2026ರ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನೇನು? ಪುಟಿನ್ ಪತನ, ಏಲಿಯನ್ಸ್ ಜೊತೆ ಮುಖಾಮುಖಿ, ಎಐ ನಿಂದ ಮನುಷ್ಯನ ಕಂಟ್ರೋಲ್‌!!

ಬಾಬಾ ವಂಗಾ ಅಥವಾ ನೋಸ್ಟ್ರಾಡಾಮಸ್ ನುಡಿದ ಭವಿಷ್ಯವಾಣಿ ಇದುವರೆಗೂ ನಿಜವಾಗಿದೆ. ಹೀಗಾಗಿ 2026 ರ ಬಗ್ಗೆ ಬಾಬಾ ವಂಗಾ ಭವಿಷ್ಯವಾಣಿ ಏನೇನು ಎಂಬ ಕುತೂಹಲ ಇದೆ. 2026ರ ಬಗ್ಗೆ ಸಾಕಷ್ಟು ಕುತೂಹಲಕಾರಿ ಭವಿಷ್ಯವನ್ನು ಬಾಂಬಾ ವಂಗಾ ನುಡಿದಿದ್ದಾರೆ. ಹಾಗಾದರೇ, ಏನೇನು ಹೇಳಿದ್ದಾರೆ, ಇಲ್ಲಿದೆ ಓದಿ.

author-image
Chandramohan
ನಿಜವಾಗ್ತಿದೆ ಬಾಬಾ ವಂಗಾ ಭವಿಷ್ಯ..! ಇದಕ್ಕೆ ಬಿಸಿಲಿನ ತೀವ್ರತೆಯೇ ಸಾಕ್ಷಿ, 2024ರ ಬಗ್ಗೆ ಕೊಟ್ಟಿದ್ದ ಎಚ್ಚರಿಕೆ ಏನು?

2026 ರ ಬಗ್ಗೆ ಬಾಬಾ ವಂಗಾ ಭವಿಷ್ಯ ವಾಣಿ ಏನೇನು?

Advertisment

ಹೊಸ ವರ್ಷದಿಂದ ಹೊಸ ರೀತಿಯ ಜೀವನ ಆರಂಭಿಸ್ಬೇಕು.  ಜೀವನ ಶೈಲಿ ಬದಲಿಸಿಕೊಳ್ಳಬೇಕು.  ಗುರಿಯತ್ತ ಸಾಗಬೇಕು  ಅಂತ ನೂರಾರು ಕನಸು ಕಟ್ಟಿಕೊಂಡಿರ ಜನ. ಆ ರೀತಿ ಕನಸು ಕಟ್ಟಿಕೊಂಡವರಲ್ಲಿಯೂ ಕಾಲಜ್ಞಾನಿ ವಂಗಾ ಭವಿಷ್ಯವಾಣಿ ಏನಿರುತ್ತೆ ಅನ್ನೋ ಕುತೂಹಲ ಇರುತ್ತೆ. ಕಾರಣ, ವಂಗಾ ನುಡಿಯೋ ಭವಿಷ್ಯವಾಣಿಗಳು ಬಹುತೇಕ ಸತ್ಯವಾಗ್ತಾವೆ ಅನ್ನೋದಕ್ಕೆ. ಹಾಗಾದ್ರೆ, 2026ಕ್ಕೆ ಸಂಬಂಧ ಪಟ್ಟಂತೆ ವಾಂಗಾ ಭವಿಷ್ಯ ವಾಣಿ ಏನಿದೆ? ಅದ್ರಲ್ಲಿ ಅನ್ಯಗ್ರಹ ಜೀವಿಗಳು ಭೂಮಿಗೆ ಬರೋ ಬಗ್ಗೆ, ಎಐ ದರ್ಬಾರ್‌ ಬಗ್ಗೆ ಉಲ್ಲೇಖ ಬೆಚ್ಚಿ ಬೀಳಿಸ್ತಾ ಇರೋದು ಯಾಕಾಗಿ ಅನ್ನೋದನ್ನ ಹೇಳ್ತೀವಿ ಈ ರಿಪೋರ್ಟ್‌ನಲ್ಲಿ.

ಹೊಸ ವರ್ಷ ಆರಂಭಕ್ಕೆ ಕೌಂಟ್‌ಡೌನ್‌ ಶುರುವಾಯ್ತು ಅಂದ್ರೆ ಸಾಕು... ಎಲ್ಲರ ದೃಷ್ಟಿ ಬಲ್ಗೇರಿಯಾದ ಅತೀಂದ್ರಿಯ ವ್ಯಕ್ತಿ, ಅಂಧೆಯಾದರೂ ಮಹಿಮಾವಂತೆಯಾಗಿರೋ ಬಾಬಾ ವಂಗಾ ಭವಿಷ್ಯ ವಾಣಿ ಮೇಲೆ ಹೋಗುತ್ತೆ. ಆ ಕಾಲಜ್ಞಾನಿ ನುಡಿರೋ ಭವಿಷ್ಯವಾಣಿ ಏನಿದೆ? ಹೊಸ ವರ್ಷಕ್ಕೆ ಏನಾದ್ರೂ ಸುಭ ಸೂಚನೆ ಇದೆಯಾ? ಜಗತ್ತಿಗೆ ಏನಾದ್ರೂ ಗಂಡಾಂತರ ಕಾದಿದೆಯಾ? ಅನ್ನೋ ಕುತೂಹಲದಲ್ಲಿ ಜಗತ್ತು ದೃಷ್ಟಿ ನೆಟ್ಟಿರುತ್ತೆ. ಬಟ್‌, ನಾವ್‌ ಒಂದ್‌ ಮಾತನ್ನ ಹೇಳಿ ಬಿಡ್ತೀವಿ. ಏದೇನ್‌ ಅಂದ್ರೆ, ಈವರೆಗಿನ ಬಾಬಾ ವಂಗಾ ಭವಿಷ್ಯ ವಾಣಿಗೂ? 2026ರ ಭವಿಷ್ಯ ವಾಣಿಗೂ? ಭಾರೀ ವ್ಯತ್ಯಾಸವಿದೆ. ಜಗತ್ತೆ ಬೆಚ್ಚಿ ಬೀಳೋ ಸ್ಫೋಟಕ ವಾಣಿಯಿದೆ. ಮಾನವ ಕುಲ ಇರುತ್ತೋ? ಅಳಿಸಿ ಹೋಗುತ್ತೋ? ಅನ್ನೋ ಆತಂಕ ಸೃಷ್ಟಿಸೋ ಭವಿಷ್ಯವಿದೆ. ಅದನ್ನ ಕೇಳಿ ಜಗತ್ತು ಬೆಚ್ಚಿ ಬಿದ್ದಿದೆ. ಅಬ್ಬಾ! ಹಂಗೆಲ್ಲ ಆಗುತ್ತಾ? ಅಂತ ಅಚ್ಚರಿ ಪಡ್ತಿದೆ. ಹಾಗಾದ್ರೆ, ವಂಗಾ ವಾಣಿಯಲ್ಲಿ ಏನಿದೆ ಅನ್ನೋದನ್ನ ಒಂದೊಂದಾಗಿಯೇ ಹೇಳ್ತಾ ಹೋಗ್ತೀವಿ ಅದ್ಕೂ ಮುನ್ನ ಬಾಬಾ ವಂಗಾ ಯಾರು ಅನ್ನುವುದನ್ನು ವಿವರಿಸುತ್ತೇವೆ. ಓದಿ. 

5079 ವರೆಗೂ ಭವಿಷ್ಯ ನುಡಿದಿದ್ದಾರೆ ಬಾಬಾ ವಂಗಾ!
9/11 ದಾಳಿ ಸೇರಿದಂತೆ ಅದೆಷ್ಟೋ ಭವಿಷ್ಯವಾಣಿ ಸತ್ಯವಾಗಿವೆ!
ಇವತ್ತು ಪ್ರತಿ ವರ್ಷ ಬಾಬಾ ವಂಗಾ ಭವಿಷ್ಯವಾಣಿಗಾಗಿ ಜನ ತುದಿಗಾಲಿನಲ್ಲಿ ಕಾಯ್ತಾ ಇರುತ್ತೆ ಅಂತಾದ್ರೆ ಅವರ ವಾಣಿ ಮೇಲೆ ಜನ ನಂಬಿಕೆ ಇಟ್ಟಿದ್ದಾರೆ. ಅವು ಸತ್ಯವಾಗುತ್ತವೆ ಅಂತನೇ ಅರ್ಥ. ಈ ಹಿಂದೆ ನುಡಿದಿರೋ ಭವಿಷ್ಯವಾಣಿಗಳು ಸತ್ಯವಾಗಿದ್ದು ಜಗತ್ತಿನ ಮುಂದೆ ಇದೆ. ಅಷ್ಟಕ್ಕೂ ಬಾಬಾ ವಂಗಾ ಯಾರು ಅಂದ್ರೆ, 1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿರ್ತಾರೆ. 12ನೇ ವಯಸ್ಸಿನಲ್ಲಿ ಆಕಸ್ಮಿಕ ಘಟನೆಯೊಂದರಿಂದ ಸಂಪೂರ್ಣ ದೃಷ್ಟಿಯನ್ನ ಕಳೆದುಕೊಂಡಿದ್ದಾರೆ. ಆದ್ರೆ, ಭವಿಷ್ಯ ನುಡಿಯೋ ಅಲೌಕಿಕ ಶಕ್ತಿ ಸಿಕ್ಕಿದೆ. ಆ ಸಂದರ್ಭದಲ್ಲಿ ರಾಷ್ಟ್ರನಾಯಕರಿಂದ ಸಾಮಾನ್ಯ ಜನರವರೆಗೂ ಎಲ್ಲರ ಭವಿಷ್ಯ ನುಡಿಯುತ್ತಿದ್ದಳು ಬಾಬಾ ವಂಗಾ. ಇವ್ರು 1996ರಲ್ಲಿ ಮರಣ ಹೊಂದಿದರೂ 5079ರವರೆಗೂ ಯಾವ ವರ್ಷ ಏನಾಗುತ್ತೆ ಅನ್ನೋ ಭವಿಷ್ಯವಾಣಿಯನ್ನ ನುಡಿದು ಹೋಗಿದ್ದಾರೆ. ಪ್ರತಿ ವರ್ಷ ಆರಂಭವಾಗೋದಕ್ಕೂ ಮುನ್ನ ಸಂಬಂಧ ಪಟ್ಟವರು ಬಾಬಾ ವಂಗಾ  ಭವಿಷ್ಯವಾಣಿ ಏನಿದೆ ಅನ್ನೋದನ್ನ ಜಗತ್ತಿಗೆ ತಿಳಿಸ್ತಾರೆ.
ಯಾವುದೇ ಭವಿಷ್ಯವಾಣಿಯನ್ನ ಜನ ನಂಬಬೇಕು ಅಂದ್ರೆ ಅವ್ರು ಈ ಹಿಂದೆ ನುಡಿದಿರೋ ಭವಿಷ್ಯ ಸತ್ಯವಾಗಿರಬೇಕು. ಹಾಗಾದ್ರೆ ಮಾತ್ರ ಜನ ನಂಬೋದಕ್ಕೆ ಶುರು ಮಾಡ್ತಾರೆ. ವಂಬಾ ಬಗ್ಗೆ ಹೇಳ್ಬೇಕು ಅಂದ್ರೆ, ಅಮೆರಿಕಾದ ಮೇಲೆ ನಡೆದಿರೋ 9/11 ದಾಳಿ, ರಷ್ಯಾದ ಕುರ್ಸ್ಕ್ ಜಲಾಂತರ್ಗಾಮಿ ಅಪಘಾತ, ಇಂದಿರಾ ಗಾಂಧಿ ಹತ್ಯೆ, ಒಬಾಮಾ ಅಧ್ಯಕ್ಷರಾಗುವುದನ್ನ ನುಡಿದಿದ್ರು. ಅದೆಲ್ಲವೂ ಸತ್ಯವಾಗಿದೆ. ಹೀಗಾಗಿ ಇಂದಿಗೂ ಬಾಬಾ ವಂಗಾ ವಾಣಿ ಅಂದ್ರೆ ಜಗತ್ತು ಅದ್ರಲ್ಲಿ ಸತ್ಯವಿದೆ ಅಂತ ನಂಬುತ್ತೆ. ಹಾಗೇ 2026ರ ಭವಿಷ್ಯವಾಣಿ ಏನಿದೆ ಅನ್ನೋದನ್ನ ಹೇಳ್ತೀವಿ. 

BABA VANGA 2026 PREDICTIONS





2026 ಭವಿಷ್ಯ-01
ಭೂಮಿಗೆ ಅನ್ಯಗ್ರಹ ನೌಕೆ, ಏಲಿಯನ್ಸ್‌ ಜೊತೆ ಮುಖಾಮುಖಿ! 
2026ಕ್ಕೆ ಸಂಬಂಧಿಸಿದಂತೆ ಬಾಬಾ ವಂಗಾ ನುಡಿದಿರೋ ಭವಿಷ್ಯವಾಣಿಯಲ್ಲಿ ಇಡೀ ಜಗತ್ತಿನ ಗಮನ ಸೆಳೆಯುತ್ತಿರೋದು ಅಂದ್ರೆ ಇದೇ ನೋಡಿ. ಇಷ್ಟು ವರ್ಷಗಳ ಕಾಲ ಅನ್ಯಗ್ರಹದಲ್ಲಿ ಜೀವಿಗಳು ಇದ್ದಾವೆ... ಅವುಗಳು ಮಾನವನ ಜೊತೆ ಸಂಪರ್ಕ ಸಾಧಿಸೋದಕ್ಕೆ ನೋಡ್ತಾ ಇದ್ದಾವೆ. ಆಗಾಗ ಆಗಸದಲ್ಲಿ ಕಾಣಿಸ್ಕೊಳ್ತಾವೆ ಅನ್ನೋ ಮಾತುಗಳು ಕೇಳಿಬರ್ತಾ ಇದ್ದವು. ಹಾಗೇ ಅಮೆರಿಕಾದಲ್ಲಿ ಏಲಿಯನ್ಸ್‌ಗಳ ಜೊತೆ ಸಂಪರ್ಕ ಸಾಧಿಸಲಾಗಿದೆ. ಏರಿಯಾ 51 ರಲ್ಲಿ ಅಂತಹವೊಂದ್‌ ಪ್ರಯತ್ನ ನಡೀತಾ ಇವೆ ಅನ್ನೋ ಮಾತು ಇತ್ತು. ಆದ್ರೆ, ಅದ್ಯಾವುದಕ್ಕೂ ಖಚಿತತೆ ಅನ್ನೋದ್‌ ಇರ್ಲೇ ಇಲ್ಲ. ಯಾಕಂದ್ರೆ, ಜಗತ್ತು ನಂಬುವಂತಹ ದಾಖಲೆಯನ್ನ ಯಾವುದೇ ಸಂಶೋಧಕರು ನೀಡಿಲ್ಲ. ಹೀಗಾಗಿ ಅನ್ಯಗ್ರಹ ಜೀವಿಗಳು ಇದ್ದಾವೋ? ಇಲ್ವೋ ಅನ್ನೋ ಅನುಮಾನ ಇಂದಿಗೂ ಇದೆ. ಬಟ್‌, ಬಾಬಾ ವಂಗಾ ಅವರ ಭವಿಷ್ಯವಾಣಿ ಪ್ರಕಾರ 2026 ರಲ್ಲಿ ಮಾನವನಿಗೂ? ಏಲಿಯನ್ಸ್‌ಗೂ? ಮುಖಾಮುಖಿ ಭೇಟಿಯಾಗುತ್ತೆ. ಅನ್ಯಗ್ರಹದಿಂದ ದೈತ್ಯಾಗ್ರಹ ನೌಕೆಯೊಂದು ಭೂಮಿಗೆ ಬಂದು ಇಳಿಯುತ್ತೆ.
ಯೆಸ್‌... ವಂಗಾ ಭವಿಷ್ಯವನ್ನ ಇನ್ನೊಮ್ಮೆ ಹೇಳ್ತೀವಿ ಕೇಳಿ... ಅನ್ಯಗ್ರಹದ ನೌಕೆಯೊಂದು ಭೂಮಿ ಮೇಲೆ ಇಳಿಯುತ್ತೆ.  ಅದ್ರಿಂದ ಏಲಿಯನ್ಸ್‌ಗಳು ಇಳಿದು ಬರಲಿದ್ದು... ಮಾನವನಿಗೂ ಏಲಿಯನ್ಸ್‌ಗೂ ಮುಖಾಮುಖಿ ಭೇಟಿಯಾಗುತ್ತೆ. ಇಷ್ಟು ವರ್ಷಗಳ ಕಾಲ ಕೇವಲ ಸಿನಿಮಾದಲ್ಲಿ ಇಂತಾ ಸೀನ್‌ಗಳನ್ನ ಜನ ನೋಡಿ ಏಂಜಾಯ್‌ ಮಾಡಿದ್ದಾರೆ. ಆದ್ರೆ ಅನ್ಯಗ್ರಹ ಜೀವಿಗಳು ಇದ್ದಾವೆ ಅನ್ನೋದನ್ನ ಬಹುತೇಕ ಜನ ನಂಬೋದಿಲ್ಲ. ಆದ್ರೆ, 2026 ರಲ್ಲಿ ದೈತ್ಯಾಕಾರದ ಅನ್ಯಗ್ರಹ ನೌಕೆ ಬಂದು ಇಳಿಯೋದನ್ನು ನೈಜವಾಗಿ ನೋಡೋ ಕಾಲಾವಕಾಶ ಬರಲಿದೆ ಅನ್ನೋದು ಭವಿಷ್ಯವಾಣಿ. ಒಂದ್‌ ವೇಳೆ ವಂಗಾ ಹೇಳಿರೋ ಈ ಭವಿಷ್ಯವಾಣಿ ನಿಜವಾಗಿದ್ದೇ ಹೌದು ಅಂತಾದ್ರೆ ಬ್ರಹ್ಮಾಂಡದ ಬಗ್ಗೆ ಇರೋ ಜನರ ಕಲ್ಪನೆಯೇ ಬದಲಾಗಿ ಹೋಗುತ್ತೆ. ಇಷ್ಟು ವರ್ಷಗಳ ಕಾಲ ಜೀವಿ ಇರೋದು ಭೂಮಿ ಮೇಲೆ ಮಾತ್ರ ಅನ್ನೋ ಬಲವಾದ ನಂಬಿಕೆ ಇತ್ತು. ಹೀಗಾಗಿ ಅನ್ಯಗ್ರಹ ಜೀವಿಗಳು ಬಂದ್ವು ಅಂದ್ರೆ ಬೇರೆ ಗೃಹದಲ್ಲಿಯೂ ಜೀವಿಗಳು ಇದ್ದಾವೆ. ಅವು ಮನುಷ್ಯರಿಗಿಂತ ಬುದ್ಧಿವಂತವು ಅನ್ನೋದ್‌ ಸಾಬೀತಾಗುತ್ತೆ. ಅದ್ರಿಂದ ಸಹಜವಾಗಿ ಬ್ರಹ್ಮಾಂಡವನ್ನ ನೋಡೋ ದೃಷ್ಟಿಕೋನವೂ ಬದಲಾಗುತ್ತೆ. 
ಏಲಿಯನ್ಸ್‌ಗಳು ಬರ್ತಾವೆ, ಮನುಷ್ಯನ ಜೊತೆ ಮುಖಾಮುಖಿಯಾಗುತ್ತೆ ಅನ್ನೋ ಭವಿಷ್ಯ ಏನೋ ಇದೆ. ಆದ್ರೆ, ಹಾಗೇ ಬಂದ ಏಲಿಯನ್ಸ್‌ಗಳು ಭೂಮಿ ಮೇಲೆ ಸಂಘರ್ಷಕ್ಕೆ ಇಳಿತಾವೋ? ಇಲ್ಲವೇ  ಸಂಧಾನಕ್ಕೆ ಬರ್ತಾವೋ? ಅನ್ನೋದು ಮುಖ್ಯವಾಗುತ್ತೆ. ಹಾಗೇನಾದ್ರೂ ಸಂಘರ್ಷಕ್ಕೆ ಇಳಿದವು  ಅಂದ್ರೆ ಮಾನವ ಕುಲದ ಗ್ರಹಚಾರ ಕೆಡ್ತು ಅಂತಾನೇ ಅರ್ಥ. ಏನೇ ಹೇಳಿ ಇದೊಂದು ರೀತಿಯಲ್ಲಿ ಕುತೂಹಲಕಾರಿ ಭವಿಷ್ಯ ವಾಣಿ. ಇದು ಸತ್ಯವಾಗುತ್ತಾ? ಅನ್ನೋದನ್ನ ಕಾದು ನೋಡ್ಬೇಕು. ಈಗಾಗಲೇ ಕೆಲವು ವರ್ಷಗಳಿಂದ ಅಮೆರಿಕಾದ ವಿಜ್ಞಾನಿಗಳು ಏಲಿಯನ್ಸ್‌ಗಳ ಸಂಪರ್ಕದಲ್ಲಿದ್ದಾರೆ.  ಮುಖಾಮುಖಿ ಭೇಟಿಗೂ  ಪ್ಲ್ಯಾನ್‌ ಮಾಡ್ತಿದ್ದಾರೆ ಅನ್ನೋ ಸ್ಫೋಟಕ ಸುದ್ದಿಗಳು ಹೊರಬರ್ತಾ ಇದ್ದವು.  ಆದ್ರೆ, ಅದ್ಯಾವುದಕ್ಕೂ ಖಚಿತತೆ ಅನ್ನೋದು ಇಲ್ಲ. 


2026 ಭವಿಷ್ಯ-02
ಮೂರನೇ ಮಹಾಯುದ್ಧ, ಜಾಗತಿಕ ಅಶಾಂತಿ!
2026ಕ್ಕೆ ಸಂಬಂಧ ಪಟ್ಟಂತೆ ಕಾಲಜ್ಞಾನಿ ಬಾಬಾ ವಂಗಾ ನುಡಿದಿರೋ ಭವಿಷ್ಯ ವಾಣಿಯಲ್ಲಿ ಮಹತ್ವದ್ದು ಅಂದ್ರೆ ಮೂರನೇ ಮಹಾಯುದ್ಧವಾಗುತ್ತೆ, ಜಾಗತಿಕ ಅಶಾಂತಿ ಸೃಷ್ಟಿಯಾಗುತ್ತೆ ಅನ್ನೋದು. ಮೊದಲ ಎರಡು ಮಹಾಯುದ್ಧದಲ್ಲಿ ಜಗತ್ತು ಹೇಗೆ ನಲುಗಿ ಹೋಗಿತ್ತು.  ಅದೆಷ್ಟು ಸಾವು ನೋವು ಸಂಭವಿಸಿತ್ತು  ಅನ್ನೋದ್‌ ಇತಿಹಾಸದ ಪುಟಗಳನ್ನ ತಿರುವಿ ಹಾಕಿದ್ರೆ ಕಣ್ಣಿಗೆ ಬೀಳುತ್ತೆ. ಅದನ್ನ ನೋಡಿದ್ರೆನೇ ಇನ್ಮೇಲೆ ಮಹಾಯುದ್ಧ ನಡೆಯೋದು ಬೇಡಪ್ಪ ಅಂತ ಜನ ಅಂದುಕೊಳ್ತಾರೆ. ಆದ್ರೆ, 2ನೇ ಮಹಾಯುದ್ಧ ಮುಗಿದ ಕೆಲವು ವರ್ಷಗಳ ನಂತರ ಮೂರನೇ ಮಹಾಯುದ್ಧದ ಗುಮ್ಮ ಆಗಾಗ ಕೇಳಿಬರ್ತಾ ಇದೆ. ಯಾವುದೇ ಎರಡು ಪ್ರಬಲ ದೇಶಗಳ ನಡುವೆ ಯುದ್ಧ ಶುರುವಾಯ್ತು ಅಂದ್ರೆ ಮೂರನೇ ಮಹಾಯುದ್ಧಕ್ಕೆ ನಾಂದಿ ಅನ್ನೋ ಟಾಕಿಂಗ್‌ ಶುರುವಾಗುತ್ತೆ. ಆದ್ರೆ, ಇಲ್ಲಿಯವರೆಗೂ ಮೂರನೇ ಮಹಾಯುದ್ಧವಾಗಿಲ್ಲ. ಹಾಗೊಂದ್‌ ವೇಳೆ ಆಯ್ತು ಅಂದ್ರೆ ಕನಿಷ್ಠ ಅರ್ಧ ಜಗತ್ತು ನಾಶ ಆಗೋದು ಗ್ಯಾರಂಟಿ.
ಹಾಗಾದ್ರೆ ಮಹಾಯುದ್ಧವಾದ್ರೆ ಹೇಗೆ ಆಗುತ್ತೆ,  ಯಾರ್‌ ಯಾರ್‌ ನಡುವೆ ಶುರುವಾಗುತ್ತೆ ಅನ್ನೋ ಪ್ರಶ್ನೆ ಇದೆ. ಸದ್ಯ ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಇನ್ನೂ ನಡೀತಾ ಇದೆ. ಇಸ್ರೇಲ್‌-ಪ್ಯಾಲೆಸ್ಟೈನ್‌ ಯುದ್ಧವೂ ತಣ್ಣಗಾಗಿಲ್ಲ. ಆದ್ರೆ, ಅವುಗಳಿಂದಲೇ ಮೂರನೇ ಮಹಾಯುದ್ಧವಾಗುತ್ತೆ ಅನ್ನೋ ಲೆಕ್ಕಾಚಾರ ಇಲ್ಲ. ಒಂದ್‌ ವೇಳೆ ಅಮೆರಿಕಾ ಮತ್ತು ರಷ್ಯಾ ನಡುವಿನ ಸಂಘರ್ಷ ತಾರಕಕ್ಕೇರಿತು  ಅಂದರೇ,  ಅಮೆರಿಕಾದ ಜೊತೆ ಒಂದಷ್ಟು ರಾಷ್ಟ್ರಗಳು, ರಷ್ಯಾ ಜೊತೆ ಚೀನಾ ಸೇರಿದಂತೆ ಕೆಲವು ಪ್ರಬಲ ರಾಷ್ಟ್ರಗಳು ಸೇರಿಕೊಂಡು ಯುದ್ಧ ಮಾಡಿದ್ವು ಅಂದ್ರೆ ಮೂರನೇ ಮಹಾಯುದ್ಧ ಆಗೋದು ಗ್ಯಾರಂಟಿ. ಸದ್ಯಕ್ಕೆ ಆ ಪರಿಸ್ಥಿತಿ ಕಾಣಿಸ್ತಿಲ್ಲ. ಆದ್ರೆ, ವಂಗಾ ಭವಿಷ್ಯವಾಣಿಯನ್ನ ತಳ್ಳಿ ಹಾಕುವಂತೆಯೂ ಇಲ್ಲ.  
ತೈವಾನ್‌ ಮೇಲೆ ಚೀನಾ ಆಕ್ರಮಣ ಮಾಡ್ತಾನೇ ಬರ್ತಿದೆ. ಹೀಗಾಗಿ ಅದೇನಾದ್ರೂ ವಿಕೋಪಕ್ಕೆ ಹೋಯ್ತು ಅಂದ್ರೆ ತೈವಾನ್‌ ಪರ ಅಮೆರಿಕಾ ಸೇರಿದಂತೆ ಕೆಲವು ಪ್ರಬಲ ರಾಷ್ಟ್ರಗಳು ಎಂಟ್ರಿಯಾಗೋ ಸಾಧ್ಯತೆ ಇರುತ್ತೆ. ಹಾಗೇನಾದ್ರೂ ಆದ್ರೆ ಅದು ಸಹ ಮೂರನೆ ಮಹಾಯುದ್ಧಕ್ಕೆ ಅಡಿಪಾಯ ಹಾಕಬಹುದು. ಒಂದೆಂತೂ ಸತ್ಯ ಮೂರನೆ ಮಹಾಯುದ್ಧ ಶುರುವಾಯ್ತು ಅಂದ್ರೆ ಅಣು ಬಾಂಬ್‌ ದಾಳಿಗಳು ನಡೆಯೋದು ಗ್ಯಾರಂಟಿ. ಅದ್ರಿಂದ ಅಪಾರ ಪ್ರಮಾಣದಲ್ಲಿ ಸಾವು ನೋವು ಸಂಭವಿಸುತ್ತೆ... ಜಗತ್ತಿನ ಅವನಿಗೂ ಆವತ್ತೇ ಮುಹೂರ್ತ ಇಟ್ಟಂತಾಗುತ್ತೆ. ಇದರ ಜೊತೆ ಎಐ ಬಗ್ಗೆ, ಪ್ರಕೃತಿ ವಿಕೋಪದ ತಾಂಡವದ ಬಗ್ಗೆ ವಂಗಾ ನುಡಿದಿರೋ ಭವಿಷ್ಯವಾಣಿ... ನಿಜಕ್ಕೂ ಜಗತ್ತನ್ನೇ ನಿಬ್ಬೆರಗಾಗಿಸುತ್ತೆ. 
ಅನ್ಯಗ್ರಹ ಜೀವಿಗಳು ಭೂಮಿಗೆ ಬರ್ತಾವೋ ಇಲ್ವೋ? ಆದ್ರೆ, ವಂಗಾ ಭವಿಷ್ಯವಾಣಿಯಿಂದ ಜಗತ್ತಿನಲ್ಲಿ ಬಿಸಿ ಬಿಸಿ ಚರ್ಚೆಯಾಗ್ತಾ ಇರೋದು ಸತ್ಯ. ಹಾಗೇ ಎಐ ಮನುಷ್ಯನ ನಿಯಂತ್ರಣ ಕಳೆದುಕೊಂಡು ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತೆ ಅಂತ ಹೇಳಿದ್ದು, ಭೀಕರ ಪ್ರಕೃತಿ ವಿಕೋಪದ ಸೂಚನೆ ನೀಡಿದ್ದು ಮಾನವ ಕುಲ ಹತ್ತಾರು ಬಾರಿ ಯೋಚನೆ ಮಾಡುವಂತೆ ಮಾಡಿದೆ.
2026ರ ಭವಿಷ್ಯ-03
AI ಮೇಲೆ ಮಾನವನ ನಿಯಂತ್ರಣ ಕೈತಪ್ಪುತ್ತೆ! ಅಪಾಯ ಪಕ್ಕಾನಾ?
ವಂಗಾ ನುಡಿರೋ ಭವಿಷ್ಯ ವಾಣಿಯಲ್ಲಿ 5079ನೇ ವರ್ಷದವರೆಗೂ ಇದೆ. ಜಗತ್ತು ಯಾವುದೇ ಹೊಸ ಸಂಶೋಧನೆ ಮಾಡ್ಬಹುದು. ಅದರಿಂದ ಏನ್‌ ಬೇಕಾದ್ರೂ ಸಾಧನೆ ಮಾಡ್ಬಹುದು. ನವ ಯುಗವನ್ನ ಕಾಣ್ತಿದ್ದೇವೆ ಅಂತ ಖುಷಿ ಪಡ್ಬಹುದು. ಆದ್ರೆ, ಅಚ್ಚರಿಯಂತೆ ಹೊಸ ಆವಿಸ್ಕಾರದ ಬಗ್ಗೆ, ಅದ್ರಿಂದ ಆಗೋ ಅಪಾಯದ ಬಗ್ಗೆಯೂ ವಂಗಾ ಭವಿಷ್ಯವಾಣಿ ಪ್ರತಿವರ್ಷವೂ ಕಾಣಿಸ್ತಿದೆ. 2026ಕ್ಕೆ ಸಂಬಂಧ ಪಟ್ಟಂತೆ ಭವಿಷ್ಯವಾಣಿಯಲ್ಲಿ ಮಹತ್ವದ ವಿಚಾರ ಅಂದ್ರೆ ಎಐ ಕ್ರಾಂತಿಕಾರಿ ಹಜ್ಜೆಯ ಬಗ್ಗೆ, ಹೌದು, ಇವತ್ತು ಜಗತ್ತು ಎಐ ಮೇಲೆ ತುಂಬಾನೇ ಡಿಫೆಂಡ್‌ ಆಗಿದೆ. ಏನೇ ಆಗ್ಬೇಕೂ ಅಂದ್ರೂ ಜನ ಎಐ ಮೊರೆ ಹೋಗ್ತಿದ್ದಾರೆ. ಪರಿಣಾಮ ಜನ ಉದ್ಯೋಗವಕಾಶವನ್ನ ಕೆಳೆದುಕೊಳ್ತಾ ಇರೋದು ಕಾಣಿಸ್ತಿದೆ. ಯಾಕಂದ್ರೆ, ನೂರಾರು ಜನ ಮಾಡೋದನ್ನ ಎಐ ಒಂದೇ ಕೆಲವೇ ನಿಮಿಷಗಳಲ್ಲಿ ಮಾಡಿ ಮುಗ್ಸುತ್ತೆ. ಆದ್ರೆ, ಇದೇ ಎಐಯಿಂದ ಅಪಾಯವಿದೆ ಅನ್ನೋದನ್ನ ವಂಗಾ ಭವಿಷ್ಯವಿದೆ. 


ವಂಗಾ ವಾಣಿ!
2026ಕ್ಕೆ AI ನಲ್ಲಿ ಐತಿಹಾಸಿಕ ತಿರುವು ಗ್ಯಾರಂಟಿ!
AI ಮೇಲಿನ ಮಾನವನ ನಿಯಂತ್ರಣ ಕೈತಪ್ಪುತ್ತೆ!
ಮಾನವನ ಹಸ್ತಕ್ಷೇಪವನ್ನ ತಪ್ಪಿಸಿಕೊಳ್ಳುತ್ತೆ AI
ಸ್ವತಂತ್ರ ನಿರ್ಧಾರ ಕೈಗೊಳ್ಳಲು ಶುರು ಮಾಡುತ್ತೆ!
ತಾಂತ್ರಿಕ ಪ್ರಗತಿಯಾಗಿದ್ರೂ ಭವಿಷ್ಯದಲ್ಲಿ ಅಪಾಯ!
ಭಾರೀ ಪ್ರಮಾಣದಲ್ಲಿ ಉದ್ಯೋಗ ಕಳೆದುಕೊಳ್ತಾರೆ!
2026 ರಲ್ಲಿ ಎಐ ನಲ್ಲಿ ಐತಿಹಾಸಿಕ ತಿರುವು ಗ್ಯಾರಂಟಿ ಅನ್ನೋದನ್ನ ವಂಗಾ ಭವಿಷ್ಯವಾಣಿಯಲ್ಲಿ ಕಾಣಿಸ್ತಿದೆ. ಇಷ್ಟು ವರ್ಷಗಳ ಕಾಲ ಮಾನವನ ನಿಯಂತ್ರದಲ್ಲಿ ಎಐ ಇತ್ತು. ಆದ್ರೆ, ಇನ್ಮೇಲೆ ಎಐ ಮಾನವ ನಿಯಂತ್ರಣವನ್ನ ಕಳೆದುಕೊಳ್ಳುತ್ತೆ. ಮಾನವನ ಹಸ್ತಕ್ಷೇಪ ಇಲ್ಲದೇ ವರ್ಕ್‌ ಮಾಡೋದಕ್ಕೆ ಶುರು ಮಾಡುತ್ತೆ. ಯಾವುದೇ ವಿಚಾರದಲ್ಲಿ ಅದು ಸ್ವತಂತ್ರವಾದ ನಿರ್ಧಾರವನ್ನ ಕೈಗೊಳ್ಳಲು ಸ್ಟಾರ್ಟ್‌ ಮಾಡುತ್ತೆ. ಇದೊಂದು ರೀತಿಯಲ್ಲಿ ತಾಂತ್ರಿಕ ಪ್ರಗತಿ ಅಂತ ನಮ್ಗೂ ನಿಮ್ಗೂ ಕಾಣಿಸ್ಬಹುದು. ಆದ್ರೆ, ಭವಿಷ್ಯದಲ್ಲಿ ಮಾನವ ಕುಲಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಇನ್ನೊಂದು ಮಹತ್ವದ ವಿಚಾರ ಅಂದ್ರೆ, ಎಐ ಯಿಂದಾಗಿ ಜಗತ್ತಿನಲ್ಲಿ ಭಾರೀ ಪ್ರಮಾಣದಲ್ಲಿ ಜನ ಉದ್ಯೋಗವನ್ನ ಕಳೆದುಕೊಳ್ಳುತ್ತಾರೆ  ಅಂತ ಹೇಳಲಾಗ್ತಿದೆ.


ತಾಂತ್ರಿಕವಾಗಿ ನೋಡಿದಾಗ ಎಐ ಸಂಶೋಧನೆ ಅದ್ಭುತ ಕ್ರಾಂತಿ ಅನ್ನೋದ್ರಲ್ಲಿ ಡೌಟೇ ಇಲ್ಲ. ಯಾಕಂದ್ರೆ, ಅಸಾಧ್ಯವಾದ್ದದ್ದನ್ನ ಎಐ ಮೂಲಕ ಸಾಧ್ಯ ಮಾಡೋದಕ್ಕೆ ಸಾಧ್ಯವಿದೆ. ಮನುಷ್ಯರಿಗಿಂತ ಹತ್ತಾರು ಪಟ್ಟು ಹೆಚ್ಚಿಗೆ ಬುದ್ಧಿವಂತಿಕೆ ಉಪಯೋಗಿಸಿ ಎಐ ವರ್ಕ್‌ ಮಾಡುತ್ತೆ. ಹೀಗಾಗಿ ಜಗತ್ತು ಈಗಾಗಲೇ ಎಐ ಮಯವಾಗಿ ಬಿಟ್ಟಿದೆ. ಅದರಿಂದ ನಿಧಾನಕ್ಕೆ ಜನ ಉದ್ಯೋಗವನ್ನ ಕಳೆದ್ಕೊಳ್ತಾ ಇದ್ದಾರೆ. ಆದ್ರೆ, 2026 ರಲ್ಲಿ ಭಾರೀ ಪ್ರಮಾಣದಲ್ಲಿ ಉದ್ಯೋಗ ನಷ್ಟವಾಗುತ್ತೆ ಅನ್ನೋದ್‌ ಕನ್ಫರ್ಮ್‌. ಬಟ್‌, ಇನ್ನೊಂದ್‌ ಅಪಾಯಕಾರಿ ಅಂದ್ರೆ ಎಐ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತೆ ಅನ್ನೋದು. ಹೌದು, ಇಲ್ಲಿಯವರೆಗೂ ಏನೇ ಕೆಲ್ಸ ಮಾಡ್ಬೇಕು ಅಂದ್ರೂ ಮಾನವ ಏನು ಇನ್‌ಫುಟ್‌ ಕೊಡ್ತಾ ಇದ್ನೋ? ಅದನ್ನೆ ಎಐ ಮಾಡ್ತಾ ಇತ್ತು. ಅಂದ್ರೆ, ಸಂಪೂರ್ಣವಾಗಿ ಮಾನವನ ನಿಯಂತ್ರಣದಲ್ಲಿತ್ತು. ಆದ್ರೆ, 2026 ರಲ್ಲಿ ಮಾನವನ ನಿಯಂತ್ರಣ ಕಳೆದುಕೊಂಡು  ತಾನೇ ನಿರ್ಧಾರ ಕೈಗೊಳ್ಳುತ್ತೆ ಅಂತ ಭವಿಷ್ಯವಾಣಿ ಹೇಳ್ತಿದೆ. ಹಾಗೇನಾದ್ರೂ ಆಯ್ತು ಅಂದ್ರೆ ಮಾನವ ಕುಲಕ್ಕೆ ಕಂಟಕ ಎದುರಾಯ್ತು ಅಂತಾನೇ ಅರ್ಥ. ಯಾಕಂದ್ರೆ, ತಂತ್ರಜ್ಞಾನಕ್ಕೆ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ ಶುರುವಾದ್ರೆ ಅವುಗಳು ಯಾವ ನಿರ್ಧಾರ ಬೇಕಾದ್ರೂ ಕೈಗೊಳ್ಳಬಹುದು. ಆವಾಗ ಮಾನವನೇ ಇಕ್ಕಟ್ಟಿಗೆ ಸಿಲುಕಬೇಕಾಗುತ್ತೆ. ಈ ನಿಟ್ಟಿನಲ್ಲಿ ವಿಜ್ಞಾನಿಗಳು, ತಂತ್ರಜ್ಞಾನಿಗಳು ಯೋಚಿಸಿ ಹೆಜ್ಜೆ ಇಡ್ಬೇಕು.


2026ರ ಭವಿಷ್ಯ-04
ನೈಸರ್ಗಿಕ ವಿಕೋಪದ ತಾಂಡವೇ ಕಾಣಿಸಿಕೊಳ್ಳುತ್ತೆ!
ನೈಸರ್ಗಿಕ ವಿಕೋಪ ಅನ್ನೋದು ಈ ಜಗತ್ತಿಗೆ ಹೊಸ ವಿಷ್ಯ ಅಲ್ಲವೇ ಅಲ್ಲ. ಅದೆಷ್ಟೋ ಭೀಕರ ಭೂಕಂಪವನ್ನ ನಮ್ಮ ದೇಶವೂ ನೋಡಿದೆ,  ಜಗತ್ತು ನೋಡಿದೆ... ಹಾಗೇ ಭೂಕುಸಿತ... ಭಾರಿ ಪ್ರಮಾಣದ ಪ್ರವಾಹ, ಸುನಾಮಿ,  ಜ್ವಾಲಾಮುಖಿ ಸ್ಫೋಟ  ಇದೆಲ್ಲವೂ ಆಗ್ತಾನೇ ಇರುತ್ತೆ. ಒಂದು ವರ್ಷ ಅಂತಹ ದುರಂತ ಕಾಣಿಸಿಕೊಂಡಿಲ್ಲ ಅಂದ್ರೆ ಇನ್ನೊಂದು ವರ್ಷದಲ್ಲಿ ಫಿಕ್ಸ್‌ ಅಂತಾನೇ ಅರ್ಥ. ಆದ್ರೆ, ಪ್ರಾಕೃತಿಕ ವಿಕೋಪಗಳು ಮಾನವ ಕುಲಕ್ಕೆ ಅಪಾಯಕಾರಿ. ಅವು ಮಾನವನನ್ನ ಸರ್ವನಾಶ ಮಾಡೋ ಸಾಮರ್ಥ್ಯವನ್ನ ಹೊಂದಿವೆ ಅನ್ನೋದನ್ನ ನಾವು ನೀವು ಮರೆಯೋ ಹಾಗೆ ಇಲ್ಲವೇ ಇಲ್ಲ. ಈ ಬಾರಿ ಬಾಬಾ ವಂಗಾ ಭವಿಷ್ಯವಾಣಿಯಲ್ಲಿ ಪ್ರಕೃತಿ ವಿಕೋಪದ ಬಗ್ಗೆಯೂ ಉಲ್ಲೇಖವಿದೆ.
2026 ರಲ್ಲಿ ಭಾರೀ ಪ್ರಮಾಣದಲ್ಲಿ ಪ್ರಕೃತಿ ವಿಕೋಪಗಳು ಕಾಣಿಸಿಕೊಳ್ಳುತ್ತವೆ ಅಂತ ನುಡಿಯಲಾಗಿದೆ. ಹೀಗಾಗಿ 2026 ರಲ್ಲಿ ಕೆಲವು ಪ್ರದೇಶದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಬಹುದು. ಅದರಿಂದ ಊರು ಕೇರಿ ಮುಳುಗಿ ಸಾವು ನೋವುಗಳು ಸಂಭವಿಸ್ಬಹುದು.. ಮನೆ ಮಠ ಜನ ಕೊಚ್ಚಿಕೊಂಡು ಹೋಗಬಹುದು. ಹಾಗೇ ಜ್ವಾಲಾಮುಖಿ ಸ್ಫೋಟ, ಭೂಕಂಪನದ ಬಗ್ಗೆಯೂ ಜನ ಎಚ್ಚರಿಕೆಯಿಂದ ಇರಬೇಕು. ಪ್ರಕೃತಿ ವಿಕೋಪಗಳು ಹೇಳಿ ಕೇಳಿ ಬರೋದಿಲ್ಲ ಅನ್ನೋದು ಸತ್ಯ. ಆದ್ರೆ, ಅದು ಬಂದಾಗ ಜನರನ್ನ ರಕ್ಷಣೆ ಮಾಡೋ ಮುಂಜಾಗೃತ ಕ್ರಮಗಳನ್ನ ಕೈಗೊಳ್ಳಬೇಕಾಗುತ್ತೆ.

BABA VANGA 2026 PREDICTIONS (1)





ವಂಗಾ ವಾಣಿ!
2026ರ ಭವಿಷ್ಯ-05
ಆರ್ಥಿಕ ಕುಸಿತ ಕಾಣಿಸಿಕೊಳ್ಳುತ್ತೆ... ಇನ್ನೇನ್‌ ಆಗುತ್ತೆ?
ಬಾಬಾ ವಂಗಾ ನುಡಿದಿರೋ ಇನ್ನೊಂದು ಸ್ಫೋಟಕ ಭವಿಷ್ಯವಾಣಿ ಅಂದ್ರೆ ಅದು ಆರ್ಥಿಕ ಕುಸಿತ, ಕರೆನ್ಸಿ ಮೌಲ್ಯ ಕುಸಿತ, ತೈಲ ದರ ಸ್ಥಿರದ ಬಗ್ಗೆ. ಇದರಲ್ಲಿ ಆಘಾತ ಮೂಡಿಸ್ತಾ ಇರೋದು ಆರ್ಥಿಕ ಕುಸಿತ. ಈಗಾಗಲೇ ಶ್ರೀಲಂಕಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ ಸೇರಿದಂತೆ ವಿವಿಧ ದೇಶದಲ್ಲಿ ಆರ್ಥಿಕ ಕುಸಿತದಿಂದ ದಂಗೆಯಾಗಿದ್ದನ್ನ, ಅಲ್ಲಿಯ ಜನ ತುತ್ತು ಅನ್ನಕ್ಕೂ ಪರದಾಟ ಮಾಡ್ತಿರೋದನ್ನ ನೋಡಿದ್ದೇವೆ. ಇಂದಿಗೂ ಶ್ರೀಲಂಕಾ ಮತ್ತು ಪಾಕಿಸ್ತಾನಕ್ಕೆ ಸುಧಾರಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಪ್ರಕೃತಿ ವಿಕೋಪಗಳು ಅದೆಷ್ಟು ಅಪಾಯಕಾರಿಯೋ? ಹಾಗೇ ಆರ್ಥಿಕ ಕುಸಿತವೂ ಅಪಾಯಕಾರಿ. ಪ್ರಕೃತಿ ವಿಕೋಪಗಳು ಕಾಣಿಸ್ಕೊಂಡಾಗ ಜನ ಏಕಾಏಕಿ ಜೀವ ಬಿಡೋ ಪ್ರಸಂಗ ಎದುರಾಗುತ್ತೆ. ಆದ್ರೆ, ಆರ್ಥಿಕ ಕುಸಿತ ಶುರುವಾಯ್ತು ಅಂದ್ರೆ ಜನ ಆಹಾರ ಇಲ್ಲದೇ ಸಾಯೋ ಸ್ಥಿತಿಯೂ ಎದುರಾಗುತ್ತೆ. ಯಾಕಂದ್ರೆ, ಬೇಳೆ ಕಾಳು ಸೇರಿದಂತೆ ಎಲ್ಲಾ ದವಸ ಧಾನ್ಯಗಳ ರೇಟ್‌ ಗಗನಕ್ಕೇರುತ್ತೆ. ಅದ್ರಿಂದ ಜನ ಕೊಂಡುಕೊಳ್ಳುವ ಶಕ್ತಿಯನ್ನ ಕೆಳೆದುಕೊಳ್ತಾರೆ. ಉದ್ಯೋಗವೂ ಹೋಗುತ್ತೆ.  ಒಟ್ಟಾರೆ ಹೇಳ್ಬೇಕು ಅಂದ್ರೆ ಮದ್ದು ಗುಂಡುಗಳ ಯುದ್ಧಕ್ಕಿಂತ ಆರ್ಥಿಕ ಕುಸಿತ ಖಂಡಿತವಾಗಿಯೂ ಭೀಕರ ರಣಭೀಕರ.
ಜಗತ್ತು ಆರ್ಥಿಕ ಕುಸಿತಕ್ಕೆ ತುತ್ತಾಗುತ್ತೆ ಅನ್ನೋದನ್ನ ವಂಗಾ ನುಡಿದಿರೋ ಭವಿಷ್ಯ ವಾಣಿ ಸುಳ್ಳಾಗುತ್ತೆ ಅಂತ ಹೇಳೋದಕ್ಕೆ ಸಾಧ್ಯವೇ ಇಲ್ಲ. ಯಾಕಂದ್ರೆ, ಈಗಾಗಲೇ ಅನೇಕ ದೇಶಗಳು ಆರ್ಥಿಕ ದಿವಾಳಿ ಅಂಚಿನಲ್ಲಿವೆ. ಅವುಗಳು ಸಂಕಷ್ಟಕ್ಕೆ ತುತ್ತಾದ್ವು ಅಂದ್ರೆ ಅಲ್ಲಿಯ ಜನ ಉಸಿರು ನಿಲ್ಲಿಸ್ಬೇಕಾಗುತ್ತೆ.. ಇನ್ನು ಕರೆನ್ಸಿ ಮೌಲ್ಯ ಕುಸಿತ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತೆ ಅನ್ನೋದನ್ನ ಕಾದು ನೋಡ್ಬೇಕು. ತೈಲ ದರ ಸ್ಥಿರವಾಗಿರುತ್ತೆ ಅನ್ನೋದು ಜಗತ್ತಿಗೆ ನೆಮ್ಮದಿ ನೀಡೋ  ವಿಚಾರ.

ಕಾಲಜ್ಞಾನಿಗಳ ಭವಿಷ್ಯವಾಣಿಯನ್ನ ಸಂಪೂರ್ಣವಾಗಿ ತಳ್ಳಿಹಾಕುವಂತೆ ಇಲ್ಲ. ಹಾಗಂತ ಸಂಪೂರ್ಣ ನಂಬುವಂತೆಯೂ ಇಲ್ಲ. ಹೀಗಾಗಿ ಅದನ್ನ ನಂಬುವುದು ಬಿಡುವುದು ಅವರವರ ವೈಯಕ್ತಿಕ ವಿಚಾರ. ಆದ್ರೆ, ಜಗತ್ತು ಎಚ್ಚರಿಕೆಯಿಂದ ಇರ್ಬೇಕು ಅನ್ನೋ ಮೆಸೇಜ್‌ ಅನ್ನ ಭವಿಷ್ಯವಾಣಿಗಳು ಖಂಡಿತ ಪಾಸ್‌ ಮಾಡ್ತಿವೆ.

BABA VANGA 2026 PREDICTIONS (2)




ಇನ್ನೂ ನೋಸ್ಟ್ರಾಡಾಮಸ್  ಅಥವಾ ಬಾಬಾ ವಂಗಾ ಹೇಳಿರುವ ಮತ್ತೊಂದು ಭವಿಷ್ಯವಾಣಿ ಪ್ರಕಾರ, 2026 ರಲ್ಲಿ ಮಾರಕ ರೋಗವೊಂದು ಕಾಣಿಸಿಕೊಳ್ಳಲಿದೆ. ಜೇನುನೊಣ ಆಕಾರದ ಹುಳಗಳಿಂದ ಮಾರಕ ರೋಗ ಕಾಣಿಸಿಕೊಳ್ಳಲಿದೆ. 

ಇನ್ನೂ ಸ್ವಿಟರ್ಜಲ್ಯಾಂಡ್ ನ ಕೆಲ ಭಾಗಗಳಲ್ಲಿ ರಕ್ತ ಪ್ರವಾಹ ಕೂಡ ಆಗಲಿದೆ. ವಿಶೇಷವಾಗಿ ಟಿಸಿನೋ ಪ್ರಾಂತ್ಯದಲ್ಲಿ ರಕ್ತ ಪ್ರವಾಹ ಆಗಲಿದೆ. 


ಅಂತಿಮವಾಗಿ ರಷ್ಯಾದ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ ಪತನವಾಗಲಿದೆ. ರಷ್ಯಾದಲ್ಲೇ ಮತ್ತೊಬ್ಬ ಪ್ರಬಲ ನಾಯಕ ಉದಯವಾಗಲಿದ್ದು, ಪುಟಿನ್ ಅಧಿಕಾರದ ಪತನವಾಗಲಿದೆ ಇಲ್ಲವೇ, ಜಾಗತಿಕ ರಾಜಕೀಯವನ್ನು ಬದಲಾಯಿಸುವ ಸಾಮರ್ಥ್ಯ ಇರುವ ನಾಯಕನ ಉದಯವಾಗಲಿದೆ ಎಂದು ಬಾಬಾ ವಂಗಾ ಅಥವಾ ನೋಸ್ಟ್ರಾಡಾಮಸ್ ಭವಿಷ್ಯ ನುಡಿದಿದ್ದಾರೆ.  ಪುಟಿನ್ ಅಧಿಕಾರದ ಪತನವಾದರೇ, ಹೊಸ ನಾಯಕ ಉಕ್ರೇನ್ ಜೊತೆಗಿನ ಯುದ್ದವನ್ನು ನಿಲ್ಲಿಸುತ್ತಾನಾ ಎಂಬ ಕುತೂಹಲ ಮೂಡುತ್ತೆ. 


ಅಂತಿಮವಾಗಿ ಕಾಲಜ್ಞಾನಿಗಳ ಭವಿಷ್ಯವಾಣಿಯನ್ನ ನಂಬೋದು ಬಿಡೋದು ಅವರವರ ವೈಯಕ್ತಿಕ ವಿಚಾರ. ಯಾಕಂದ್ರೆ, ಕಾಲಜ್ಞಾನಿಗಳು ನುಡಿದ ಎಲ್ಲಾ ಭವಿಷ್ಯವಾಣಿಯೂ ಸತ್ಯವಾಗಿದೆ.  ನೂರಕ್ಕೆ ನೂರು ಪಕ್ಕಾ ಅನ್ನೋ ಹಾಗೇ ಇಲ್ಲ. ಯಾಕಂದ್ರೆ, ಕೆಲವು ಭವಿಷ್ಯವಾಣಿಗಳು ಸುಳ್ಳಾಗಿರೋದನ್ನ ಜಗತ್ತು ನೋಡಿದೆ. ಆದ್ರೆ, 2026ರಲ್ಲಿ ಎಐ ಬಗ್ಗೆ ನುಡಿದ ಭವಿಷ್ಯವಾಣಿ ಸತ್ಯವಾದ್ರೂ ಆಗಬಹುದು ಅನ್ನೋ ಆತಂಕವನ್ನ ಜನ ವ್ಯಕ್ತಪಡಿಸ್ತಿದ್ದಾರೆ.



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Baba Vanga
Advertisment