ದೆಹಲಿಯಲ್ಲಿ ಥಾರ್ ಕಾರ್ ಮೊದಲ ಮಹಡಿಯಿಂದ ಬಿದ್ದಾಗ ಮಹಿಳೆಗೆ ಏನಾಯ್ತು? ಮಹಿಳೆ ಈಗ ಹೇಗಿದ್ದಾರೆ? ಮಹಿಳೆ ಹೇಳಿದ್ದಾರೆ, ಕೇಳಿ.

ದೆಹಲಿಯ ನಿರ್ಮಾಣ್ ವಿಹಾರ್ ನಲ್ಲಿ ಥಾರ್ ಕಾರ್ ಶೋರೂಮುನ ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿತ್ತು. ಕಾರ್‌ ಟೈರ್‌ಗೆ ನಿಂಬೆಹಣ್ಣು ಇಟ್ಟು ಎಸ್ಕಲೇಟರ್ ಒತ್ತಿದಾಗ, ಕಾರ್ ವೇಗವಾಗಿ ನುಗ್ಗಿ ಕೆಳಕ್ಕೆ ಬಿದ್ದಿತ್ತು. ಕಾರ್ ನಲ್ಲಿದ್ದ ಮೂವರಿಗೆ ಏನಾಯ್ತು? ಕಾರ್ ಡ್ರೈವ್ ಮಾಡುತ್ತಿದ್ದ ಮಹಿಳೆಯೇ ಹೇಳಿದ್ದಾರೆ, ಕೇಳಿ.

author-image
Chandramohan
THAR CAR ACCIDENT

ದೆಹಲಿಯಲ್ಲಿ ಅಪಘಾತಕ್ಕೀಡಾದ ಥಾರ್ ಕಾರ್‌

Advertisment
  • ಥಾರ್ ಕಾರ್ ನಿಂಬೆಹಣ್ಣು ಮೇಲೆ ಹರಿಸುವಾಗ ಆಕ್ಸಿಡೆಂಟ್‌
  • ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದ 27 ಲಕ್ಷದ ಥಾರ್ ಕಾರ್
  • ಕಾರ್ ನಲ್ಲಿದ್ದವರಿಗೆ ಏನಾಯ್ತು ಎಂಬ ಚರ್ಚೆ, ಇದಕ್ಕೆ ಮಹಿಳೆಯಿಂದಲೇ ಉತ್ತರ


ಪೂರ್ವ ದೆಹಲಿಯ ನಿರ್ಮಾಣ್ ವಿಹಾರ್ ನಲ್ಲಿ ಇತ್ತೀಚೆಗೆ ಥಾರ್ ಖರೀದಿ ಮಾಡುವಾಗ ಕಾರ್, ಮೊದಲ ಮಹಡಿಯಿಂದ ಕೆಳಕ್ಕೆ ಬಿದ್ದಿತ್ತು.  27 ಲಕ್ಷ ರೂಪಾಯಿಯ ಹೊಸ ಕಾರಿನ ಚಕ್ರಕ್ಕೆ ನಿಂಬೆಹಣ್ಣು ಇಟ್ಟು ಕಾರ್ ಅನ್ನು ಮುಂದೆ ಚಲಿಸಿದಾಗ,  ಎಸ್ಕಲೇಟರ್ ಜೋರಾಗಿ ಒತ್ತಿದ್ದರಿಂದ ಕಾರ್ ಮೊದಲ ಮಹಡಿಯ ಗಾಜು ಅನ್ನು ಒಡೆದುಕೊಂಡು ಕೆಳಕ್ಕೆ ಬಿದ್ದಿತ್ತು. ಆಗ ಕಾರ್ ಅನ್ನು ಮಾನಿ ಪವಾರ್ ಎಂಬ ಮಹಿಳೆ ಚಾಲನೆ ಮಾಡುತ್ತಿದ್ದರು. ಕಾರ್ ನಲ್ಲಿ ಮೂವರಿದ್ದರು. ಮೂವರು ಕಾರ್ ಸಮೇತ ಕೆಳಕ್ಕೆ ಬಿದ್ದಿದ್ದರು.  ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಯಾವುದೇ ತೊಂದರೆಯಾಗಿರಲಿಲ್ಲ. 
ಆದರೇ, ಸೋಷಿಯಲ್ ಮೀಡಿಯಾಗಳಲ್ಲಿ ಕಾರ್ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಸುದ್ದಿಯ ಜೊತೆಗೆ ಕಾರ್ ನಲ್ಲಿದ್ದವರಿಗೆ ಗಂಭೀರ ಗಾಯ, ಕಾರ್ ಚಲಾಯಿಸುತ್ತಿದ್ದ ಮಹಿಳೆ ಸಾವು ಎಂಬೆಲ್ಲಾ ಫೇಕ್  ಸುದ್ದಿಗಳು ಹುಟ್ಟಿಕೊಂಡು ಹರಿದಾಡುತ್ತಿದ್ದವು. 
ಆದರೇ, ಇದಕ್ಕೆಲ್ಲಾ ಈಗ ಥಾರ್ ಕಾರ್ ಚಾಲನೆ ಮಾಡುತ್ತಿದ್ದ ಮಾನಿ ಪವಾರ್ ಎಂಬ ಮಹಿಳೆಯ ಇನ್ಸ್ ಟಾಗ್ರಾಮ್ ವಿಡಿಯೋದಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಏನೂ ಆಗಿಲ್ಲ. ಕಾರಿನಲ್ಲಿ ನಾವು ಮೂರು ಜನರು ಇದ್ದೇವು. ನಾವು ಮೂರು ಜನರು ಕೂಡ ಚೆನ್ನಾಗಿಯೇ ಇದ್ದೇವೆ ಎಂದಿದ್ದಾರೆ.  ಮಾನಿ ಪವಾರ್ ಮಾತನಾಡಿರುವ ಇನ್ಸಟಾಗ್ರಾಮ್ ವಿಡಿಯೋ ಲಿಂಕ್ ಅನ್ನು ಇಲ್ಲಿ ನೀಡಿದ್ದೇವೆ. ಒಮ್ಮೆ ನೋಡಬಹುದು. 



ಕಾರ್ ಚಾಲನೆ ಮಾಡುತ್ತಿದ್ದ ಮಹಿಳೆಯ ಸ್ಥಿತಿ ಗಂಭೀರ, ಮಹಿಳೆಯ ಮೂಗಿಗೆ ಗಂಭೀರ ಗಾಯ, ಮಹಿಳೆ ಸಾವನ್ನಪ್ಪಿದ್ದಾಳೆ ಎಂದೆಲ್ಲಾ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಆದರೇ, ಅದೆಲ್ಲವೂ ಸುಳ್ಳು. ನಾನು ಚೆನ್ನಾಗಿಯೇ ಇದ್ದೇನೆ ಎಂದು ಮಾನಿ ಪವಾರ್ ಎಂಬ ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ. 
ಕಾರ್ ಬಿದ್ದ ಬಳಿಕ ನಾವು ಮೂವರು ಫ್ರಂಟ್ ಡೋರ್ ನಿಂದಲೇ ಹೊರಬಂದೆವು. ಮೂವರಲ್ಲಿ ಯಾರಿಗೂ ಯಾವುದೇ ಗಾಯವಾಗಿಲ್ಲ. ನಾನು ಸತ್ತಿಲ್ಲ, ನಾನು ಬದುಕಿದ್ದೇನೆ. ಫೇಕ್ ವಿಡಿಯೋ ಹರಡುವುದನ್ನು ನಿಲ್ಲಿಸಿ ಎಂದು ಮಾನಿ ಪವಾರ್ ಎಂಬ ಮಹಿಳೆ ವಿಡಿಯೋದಲ್ಲಿ ಹೇಳಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Delhi thar car accident reality
Advertisment