/newsfirstlive-kannada/media/media_files/2025/08/26/nsg-commando-02-2025-08-26-18-05-26.jpg)
ಎನ್‌ಎಸ್‌ಜಿ ಕಮ್ಯಾಂಡೋ ಪಡೆ
ಕೇಂದ್ರ ಸರ್ಕಾರಿ ಹುದ್ದೆ ಬೇಕು. ಅದರಲ್ಲೂ ಭಾರತದ ಮಿಲಿಟರಿಗೆ ಸೇರಬೇಕು ಎಂಬ ಆಸಕ್ತಿ ಇರೋರಿಗೆ ಇಲ್ಲೊಂದು ಸುವರ್ಣಾವಕಾಶ ಇದೆ. ಡಿಗ್ರಿ ಪಾಸ್ ಆದವರಿಗೆ ಇದು ಸಖತ್ ಜಾಕ್ಪಾಟ್.
ದೇಶದ ಸೆಕ್ಯೂರಿಟಿಲಿ ಮುಖ್ಯ ಪಾತ್ರ ವಹಿಸೋದು ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಅಂದ್ರೆ NSG. ಇವ್ರನ್ನೇ ಬ್ಲ್ಯಾಕ್ ಕ್ಯಾಟ್ಸ್ ಕಮಾಂಡೋ ಅಂತಲೂ ಕರೀತಾರೆ. ಉಗ್ರರ ವಿರುದ್ಧ ಹೋರಾಡಲು ಇವ್ರು ಸ್ಪೆಷಲ್ ಟ್ರೈನಿಂಗ್ ಪಡೆದಿರ್ತಾರೆ. ಈ ಎನ್‌ಎಸ್‌ಜಿ ಕಮಾಂಡೋ ಆಗೋದು ಅದೆಷ್ಟೋ ಯುವಕರ ಕನಸು. ಆದ್ರೆ, ಈ ತಂಡ ಸೇರೋದು ಅಷ್ಟು ಈಸಿ ಅಲ್ಲ. ಅದಕ್ಕೆ ಸ್ಪೆಷಲ್ ಅರ್ಹತೆ ಇರಬೇಕು. ಕಠಿಣ ಆಯ್ಕೆ ಪ್ರಕ್ರಿಯೆಯನ್ನೂ ದಾಟಬೇಕು, ಅದೇನು ಅಂತ ವಿವರಿಸುತ್ತೇವೆ.
ಭಾರತೀಯ ಸೇನೆಯಲ್ಲಿ ನ್ಯಾಷನಲ್ ಸೆಕ್ಯೂರಿಟಿ ಗಾರ್ಡ್ ಒಂದು ಸ್ಪೆಷಲ್ ಫೋರ್ಸ್. ಇವ್ರು ಟೆರರಿಸ್ಟ್ ಅಟ್ಯಾಕ್‌ಗಳನ್ನ ಎದುರಿಸೋದು ಹೇಗೆ ಅನ್ನೋ ಸ್ಪೆಷಲ್ ಮಿಷನ್‌ಗಳಿಗೆ ಟ್ರೈನಿಂಗ್ ಪಡೆದವರು. ಕೇಂದ್ರ ಸರ್ಕಾರವೂ ಜೀರೋ ಎರರ್ ಅನ್ನೋ ಗುರಿಯೊಂದಿಗೆ ಸುಮಾರು 7,000 NSG ಕಮಾಂಡೋಗಳನ್ನು ಭಾರತದ ಸೆಕ್ಯೂರಿಟಿಗಾಗಿ ನೇಮಿಸಿಕೊಳ್ಳುತ್ತದೆ. ಈ ವರ್ಷವೂ ಖಾಲಿ ಇರೋ NSG ಕಮಾಂಡೋ ಹುದ್ದೆಗಳ ಭರ್ತಿಗೆ ಕೇಂದ್ರ ಸರ್ಕಾರ ಮುಂದಾಗಿದೆ.
NSG ಕಮಾಂಡೋ ಆಗಲು ಅರ್ಹತೆ ಏನು?
NSG ವಿಶ್ವದ ಪ್ರತಿಷ್ಠಿತ ಸೆಕ್ಯೂರಿಟಿ ಫೋರ್ಸ್‌ಗಳಲ್ಲಿ ಒಂದು. ಯಾವುದೇ ಸಂದರ್ಭದಲ್ಲಾದ್ರೂ ದೇಶದ ಪರ ಹೋರಾಡೋದು ಇವರ ಕಾಯಕ. ಕಠಿಣ ಪರಿಸ್ಥಿತಿ ಎದುರಿಸೋಕೆ ಸ್ಪೆಷಲ್ ಟ್ರೈನಿಂಗ್ ಪಡೆದಿರುತ್ತಾರೆ. NSG ಸೇರೋಕೆ ಅಭ್ಯರ್ಥಿಗಳು ಮೊದಲು ಭಾರತೀಯ ಸೇನೆಯಲ್ಲಿ ಇರಬೇಕು. ಆರ್ಮಿ, ನೇವಿ, ಏರ್ ಫೋರ್ಸ್ ಅಥವಾ ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸ್, BSF, ITBP, CISFನಲ್ಲಿ ಕನಿಷ್ಠ 3 ವರ್ಷ ಅನುಭವ ಇರಬೇಕು. ಭಾರತದ ಯಾವುದಾದ್ರೂ ಮಾನ್ಯತೆ ಪಡೆದಿರೋ ವಿವಿಯಲ್ಲಿ ಡಿಗ್ರಿ ಮಾಡಿರಬೇಕು. ವಯಸ್ಸು 35ಕ್ಕಿಂತ ಕಡಿಮೆ ಇದ್ದು, ದೈಹಿಕವಾಗಿ ಮತ್ತು ಮಾನಸಿಕವಾಗಿ ಸ್ಟ್ರಾಂಗ್
ಇರಬೇಕು.
ಇನ್ನೂ ಆಯ್ಕೆ ಹೇಗೆ?
NSG ಸೇರೋಕೆ ಯಾವುದೇ ನೇರ ನೇಮಕಾತಿ ಇಲ್ಲ. ಶೇ. 75ರಷ್ಟು ಕಮಾಂಡೋಗಳನ್ನ ಸೇನೆ ಅಥವಾ CAPFನಿಂದ ಡೆಪ್ಯುಟೇಶನ್ ಮೂಲಕ ಆಯ್ಕೆ ಮಾಡ್ತಾರೆ. ಇನ್ನೂ ಉಳಿದ ಶೇ.25ರಷ್ಟು ಅಭ್ಯರ್ಥಿಗಳನ್ನು ಹೊಸದಾಗಿ ನೇಮಕ ಮಾಡಿಕೊಳ್ಳುತ್ತಾರೆ. ಡಿಗ್ರಿ ಪಾಸಾದವರು ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಪಡೆದು, ಸ್ಪೆಷಲ್ ಟ್ರೈನಿಂಗ್ ನೀಡಲಾಗುತ್ತದೆ. ಆಯ್ಕೆ ಮೂರು ಹಂತಗಳಲ್ಲಿ ನಡೆಯುತ್ತದೆ. ಮೊದಲ ಹಂತದಲ್ಲಿ ಬೇಸಿಕ್ ಟ್ರೈನಿಂಗ್ ಅಂದ್ರೆ ವೆಪನ್ ಬಳಕೆ, ಮೆಂಟಲ್ ಸ್ಟೆಬಿಲಿಟಿ ಅಂದ್ರೆ ಮಾನಸಿಕ ಸದೃಢತೆ, ದೈಹಿಕ ಸಾಮರ್ಥ್ಯದ ಪರೀಕ್ಷೆ ಇರುತ್ತದೆ. 2ನೇ ಹಂತದಲ್ಲಿ ಟೆರರಿಸ್ಟ್ ವಿರೋಧಿ ಕಾರ್ಯಾಚರಣೆ, ಹಾಸ್ಟೇಜ್ ರಕ್ಷಣೆ, ಬಾಂಬ್ ನಿಷ್ಕ್ರಿಯಗೊಳಿಸುವುದು, SNIPER ಶೂಟಿಂಗ್ ತರಹದ ಸ್ಪೆಷಲ್ ಟ್ರೈನಿಂಗ್ ಇರುತ್ತದೆ. ಕೊನೆ ಹಂತದಲ್ಲಿ ಮಾಕ್ ಆಪರೇಷನ್ ಇರುತ್ತದೆ. ಎಲ್ಲಾ ಹಂತದಲ್ಲೂ ಪಾಸಾದವ್ರು ಬ್ಲ್ಯಾಕ್ ಕ್ಯಾಟ್ ಕಮಾಂಡೋ ಆಗಿ ನೇಮಕ ಆಗುತ್ತಾರೆ.
ಇನ್ನೂ ಅಪ್ಲಿಕೇಷನ್ ಹಾಕೋಕೆ ಅಭ್ಯರ್ಥಿಗಳು nsg.gov.in ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು. ಎನ್ ಎಸ್. ಜಿಗೆ ಆಯ್ಕೆ ಆದಲ್ಲಿ, ಮೊದಲ ಹಂತದಲ್ಲಿ ₹70,000 – ₹90,000 ಸಂಬಳ ಇರುತ್ತೆ. ಅಪಾಯಕಾರಿ ಕಾರ್ಯಾಚರಣೆಗಳಲ್ಲಿ ಭಾಗಿಯಾದಾಗ ₹20,000 – ₹30,000 ಹೆಚ್ಚುವರಿ ಭತ್ಯೆ ಸಿಗುತ್ತೆ. ಅನುಭವಿ ಕಮಾಂಡೋಗಳಿಗೆ ₹1,00,000 ವರೆಗೂ ಸಂಬಳ ಸಿಗಬಹುದು. ಮನೆ, ವೈದ್ಯಕೀಯ ಸೇವೆ, ವಾಹನ, ಪಿಂಚಣಿ ಸೌಲಭ್ಯಗಳೂ ಸಿಗುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ