ಅಮೆರಿಕಾ ವಿಧಿಸಿರುವ ಆಮದು ತೆರಿಗೆಯಿಂದ ಯಾವೆಲ್ಲ ಉದ್ಯಮದ ಮೇಲೆ ಏನೇನು ಪರಿಣಾಮ?

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಉತ್ಪನ್ನಗಳನ್ನು ಅಮೆರಿಕಾಕ್ಕೆ ರಫ್ತು ಮಾಡಲು ಶೇ.25 ರಷ್ಟು ಅಮದು ಸುಂಕ ವಿಧಿಸಿದ್ದಾರೆ. ಇದರಿಂದ ಭಾರತದ ವಿವಿಧ ರಫ್ತು ಕ್ಷೇತ್ರಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ. ಯಾವ್ಯಾವ ರಫ್ತು ಉತ್ಪನ್ನಗಳ ಮೇಲೆ ಏನೇನು ಪರಿಣಾಮ ಬೀರುತ್ತೆ ಅನ್ನೋ ವಿವರ ಇಲ್ಲಿದೆ.

author-image
Chandramohan
USA PREZ DONALD TRUMP and modi
Advertisment

ಭಾರತದ ಮೇಲೆ ಅಮೆರಿಕಾ ಹೇರಿರುವ ಅಮದು  ತೆರಿಗೆ ನೀತಿಗೆ ಭಾರತದ ಕೆಲ ರಫ್ತು ಉದ್ಯಮಗಳ ಮೇಲೆ ನೇರವಾದ ಪರಿಣಾಮ ಬೀರಲಿದೆ. ಅಷ್ಟಕ್ಕೂ ಅಮೆರಿಕಾ ಭಾರತದ ಮೇಲೆ ಎಷ್ಟು ತೆರಿಗೆ ಹೇರಿದೆ..? ಇದರಿಂದ ಯಾವೆಲ್ಲ ಉದ್ಯಮದ ಮೇಲೆ ನೇರ ಪರಿಣಾಮ ಬಿರುತ್ತೆ..? ಇದರಿಂದ ಭಾರತಕ್ಕೆ ಎಷ್ಟು ನಷ್ಟವಾಗುತ್ತೆ ಅನ್ನೋದನ್ನು ನಾವು ವಿವರಿಸುತ್ತೇವೆ.

 ಅಮೇರಿಕಾ ಭಾರತದ ಮೇಲೆ  ಶೇ. 25%ರಷ್ಟು ಆಮದು ಸುಂಕವನ್ನ ಘೋಷಣೆ ಮಾಡಿದೆ. ಈ ಆಮದು ಸುಂಕದ ಘೋಷಣೆಯು, ಭಾರತದ ಮೇಲೆ ಹಲವಾರು ಆರ್ಥಿಕ ಮತ್ತು ವಾಣಿಜ್ಯ ಪರಿಣಾಮಗಳನ್ನು ಬೀರಬಹುದು ಅಂತ ಅಂದಾಜಿಸಲಾಗಿದೆ.  ಅಷ್ಟಕ್ಕೂ ಭಾರತದ ಮೇಲೆ ಯಾವೆಲ್ಲ ರೀತಿಯಲ್ಲಿ ಪರಿಣಾಮ ಬೀರಲಿದೆ ಅನ್ನೋದನ್ನ ನೋಡೊದಾದ್ರೆ, ಮೊದಲು ನೇರವಾಗಿ ಪರಿಣಾಮ ಬೀರುವುದು ರಫ್ತಿನ ಮೇಲೆ.. ಸಾಮಾನ್ಯವಾಗಿ ಭಾರತದಿಂದ ಅಮೆರಿಕಕ್ಕೆ ರಫ್ತಾಗುವ ವಸ್ತುಗಳಲ್ಲಿ ಪ್ರಮುಖವಾದವು ಜವಳಿ, ಆಭರಣ, ರತ್ನಗಳು, ಔಷಧಿ ಮತ್ತು  ಐಟಿ ಉತ್ಪನ್ನಗಳು.


ಈಗ 25% ತೆರಿಗೆಯಿಂದ ಈ ವಸ್ತುಗಳು ಅಮೇರಿಕಾದಲ್ಲಿ ದುಬಾರಿಯಾಗುತ್ತವೆ. ಇದರಿಂದ ಭಾರತೀಯ ಉತ್ಪನ್ನಗಳ ಬೇಡಿಕೆ ಕಡಿಮೆಯಾಗಿ, ರಫ್ತಿನ ಆದಾಯ ಕುಸಿಯಬಹುದು. 2024-25ರಲ್ಲಿ ಭಾರತದ ಒಟ್ಟು ರಫ್ತಿನಲ್ಲಿ ಅಮೆರಿಕದ ಪಾಲು ಸುಮಾರು 28% ಇದ್ದು, ಈ ಕ್ಷೇತ್ರಕ್ಕೆ ಗಣನೀಯ ಧಕ್ಕೆಯಾಗಬಹುದು.


ಎರಡನೆಯದು ವ್ಯಾಪಾರ ಕೊರತೆ ಹೆಚ್ಚಳವಾಗೋ ಸಾದ್ಯತೆ ಇದೆ. ಯಾವುದೇ ದೇಶದ ರಫ್ತು ಕಡಿಮೆಯಾದರೂ ವ್ಯಾಪಾರ ಕೊರತೆ (Trade Deficit) ಹೆಚ್ಚಾಗುತ್ತದೆ. ಇದರಿಂದ ಅಮೆರಿಕಕ್ಕೆ ಭಾರತದ ರಫ್ತು ಸುಮಾರು 87 ಬಿಲಿಯನ್ ಡಾಲರ್‌ಗಳಷ್ಟಿದ್ದು, ಈ ತೆರಿಗೆಯಿಂದ ಈ ಮೊತ್ತ ಕಡಿಮೆಯಾಗಿ ಆರ್ಥಿಕ ಸಮತೋಲನಕ್ಕೆ ಧಕ್ಕೆಯಾಗಬಹುದು..
ಮೂರನೆಯದು ಉದ್ಯಮಗಳ ಮೇಲೆ ನೇರ ಪರಿಣಾಮ ಬೀರಲಿದೆ.  ಕೃಷಿ, ರಾಸಾಯನಿಕ, ಆಟೋಮೊಬೈಲ್, ಮತ್ತು ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳು ಹೆಚ್ಚು ತೊಂದರೆಗೊಳಗಾಗಬಹುದು.  ಉದಾಹರಣೆಗೆ, ಕೃಷಿ ರಫ್ತು (20-25 ಬಿಲಿಯನ್ ಡಾಲರ್) ಮತ್ತು ರಾಸಾಯನಿಕ ಉದ್ಯಮ (25-30 ಬಿಲಿಯನ್ ಡಾಲರ್ ನಿಂದ ಕಡಿಮೆಯಾಗುತ್ತಾ ಸಾಗುತ್ತದೆ.
ಕೊನೆಯದಾಗಿ ರೂಪಾಯಿ ಮೌಲ್ಯದ ಮೇಲೆ ನೇರ ಪರಿಣಾಮ ಉಂಟಾಗಲಿದೆ.  ರಫ್ತು ಕಡಿಮೆಯಾದರೆ, ಡಾಲರ್‌ಗೆ ಬೇಡಿಕೆ ಹೆಚ್ಚಾಗಿ, ರೂಪಾಯಿ ಮೌಲ್ಯ ಕುಸಿಯಬಹುದು. ಇದು ಆಮದು ವೆಚ್ಚವನ್ನು ಏರಿಸಿ, ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗಬಹುದು.
ಇವುಗಳ ಮಧ್ಯೆ ಕೆಲವು ಕ್ಷೇತ್ರಗಳಿಗೆ ವಿನಾಯಿತಿ ನೀಡಲಾಗಿದ್ದು ಫಾರ್ಮಾ ಮತ್ತು ಐಟಿ ಕ್ಷೇತ್ರಗಳು ತೆರಿಗೆಯಿಂದ ವಿನಾಯಿತಿ ಪಡೆಯಬಹುದು ಎಂದು ವರದಿಗಳು ತಿಳಿಸಿವೆ, ಆದರೆ ಇದು ಒಟ್ಟಾರೆ ಪರಿಣಾಮವನ್ನು ಕಡಿಮೆ ಮಾಡಲು ಸಾದ್ಯವಿಲ್ಲ. ಇದೆಲ್ಲದರ ಪರಿಣಾಮ ಜಿಡಿಪಿ ಮೇಲೆ ನೇರ ಪರಿಣಾಮ ಬೀರುವ ಸಾದ್ಯತೆ ಇದೆ ಎನ್ನಲಾಗಿದೆ.

USA PREZ DONALD TRUMP




ಹಾಗಾದ್ರೆ ಭಾರತದಿಂದ ಅಮೇರಿಕಾಕ್ಕೆ, ಅಮೇರಿಕಾದಿಂದ ಭಾರತಕ್ಕೆ ಯಾವೆಲ್ಲ ವಸ್ತು ರಫ್ತು ಮತ್ತು ಆಮದು ಆಗುತ್ತಾವೆ ಅಂತ ನೋಡೊದಾದ್ರೆ, 
ಭಾರತದಿಂದ ಅಮೆರಿಕಕ್ಕೆ ರಫ್ತು ಆಗೋ ಪ್ರಮುಖ ಉತ್ಪನ್ನಗಳೆಂದರೆ ಔಷಧಿ, ವಿದ್ಯುತ್ ಯಂತ್ರೋಪಕರಣಗಳು, ಜವಳಿ, ಆಭರಣಗಳು, ಮತ್ತು ಎಂಜಿನಿಯರಿಂಗ್ ಉತ್ಪನ್ನಗಳು.
ಅಮೇರಿಕದಿಂದ ಭಾರತಕ್ಕೆ ಆಮದು  ಆಗುವ  ಪ್ರಮುಖ ಉತ್ಪನ್ನಗಳೆಂದರೆ ಖನಿಜ, ಇಂಧನಗಳು, ರತ್ನಗಳು, ವಿಮಾನ ಭಾಗಗಳು, ವಿದ್ಯುತ್ ಯಂತ್ರೋಪಕರಣಗಳು ಮತ್ತು ಕೃಷಿ ಉತ್ಪನ್ನಗಳು.
ಸದ್ಯ ಭಾರತವು ಅಮೇರಿಕದೊಂದಿಗೆ $41.18 ಬಿಲಿಯನ್ ವ್ಯಾಪಾರ ಕೊರತೆ ಹೊಂದಿದೆ, ಇದು 2023-24ರಲ್ಲಿ $35.32 ಬಿಲಿಯನ್‌ಗಿಂತ ಹೆಚ್ಚಾಗಿದೆ. ಈ ಎಲ್ಲಾ ಪರಿಣಾಮಗಳ ಕಾರಣಕ್ಕಾಗಿ ಭಾರತ ಸರ್ಕಾರ ಇನ್ನು ಅಮೆರಿಕಾದ ಜೊತೆ ವ್ಯಾಪಾರ ವಾಣಿಜ್ಯ ಒಪ್ಪಂದದ ಮಾತುಕತೆ ಮುಂದುವರೆಸಿದೆ. ಆದರೆ ಅಮೇರಿಕಾ ಮಾತ್ರ ರಷ್ಯಾ ಜೊತೆ ನೀವು ವ್ಯಾಪಾರ ವಹಿವಾಟನ್ನ ಮುಂದುವರೆಸಿದ್ದೆ ಆದ್ರೆ ಹೆಚ್ಚುವರಿಯಾಗಿ  ಶೇ. 10 ತೆರಿಗೆ ವಿಧಿಸಲಾಗುತ್ತೆ ಅಂತ ಹೇಳಿದೆ.  ಇದು ಭಾರತಿಯರ ಕೆಂಗಣ್ಣಿಗೆ ಗುರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Pm Narendra Modi DONALD TRUMP
Advertisment