/newsfirstlive-kannada/media/media_files/2025/10/20/madhu-bangarappa-2025-10-20-18-42-20.jpg)
ಆರ್. ಎಸ್. ಎಸ್. ಸಂಘಟನೆ ರಿಜಿಸ್ಟರ್ ಆಗಿಯೇ ಇಲ್ಲ. ಅವರು ಚಡ್ಡಿಯಿಂದ ಪ್ಯಾಂಟ್ ಗೆ ಬದಲಾಗಿದ್ದಾರೆ. ಅದರೆ ಅವರ ಅಜೆಂಡಾ ಮಾತ್ರ ಬದಲಾಗಿಲ್ಲ. ಆರ್ ಎಸ್ ಎಸ್ ಅನ್ನು ತಿದ್ದುವುದು ಕೆಪಿಎಸ್ ಶಾಲೆಯಿಂದಲೇ. ಕರ್ನಾಟಕ ಪಬ್ಲಿಕ್ ಶಾಲೆಗಳ ಮೂಲಕ ಆರ್.ಎಸ್.ಎಸ್. ಕಾರ್ಯಕರ್ತರನ್ನು ತಿದ್ದುತ್ತೇವೆ ಎಂದು ಕರ್ನಾಟಕದ ಶಾಲಾ ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಆರ್. ಎಸ್. ಎಸ್. ಹಾದಿ ತಪ್ಪಿಸುವ ವ್ಯವಸ್ಥೆ ಆಗಿದೆ. ಆರ್.ಎಸ್.ಎಸ್. ಸಂಘಟನೆಯವರು ಜನಗಣಮನ ಹೇಳಲ್ಲ, ರಾಷ್ಟ್ರಧ್ವಜಕ್ಕೆ ಗೌರವ ಕೊಡಲ್ಲ. ಹೀಗಾಗಿ ಆರ್.ಎಸ್.ಎಸ್. ಕಾರ್ಯಕರ್ತರನ್ನು ಕೂಡ ಕರ್ನಾಟಕ ಪಬ್ಲಿಕ್ ಶಾಲೆಯ ಮೂಲಕ ತಿದ್ದುತ್ತೇವೆ ಎಂದು ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಶಿವಮೊಗ್ಗದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ನವರಿಂದಲೇ ಭಾರತಕ್ಕೆ ಸ್ವಾತಂತ್ರ್ಯ ಬಂದಿದೆ. ಆರ್ ಎಸ್ ಎಸ್ ಸಂಘಟನೆ ಮೊದಲು ರಿಜಿಸ್ಟರ್ ಮಾಡಿಕೊಳ್ಳಲಿ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದರು.
ರಾಜ್ಯದಲ್ಲಿ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯು ಶೇ.90.12 ರಷ್ಟು ಮುಗಿದಿದೆ. ಸಮೀಕ್ಷೆ ತುಂಬ ಅವಶ್ಯಕತೆ ಇದೆ. ಇದರಿಂದ ಬಜೆಟ್ ಗೆ ಅನುಕೂಲವಾಗಲಿದೆ. ದೊಡ್ಡ ದೊಡ್ಡ ಉದ್ಯಮಿಗಳು ಸಹ ಸಹಕಾರ ನೀಡಬೇಕಾಗುತ್ತದೆ ಎಂದು ಪರೋಕ್ಷವಾಗಿ ಇನ್ಫೋಸಿಸ್ ನ ದಂಪತಿಗಳ ಹೆಸರನ್ನು ಹೇಳದೆ ಮನವಿ ಮಾಡಿದರು. ಎಲ್ಲರೂ ಸಹ ಸಮೀಕ್ಷೆಯಲ್ಲಿ ಭಾಗಿಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ 97 % ರಷ್ಟು ಸಮೀಕ್ಷೆ ಮುಕ್ತಾಯವಾಗಿದೆ. ನಿನ್ನೆಯಿಂದಲೇ ಶಿಕ್ಷಕರನ್ನು ಸಮೀಕ್ಷೆಗೆ ಬಳಸುವುದನ್ನು ನಿಲ್ಲಿಸಲಾಗಿದೆ.
ಯಾರಾದರೂ ಸಮೀಕ್ಷೆಯಲ್ಲಿ ಭಾಗಿಯಾಗಿಲ್ಲವೋ, ಅವರು ಸಮೀಕ್ಷೆಯಲ್ಲಿ ಭಾಗಿಯಾಗಿ ಎಂದು ಸಚಿವ ಮಧು ಬಂಗಾರಪ್ಪ ಕರೆ ನೀಡಿದ್ದಾರೆ. ಯಾರು ಸಮೀಕ್ಷೆಗೆ ವಿರೋಧ ಮಾಡುತ್ತಿದ್ದರೋ ಅವರ ಜಿಲ್ಲೆಯಲ್ಲೇ 97% ಸಮೀಕ್ಷೆ ಆಗಿದೆ ಎಂದು ಶಿವಮೊಗ್ಗ ಜಿಲ್ಲೆಯ ಉದಾಹರಣೆ ನೀಡಿದ್ದರು . ಜನರು ಅವರ ಹಕ್ಕು ಕೇಳುತ್ತಿದ್ದಾರೆ . ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ತಾಲ್ಲೂಕಿನಲ್ಲಿಯೇ ಚೆನ್ನಾಗಿ ಸಮೀಕ್ಷೆ ಆಗಿದೆ. ಸಮೀಕ್ಷೆಯಲ್ಲಿ ಶಿಕ್ಷಕರ ಬಳಕೆ ನಿನ್ನೆಗೆ ಕೊನೆಯಾಗಿದೆ
ಕೆಲವರು ಮತವೇ ಹಾಕುವುದಿಲ್ಲ. ಅಂತಹವರು ಮಾತ್ರ ಎಲ್ಲಾ ಸೌಲಭ್ಯವನ್ನು ಕೇಳುತ್ತಾರೆ. ಇಂತಹವರು ಪ್ರಜಾಪ್ರಭುತ್ವಕ್ಕೆ ಅಪಮಾನ ಮಾಡುತ್ತಿದ್ದಾರೆ ಎಂದು ಶಿಕ್ಷಣ ಖಾತೆ ಸಚಿವ ಮಧು ಬಂಗಾರಪ್ಪ ಹೇಳಿದ್ದರು.
ಶಿಕ್ಷಕರ ನೇಮಕಾತಿ
ಹೊಸದಾಗಿ ಶಿಕ್ಷಕ್ಷರನ್ನು ನೇಮಕಾತಿ ಮಾಡಿಕೊಳ್ಳಲಾಗುವುದು. 23-10-2025 ರಿಂದ 9-11-2015 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. 7-12-2025 ರಂದು ಟಿಇಟಿ ಪರೀಕ್ಷೆ ನಡೆಸಲಾಗುತ್ತದೆ. 26 ಸಾವಿರ ಶಿಕ್ಷಕರನ್ನು ಈಗ ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಅನುದಾನಿತ ಶಾಲೆಯ ಶಿಕ್ಷಕರ ನೇಮಕಾತಿಗೆ ಶೀಘ್ರದಲ್ಲಿಯೇ ಆದೇಶ ಹೊರಡಿಸಲಾಗುವುದು. ಅದೇ ರೀತಿ ಕಲ್ಯಾಣ ಕರ್ನಾಟಕದಲ್ಲೂ ನೇಮಕ ಮಾಡಿಕೊಳ್ಳಲಾಗುವುದು. ರಾಜ್ಯದಲ್ಲಿ 800 ಕೆಪಿಎಸ್ ಶಾಲೆಯನ್ನು ಪ್ರಾರಂಭಿಸಲಾಗುವುದು. 6 ನೇ ತರಗತಿಯಿಂದ ಕನ್ನಡದ ಜೊತೆಗೆ ಇಂಗ್ಲೀಷ್ ಕಲಿಕೆಗೆ ಅವಕಾಶ ನೀಡಲಾಗುತ್ತದೆ. ಕರ್ನಾಟಕ ಪಬ್ಲಿಕ್ ಶಾಲೆಗೆ 3 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲು ನವೆಂಬರ್ ಎರಡನೇ ವಾರದಲ್ಲಿ ಸಿಎಂ ಗುದ್ದಲಿ ಪೊಜೆ ಮಾಡಲಿದ್ದಾರೆ. ಒಂದು ಶಾಲೆಗೆ ಸುಮಾರು 4 ಕೋಟಿ ರೂ ಖರ್ಚು ಮಾಡುವ ಗುರಿ ಇದೆ ಎಂದರು.
ರಾಜ್ಯದಲ್ಲಿ 13 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಈಗ ಅದಕ್ಕೆ ಅಧಿಸೂಚನೆ ಹೊರಡಿಸುತ್ತೇವೆ. ಅಕ್ಟೋಬರ್ 23 ರಿಂದ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. 15 ದಿನಗಳ ಕಾಲ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಡಿಸೆಂಬರ್ 7 ಕ್ಕೆ ಪರೀಕ್ಷೆ ನಡೆಸಲು ತೀರ್ಮಾನ ಮಾಡಲಾಗಿದೆ . ಮೂರು ತಿಂಗಳಲ್ಲಿ ಪ್ರಕ್ರಿಯೆ ಮುಗಿಸಲಾಗುವುದು . ಈ ನೇಮಕಾತಿ ಮುಗಿದ ಮೇಲೆ ಅನುದಾನಿತ ಶಾಲೆಗಳಲ್ಲಿ 6 ಸಾವಿರ ಶಿಕ್ಷಕರ ನೇಮಕಾತಿ ಮಾಡಲಾಗುತ್ತದೆ .
ಒಂದನೇ ತರಗತಿಯಿಂದ ಕಂಪ್ಯೂಟರ್ ಶಿಕ್ಷಣ
6ನೇ ತರಗತಿಯಿಂದ ಸ್ಕಿಲ್ ಡೆವಲಪ್ ಮೆಂಟ್ ಸ್ಕೂಲ್
ರಾಹುಲ್ ಗಾಂಧಿ ರವರು ಎಐ ಆಧಾರಿತ ಶಿಕ್ಷಣ ನೀಡಬೇಕೆಂದು ತಿಳಿಸಿದ್ದಾರೆ. ಈಗ ಒಂದನೇ ತರಗತಿಯಿಂದಲೇ ಕಂಪ್ಯೂಟರ್ ಕಲಿಸಲಾಗುವುದು. 6 ನೇ ತರಗತಿಯಿಂದಲೇ ಕೌಶಲ್ಯ ಸ್ಕೂಲ್ ಪ್ರಾರಂಭಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಬೆಳವಣಿಗೆಗಳ ಬಗ್ಗೆ ಸಚಿವ ಮಧು ಬಂಗಾರಪ್ಪ ಹೇಳಿದ್ದರು.
6ನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಾಲೆ ಆರಂಭವಾಗಲಿದೆ. ಮೂರು ಸಾವಿರ ಕೋಟಿ ವೆಚ್ಚದಲ್ಲಿ 800 ಪಬ್ಲಿಕ್ ಶಾಲೆಗಳನ್ನು ತೆರೆಯಲಾಗುತ್ತದೆ . ಇದಕ್ಕೆ ಶಂಕುಸ್ಥಾಪನೆ ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯರವರು ನೆರವೇರಿಸಲಿದ್ದಾರೆ. ಇನ್ನು ಮುಂದೆ ಕೆಪಿಎಸ್ ಶಾಲೆಯಲ್ಲಿ ಒಂದನೇ ತರಗತಿಯಿಂದ ಕಂಪ್ಯೂಟರ್ ಹೇಳಿಕೊಡಲಾಗುತ್ತದೆ . ಎಐ ಸಂಬಂಧಿಸಿದ ಶಿಕ್ಷಣ ನೀಡಲಾಗುವುದು . ಆರನೇ ತರಗತಿಯಿಂದ ಸ್ಕಿಲ್ ಡೆವಲಪ್ ಮೆಂಟ್ ತರಗತಿ ಆರಂಭಿಸಲಾಗುವುದು
ಇಡೀ ದೇಶದಲ್ಲಿ ಈಗ ಶಾಲಾ ತರಗತಿಗಳ ತೇರ್ಗಡೆ ಅಂಕ 33% ಇದೆ. ಇದನ್ನು ಜನಾಭಿಪ್ರಾಯಕ್ಕೆ ಬಿಟ್ಟಿದ್ದವು, 33% ಅಂಕದ ಪರವಾಗಿ ಜನಾಭಿಪ್ರಾಯ ಬಂದಿದೆ . ಹಾಗಾಗಿ ಇನ್ನು ಮುಂದೆ 33% ತೇರ್ಗಡೆ ಅಂಕ ಆಗಲಿದೆ.
ಬಿಜೆಿಪಿ ವಿರುದ್ಧ ಮಧು ಬಂಗಾರಪ್ಪ ವಾಗ್ದಾಳಿ
ಬಿಹಾರ ಚುನಾವಣೆಗೆ ರಾಜ್ಯದಲ್ಲಿ ಹಣ ವಸೂಲಿ ನಡೆಯುತ್ತಿದೆ ಎಂದ ಸಂಸದ ಬಿ.ವೈ. ರಾಘವೇಂದ್ರ ಆರೋಪದ ವಿಚಾರಕ್ಕೆ ಸಂಬಂಧಿಸಿದಂತೆಯೂ ಸಚಿವ ಮಧು ಬಂಗಾರಪ್ಪ ಪ್ರತಿಕ್ರಿಯಿಸಿದ್ದರು. ಚುನಾವಣೆಯಲ್ಲಿ ಪೊಲೀಸ್ ಜೀಪ್ ಹಾಗೂ ಅಂಬ್ಯುಲೆನ್ಸ್ ನಲ್ಲಿ ಹಣವನ್ನು ಬೇರೆಡೆಯಿಂದ ತರಿಸಿದ್ದರು. ಬಂಗಾರಪ್ಪನವರ ವಿರುದ್ದ ಇವರ ಸಾಧನೆ ಏನು ಎಂದು ಪ್ರಶ್ನಿಸಿದ್ದರು. ಟೋಲ್ ಗೇಟ್ ತಂದು ಅದರ ವಿರುದ್ದ ಹೋರಾಟಕ್ಕೆ ಹೋಗುತ್ತಾರೆ, ಇವರಿಗೆ ನಾಚಿಕೆ ಆಗಲ್ಲವೇ ಎಂದು ಪ್ರಶ್ನಿಸಿದ್ದರು. ಜಿಎಸ್ ಟಿ ಬೇಡ ಅಂದ್ರು, ಅವರೇ ಜಾರಿಗೆ ತಂದರು. ಈಗ ಜಿ ಎಸ್ ಟಿ ಕಡಿಮೆ ಮಾಡಿದ್ದೇವೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಇವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಬಜೆಪಿ ಹಾಗೂ ಕೇಂದ್ರ ಸರ್ಕಾರವನ್ನು ಸಚಿವ ಮಧು ಬಂಗಾರಪ್ಪ ಪ್ರಶ್ನಿಸಿದ್ದರು.
ಕೇಂದ್ರ ಸರ್ಕಾರ ಶಿಕ್ಷಣ ಇಲಾಖೆಗೆ ಹಣ ನೀಡುತ್ತಿಲ್ಲ. ಆರ್.ಅಶೋಕ್, ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರ ಚಾಲಕರು ಗ್ಯಾರಂಟಿ ಸ್ಕೀಮ್ ಗಳನ್ನು ಬಳಸಿಕೊಳ್ಳುತ್ತಿದ್ದಾರೆ.
ಆಂಧ್ರಕ್ಕೆ ಗೂಗಲ್ ಎಐ ಹಬ್ ಪಾಲಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಮಧು ಬಂಗಾರಪ್ಪ, ರಾಜ್ಯಕ್ಕೆ ಕಂಪನಿಗಳು ಬರುತ್ತಾವೆ, ಹೋಗುತ್ತಾವೆ, ಅದು ಸಾಮಾನ್ಯ ಪ್ರಕ್ರಿಯೆ ಎಂದರು. ಆಂಧ್ರಪ್ರದೇಶ ಕೂಡ ನಮ್ಮ ದೇಶವೇ ಅಲ್ಲವೇ?
ನವೆಂಬರ್ 26 ರಂದು ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಹುಟ್ಟುಹಬ್ಬ ಇದೆ. ಅದಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಈ ಬಾರಿ ಬಂಗಾರಪ್ಪ ವಿಚಾರ ವೇದಿಕೆಯಿಂದ ಕಾರ್ಯಕ್ರಮ ಸೊರಬದಲ್ಲಿ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ ಸಚಿವರಾದ ಸಂತೋಪ್ ಲಾಡ್ ಹಾಗೂ ಮುನಿಯಪ್ಪ ಭಾಗಿಯಾಗಲಿದ್ದಾರೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.