ಜೈಲಿನಲ್ಲಿ ನಟ ದರ್ಶನ್ ನಂಥ ವಿಚಾರಣಾಧೀನ ಖೈದಿಗಳಿಗೆ ಏನೇನು ಸೌಲಭ್ಯ ನೀಡಬೇಕು? ಕಾರಾಗೃಹ ಕಾಯಿದೆಯಲ್ಲಿ ಇರೋದೇನು?

ಕರ್ನಾಟಕದಲ್ಲಿ ಜೈಲಿನಲ್ಲಿರುವ ವಿಚಾರಣಾಧೀನ ಖೈದಿಗಳಿಗೆ ಏನೇನು ಸೌಲಭ್ಯ ನೀಡಬೇಕು ಎಂಬ ಬಗ್ಗೆ ಕರ್ನಾಟಕದ ಕಾರಾಗೃಹ ಕಾಯಿದೆ-1963 ಹಾಗೂ ನಿಯಮಾವಳಿ 1974 ರಲ್ಲಿ ಉಲ್ಲೇಖ ಇದೆ. ಹಾಗಾದರೇ, ಕಾಯಿದೆಯಲ್ಲಿ ಇರೋದೇನು? ಸಂಪೂರ್ಣ ವಿವರ ಇಲ್ಲಿದೆ ಓದಿ.

author-image
Chandramohan
bangalore central jail

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು

Advertisment

ಕರ್ನಾಟಕದ ಕಾರಾಗೃಹ ಕಾಯಿದೆ 1963 ಮತ್ತು ನಿಯಮಾವಳಿ 1974ರಲ್ಲಿ ವಿಚಾರಣಾಧೀನ ಖೈದಿಗಳಿಗೆ ಏನೇನು ಸೌಲಭ್ಯಗಳನ್ನು ಜೈಲಿನಲ್ಲಿ ನೀಡಬೇಕು ಎಂಬ ಬಗ್ಗೆ ಉಲ್ಲೇಖ ಇದೆ. ಇದರ ಆಧಾರದ ಮೇಲೆಯೇ ನಟ ದರ್ಶನ್ ಜೈಲಿನಲ್ಲಿ ತಮಗೆ ಕನಿಷ್ಠ ಸೌಲಭ್ಯಗಳನ್ನು ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿಕೊಂಡಿದ್ದರು. ಜೈಲಿನ ಮ್ಯಾನ್ಯುಯಲ್ ನಲ್ಲಿರುವ ಕನಿಷ್ಠ ಮೂಲಸೌಕರ್ಯಗಳು ಕೂಡ ತಮಗೆ ಸಿಗುತ್ತಿಲ್ಲ ಎಂದು ನಟ ದರ್ಶನ್ ಕೋರ್ಟ್ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದರು.
ಹಾಗಾದರೇ, ಕರ್ನಾಟಕದ ಕಾರಾಗೃಹ ಕಾಯಿದೆ 1963 ಮತ್ತು ನಿಯಮಾವಳಿ 1974 ರಲ್ಲಿ ಏನೇನು ಸೌಲಭ್ಯ ನೀಡುವ ಬಗ್ಗೆ ಉಲ್ಲೇಖ ಇದೆ. ದರ್ಶನ್ ಈಗ ವಿಚಾರಣಾಧೀನ ಖೈದಿಯಾಗಿರುವುದರಿಂದ ಏನೇನು ಸೌಲಭ್ಯ ನೀಡಬೇಕು ಎಂಬ ಸಂಪೂರ್ಣ ವಿವರ ಇಲ್ಲಿದೆ ಓದಿ. 

A) ಕರ್ನಾಟಕ ಕಾರಾಗೃಹ ಕಾಯಿದೆ 1963 & ನಿಯಮಾವಳಿ 1974

ಹತ್ಯೆ ಆರೋಪಿಗಳಿಗೆ (ಅಂದರೆ ವಿಚಾರಣೆಯಲ್ಲಿರುವವರು) ಸಂಬಂಧಿಸಿದ ಮುಖ್ಯ ನಿಯಮಗಳು

1. ಪ್ರತ್ಯೇಕ ವ್ಯವಸ್ಥೆ.

ವಿಚಾರಣಾಧೀನ ಕೈದಿಗಳನ್ನು (Undertrial) ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಂದ ಪ್ರತ್ಯೇಕವಾಗಿ ಇಡಬೇಕು.
ಮಹಿಳಾ ಮತ್ತು ಪುರುಷ ಕೈದಿಗಳನ್ನು ಪ್ರತ್ಯೇಕಿಸಬೇಕು.
ಕಿರಿಯ ಅಪರಾಧಿಗಳನ್ನು, ಗಟ್ಟಿ ಅಪರಾಧಿಗಳ ಜೊತೆ ಸೇರಿಸಬಾರದು.

2. ವಸತಿ ಮತ್ತು ಆಹಾರ

ಕೈದಿಗಳಿಗೆ ಸೂಕ್ತ ಸೆಲ್ ಅಥವಾ ಬ್ಯಾರೆಕ್, ಹಾಸಿಗೆ, ಬಟ್ಟೆ ನೀಡಬೇಕು.

ಕಾರಾಗೃಹ ನಿಯಮಾವಳಿಯಂತೆ ನಿಗದಿತ ಆಹಾರ (ಸಸ್ಯಾಹಾರಿ ಆಯ್ಕೆ ಲಭ್ಯ).

3. ವೈದ್ಯಕೀಯ ಸೌಲಭ್ಯಗಳು

ಪ್ರತಿಯೊಂದು ಜೈಲಿಗೂ ವೈದ್ಯರಿರಬೇಕು.
ಪ್ರವೇಶ ಸಮಯದಲ್ಲಿ ವೈದ್ಯಕೀಯ ತಪಾಸಣೆ, ಅನಾರೋಗ್ಯವಾಗಿದ್ದರೆ ಚಿಕಿತ್ಸೆ.

4. ಭೇಟಿ ಮತ್ತು ಮಾತುಕತೆ.
ಕುಟುಂಬದವರು, ಸ್ನೇಹಿತರು, ವಕೀಲರನ್ನು ಮೇಲ್ವಿಚಾರಣೆಯ ಅಡಿಯಲ್ಲಿ ಭೇಟಿ ಮಾಡಲು ಹಕ್ಕು.
ಪತ್ರ ಬರೆದುಕೊಳ್ಳಲು / ಸ್ವೀಕರಿಸಲು ಅವಕಾಶ (ಸಂಶೋಧನೆಗೆ ಒಳಪಟ್ಟಿರುತ್ತದೆ).

5. ನ್ಯಾಯಾಲಯ ಹಾಜರು
ವಿಚಾರಣಾಧೀನ ಕೈದಿಯನ್ನು ಕೋರ್ಟ್‌ಗೆ ಸಮಯಕ್ಕೆ ಸರಿಯಾಗಿ ಹಾಜರು ಮಾಡಬೇಕು.

6. ಕೆಲಸ

ವಿಚಾರಣಾ ಕೈದಿಗಳನ್ನು ಕೆಲಸ ಮಾಡಲು ಬಲವಂತ ಮಾಡಬಾರದು.
ಸ್ವಯಂ ಇಚ್ಛೆಯಿಂದ ಕೆಲಸ ಮಾಡಲು ಅವಕಾಶ ನೀಡಬೇಕು.

(B) ಕರ್ನಾಟಕ ಕಾರಾಗೃಹ ಮ್ಯಾನುಯಲ್ (1978 ಹಾಗೂ ನಂತರದ ತಿದ್ದುಪಡಿ)

1. ವಿಂಗಡಣೆ.
ಹತ್ಯೆ ಆರೋಪಿಗಳನ್ನು ಸಾಮಾನ್ಯವಾಗಿ ಹೈ-ಸಿಕ್ಯೂರಿಟಿ ಬ್ಯಾರೆಕ್‌ನಲ್ಲಿ ಇರಿಸಲಾಗುತ್ತದೆ.
ಸಣ್ಣ ಅಪರಾಧಿಗಳೊಂದಿಗೆ ಸೇರಿಸಬಾರದು.

2. ಮೂಲಭೂತ ಸೌಲಭ್ಯಗಳು

ಹಾಸಿಗೆ, ಬಟ್ಟೆ, ಸೊಳ್ಳೆ ಪರದೆ,
ಸ್ನಾನದ ವ್ಯವಸ್ಥೆ.
ನಿಯಮಿತ ವೈದ್ಯಕೀಯ ತಪಾಸಣೆ ಮತ್ತು ಅಗತ್ಯವಿದ್ದರೆ ಆಸ್ಪತ್ರೆಗೆ ಕಳುಹಿಸುವ ವ್ಯವಸ್ಥೆ.

3. ಆಹಾರ

ಸಮತೋಲನ ಆಹಾರ.

ವೈದ್ಯಕೀಯ ಅಗತ್ಯವಿದ್ದರೆ ವಿಶೇಷ ಆಹಾರ / ಸಸ್ಯಾಹಾರಿ ವ್ಯವಸ್ಥೆ.

4. ಮನರಂಜನೆ 

ಪತ್ರಿಕೆ, ಗ್ರಂಥಾಲಯ, ವಿದ್ಯಾಭ್ಯಾಸ ಸೌಲಭ್ಯ.

ಸೀಮಿತ ಆಟ/ಕ್ರೀಡೆ.

5. ಕಾನೂನು ಸಹಾಯ

ವಕೀಲರನ್ನು ಖಾಸಗಿಯಾಗಿ ಭೇಟಿಯಾಗಲು ಹಕ್ಕು (ಅಧಿಕಾರಿಗಳ ಮೇಲ್ವಿಚಾರಣೆಯಲ್ಲಿ).

ಉಚಿತ ಕಾನೂನು ಸಹಾಯ

6. ಆಧ್ಯಾತ್ಮಿಕ ಅವಶ್ಯಕತೆ

ಧಾರ್ಮಿಕ ಗ್ರಂಥ ಓದುವ ಅವಕಾಶ.

ಪೂಜಾರಿ / ಪಾದ್ರಿಗಳ ಭೇಟಿಗೆ ಅನುಮತಿ.

7. ಪೆರೋಲ್ / ಜಾಮೀನು

ವಿಚಾರಣಾ ಕೈದಿಗೆ ಜಾಮೀನು ಕೊಡೋದು ಕೋರ್ಟ್ ನಿರ್ಧಾರ.

ಪೆರೋಲ್ ಸೌಲಭ್ಯ ಶಿಕ್ಷೆಗೆ ಗುರಿಯಾದ ಕೈದಿಗಳಿಗೆ ಮಾತ್ರ ಅನ್ವಯ.

8. ಭದ್ರತಾ ನಿರ್ಬಂಧಗಳು

ಹತ್ಯೆ ಆರೋಪಿಗಳಿಗೆ ಸಾಮಾನ್ಯ ಕೈದಿಗಳಿಗಿಂತ ಹೆಚ್ಚು  ನಿಯಂತ್ರಣ.

ಭೇಟಿ ಮಾಡುವವರಿಗೆ ಕಟ್ಟುನಿಟ್ಟಿನ ತಪಾಸಣೆ.

 ಹತ್ಯೆ ಆರೋಪಿಗೆ ವಿಶೇಷ ಸೌಲಭ್ಯ

ಐಷಾರಾಮಿ ಸೌಲಭ್ಯಗಳು (ಟಿವಿ, ಮೊಬೈಲ್, ವಿಶೇಷ ಆಹಾರ) ಸಿಗುವುದಿಲ್ಲ.

ಶಿಕ್ಷೆ ಅನುಭವಿಸುತ್ತಿರುವ ಕೈದಿಗಳಿಗೆ ಮಾತ್ರ ರಿಮಿಷನ್, ಪೆರೋಲ್, ಕೆಲಸದ ಹಕ್ಕು ಅನ್ವಯಿಸುತ್ತದೆ.

ಹೈ-ಪ್ರೊಫೈಲ್ ಕೈದಿಗಳು ಇದ್ದರೆ “A-Class” ವರ್ಗದಲ್ಲಿ ಇರಿಸಿ, ಸ್ವಚ್ಛ ಕೊಠಡಿ, ಉತ್ತಮ ಆಹಾರ, ಪತ್ರಿಕೆ ನೀಡಬಹುದು

ಆದರೂ ಅದು ಕೂಡ ನಿಯಮದ ಮಿತಿಯೊಳಗೆ ಇರಬೇಕು.

actor darshan pavithra photos


ಜೈಲು ಮ್ಯಾನ್ಯುಯಲ್ ಪ್ರಕಾರ ದರ್ಶನ್ ಗೆ ನೀಡಬಹುದಾದ ಸೌಲಭ್ಯಗಳು

ಚಾಪೆ, ದಿಂಬು, ಬೆಡ್ ಶೀಟ್, ಚಪ್ಪಲಿ,ಚಳಿಗಾಲದಲ್ಲಿ ಸ್ವಲ್ಪ ದಪ್ಪನೆಯ ಹಾಸಿಗೆ

ಜೈಲಿನವರೇ ಇದಲ್ಲೆವನ್ನು ನೀಡಬೇಕು

ಹೆಚ್ಚಿನ ಅವಶ್ಯಕತೆ ಇದ್ದರೆ ನಿಯಮಿತವಾಗಿ ಸ್ವಂತವಾಗಿ ಖರೀದಿ ಮಾಡಬಹುದು.

ಮ್ಯಾನ್ಯುಯಲ್ ಪ್ರಕಾರ ಜೈಲಿನ ಊಟ ಕೊಡಬೇಕು

ವಾಕಿಂಗ್ ಮಾಡಲು ಅವಕಾಶ ಕೊಡಬೇಕು

ಮನೆಯವರ ಬೇಟಿಗೆ ವಾರದಲ್ಲಿ ಎರಡು ದಿನ ಅವಕಾಶ

ವಾರದಲ್ಲಿ ಎರಡು ದಿ‌ನ ಫ್ಯಾಮಿಲಿಗೆ ಕರೆ ಮಾಡಬಹುದು

ಕಾಮನ್ ಏರಿಯಾದಲ್ಲಿ ಟಿವಿ ನೋಡಲು ಅವಕಾಶ

ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಲು ಅವಕಾಶ

ಕೇರಮ್,ವಾಲಿಬಾಲ್,ಶಟಲ್,ಚೆಸ್ ಆಡಲು ಅವಕಾಶ

ಪುಸ್ತಕಗಳು ಮತ್ತು  ಪೇಪರ್ ಓದಲು ಅವಕಾಶ ನೀಡಬೇಕು

ಮನಿಯಾರ್ಡರ್ ನಲ್ಲಿ 10 ಸಾವಿರದ ವರೆಗೆ ಹಣ ತರಿಸಿಕೊಳ್ಳಬಹುದು

ಕಾಂಡಿಮೆಂಟ್ ನಲ್ಲಿ ಹಣ ನೀಡಿ  ಸಿಹಿ ತಿಂಡಿ ಬೇಕರಿ ಉತ್ಪನ್ನಗಳನ್ನ ತಿನ್ನಲು ಅವಕಾಶ ನೀಡಬೇಕು. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Darshan in jail
Advertisment