ಕೆಲವರು ವಿಫಲರಾಗಿದ್ದಾರೆ. ಇಲ್ಲಿ ಬದುಕು ಇದೆ ಅದರ ಜೊತೆ ನಾವು ಬೆರೆಯಬೇಕಷ್ಟೇ. ಅದೇ ಮುಂದಕ್ಕೆ ಕರೆದುಕೊಂಡು ಹೋಗುತ್ತದೆ. ಆದ್ರೆ ಇನ್ನಷ್ಟು ಜನ ಇಲ್ಲೇ ಇದ್ದು, ಉಂಡು, ತಿಂದು ಹೋಗುವಾಗ ಬೆಂಗಳೂರಿಗೆ ಎರಡುಬಗೆದು ಹೋಗಿದ್ದಾರೆ. ಇಂಥವರ ನಡುವೆ ಫಾರಿನ್ ಯುವತಿಯೊಬ್ಬರು ಬೆಂಗಳೂರನ್ನು ಬಿಟ್ಟು ಹೋಗುವಾಗ ಕಣ್ಣೀರು ಹಾಕಿರುವುದು ಎಲ್ಲರ ಮನ ಕದಡಿದೆ.
ಆರಿನಾ ಎನ್ನುವ ವಿದೇಶ ಮಹಿಳೆ ಐದಿನೈದು ದಿನ ಪ್ರವಾಸಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದರು. ನಗರದಲ್ಲಿ ಎಲ್ಲೆಡೆ ಸುತ್ತಾಡಿ, ಗುಡಿ, ಗೋಪುರಗಳಿಗೆ ಭೇಟಿ ನೀಡಿ, ರಸ್ತೆ ಬದಿಯಲ್ಲಿ ಟೀ, ಕಾಫಿ, ಹಣ್ಣುಹಂಪಲು ತಿಂದು, ಸಿಲಿಕಾನ್ ಸಿಟಿಯಲ್ಲಿ ಓಡಾಡುವಾಗ ಅಲ್ಲಾಲ್ಲಿ ಸೆಲ್ಫಿ ತೆಗೆದುಕೊಂಡಿರುವುದು. ಇದು ಎಲ್ಲಕ್ಕಿಂತ ಮಿಗಿಲಾಗಿ ಇಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಲ್ಲರೂ ಒಂದಾಗಿ ಬಾಳುತ್ತಿದ್ದಾರೆ ಎಂದು ಭಾವನಾತ್ಮಕವಾಗಿ ಬೆಂಗಳೂರಿನ ಜೊತೆ ಬೆಸೆದುಕೊಂಡಿದ್ದರು. ಕೊನೆಗೆ ಬಿಟ್ಟು ಹೋಗುವಾಗ ವಿದೇಶಿ ಕಣ್ಣೀರು ಹಾಕಿದ್ದಾರೆ.
ಆರಿನಾ ಭಾರತದಲ್ಲಿ ಕಲೆ, ಸಂಸ್ಕೃತಿ, ಧಾರ್ಮಿಕತೆಯ ಅನ್ವೇಷಣೆಗಾಗಿ ಬಂದಿದ್ದರು. ಎಲ್ಲವೂ ಮುಗಿದ ಮೇಲೆ ತನ್ನ ದೇಶಕ್ಕೆ ವಾಪಸ್ ಆಗುವಾಗ ಕಣ್ಣೀರು ಇಡುತ್ತ ಮಿಸ್ ಯೂ ಬೆಂಗಳೂರು. ಇಲ್ಲಿನ ಜನರು ನನಗೆ ತುಂಬಾ ಇಷ್ಟ ಆದರು. ಇದರ ಜೊತೆಗೆ ಬೆಂಗಳೂರಿಗೂ, ನನಗೂ ಲವ್ ಆಯ್ತು. ಬೆಂಗಳೂರು ಬಿಟ್ಟು ಹೋಗಲು ದುಃಖ ಆಗುತ್ತಿದೆ. ಭಾರತವನ್ನ ತುಂಬಾ ಇಷ್ಟ ಪಡುತ್ತೇನೆ. ಇಲ್ಲಿನ ಜನರು ಅದ್ಭುತ ಎಂದು ಭಾವನಾತ್ಮಕವಾಗಿ ಹೇಳಿದ್ದಾರೆ.
ಇದನ್ನೂ ಓದಿ:ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ.. ಚಿತ್ರದುರ್ಗದಲ್ಲಿ ನಿಖಿಲ್ ಕುಮಾರಸ್ವಾಮಿ ಏನೇನು
ನಗರದ ರಸ್ತೆಗಳು, ಮಾರುಕಟ್ಟೆ, ದೇವಾಲಯ, ಧಾರ್ಮಿಕ ಕೇಂದ್ರ, ಶಾಪಿಂಗ್ ಮಾಲ್ ಸೇರಿ ಹಲವಾರು ಕಡೆ ಸುತ್ತಾಡಿದ್ದೇನೆ. ಬೆಂಗಳೂರು ಬಿಟ್ಟು ಹೋಗಲು ಈಗ ಕಷ್ಟ ಆಗುತ್ತಿದೆ. ಭಾರತ ಎಂದರೆ ನನಗೆ ತುಂಬಾ ಇಷ್ಟ. ಇಲ್ಲಿ ಎಲ್ಲ ಧರ್ಮದವರು ಇದ್ದಾರೆ. ಇಲ್ಲಿ ದೈವಿಕ ಶಕ್ತಿಯೂ ಇದೆ ಎಂದು ಹೇಳುತ್ತ ಆರಿನಾ ಕಣ್ಣೀರು ಹಾಕಿದ್ದಾರೆ.
ಬೆಂಗಳೂರು ಬಗ್ಗೆಯೂ ಹೆಮ್ಮೆಯ ಮಾತುಗಳನ್ನಾಡಿದ ಆರಿನಾ ಅವರು, ಹಿಂದೂಗಳು, ಕ್ರೈಸ್ತರು, ಇಸ್ಲಾಂ ಧರ್ಮದ ಜನರು ಸಹಬಾಳ್ವೆಯಿಂದ ಇದ್ದಾರೆ. ನಗರದಲ್ಲಿ ವಸತಿ ಹಾಗೂ ಜನರ ಅಭಿರುಚಿ ಅದ್ಭುತವಾಗಿದೆ. ಈಗ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದ್ದೇನೆ. ಇಲ್ಲಿನ ಸೌಂದರ್ಯ ಎಲ್ಲರಿಗೂ ಇಷ್ಟ ಆಗುತ್ತದೆ. ವಿಮಾನ ನಿಲ್ದಾಣ ಚೆನ್ನಾಗಿದೆ. ವಾಪಸ್ ನಮ್ಮ ದೇಶಕ್ಕೆ ಹೋಗುತ್ತಿದ್ದೇನೆ ಗುಡ್ಬೈ ಬೆಂಗಳೂರು ಎಂದು ಆರಿನಾ ಹೇಳಿದ್ದಾರೆ. ಸದ್ಯ ಆರಿನಾ ಅವರು ಹೇಳಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಇದಕ್ಕೆ ಕನ್ನಡಿಗರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ