/newsfirstlive-kannada/media/media_files/2025/09/26/tmk-boy-dl-2025-09-26-15-14-43.jpg)
ತುಮಕೂರು: ಜಿಲ್ಲೆಯ ಗುಬ್ಬಿ ತಾಲೂಕಿನ ದಾಸರ ಕಲ್ಲಳ್ಳಿ ಗ್ರಾಮದ ಆದಿಶೇಷ ನಾರಾಯಣ ಎಂಬ ಯುವಕನ DL ಧರ್ಮಸ್ಥಳದಲ್ಲಿ ಪತ್ತೆಯಾಗಿತ್ತು. ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗ್ತಿದ್ದಂತೆ ಗ್ರಾಮಸ್ಥರು ಶಾಕ್ ಆಗಿದ್ದಾರೆ.
ಗ್ರಾಮದ ಬೋಜಯ್ಯ ಮತ್ತು ಚೆನ್ನಮ್ಮ ಎಂಬುವರ ಪುತ್ರ ಆದಿಶೇಷ ನಾರಾಯಣ 12 ರಿಂದ 15 ವರ್ಷದ ಹಿಂದೆ ನಾಪತ್ತೆಯಾಗಿದ್ದ. ಇವನಿಗೆ ಇಬ್ಬರು ಅಕ್ಕಂದಿರು ಇದ್ದಾರೆ. ಬೆಂಗಳೂರಿನ ಶೇಖರ್ ಬಾರ್​ನಲ್ಲಿ ಕೆಲಸ ಮಾಡ್ತಿದ್ದ ಆದಿಶೇಷ, 2013 ಅಕ್ಟೋಬರ್ 2 ರಂದು ಸ್ನೇಹಿತರ ಜೊತೆ ಮನೆಗೆ ಬಂದು ಹೋಗಿದ್ದವನು ಮತ್ತೆ ವಾಪಾಸ್ ಬರಲೇ ಇಲ್ಲ.
ಆದಿಶೇಷ ತನ್ನ ಫೋನ್ ಅನ್ನು ತಾಯಿ ಚೆನ್ನಮ್ಮಗೆ ಕೊಟ್ಟು ಹೋಗಿದ್ದ. ಮಗನ ಕೊರಗಿನಲ್ಲೇ ತಂದೆ ಬೋಜಯ್ಯ 2016 ರಲ್ಲಿ ಮೃತಪಟ್ಟಿದ್ದರು. ತಂದೆ ಬೋಜಯ್ಯ ಮೃತಪಟ್ಟ ಬಳಿಕ ತಾಯಿ ಚೆನ್ನಮ್ಮ ಮಗಳ ಮನೆ ಸೇರಿದ್ದರು. ಈ ಕುರಿತು ಗುಬ್ಬಿ ಪೊಲೀಸ್ ಠಾಣೆಗೂ ದೂರು ನೀಡಿದ್ದರು.
ಅವನು ಇನ್ನೂ ಬದುಕಿದ್ದಾನೆ
SIT ತಂಡಕ್ಕೆ ಸಿಕ್ಕಿರುವ DL ನನ್ನ ತಮ್ಮನದ್ದೇ ಎಂದಿದ್ದಾರೆ ಅಕ್ಕ ಪದ್ಮಾ.. ‘ಅವನು ಇನ್ನೂ ಬದುಕಿದ್ದಾನೆ ಎನಿಸುತ್ತಿದೆ, ಅವನು ಎಲ್ಲಿದ್ದಾನೋ ಚೆನ್ನಾಗಿರಲಿ ಎಂದು ಬೇಡಿಕೊಳ್ಳುತ್ತೇನೆ’ ಎಂದಿದ್ದಾರೆ. ಈ ಕುರಿತು SIT ಅಧಿಕಾರಿಗಳು ದೂರು ನೀಡಲು ಸೂಚಿಸಿದ್ದು, ಗುಬ್ಬಿ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ನೀಡುತ್ತೇವೆ ಎಂದು ಸಹೋದರಿಯರು ಹೇಳಿದ್ದಾರೆ.