6, 6, 6, 6, 6, 6, 6; ಕ್ಯಾಪ್ಟನ್​​ ABD ಸಿಡಿಲಬ್ಬರದ ಸೆಂಚುರಿ, ದಕ್ಷಿಣ ಆಫ್ರಿಕಾ WCL 2025 ಚಾಂಪಿಯನ್​

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್​ನ ಬಗ್ಗು ಬಡಿದ ಎಬಿಡಿ ಸೇನೆ, ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಕಿರೀಟವನ್ನ ಮುಡಿಗೇರಿಸಿಕೊಂಡಿದೆ.

author-image
Bhimappa
ABD_WIN
Advertisment

ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಈ ಟೂರ್ನಿಯುದ್ದಕ್ಕೂ ಚಾಂಪಿಯನ್ಸ್​ ಮಾದರಿ ಆಡಿದ್ದು ಸೌತ್ ಆಫ್ರಿಕಾ ಚಾಂಪಿಯನ್ಸ್. ಈ ಚಾಂಪಿಯನ್​ ಟೀಮ್​​ನಲ್ಲಿ ಚಾಂಪಿಯನ್ ಆಟವಾಡಿದ ಎಬಿ ಡಿಬಿಲಿಯರ್ಸ್​, ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು. 

ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಲೀಗ್​​ನಲ್ಲಿ ಸೌತ್ ಆಫ್ರಿಕಾ ಚಾಂಪಿಯನ್ಸ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ್ ಚಾಂಪಿಯನ್ಸ್​ನ ಬಗ್ಗು ಬಡಿದ ಎಬಿಡಿ ಸೇನೆ, ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಕಿರೀಟವನ್ನ ಮುಡಿಗೇರಿಸಿಕೊಂಡಿದೆ.

ABD_WIN_100

ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ್ ಚಾಂಪಿಯನ್ಸ್ ಮೊದಲು ಬ್ಯಾಟಿಂಗ್ ಮಾಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಪಾಕ್ ಆರಂಭದಲ್ಲೇ ಅಘಾತ ಅನುಭವಿಸಿತು. ಆದ್ರೆ,  ಓಪನರ್​ ಶರ್ಜೀಲ್ ಖಾನ್ ಸ್ಪೋಟಕ ಆಟವಾಡಿದರು. 44 ಎಸೆತಗಳನ್ನ ಎದುರಿಸಿದ ಶರ್ಜೀಲ್, 9 ಬೌಂಡರಿ,  4 ಸಿಕ್ಸರ್​ ಒಳಗೊಂಡ 76 ರನ್ ಚಚ್ಚಿ ಔಟಾದರು.

ಮೊಹಮ್ಮದ್ ಹಫೀಝ್ 17 ರನ್, ಶೊಯೆಬ್ ಮಲಿಕ್ 20 ರನ್​ಗಳಿಗೆ ಆಟ ಮುಗಿಸಿದ್ರು. ಈ ಹಂತದಲ್ಲಿ ಉಮರ್ ಅಮಿನ್ ಸ್ಪೋಟಕ 36 ರನ್​, ಆಸೀಫ್ ಆಲಿ 28 ರನ್​​ಗಳ ನೆರವಿನಿಂದ ಪಾಕ್​​, 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 195 ರನ್​ಗಳಿಸಿತು. ಆ ಮೂಲಕ ಸೌತ್ ಆಫ್ರಿಕಾಗೆ ಬಿಗ್ ಟಾರ್ಗೆಟ್ ನೀಡ್ತು.

ಸ್ಪೋಟಕ ಶತಕ ಸಿಡಿಸಿದ ಎಬಿ ಡಿವಿಲಿಯರ್ಸ್..!

196 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಸೌತ್ ಆಫ್ರಿಕಾಗೆ ಉತ್ತಮ ಆರಂಭ ಸಿಕ್ತು. ಹಾಶಿಮ್ ಆಮ್ಲಾ 18 ರನ್​ಗಳಿಸಿ ಔಟಾದರು. ನಾಯಕ ಎಬಿ ಡಿವಿಲಿಯರ್ಸ್ ಸಿಡಿಲಬ್ಬರದ ಆಟಕ್ಕೆ ಟಾರ್ಗೆಟ್​ ದೊಡ್ಡದು ಅನಿಸಲೇ ಇಲ್ಲ.

ಜೆಪಿ ಡುಮಿನಿ ಜೊತೆ ಬಿಗ್ ಇನಿಂಗ್ಸ್ ಕಟ್ಟಿದ ಎಬಿಡಿ, ಪಾಕ್​ ಬೌಲರ್​​ಗಳನ್ನು ಚೆಂಡಾಡಿದರು. ಹ್ಯಾಮ್ ಸ್ಟ್ರಿಂಗ್ ಇಂಜುರಿಯ ನಡುವೆಯೂ ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿಸಿದ ಡಿವಿಲಿಯರ್ಸ್​, ಕೇವಲ 47 ಎಸೆತಗಳಲ್ಲಿ ಶತಕ ಪೂರೈಸಿದರು. ಆ ಮೂಲಕ ಟೂನಿಯಲ್ಲಿ 3ನೇ ಸೆಂಚುರಿ ದಾಖಲಿಸಿದರು.

PAK (1)

ಸೆಂಚುರಿ ನಂತರವೂ ಸಿಡಿಲಬ್ಬರದ ಆಟವಾಡಿದ ಎಬಿಡಿ, 60 ಎಸೆತಗಳಲ್ಲಿ 12 ಬೌಂಡರಿ, 7 ಸಿಕ್ಸರ್​ ಒಳಗೊಂಡ ಅಜೇಯ 120 ರನ್ ಚಚ್ಚಿದ್ರೆ. ಅತ್ತ ಎಬಿಡಿಗೆ ಸಾಥ್ ನೀಡಿದ ಜೆಪಿ ಡುಮಿನಿ 28 ಎಸೆತಗಳಲ್ಲಿ ಹಾಫ್ ಸೆಂಚುರಿ ದಾಖಲಿಸಿದ್ರು.  ಈ ಮೂಲಕ ಸೌತ್ ಆಫ್ರಿಕಾ ಕೇವಲ 16.5 ಓವರ್​ಗಳಲ್ಲಿ 197 ರನ್​ ಗಳಿಸಿತು. ಇದರೊಂದಿಗೆ ವರ್ಲ್ಡ್​ ಚಾಂಪಿಯನ್​​ಶಿಪ್ ಆಫ್ ಲೆಜೆಂಡ್ಸ್​​ ಚಾಂಪಿಯನ್ ಆಗಿ ಮೆರೆದಾಡಿತು.

ಚಾಂಪಿಯನ್ ಆಗಿಸಿದ ಇನಿಯನಿಗೆ ಪ್ರೀತಿಯ ಅಪ್ಪುಗೆ, ಚುಂಬನ..!

ಆಫ್ರಿಕಾ ಚಾಂಪಿಯನ್ಸ್​, ಚಾಂಪಿಯನ್ ಆಗಿದ್ದೆ ತಡ, ಸ್ಟೇಡಿಯಂನಲ್ಲಿ ಸಂಭ್ರಮ ಮನೆ ಮಾಡಿತ್ತು. ಸಹ ಆಟಗಾರರು ಗೆಲುವಿನ ಹೀರೋಗೆ ಪ್ರೀತಿಯ ಅಪ್ಪುಗೆ ನೀಡ್ತಿದ್ದರು. ಆಟಗಾರರೇ ಅಲ್ಲ.! ತನ್ನ ಮೂರು ಮಕ್ಕಳು, ಪತ್ನಿ ಪ್ರೀತಿಯ ಅಪ್ಪುಗೆಯ ಜೊತೆಗೆ ಸಹಿ ಮುತ್ತು ನೀಡಿ ಸಂಭ್ರಮಿಸಿದರು.

ಸ್ಪೆಷಲ್ ಸೆಲಬ್ರೇಷನ್​ನಿಂದ ಗಮನ ಸೆಳೆದ ಎಬಿಡಿ & ಟೀಮ್..!

ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್​ ಟೂರ್ನಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಆಫ್ರಿಕಾ ತಂಡ, ಸೆಲಬ್ರೇಷನ್​ನಿಂದಲೂ ಗಮನ ಸೆಳೆಯಿತು. ಅದ್ರಲ್ಲೂ ಟ್ರೋಫಿ ಸ್ವೀಕರಿಸಿದ ಬಳಿಕ ನಾಯಕ ಎಬಿ ಡಿವಿಲಿಯರ್ಸ್ & ಔರಾ ಫಾರ್ಮಿಂಗ್‌ ಸೆಲ್ರೇಷನ್​​ ಮಾಡ್ತು.

ABD_WIN

ಟ್ರೋಫಿ ಜೊತೆ ಡ್ರೆಸ್ಸಿಂಗ್ ರೂಮ್​ನಲ್ಲಿ ವಿಕ್ಟರಿ ಡ್ಯಾನ್ಸ್​..!

ಆಟಗಾರರ ಸೆಲಬ್ರೇಷನ್ ಕೇವಲ ಮೈದಾನಕ್ಕೆ ಸೀಮಿತವಾಗಲಿಲ್ಲ. ಡ್ರೆಸ್ಸಿಂಗ್ ರೂಮ್​ನಲ್ಲೂ ಮನೆ ಮಾಡಿತ್ತು. ಪ್ರಮುಖವಾಗಿ ಎಬಿಡಿ ಹಾಗೂ ವೇಯ್ನ್ ಪಾರ್ನೆಲ್ ಮಾಡಿದ ಡ್ಯಾನ್ಸ್​ ಸಖತ್ ಕಿಕ್​ ನೀಡ್ತು.

ಸೌತ್ ಆಫ್ರಿಕಾ ಚಾಂಪಿಯನ್ಸ್​ ತಂಡದಲ್ಲಿ ಲೆಜೆಂಡ್​​​​ರಿ ಆಟಗಾರರ ಇದ್ದರು. ಆಮ್ಲಾ, ಡುಮಿನಿ, ಎಬಿಡಿಯವರಂಥ ಆಟಗಾರರಿಗೆ ಐಸಿಸಿ ಟ್ರೋಫಿ ಗೆಲ್ಲದ ನೋವಿತ್ತು. ಆದ್ರೆ, ವರ್ಲ್ಡ್​ ಚಾಂಪಿಯನ್​ಶಿಪ್ ಆಫ್ ಲೆಜೆಂಡ್ಸ್ ಟ್ರೋಫಿ ಗೆಲ್ಲುವ ಮೂಲಕ ಟ್ರೋಫಿ ಬರ ನೀಗಿಸಿಕೊಂಡಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

WCL Final
Advertisment