ಆಸ್ತಿಗಳ ಎ ಖಾತಾ ಎಂದರೇನು? ಬಿ ಖಾತಾ ಎಂದರೇನು? ಖಾತಾ ಪಡೆಯುವ ಪ್ರಕ್ರಿಯೆ ಹೇಗಿರುತ್ತೆ?

ಸಾಮಾನ್ಯವಾಗಿ ಆಸ್ತಿಗಳನ್ನು ಖರೀದಿಸುವಾಗ ಎ ಖಾತಾವೋ, ಬಿ ಖಾತೆಯೇ ಎಂಬ ಪ್ರಶ್ನೆ ಕೇಳುತ್ತೇವೆ. ಎ ಖಾತಾ ಎಂದರೇನು ಎಂಬುದೇ ಬಹಳ ಮಂದಿಗೆ ಗೊತ್ತಿಲ್ಲ. ನಗರಾಭಿವೃದ್ದಿ ಪ್ರಾಧಿಕಾರ, ನಗರ ಯೋಜನಾ ಪ್ರಾಧಿಕಾರದಿಂದ ಅನುಮೋದನೆ ಪಡೆದು ಲೇಔಟ್ ನಿರ್ಮಿಸಿದ್ದರೇ ಅಂಥ ಸೈಟ್‌ ಅನ್ನು ಎ ಖಾತಾ ಎನ್ನಲಾಗುತ್ತೆ.

author-image
Chandramohan
GBA E KHATHA
Advertisment


ನೀವು ಕರ್ನಾಟಕದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಪ್ರಾಪರ್ಟಿ ಖರೀದಿ ಮಾಡ್ತಿದ್ದೀರಾ? ಹಾಗಾದ್ರೆ ಈ 'ಖಾತಾ' ಅನ್ನೋ ಪದ ನಿಮಗೆ ತುಂಬಾನೇ ಮುಖ್ಯ. ಸರಳವಾಗಿ ಹೇಳ್ಬೇಕಂದ್ರೆ, ಒಂದು ಲ್ಯಾಂಡ್ ಅಥವಾ ಬಿಲ್ಡಿಂಗ್ ಯಾರ ಹೆಸರಲ್ಲಿದೆ ಮತ್ತು ಅದರ ಟ್ಯಾಕ್ಸ್ ಡೀಟೇಲ್ಸ್ ಏನಿದೆ ಅಂತ ತೋರಿಸೋ ಅಧಿಕೃತ ದಾಖಲೆಯೇ ಈ ಖಾತಾ. ಪ್ರಾಪರ್ಟಿ ಖರೀದಿ ಮಾಡುವ ಮುನ್ನ ಇದು A ಖಾತಾನಾ ಅಥವಾ B ಖಾತಾನಾ ಅಂತ ಚೆಕ್ ಮಾಡೋದು ನಿಮ್ಮ ಮೊದಲ ಕೆಲಸ. ಈ ವಿಡಿಯೋದಲ್ಲಿ ಖಾತಾಗಳ ಬಗ್ಗೆ ಕಂಪ್ಲೀಟ್​ ಡೀಟೈಲ್ಸ್​ ಕೊಡ್ತೀವಿ ನೋಡಿ!

ಮೊದಲಿಗೆ A ಖಾತಾ ಅಂದ್ರೇನು? ಅಂತಾ ಹೇಳೋದಾದ್ರೆ!
ಯೆಸ್​​, ಮೊದಲು 'A ಖಾತಾ' ಬಗ್ಗೆ ತಿಳಿಯೋಣ. ಇದು ಫುಲ್ಲಿ ಲೀಗಲ್ ಮತ್ತು ಗೌರ್ನಮೆಂಟ್ ರೂಲ್ಸ್ ಪ್ರಕಾರ ಇರೋ ಪ್ರಾಪರ್ಟಿ. ನಿಮ್ಮ ಹತ್ತಿರ A ಖಾತಾ ಇದ್ರೆ, ನೀವು ಆರಾಮವಾಗಿ ಬ್ಯಾಂಕ್ ಲೋನ್​ ಪಡೀಬಹುದು. ಬಿಲ್ಡಿಂಗ್ ಪ್ಲಾನ್ ಅಪ್ರೂವಲ್ ತಗೋಬಹುದು ಮತ್ತು ಯಾವುದೇ ಟೆನ್ಶನ್ ಇಲ್ಲದೆ ಪ್ರಾಪರ್ಟಿ ಸೇಲ್ ಅಥವಾ ಟ್ರಾನ್ಸ್‌ಫರ್ ಮಾಡಬಹುದು. ಸಿಂಪಲ್ ಆಗಿ ಹೇಳ್ಬೇಕಂದ್ರೆ A ಖಾತಾ ಅಂದ್ರೆ ಸೇಫ್ ಮತ್ತು ಸೆಕ್ಯೂರ್ ಇನ್ವೆಸ್ಟ್‌ಮೆಂಟ್. 
ಇನ್ನೂ B ಖಾತಾ ಅಂದ್ರೇನು? ಅಂತಾ ನೋಡೋದಾದ್ರೆ!
'B ಖಾತಾ' ಅಂದ್ರೆ, ಆ ಪ್ರಾಪರ್ಟಿ ಅಸ್ತಿತ್ವದಲ್ಲಿದೆ. ಆದ್ರೆ ಅದರಲ್ಲಿ ಕೆಲವು ಲೀಗಲ್ ಸಮಸ್ಯೆಗಳಿವೆ ಅಂತ ಅರ್ಥ. ಹೆಚ್ಚಾಗಿ ರೆವೆನ್ಯೂ ಲ್ಯಾಂಡ್ ಮೇಲೆ ಕಟ್ಟಿರೋ ಅಥವಾ ಪ್ಲಾನ್ ಡೀವಿಯೇಷನ್ ಇರೋ ಬಿಲ್ಡಿಂಗ್‌ಗಳಿಗೆ B ಖಾತಾ ಸಿಗುತ್ತೆ. ಇಲ್ಲಿ ನೀವು ಟ್ಯಾಕ್ಸ್ ಕಟ್ತೀರಾ ನಿಜ, ಆದ್ರೆ ಈ ಪ್ರಾಪರ್ಟಿ ಮೇಲೆ ಬ್ಯಾಂಕ್ ಲೋನ್ ಸಿಗೋದು ಕಷ್ಟ. ಹಾಗೆಯೇ ಹೊಸದಾಗಿ ಕನ್​ಸ್ಟ್ರಕ್ಷನ್​​ ಮಾಡಲು ಪರ್ಮಿಷನ್ ಸಿಗೋದಿಲ್ಲ. ಇದು ಒಂದು ರೀತಿ ಟೆಂಪರರಿ ರೆಕಾರ್ಡ್ ಮಾತ್ರ.
E ಖಾತಾ ಏನು ಅಂತಾ ನೋಡೋದಾದ್ರೆ!
ಇತ್ತೀಚೆಗೆ 'E ಖಾತಾ' ಅನ್ನೋ ಮಾತು ಜಾಸ್ತಿ ಕೇಳ್ತಿದ್ದೀರಾ ಅಲ್ವಾ? ಇದು ಯಾವುದೇ ಹೊಸ ಕೆಟಗರಿ ಅಲ್ಲ, ಬದಲಿಗೆ ನಿಮ್ಮ ಖಾತಾದ ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ವರ್ಷನ್ ಅಷ್ಟೇ. ಆನ್‌ಲೈನ್ ಮೂಲಕ ಸಿಗೋ ಈ E ಖಾತಾ A ಖಾತಾ ಕೂಡ ಆಗಿರಬಹುದು ಅಥವಾ B ಖಾತಾ ಕೂಡ ಆಗಿರಬಹುದು. E ಅಂದ್ರೆ ಕೇವಲ ಡಿಜಿಟಲ್ ರೆಕಾರ್ಡ್ ಅಂತಲೇ ಹೊರತು, ಅದು ಪ್ರಾಪರ್ಟಿಯ ಲೀಗಲ್ ಸ್ಟೇಟಸ್ ಅನ್ನ ಡಿಸೈಡ್ ಮಾಡಲ್ಲ.
ಖಾತಾ ಪಡೆಯುವ ಪ್ರೊಸೆಸ್ ಹೇಗೆ ಅಂತಾ ನೋಡೋದಾದ್ರೆ!
ಖಾತಾ ಪಡೆಯೋದು ಹೇಗೆ? ಇದಕ್ಕಾಗಿ ನೀವು ಬಿಬಿಎಂಪಿ ಅಥವಾ ಲೋಕಲ್ ಆಫೀಸ್‌ಗೆ ಹೋಗಿ ಅಪ್ಲಿಕೇಶನ್ ಕೊಡಬೇಕು. ನಿಮ್ಮ ಸೇಲ್ ಡೀಡ್, ಇಸಿ, ಟ್ಯಾಕ್ಸ್ ರಸೀದಿ ಮತ್ತು ಬಿಲ್ಡಿಂಗ್ ಪ್ಲಾನ್ ಅಪ್ರೂವಲ್ ಕಾಪಿಗಳನ್ನ ಸಬ್‌ಮಿಟ್ ಮಾಡಬೇಕಾಗುತ್ತೆ. ಈಗ ಆನ್‌ಲೈನ್ ಪೋರ್ಟಲ್ ಮೂಲಕವೂ ಅಪ್ಲೈ ಮಾಡಿ ಡಿಜಿಟಲ್ ಸಿಗ್ನೇಚರ್ ಇರೋ ಖಾತಾ ಪಡೀಬಹುದು. ನೆನಪಿಡಿ, ಎಲ್ಲ ಡಾಕ್ಯುಮೆಂಟ್ಸ್ ಕರೆಕ್ಟ್ ಆಗಿದ್ರೆ ಮಾತ್ರ ನಿಮಗೆ A ಖಾತಾ ಸಿಗಲು ಸಾಧ್ಯ.
ಕೊನೆಯದಾಗಿ ಒಂದು ಮಾತು, ನೀವು ಹೊಸ ಮನೆ ಅಥವಾ ಸೈಟ್ ತಗೊಳ್ಳುವಾಗ ಯಾವಾಗಲೂ A ಖಾತಾ ಪ್ರಾಪರ್ಟಿಗೆ ಮೊದಲ ಪ್ರಿಫರೆನ್ಸ್ ಕೊಡಿ. B ಖಾತಾ ಕಡಿಮೆ ಬೆಲೆಗೆ ಸಿಗಬಹುದು, ಆದ್ರೆ ಫ್ಯೂಚರ್‌ನಲ್ಲಿ ಲೀಗಲ್ ರಿಸ್ಕ್ ಇರುತ್ತೆ. ಪ್ರಾಪರ್ಟಿ ತಗೊಳ್ಳುವ ಮುನ್ನ ಲಾಯರ್ ಹತ್ತಿರ ಎಲ್ಲಾ ಡಾಕ್ಯುಮೆಂಟ್ಸ್ ವೆರಿಫೈ ಮಾಡಿಸಿ ನಂತರವೇ ಇನ್ವೆಸ್ಟ್‌ಮೆಂಟ್ ಮಾಡಿ. ನಿಮ್ಮ ಹಣ ಮತ್ತು ಪ್ರಾಪರ್ಟಿ ಎರಡೂ ಸೇಫ್ ಆಗಿರಲಿ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

E KHATHA TO GRAM PANCHAYAT PROPERTIES e-khata faceless services BBMP E KHATHA
Advertisment