/newsfirstlive-kannada/media/media_files/2025/09/03/bharathi-met-cm-siddaramaiah-2025-09-03-13-13-23.jpg)
ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದ ಭಾರತಿ ವಿಷ್ಣುವರ್ಧನ್
ಸಾಹಸಸಿಂಹ ವಿಷ್ಣುವರ್ಧನ್ ಅವರಿಗೆ ಕರ್ನಾಟಕ ಸರ್ಕಾರದ ಕ್ಯಾಬಿನೆಟ್ ಸಭೆಯಲ್ಲಿ ಕರ್ನಾಟಕ ರತ್ನ ಪುರಸ್ಕಾರ ನೀಡುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ಅವರು ಇತ್ತೀಚೆಗೆ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಈ ಬಗ್ಗೆ ಮನವಿ ಮಾಡಿದ್ದರು. ಈ ಮನವಿಗೆ ಈಗ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ. ವಿಷ್ಣು ದಾದಾಗೆ ಕರ್ನಾಟಕ ರತ್ನ ಪುರಸ್ಕಾರ ಘೋಷಣೆಯಾಗಿದ್ದಕ್ಕೆ ಭಾರತಿ ವಿಷ್ಣುವರ್ಧನ್ ಸಂತಸ ವ್ಯಕ್ತಪಡಿಸಿದ್ದಾರೆ.
ನ್ಯೂಸ್ ಫಸ್ಟ್ ಜೊತೆ ನಟಿ ಭಾರತಿ ವಿಷ್ಣುವರ್ಧನ್ EXCLUSIVE ಆಗಿ ಮಾತನಾಡಿದ್ದಾರೆ.
75ನೇ ವಸಂತದಲ್ಲಿ ಅವರಿಗೆ ಸಿಗಬೇಕು ಅಂತ ಪ್ರೇರಣೆ ಇತ್ತು. ವಿಷ್ಣು ಅಭಿಮಾನಿಗಳ ಸಂತೋಷವನ್ನ ಎಕ್ಸ್ಪ್ರೆಸ್ ಮಾಡಲಾರೆ. ಅಭಿಮಾನಿಗಳ ಸಂತಸ ನೋಡುತ್ತಿದ್ದರೇ, ಮನಸ್ಸು ತುಂಬಿ ಬರುತ್ತೆ . ಅಭಿಮಾನಿಗಳ ಸಂತೋಷವೇ ನಮ್ಮ ಸಂತೋಷ. ಈ ಕರ್ನಾಟಕ ರತ್ನ ಪ್ರಶಸ್ತಿ ಅಭಿಮಾನಿಗಳಿಗೆ ಅರ್ಪಣೆಯಾಗುತ್ತೆ . ಯಾಕಂದ್ರೇ ಅಭಿಮಾನಿಗಳ ಕೋರಿಕೆ , ಆಸೆ ಮೇರೆಗೆ ಸಿಕ್ಕಿದೆ . ಸಿಎಂ ಸಿದ್ದರಾಮಯ್ಯ & ಸರ್ಕಾರಕ್ಕೆ ಧನ್ಯವಾದಗಳನ್ನ ತಿಳಿಸುವೆ . ಎಲ್ಲಾ ಕಲಾವಿದರ ಮೇಲೂ ಇದೇ ಪ್ರೀತಿ ಇರಲಿ. ಸಂತೋಷಕ್ಕೆ ನಾನು ಭಾವುಕನಾಗಿದ್ದೇನೆ . ಭಾವನೆಗಳಲ್ಲೇ ಗೊತ್ತಾಗುತ್ತೆ.. ಮಾತುಗಳಲ್ಲಿ ಗೊತ್ತಾಗಲ್ಲ . ಮೈಸೂರು ಅಂದ್ರೇ ಅಭಿಮಾನ. ವಿಷ್ಣು ಇಷ್ಟ ಪಟ್ಟ ಜಾಗ ಮೈಸೂರು. ನಮ್ಮಿಂದ ಏನೂ ಆಗಿಲ್ಲ.. ಡಾ.ವಿಷ್ಣು ಅವರಿಗೆ ಮಾಡಿಸಿಕೊಳ್ಳಬೇಕಿತ್ತು . ಡಾ.ವಿಷ್ಣು ಅವರನ್ನ ಮಿಸ್ ಮಾಡಿಕೊಳ್ಳುತ್ತಿಲ್ಲ. ನನ್ನ ಜೊತೆಗೆ ಡಾ.ವಿಷ್ಣುವರ್ಧನ್ ಸದಾ ಇರುತ್ತಾರೆ ಎಂದು ಭಾರತಿ ವಿಷ್ಣುವರ್ಧನ್ ತಮ್ಮ ಸಂತಸವನ್ನು ನ್ಯೂಸ್ ಫಸ್ಟ್ ಜೊತೆ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.