/newsfirstlive-kannada/media/media_files/2025/08/13/darshan-pavitra-gowda-2025-08-13-19-49-24.jpg)
ದರ್ಶನ್, ಪವಿತ್ರ ಗೌಡ
ಕೊಲೆ ಆರೋಪಿ ದರ್ಶನ್ ಗೆ ಮುಂದಿನ 6 ತಿಂಗಳವರೆಗೂ ಜೈಲು ವಾಸ ಗ್ಯಾರಂಟಿ. ಸುಪ್ರೀಂಕೋರ್ಟ್ ನಿಂದ ಜಾಮೀನು ರದ್ದಾದ ಕಾರಣ ದರ್ಶನ್ ತಕ್ಷಣವೇ ಜೈಲಿಗೆ ಹೋಗಲೇಬೇಕು.ತಕ್ಷಣವೇ ಸೆಷನ್ಸ್ ಕೋರ್ಟ್ ಗೆ ಶರಣಾಗಲೇಬೇಕು ಇಲ್ಲವೇ ಪೊಲೀಸರು ಬಂಧಿಸಿ ದರ್ಶನ್ ರನ್ನು ಜೈಲಿಗೆ ಕಳಿಸಬೇಕು. ಬಳಿಕ ಕೆಳ ನ್ಯಾಯಾಲಯದಲ್ಲಿ ಚಾರ್ಜ್ ಷೀಟ್ ಸಲ್ಲಿಕೆಯಾಗಿರುವುದರಿಂದ ದೋಷಾರೋಪಣೆ ಹೊರಿಸಬೇಕು.
ಆದರೇ, ತಮ್ಮ ವಿರುದ್ಧದ ಕೇಸ್ ರದ್ದು ಕೋರಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಲು ದರ್ಶನ್ ಅಂಡ್ ಗ್ಯಾಂಗ್ ನಿರ್ಧಾರ ಕೈಗೊಂಡಿದೆ. ಹೀಗಾಗಿ ಜಾಮೀನು ರದ್ದತಿ ಬಗ್ಗೆ ಸುಪ್ರೀಂಕೋರ್ಟ್ ಆದೇಶ ನೀಡುವವರೆಗೂ ದೋಷಾರೋಪಣೆ ಹೊರಿಸಬೇಡಿ ಎಂದು ದರ್ಶನ್ ಪರ ವಕೀಲರು ಕೆಳನ್ಯಾಯಾಲಯದಲ್ಲಿ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಮೊನ್ನೆ ಕೆಳ ನ್ಯಾಯಾಲಯ ದೋಷಾರೋಪಣೆ ಹೊರಿಸುವ ವಿಚಾರಣೆಯನ್ನ ಮುಂದೂಡಿತ್ತು.
ಈಗ ಸುಪ್ರೀಂಕೋರ್ಟ್ ನಿಂದ ದರ್ಶನ್, ಪವಿತ್ರಾಗೌಡ ಅಂಡ್ ಗ್ಯಾಂಗ್ ನ ಜಾಮೀನು ರದ್ದಾಗಿದೆ. ಹೀಗಾಗಿ ತಕ್ಷಣವೇ ದರ್ಶನ್ ಪರ ವಕೀಲರು ಹೈಕೋರ್ಟ್ ಗೆ ಕೇಸ್ ರದ್ದತಿ ಕೋರಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ. ಹೈಕೋರ್ಟ್ ಕೇಸ್ ರದ್ದುಪಡಿಸಲು ನಿರಾಕರಿಸಿದರೇ, ದರ್ಶನ್ ಗೆ ಕಾನೂನು ಹೋರಾಟದಲ್ಲಿ ಹಿನ್ನಡೆಯಾಗಲಿದೆ.
ಬಳಿಕ ಕೆಳ ನ್ಯಾಯಾಲಯದಲ್ಲಿ ದೋಷಾರೋಪಣೆ ಹೊರಿಸಲಾಗುತ್ತೆ. ಬಳಿಕ ಕೆಳ ನ್ಯಾಯಾಲಯ ಹೊರಿಸಿದ ದೋಷಾರೋಪಣೆ ಆಧಾರದ ಮೇಲೆ ಕೊಲೆ, ಸಾಕ್ಷ್ಯ ನಾಶ, ಕಿಡ್ನ್ಯಾಪ್ ಆರೋಪಗಳ ಬಗ್ಗೆ ವಿಚಾರಣೆ ಆರಂಭ ಆಗಲಿದೆ. ಕೆಳ ನ್ಯಾಯಾಲಯವು ದರ್ಶನ್ ವಿರುದ್ಧ ಯಾವ ಯಾವ ಸೆಕ್ಷನ್ ಗಳಡಿ ವಿಚಾರಣೆ ನಡೆಯಬೇಕೆಂದು ಚಾರ್ಜ್ ಷೀಟ್ ಆಧಾರದ ಮೇಲೆ ದೋಷಾರೋಪಣೆ ಹೊರಿಸುತ್ತೆ. ಈ ಸೆಕ್ಷನ್ ಗಳಡಿ ದರ್ಶನ್ ಅಪರಾಧ ಮಾಡಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಕೆಳ ನ್ಯಾಯಾಲಯದಲ್ಲಿ ವಾದ- ಪ್ರತಿವಾದ ನಡೆಯಲಿದೆ. ಕೆಳ ನ್ಯಾಯಾಲಯದಲ್ಲಿ ಮುಂದಿನ 6 ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸಲು ಪ್ರಾಸಿಕ್ಯೂಷನ್ ನಿರ್ಧಾರ ಕೈಗೊಂಡಿದೆ. ಶೀಘ್ರಗತಿಯಲ್ಲಿ ಈ ಕೇಸ್ ವಿಚಾರಣೆ ನಡೆಸಲು ಪ್ರಾಸಿಕ್ಯೂಷನ್ ನಿರ್ಧರಿಸಿದೆ ಎಂದು ಈಗಾಗಲೇ ಸುಪ್ರೀಂಕೋರ್ಟ್ ಗೂ ಮೌಖಿಕವಾಗಿ ತಿಳಿಸಲಾಗಿದೆ. ಕೆಳ ನ್ಯಾಯಾಲಯದಲ್ಲಿ ಚಾರ್ಜ್ ಷೀಟ್, ದೋಷಾರೋಪಣೆ, ಲಭ್ಯ ಇರುವ ಸಾಕ್ಷ್ಯಗಳ ಆಧಾರದ ಮೇಲೆ ವಿಚಾರಣೆ ನಡೆಯಲಿದೆ. ದರ್ಶನ್ ಕೊಲೆಯಲ್ಲಿ ಭಾಗಿಯಾಗಿದ್ದಾನೋ, ಅಪರಾಧಿಯೋ ಅಲ್ಲವೋ ಎಂಬ ಬಗ್ಗೆ ವಾದ- ಪ್ರತಿವಾದ ನಡೆಯಲಿದೆ. ಮುಂದಿನ 6 ತಿಂಗಳಲ್ಲಿ ವಿಚಾರಣೆ ಪೂರ್ಣವಾಗಿ ಕೆಳ ನ್ಯಾಯಾಲಯ ತೀರ್ಪು ನೀಡಬಹುದು. ಕೆಳ ನ್ಯಾಯಾಲಯದ ತೀರ್ಪಿನಲ್ಲಿ ದರ್ಶನ್ ಅಪರಾಧಿಯೋ ಅಥವಾ ನಿರಾಪರಾಧಿಯೋ ಎಂದು ಮೊದಲಿಗೆ ತೀರ್ಪು ನೀಡುತ್ತೆ. ಒಂದು ವೇಳೆ ಏನಾದರೂ, ನಿರಾಪರಾಧಿ ಎಂದು ತೀರ್ಪು ನೀಡಿದರೇ, ದರ್ಶನ್ ಗೆ ಬಿಗ್ ರಿಲೀಫ್ ಸಿಕ್ಕಂತಾಗುತ್ತೆ. ಅಪರಾಧಿ ಎಂದು ತೀರ್ಪು ನೀಡಿದರೇ, ಎಷ್ಟು ವರ್ಷ ಜೈಲುಶಿಕ್ಷೆ ವಿಧಿಸುತ್ತೆ ಎಂಬ ಕುತೂಹಲ ಕೂಡ ಇರುತ್ತೆ.
ಕೆಳ ನ್ಯಾಯಾಲಯವು ದರ್ಶನ್ ವಿರುದ್ಧ ಆರೋಪ ಸಾಬೀತಾಗಿಲ್ಲ ಎಂದು ನಿರಾಪರಾಧಿ ಎಂದು ಕೂಡ ತೀರ್ಪು ನೀಡಬಹುದು. ಆದರೇ, ಇದೆಲ್ಲವೂ ತೀರ್ಮಾನವಾಗಲು ಮುಂದಿನ 6 ತಿಂಗಳವರೆಗೂ ಸಮಯ ತೆಗೆದುಕೊಳ್ಳುತ್ತೆ. ಅಲ್ಲಿಯವರೆಗೂ ನಟ ದರ್ಶನ್ , ಪವಿತ್ರಾಗೌಡ ಸೇರಿದಂತೆ 7 ಆರೋಪಿಗಳು ಜೈಲಿನಲ್ಲೇ ಇರಬೇಕಾಗುತ್ತೆ. ಸುಪ್ರೀಂಕೋರ್ಟ್ ಈಗ ಜಾಮೀನು ರದ್ದುಪಡಿಸಿರುವುದರಿಂದ ಬೇರೆ ಯಾವ ಕೋರ್ಟ್ ಗಳಲ್ಲೂ ಮೇಲ್ಮನವಿ ಸಲ್ಲಿಸುವ ಪ್ರಶ್ನೆಯೂ ಉದ್ಭವವಾಗಲ್ಲ. ರೀಲೀಫ್ ಪಡೆಯಲು ಕೂಡ ಸಾಧ್ಯವಾಗಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.