ಕಾನ್ಪಿಡೆಂಟ್ ಗ್ರೂಪ್‌ ಕಚೇರಿಯಲ್ಲಿ ಇಂದು ಏನೇನಾಯಿತು? ಪೊಲೀಸ್ ತನಿಖೆಯಲ್ಲಿ ಸಿಕ್ಕಿದ್ದೇನು? ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿರೋದೇನು?

ಕಾನ್ಪಿಡೆಂಟ್‌ ಗ್ರೂಪ್‌ನ ಕಚೇರಿಯ ಮೇಲೆ ಇಂದು ಬೆಳಿಗ್ಗೆಯೇ ಐ.ಟಿ. ಇಲಾಖೆ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸುತ್ತಿದ್ದರು. ಮಧ್ಯಾಹ್ನದ ನಂತರವೇ ಸಂಸ್ಥೆಯ ಮುಖ್ಯಸ್ಥ ಸಿ.ಜೆ.ರಾಯ್ ಕಚೇರಿಗೆ ಬಂದಿದ್ದರು. ತಕ್ಷಣವೇ ಐ.ಟಿ. ಇಲಾಖೆ ಅಧಿಕಾರಿಗಳು ಸಿ.ಜೆ.ರಾಯ್ ಅವರನ್ನು ವಿಚಾರಣೆಗೊಳಪಡಿಸಿದ್ದರು.

author-image
Chandramohan
CONFIDENT GROUP OWNER CJ ROY SUICIDE (3)

ಕಚೇರಿಯಲ್ಲಿ ಸೂಸೈಡ್ ಮಾಡಿಕೊಂಡ ಸಿ.ಜೆ.ರಾಯ್

Advertisment
  • ಕಚೇರಿಯಲ್ಲಿ ಸೂಸೈಡ್ ಮಾಡಿಕೊಂಡ ಸಿ.ಜೆ.ರಾಯ್
  • ಪಿಸ್ತೂಲ್ ನಿಂದ ಎದೆಗೆ ಫೈರ್ ಮಾಡಿಕೊಂಡು ಆತ್ಮಹತ್ಯೆ!
  • ಪೊಲೀಸರಿಂದ ಕಚೇರಿಯ ಸಿಸಿಟಿವಿ ಪರಿಶೀಲನೆ, ತನಿಖೆ ಶುರು

ಇಂದು  ಬೆಳಿಗ್ಗೆಯಿಂದಲೇ ಬೆಂಗಳೂರಿನ ರಿಚ್ಮಂಡ್ ಸರ್ಕಲ್ ಬಳಿ ಇರುವ ಕಾನ್ಪಿಡೆಂಟ್ ಗ್ರೂಪ್ ಕಚೇರಿ ಮೇಲೆ ಐ.ಟಿ. ಇಲಾಖೆಯ ದಾಳಿ ನಡೆಯುತ್ತಿತ್ತು.  ಮಧ್ಯಾಹ್ನದ ಬಳಿಕ ಸಿ.ಜೆ. ರಾಯ್ ತಮ್ಮ ಕಾನ್ಪಿಡೆಂಟ್ ಗ್ರೂಪ್ ಕಚೇರಿಗೆ ಬಂದಿದ್ದರು. ಕಚೇರಿಗೆ  ಬಂದ ಕೂಡಲೇ  ಐ.ಟಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದರು. ಸುಮಾರು ಒಂದು ಗಂಟೆಗಳ‌ ಕಾಲ ವಿಚಾರಣೆ ಮಾಡಿದ್ದರು.  ಈ ವೇಳೆ ಕೆಲ ದಾಖಲಾತಿಗಳನ್ನು  ಅಧಿಕಾರಿಗಳು ಕೇಳಿದ್ದರು.  ಬಳಿಕ ತಮ್ಮ ಕಚೇರಿಯ ಕೊಠಡಿಗೆ  ಸಿಜೆ ರಾಯ್ ಹೋಗಿದ್ದರು.  ದಾಖಲೆಗಳನ್ನು ತಂದು ಕೊಡುವುದಾಗಿ ಹೇಳಿ ಕೊಠಡಿಗೆ ಹೋಗಿದ್ದರು.  ಈ ವೇಳೆ ಪಿಸ್ತೂಲ್ ನಿಂದ ಸಿ.ಜೆ.ರಾಯ್ ಫೈರ್ ಮಾಡಿಕೊಂಡಿದ್ದಾರೆ.  ಕೂಡಲೇ ಐ.ಟಿ. ಅಧಿಕಾರಿಗಳು  ಸಿ.ಜೆ.ರಾಯ್ ಅವರನ್ನು  ಆಸ್ಪತ್ರೆಗೆ ರವಾನೆ ಮಾಡಿದ್ದರು. ಈ ವೇಳೆಗಾಗಲೇ ಸಿ.ಜೆ.ರಾಯ್ ಸಾವನ್ನಪ್ಪಿದ್ದರು. 
ತಮ್ಮ ಗನ್ ನಿಂದ  ಎದೆಗೆ ಫೈರ್ ಮಾಡಿಕೊಂಡು ಸಿ.ಜೆ. ರಾಯ್ ಸಾವನ್ನಪ್ಪಿದ್ದಾರೆ.  ಒಂದು ಬುಲೆಟ್ ಫೈರ್ ಮಾಡಿಕೊಂಡಿದ್ದಾರೆ. ಬಳಿಕ ಐ.ಟಿ. ಇಲಾಖೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.  ಕಾನ್ಪಿಡೆಂಟ್ ಗ್ರೂಪ್ ಕಚೇರಿಗೆ ಪೊಲೀಸರು ಆಗಮಿಸಿ, ಘಟನಾ ಸ್ಥಳದಲ್ಲಿ ತನಿಖೆ ನಡೆಸುತ್ತಿದ್ದಾರೆ. ಪೊಲೀಸರಿಂದ ಈ ಆತ್ಮಹತ್ಯೆ ಕೇಸ್ ಬಗ್ಗೆ ತನಿಖೆ ಆರಂಭವಾಗಿರುವುದರಿಂದ ಐ.ಟಿ. ಇಲಾಖೆ ಅಧಿಕಾರಿಗಳು ಕಾನ್ಪಿಡೆಂಟ್ ಗ್ರೂಪ್ ಕಚೇರಿಯಿಂದ ನಿರ್ಗಮಿಸಿದ್ದಾರೆ. 
ಕಾನ್ಪಿಡೆಂಟ್ ಕಚೇರಿಯಿಂದ 2 ಇನ್ನೋವಾ ಕಾರ್ ಗಳಲ್ಲಿ ದಾಖಲೆಗಳನ್ನು ತುಂಬಿಕೊಂಡು ಐ.ಟಿ. ಇಲಾಖೆ ಅಧಿಕಾರಿಗಳು ತೆರಳಿದ್ದಾರೆ. 

ಪೊಲೀಸರಿಂದ ತನಿಖೆ ಶುರು
 ಸಿಜೆ ರಾಯ್ ಕಚೇರಿ ಕೊಠಡಿಯ ಸಿಸಿ ಕ್ಯಾಮರಾವನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. 
ಪಿಸ್ತೂಲ್ ನಿಂದ ಫೈರ್ ಮಾಡಿಕೊಂಡಿರೋ ದೃಶ್ಯ ಪರಿಶೀಲನೆ ಮಾಡುತ್ತಿದ್ದಾರೆ.  ಈಗಾಗಲೇ ಫೈರ್ ಮಾಡಿಕೊಂಡ ಪಿಸ್ತೂಲ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.  ಜೊತೆಗೆ ಸಿ.ಜೆ. ರಾಯ್ ಕೊಠಡಿ ಕೂಡ ಪರಿಶೀಲನೆ…ಮಾಡುತ್ತಿದ್ದಾರೆ.  ಯಾವುದಾದರೂ ಡೆತ್ ನೋಟ್ ಇದೆಯಾ ಅಂತ ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಮೊಬೈಲ್ ನಲ್ಲಿ ಏನಾದ್ರೂ ನೋಟ್ ಇದೆಯೇ ಎಂದು ಮೊಬೈಲ್ ಅನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಿ.ಜೆ.ರಾಯ್ ಗುಂಡು ಹಾರಿಸಿಕೊಳ್ಳುವ ಮೊದಲು ಯಾರಿಗಾದರೂ ಏನಾದರೂ ಮೇಸೇಜ್ ಮಾಡಿದ್ದಾರಾ ಅಂತಾನೂ ಪರಿಶೀಲನೆ ಮಾಡುತ್ತಿದ್ದಾರೆ. …ಸದ್ಯ ಸಿಜೆ ರಾಯ್ ಮೊಬೈಲ್ ಸಹ ಪರಿಶೀಲನೆ ಮಾಡುತ್ತಿದ್ದಾರೆ.  ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟರ್ ಕೂಡ ಪರಿಶೀಲನೆ ಮಾಡಲಾಗುತ್ತಿದ್ದಾರೆ.  ಖುದ್ದು ಡಿಸಿಪಿ ಅಕ್ಷಯ್ ಅವರೇ ತನಿಖೆ ಮಾಡುತ್ತಿದ್ದಾರೆ.
ಕಚೇರಿಯ ವಾಶ್ ರೂಂ  ನಲ್ಲಿ ಸಿ.ಜೆ.ರಾಯ್  ಫೈರ್ ಮಾಡಿಕೊಂಡಿದ್ದಾರೆ.  ಒಂದೇ ಸುತ್ತು ಫೈರ್ ಮಾಡಿಕೊಂಡಿದ್ದಾರೆ.  ಎದೆಭಾಗಕ್ಕೆ ಲೈಸೆನ್ಸ್ ಪಿಸ್ತೂಲ್ ನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಸೋಕೋ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

confident group owner CJ ROY suicide Confident group Income tax department raid
Advertisment