/newsfirstlive-kannada/media/media_files/2025/09/20/vokkaliga-leaders-meeting02-2025-09-20-16-01-43.jpg)
ಒಕ್ಕಲಿಗ ನಾಯಕರ ಸಭೆಯಲ್ಲಿ ಡಿಸಿಎಂ ಡಿಕೆಶಿ ಭಾಗಿ
ಬೆಂಗಳೂರಿನ ವಿಜಯನಗರದಲ್ಲಿರುವ ಆದಿಚುಂಚನಗಿರಿ ಮಠದ ಶಾಖಾ ಮಠದಲ್ಲಿ ಇಂದು ಒಕ್ಕಲಿಗ ನಾಯಕರ ಸಭೆ ನಡೆದಿದೆ. ಮೂರು ಪಕ್ಷಗಳ ಒಕ್ಕಲಿಗ ನಾಯಕರು ಸಭೆಯಲ್ಲಿ ಭಾಗಿಯಾಗಿ ಸಮುದಾಯದ ಹಿತಾಸಕ್ತಿ ರಕ್ಷಣೆಗಾಗಿ ನಾವೆಲ್ಲಾ ಒಂದಾಗಲು ಸಿದ್ದ ಎಂಬ ಸಂದೇಶ ರವಾನಿಸಿದ್ದಾರೆ. ಆದಿಚುಂಚನಗಿರಿ ಮಠದ ಪೀಠಾಧಪತಿ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಬ್ಬರೂ ಭಾಗಿಯಾಗಿದ್ದರು. ಒಕ್ಕಲಿಗ ಸಮುದಾಯದ ಮೂರು ಪಕ್ಷಗಳ ಶಾಸಕರು, ಸಂಸದರು, ಕೇಂದ್ರ ಸಚಿವರು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಶ್ರೀ ನಿರ್ಮಲಾನಂದ ಸ್ವಾಮೀಜಿಗೆ ನಾನೇ ಒತ್ತಾಯ ಮಾಡಿ ಈ ಸಭೆಗೆ ದಿನಾಂಕ ಫಿಕ್ಸ್ ಮಾಡಿಸಿದೆ . ಸಮಾಜ ಉಳಿಸಿಕೊಳ್ಳಬೇಕು, ಸಮಾಜದ ಋಣ ತೀರಿಸಬೇಕು ಅಂತ ಬಂದಿದ್ದೀರಿ. ನಾನು ಹಿಂದಿನ ವಿಚಾರ ಚರ್ಚೆಗೆ ಹೋಗಲ್ಲ, ಎಲ್ಲರೂ ಮಾತನಾಡಿದ್ದಾರೆ. ನಾವು ಯಾರೇ ಎಷ್ಟು ದೊಡ್ಡ ಸ್ಥಾನಕ್ಕೆ ಹೋಗಿದ್ರು ಅದು ನಿಮ್ಮ ಸಮಾಜದಿಂದಲೇ ಅನ್ನೋದು ಗಮನದಲ್ಲಿ ಇರಲಿ. ಕಾಂತರಾಜು ವರದಿ ಜಾರಿ ಮಾಡಬೇಕಾಗಿ ಬಂದಾಗ ನಾವು ಸರ್ಕಾರಕ್ಕೆ ಒಂದು ಮನವಿ ನೀಡಿದ್ದೇವು. ಆ ಮನವಿಗೆ ನಾನು ಸಹಿ ಹಾಕಿದ್ದೆ. ಅದು ಪಾರ್ಲಿಮೆಂಟ್ ನಲ್ಲೂ ಚರ್ಚೆ ಆಯ್ತು . ನನ್ನ ಬಗ್ಗೆ ಬಹಳ ಟೀಕೆ ಟಿಪ್ಪಣಿ ಬಂದವು. ನಾವೆಲ್ಲಾ ಮಂತ್ರಿಗಳು ಸೇರಿ ದೆಹಲಿಗೂ ವಿಷಯ ತೆಗೆದುಕೊಂಡು ಹೋದೆವು. ವೀರಶೈವ ಲಿಂಗಾಯತ ಸಮುದಾಯದ ನಾಯಕರು ಬಿಜೆಪಿಯಲ್ಲಿ ಏನ್ ತಿಳಿಸಬೇಕೋ ಅದನ್ನು ತಿಳಿಸಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈಗ ನಿಮ್ಮ ಕೈಯಲ್ಲಿ ಇದೆ, ನಿಮ್ಮ ಡ್ಯೂಟಿ ನೀವು ಮಾಡಿ. ನೀವು ಈ ಸಮಾಜಕ್ಕೆ ಏನ್ ಕೊಡುಗೆ ಕೊಡ್ತೀರಾ..? ನಮಗೆ ನ್ಯಾಯ ಒದಗಿಸಿಕೊಳ್ಳಲು ನಮಗೆ ಬೇರೆ ಸಮುದಾಯವನ್ನು ನಮ್ಮ ಜೊತೆಗೆ ಇಟ್ಟುಕೊಂಡು ಹೋಗಬೇಕು . ನಮ್ಮ ಸಮುದಾಯ ಉಳಿಸಿಕೊಳ್ಳಲು ಪ್ರತೇಕ ಸ್ಟ್ರಾಟಜಿ ಮಾಡಬೇಕು. ನಾನು ನಮ್ಮ ಕರ್ತವ್ಯ ಮಾಡಿದ್ದೇವೆ. ಈಗ ನಿಮ್ಮ ಕೈಯಲ್ಲಿದೆ. 15 ದಿನದ ಸಮೀಕ್ಷೆ ಸಾಕಾಗುತ್ತಾ ಇಲ್ವಾ ಅನ್ನೋದು ಮುಂದೆ ಚರ್ಚೆ ಮಾಡುತ್ತೇವೆ. ನೀವು ನಿಮ್ಮ ಸಮಾಜಕ್ಕೆ ಏನು ಮಾಡ್ತೀರಿ ಎಂಬುದು ಮುಖ್ಯ. ಈ ಸಮೀಕ್ಷೆಯಿಂದ ಸಮುದಾಯಕ್ಕೆ ಅನುಕೂಲ ಆಗಲಿದೆ. ನಮ್ಮ ಸಮುದಾಯದ ರಕ್ಷಣೆಗೆ ನಾವು ಬೇರೆ ಸ್ಟ್ರಾಟಜಿ ಮಾಡಬೇಕು. ಆತುರವಾಗಿ ಮಾಡ್ತಿರೋದು ಸರಿಯೋ, ತಪ್ಪೋ ಎಂಬ ಚರ್ಚೆ ಬೇಡ. ಡಬಲ್ ಶಿಕ್ಷಕರನ್ನ ನೇಮಿಸಿ ಮಾಡ್ತಾರೆ ಅಂತ ಹೇಳಿದ್ದಾರೆ. ನಾವು ಇದನ್ನ ಮುಂದೆ ಹಾಕೋಕೆ ನಮ್ಮ ಪ್ರಯತ್ನ ಮಾಡ್ತಿದ್ದೇವೆ. 15 ದಿನಗಳಲ್ಲಿ ಮಾಡೋಕಾಗಲ್ಲ ಅನ್ನೋದರ ಬಗ್ಗೆ ನಿಮಗೆ ಬೇಡ. ಇದನ್ನು ಮುಂದೂಡಬೇಕಾ ಮತ್ತೊಂದಾ ಅದೆಲ್ಲಾ ನಮಗೆ ಬಿಡಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಸಭೆಯಲ್ಲಿ ಹೇಳಿದ್ದಾರೆ.
ಕಾಂತರಾಜ್ ಆಯೋಗದ ವರದಿಯಲ್ಲಿ 1350 ಜಾತಿಗಳಿದ್ದವು. ಆದರೆ ಈಗ 1563 ಜಾತಿಗಳು ಆಗಿವೆ. ಯಾರು ಏನು ಜಾತಿ ಹೆಸರು ತಗೊಂಡು ಬಂದು ಮನವಿ ಕೊಟ್ಟಿದ್ದಾರೆ. ಅದನ್ನ ಸೇರಿಸಿದ್ದಾರೆ. ಆದರೆ ಅದಕ್ಕೆ ಅವಕಾಶ ಇಲ್ಲ. ಅದು ಕಾನೂನಾತ್ಮಕವಾಗಿ ಆಗಬೇಕು. ನಾಳೆ ಇದು ಮೀಸಲಾತಿ ವಿಚಾರದಲ್ಲಿ ಬರುವಂತದ್ದು. ವೀರೇಂದ್ರ ಹೆಗ್ಡೆ ಅವರು ಜೈನ್ . ನನ್ನ ಅಳಿಯ ಹೆಗ್ಡೆ ಅಂತ ಒಕ್ಕಲಿಗ ಬರುತ್ತೆ. ರಾಮಕೃಷ್ಣ ಹೆಗ್ಡೆ ಬ್ರಾಹ್ಮಣರು . ಹೀಗೆ ಚಿಕ್ಕಮಗಳೂರು ಭಾಗದಲ್ಲಿ ಬರುವ ಒಕ್ಕಲಿಗರು ಇದ್ದಾರೆ. ಜೊತೆಗೂಡುವುದು ಆರಂಭ. ಜೊತೆಗೂಡಿ ಚರ್ಚೆ ಮಾಡುವುದು ಪ್ರಗತಿ ಎಂದು ಸಭೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.