Advertisment

ಬೆಂಗಳೂರಿನ 5 ಪಾಲಿಕೆಗಳಿಗೂ ವಾರ್ಡ್ ರಚನೆ : ಪಶ್ಚಿಮ ಪಾಲಿಕೆಗೆ ಗರಿಷ್ಠ 111 ವಾರ್ಡ್ ರಚನೆ, ಕೇಂದ್ರ ಪಾಲಿಕೆಗೆ 63 ವಾರ್ಡ್ ರಚನೆ

ಬೆಂಗಳೂರಿನ ಐದು ಪಾಲಿಕೆಗಳಿಗೂ ವಾರ್ಡ್ ಗಳನ್ನು ರಚಿಸಿ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಬೆಂಗಳೂರು ಪಶ್ಚಿಮ ಪಾಲಿಕೆಗೆ ಗರಿಷ್ಠ 111 ವಾರ್ಡ್ ರಚನೆ ಮಾಡಲಾಗಿದೆ. ಕೇಂದ್ರ ಪಾಲಿಕೆಗೆ 63 ವಾರ್ಡ್ ರಚಿಸಲಾಗಿದೆ.

author-image
Chandramohan
GBA

ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ 5 ಪಾಲಿಕೆಗೆ ವಾರ್ಡ್ ರಚನೆ

Advertisment
  • ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ 5 ಪಾಲಿಕೆಗೆ ವಾರ್ಡ್ ರಚನೆ
  • ಬೆಂಗಳೂರು ಮಹಾನಗರದಲ್ಲಿ ಬರೋಬ್ಬರಿ 368 ವಾರ್ಡ್ ರಚನೆ
  • ಬೆಂಗಳೂರಿನಲ್ಲಿ 198 ರಿಂದ 368 ಕ್ಕೇರಿಕೆಯಾದ ವಾರ್ಡ್ ಗಳ ಸಂಖ್ಯೆ!

ಬೆಂಗಳೂರಿನಲ್ಲಿ ವಾರ್ಡ್ ವಿಂಗಡನೆ ಮಾಡಿ ರಾಜ್ಯ ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಿದೆ. 
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ 5 ಪಾಲಿಕೆಗಳು, 368 ವಾರ್ಡ್ ಗಳನ್ನು ರಚನೆ ಮಾಡಿದೆ. ಬೆಂಗಳೂರು ಮಹಾನಗರದಲ್ಲಿ ಬರೋಬ್ಬರಿ 368 ವಾರ್ಡ್ ಗಳ ರಚನೆ ಮಾಡಲಾಗಿದೆ. ಈ ಹಿಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ 198 ವಾರ್ಡ್ ಗಳಿದ್ದವು. ಈಗ ಹತ್ತಿರ ಹತ್ತಿರ ಅದರ ಎರಡು ಪಟ್ಟು ವಾರ್ಡ್ ರಚನೆ ಮಾಡಲಾಗಿದೆ.  ಬೆಂಗಳೂರು ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ 111 ವಾರ್ಡ್ ರಚನೆ ಮಾಡಲಾಗಿದೆ. ಇದು ಅತಿ ಹೆಚ್ಚು ವಾರ್ಡ್ ಹೊಂದಿರುವ ದೊಡ್ಡ ಪಾಲಿಕೆಯಾಗಲಿದೆ. ಇನ್ನೂ ಬೆಂಗಳೂರು ಪೂರ್ವ ಪಾಲಿಕೆಯು 50 ವಾರ್ಡ್ ಹೊಂದಿದ್ದು ಕಡಿಮೆ ವಾರ್ಡ್ ಹೊಂದಿರುವ ಪಾಲಿಕೆಯಾಗಲಿದೆ.  ಬೆಂಗಳೂರು ಕೇಂದ್ರ ಪಾಲಿಕೆಯ ವ್ಯಾಪ್ತಿಯಲ್ಲಿ 63 ವಾರ್ಡ್ ಗಳಿದ್ದರೇ, ಉತ್ತರ ಪಾಲಿಕೆಯ ವ್ಯಾಪ್ತಿಯಲ್ಲಿ 72 ವಾರ್ಡ್ ಗಳು ಮತ್ತು ಬೆಂಗಳೂರು ದಕ್ಷಿಣ ಪಾಲಿಕೆ ವ್ಯಾಪ್ತಿಯಲ್ಲಿ 72 ವಾರ್ಡ್ ಗಳನ್ನು ರಚನೆ ಮಾಡಲಾಗಿದೆ. 

Advertisment

ಐದು ನಗರ ಪಾಲಿಕೆ ವ್ಯಾಪ್ತಿಯಲ್ಲಿ 368 ವಾರ್ಡ್ ಗಳ ರಚನೆ ಮಾಡಿ ಆದೇಶ

GBA ನೂತನ ವಾರ್ಡ್ ಗಳು 

ಬೆಂಗಳೂರು ಕೇಂದ್ರ ಪಾಲಿಕೆ - 63 ವಾರ್ಡ್

ಬೆಂಗಳೂರು ಪೂರ್ವ ಪಾಲಿಕೆ - 50 ವಾರ್ಡ್

ಬೆಂಗಳೂರು ಪಶ್ಚಿಮ ಪಾಲಿಕೆ - 111 ವಾರ್ಡ್

ಬೆಂಗಳೂರು ಉತ್ತರ ಪಾಲಿಕೆ - 72 ವಾರ್ಡ್

ಬೆಂಗಳೂರು ದಕ್ಷಿಣ ಪಾಲಿಕೆ - 72 ವಾರ್ಡ್

ಗ್ರೇಟರ್ ಬೆಂಗಳೂರು ಪ್ರಾಧಿಕಾರದಡಿ ಒಟ್ಟು 368 ವಾರ್ಡ್ ಗಳಾಗಿ ವಿಂಗಡಣೆ

ಸರ್ಕಾರವು 5 ನಗರ ಪಾಲಿಕೆಗಳ ಕರಡು ವಾಡ್೯ ವಾರು ಕ್ಷೇತ್ರ ಪುನರ್ ವಿಂಗಡಣೆಯ ಅಧಿಸೂಚನೆ ಪ್ರಕಟಿಸಿದೆ.  ಆಕ್ಷೇಪಣೆ ಸಲ್ಲಿಸಲು ದಿನಾಂಕ‌ ನಿಗದಿ ಮಾಡಿದೆ.  15-10-2025 ರಂದು ಅಪರಾಹ್ನ 5-00 ಗಂಟೆಯ ಒಳಗಾಗಿ ಆಕ್ಷೇಪಣೆ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಸ್ವೀಕೃತಗೊಂಡ ಆಕ್ಷೇಪಣೆ / ಸಲಹೆಗಳನ್ನು ಪರಿಶೀಲಿಸಿ ನಗರಪಾಲಿಕೆಗಳ ವಾಡ್೯  ವಾರು ಕ್ಷೇತ್ರ ಪುನರ್ ವಿಂಗಡನೆಯನ್ನು ಅಂತಿಮಗೊಳಿಸಲಾಗುವುದು ಎಂದು ಗೆಜೆಟ್ ಅಧಿಸೂಚನೆಯಲ್ಲಿ ಹೇಳಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

GBA WARD FORMATION TO ALL 5 CORPORATION
Advertisment
Advertisment
Advertisment