Advertisment

ದೆಹಲಿಯ ಚೈತನ್ಯಾನಂದ ಸ್ವಾಮೀಜಿಯ ಲೇಡಿ ಗ್ಯಾಂಗ್ ಕೆಲಸ ಏನು? ಸ್ವಾಮೀಜಿಗೆ ಸೇವೆ, ಫಾರಿನ್ ಟೂರ್‌ ಆಮಿಷ!!

ದೆಹಲಿಯ ಶೃಂಗೇರಿ ಶಾರದಾ ಪೀಠದ ಇನ್ಸಿಟಿಟ್ಯೂಟ್‌ ನಲ್ಲಿ ಡೈರೆಕ್ಟರ್ ಚೈತನ್ಯಾನಂದ ಸ್ವಾಮೀಜಿ ತನ್ನ ಸೇವೆಗೆ ಲೇಡಿ ಗ್ಯಾಂಗ್ ಕಟ್ಟಿಕೊಂಡಿದ್ದ. ಲೇಡಿ ಗ್ಯಾಂಗ್ ಕಾಲೇಜು ವಿದ್ಯಾರ್ಥಿನಿಯರನ್ನು ಸ್ವಾಮಿ ಸೇವೆಗೆ ಕಳಿಸುತ್ತಿದ್ದರು. ಸ್ವಾಮೀಜಿ ಈಗ ಎಲ್ಲಿ ಹೋದ ಅಂತ ಪೊಲೀಸರು ಶೋಧ ನಡೆಸುತ್ತಿದ್ದಾರೆ.

author-image
Chandramohan
swami chaitanyanda saraswathi swamiji

ದೆಹಲಿಯ ಚೈತನ್ಯಾನಂದ ಸ್ವಾಮೀಜಿಯಿಂದ ಲೇಡಿ ಗ್ಯಾಂಗ್ ರಚನೆ

Advertisment
  • ದೆಹಲಿಯ ಚೈತನ್ಯಾನಂದ ಸ್ವಾಮೀಜಿಯಿಂದ ಲೇಡಿ ಗ್ಯಾಂಗ್ ರಚನೆ
  • ಈತನ ಸೇವೆಗೆ ಹುಡುಗಿಯರನ್ನು ಕಳಿಸೋದು ಲೇಡಿ ಗ್ಯಾಂಗ್ ಕೆಲಸ
  • ಹುಡುಗಿಯರಿಗೆ ಫಾರಿನ್ ಟೂರ್ ಆಮಿಷ, ಬೆದರಿಕೆನೂ ಹಾಕುತ್ತಿದ್ದ

ಸಾಧುಗಳು ಕಾಮಕಾಂಡದಲ್ಲಿ ಸಿಕ್ಕಿ ಹಾಕಿಕೊಳ್ತಾ ಇರೋದು ಇದೇ ಮೊದಲು ಅಲ್ಲ. ಇದೇ ಕೊನೆ ಅನ್ನೋದ್‌ ಅಲ್ಲ. ಆದ್ರೆ, ಪೊಲೀಸರಿಗೆ ಸಿಕ್ಕಿರೋ ಸಾಕ್ಷ್ಯಗಳತ್ತ ದೃಷ್ಟಿ ನೆಟ್ಟರೆ ಈ ಸ್ವಾಮಿ ಪಕ್ಕಾ ಖರ್ತನಾಕ್‌. ಯಾಕಂದ್ರೆ, ಈತ ಕಾಲೇಜಿನಲ್ಲಿ, ಹಾಸ್ಟೇಲ್‌ನಲ್ಲಿ ಸ್ವಾಮಿಕಾರ್ಯಕ್ಕಾಗಿಯೇ ಲೇಡಿ ಗ್ಯಾಂಗ್‌ವೊಂದನ್ನ ಹುಟ್ಟಾಕಿದ್ದ. ಆ ಗ್ಯಾಂಗ್‌ನ ಚೂ ಬಿಟ್ಟು ವಿದ್ಯಾರ್ಥಿನಿಯರನ್ನ ಹೇಗೆ ಬಲೆಯೊಳಗೆ ಬೀಳಿಸ್ಕೊಳ್ತಿದ್ದ? ಆರ್ಥಿಕವಾಗಿ ದುರ್ಬಲವಾಗಿರೋ ವಿದ್ಯಾರ್ಥಿಗಳನ್ನೇ ಈತ ಟಾರ್ಗೆಟ್‌ ಮಾಡ್ತಿದ್ದ ರಹಸ್ಯ ಏನು? ಅದೆಲ್ಲವನ್ನು ಹೇಳ್ತೀವಿ ಈ ರಿಪೋರ್ಟ್‌ನಲ್ಲಿ. 
ಸ್ವಾಮಿ ಚೈತನ್ಯಾನಂದ ಅಲಿಯಾಸ್‌ ಪಾರ್ಥ ಸಾರಥಿ... ಈತ ನೋಡೋದಕ್ಕೆ ಸಾಧು. ಆದ್ರೆ, ಒಳಗೆ ಮಾತ್ರ ಪಕ್ಕಾ ಕಾಮಾಂಧ ಅನ್ನೋದನ್ನ ಪೊಲೀಸರಿಗೆ ಸಿಕ್ಕಿರೋ ಸಾಕ್ಷಿಗಳೇ ಸಾರಿ ಸಾರಿ ಹೇಳ್ತಿವೆ. ಈತನ ತೀಟೆಗೆ ಅದೆಷ್ಟು ವಿದ್ಯಾರ್ಥಿನಿಯರು ಲೈಂಗಿಕ ದೌರ್ಜನ್ಯಕ್ಕೆ ಬಲಿಯಾಗಿದ್ದಾರೋ ಗೊತ್ತಿಲ್ಲ. ಆದ್ರೆ, ಇದೀಗ 17 ವಿದ್ಯಾರ್ಥಿನಿಯರು ಧೈರ್ಯ ಮಾಡಿ ಪೊಲೀಸ್‌ ಠಾಣೆಯ ಮೆಟ್ಟಿಲೇರಿದ್ದಾರೆ. ಹಾಗೇ ಪೊಲೀಸ್ರು ಸುಮಾರು 300 ಪುಟಗಳನ್ನ ಮೀರಿದ ಸಾಕ್ಷ್ಯಾಧಾರವನ್ನ ಕಲೆ ಹಾಕಿದ್ದಾರೆ. ಸ್ವಾಮಿ ಯಾವ್‌ ರೀತಿಯಾಗಿ ಹುಡ್ಗೀರಿಗೆ ದಾಳ ಉರುಳಿಸ್ತಿದ್ದ? ಅವರಿಗೆ ಮೆಸೇಜ್‌ ಮಾಡಿ ಹೇಗೆ ಮಂಚಕ್ಕೆ ಆಹ್ವಾನಿಸ್ತಿದ್ದ? ಒಮ್ಮೆ ಮಂಚಕ್ಕೆ ಬರದೇ ಇದ್ರೆ ಏನ್‌ ಮಾಡ್ತಿದ್ದ? ಅದೆಲ್ಲದ್ದಕ್ಕೂ ಪೊಲೀಸ್ರಿಗೆ ಸಾಕ್ಷ್ಯ ಸಿಕ್ಕಿದೆ. 
ಕಾಮಕಾಂಡ!
ಹೌದಾ ಸ್ವಾಮಿ?
'ಸ್ವಾಮಿ'ಕಾರ್ಯಕ್ಕೆ ಕಟ್ಟಿದ್ದ 'ಲೇಡಿಗ್ಯಾಂಗ್‌'!
ಭಲೇ ಕಿಲಾಡಿ ಸ್ವಾಮಿ ಅನ್ನೋದ್‌ ಇದಕ್ಕೆ ನೋಡಿ. ಈತ ತನ್ನ ಸ್ವಾಮಿಕಾರ್ಯ ಪೂರೈಕೆಗಾಗಿಯೇ ವಿಶೇಷ ಗ್ಯಾಂಗ್‌ ಅನ್ನ ಕಟ್ಟಿಕೊಂಡಿದ್ದ. ಆ ಗ್ಯಾಂಗ್‌ನಲ್ಲಿದ್ದವರೆಲ್ಲ ಲೇಡಿಸ್‌ಗಳು ಆಗಿದ್ರು. ಹೌದು, ಹಾಸ್ಟೇಲ್‌ನಲ್ಲಿ ವಾರ್ಡನ್‌ ಸೇರಿದಂತೆ ಮೂನಾಲ್ಕು ಮಹಿಳೆಯರು ಆ ಗ್ಯಾಂಗ್‌ನಲ್ಲಿದ್ರು. ಆ ಗ್ಯಾಂಗ್‌ ಏನು ಮಾಡ್ತಿತ್ತು ಅಂತ ಕೇಳಿದ್ರೆ ಶಾಂಕ್‌ ಆಗುತ್ತೆ.
              'ಲೇಡಿಗ್ಯಾಂಗ್‌ ರಹಸ್ಯ ಬಯಲು'
ಮೂರು ನಾಲ್ಕು  ಮಹಿಳೆಯರನ್ನು ಒಳಗೊಂಡ  ಗ್ಯಾಂಗ್‌ ಅನ್ನು ಈ ಬಾಬಾ ಕಟ್ಟಿಕೊಂಡಿದ್ದ. ಆ ಗ್ಯಾಂಗ್‌ನ ಕೆಲ್ಸ ಏನು ಅಂದ್ರೆ, ಸ್ವಾಮಿ ಯಾವ ಹುಡ್ಗಿ ಬಗ್ಗೆ ಹೇಳ್ತಾನೋ ಆ ಹುಡ್ಗಿಯ ಮನವೋಲಿಕೆ ಮಾಡೋದು, ಅವರನ್ನ ಕರೆದುಕೊಂಡು ಬಂದು ಈತನ ರೂಮ್‌ಗೆ ಬಿಡೋದಾಗಿತ್ತು. ಅದೇನ್‌ ಅಂದ್ರೆ, ಈ ಸ್ವಾಮಿ ಮುಂಚಿತವಾಗಿ ಹುಡ್ಗೀರಿಗೆ ವಾಟ್ಸಾಪ್‌ ಮಾಡಿ ಮಂಚಕ್ಕೆ ಬಾ ಅಂತ ಆಹ್ವಾನ ಕೊಟ್ಟಿರುತ್ತಿದ್ದ. ಆದ್ರೆ, ವಿದ್ಯಾರ್ಥಿನಿಯರು ಅದಕ್ಕೆ ಒಪ್ಪಿಕೊಳ್ತಾ ಇರಲಿಲ್ಲ. ಆವಾಗ ಈ ಲೇಡಿಗ್ಯಾಂಗ್‌ ಎಂಟ್ರಿಕೊಡ್ತಾ ಇತ್ತು. ಇವ್ರು ಹುಡ್ಗೀರನ್ನ ಮನವೊಲೀಸೋ ಕೆಲಸ ಮಾಡ್ತಿದ್ರು. ಆಮೇಲೆ ಬಾಬಾನ ರೂಮ್‌ಗೆ ಕರ್ಕೊಂಡ್‌ ಹೋಗಿ ಬಿಡ್ತಾ ಇದ್ದರು. ಹಾಗೇ ಬಾಬಾ ರೂಮ್‌ನಿಂದ ರಿಟರ್ನ್‌ ಬಂದ್ಮೇಲೆ ಹುಡ್ಗೀರ ಮೊಬೈಲ್‌ ಚೆಕ್‌ ಮಾಡ್ತಾ ಇತ್ತು ಈ ಲೇಡಿ ಗ್ಯಾಂಗ್‌. ಒಂದ್‌ ವೇಳೆ ಮೊಬೈಲ್‌ನಲ್ಲಿ ಬಾಬಾ ಮಾಡಿರೋ ಮೆಸೇಜ್‌, ಸ್ಕ್ರೀನ್‌ ಶಾಟ್‌ಗಳು ಇದ್ರೆ ಅದೆಲ್ಲವನ್ನು ಡಿಲೀಟ್‌ ಮಾಡ್ತಿದ್ರು. ಸ್ವಾಮಿ ರೂಮ್‌ನಲ್ಲಿ ಏನಾದ್ರೂ ವಿಡಿಯೋ ಮಾಡ್ಕೊಂಡಿದ್ರೂ ಅದನ್ನು  ಡಿಲೀಟ್‌ ಮಾಡ್ತಿದ್ರು. 


ಕಾಮಕಾಂಡ!
ಹೌದಾ ಸ್ವಾಮಿ?
ಆರ್ಥಿಕವಾಗಿ ದುರ್ಬಲವಾಗಿದ್ದವರೇ ಸ್ವಾಮಿ ಟಾರ್ಗೆಟ್‌!
ಸಮಾಜದಲ್ಲಿ ಈತನಿಗೆ ಘನತೆ ಗೌರವ ಎಲ್ಲವೂ ಇತ್ತು. ಒಂದು ದೊಡ್ಡ ಸಂಸ್ಥೆಯ ಮುಖ್ಯಸ್ಥ ಅನ್ನೋ ಹಿರಿಮೆ ಇತ್ತು. 28 ಪುಸ್ತಕಗಳನ್ನ ಬರೆದಿರೋ ವ್ಯಕ್ತಿ ಅನ್ನೋ ಖ್ಯಾತಿ ಇತ್ತು. ಅದೆಲ್ಲದ್ದಕ್ಕಿಂತ ಮುಖ್ಯವಾಗಿ ಖಾವಿಧಾರಿ ಅನ್ನೋ ಭಕ್ತಿ ಇತ್ತು. ಆದ್ರೆ, ಈತ ತಾನು ಧರಿಸ್ತಿದ್ದ ಖಾವಿಗೂ ಅಗೌರವ ತಂದಿದ್ದಾನೆ. ಹಾಗಂತ ಖಾವಿತೊಟ್ಟು ಇಂತಾ ಕೇಸ್‌ನಲ್ಲಿ ತಗ್ಲಾಕೊಳ್ತಾ ಇರೋದ್ರಲ್ಲಿ ಇವರೇನು ಮೊದಲಿಗರಲ್ಲ. ಹಾಗೊಂತ ಕೊನೆಯವರೂ ಅಲ್ಲ. ಆದ್ರೆ, ಅವರೆಲ್ಲರಿಗಿಂತ ಈ ಸ್ವಾಮಿಯ ಕುತಂತ್ರ ಬುದ್ಧಿ ವಿಭಿನ್ನ.
ವಿಶೇಷ ಅಂದ್ರೆ, ಈ ಸ್ವಾಮಿ ಕಾಲೇಜಿನಲ್ಲಿರೋ ಎಲ್ಲಾ ವಿದ್ಯಾರ್ಥಿನಿಯರ ಮೇಲೂ ಕಣ್ಣು ಹಾಕುತ್ತಾ  ಇರಲಿಲ್ಲ. ಯಾರು  ಯಾರು ಆರ್ಥಿಕವಾಗಿ ದುರ್ಬಲರಾಗಿದ್ದಾರೋ? ವಿಶೇಷ ಕೋಟಾದಲ್ಲಿ ಕಾಲೇಜಿಗೆ ಎಂಟ್ರಿಯಾಗಿದ್ದಾರೋ? ಅವರನ್ನೇ ಟಾರ್ಗೆಟ್‌ ಮಾಡ್ತಿದ್ದ. ಅದರ ಮುಖ್ಯ ಉದ್ದೇಶ ಏನು ಅಂದ್ರೆ, ಆರ್ಥಿಕವಾಗಿ ಬಲ ಇಲ್ಲದ ವಿದ್ಯಾರ್ಥಿನಿಯರು ಮರ್ಯಾದೆಗೆ ಅಂಜುತ್ತಾರೆ. ಅವರು ತನ್ನ ಕೃತ್ಯದ ಬಗ್ಗೆ  ಬೇರೆಯವರ ಬಳಿ ಹೇಳಿಕೊಳ್ಳುವುದಿಲ್ಲ. ಅವರಿಗೆ ಪ್ರಭಾವಿಗಳ ಸಂಪರ್ಕವೂ ಇರೋದಿಲ್ಲ. ಹೀಗಾಗಿ ತಾನು ಸೇಫ್‌ ಆಗ್ತೀನಿ ಅನ್ನೋ ಮನೋಭಾವ ಈತನಿಗೆ ಇತ್ತು. ಒಂದು ವೇಳೆ ಬಲಿಷ್ಠ ಕುಟುಂಬದ ವಿದ್ಯಾರ್ಥಿನಿಯರ ತಂಟೆಗೆ ಹೋದ್ರೆ ಅವರಿಗೆ ಪ್ರಭಾವಿಗಳ ಸಂಪರ್ಕ ಇರುತ್ತೆ. ತನ್ನ ಕಾಮಕಾಂಡ ಒಂದಲ್ಲ ಒಂದು ದಿನ ಬಟಾಬಯಲಾಗುತ್ತೆ ಅನ್ನೋ ಭಯಭೀತಿ ಈ ಸ್ವಾಮಿಗೆ ಇತ್ತು.
ಕಾಮಕಾಂಡ!
ಹೌದಾ ಸ್ವಾಮಿ?
ವಿದೇಶಿ ಟೂರ್‌ಗೆ ಆಹ್ವಾನ ನೀಡ್ತಿದ್ದ ಸ್ವಾಮಿ!
ಈ ಸ್ವಾಮಿ ನೋಡೋದಕ್ಕೆ ಮಾತ್ರ ಕಾವಿಧಾರಿ, ಆದ್ರೆ ನರನಾಡಿಗಳಲ್ಲಿ ಅಶ್ಲೀಲ ರಕ್ತವನ್ನೇ ತುಂಬಿಕೊಂಡಿದ್ದ. ಕೈಗೆ ಮೊಬೈಲ್‌ ಎತ್ತಿಕೊಂಡ್ರೆ ಸಾಕು ಅಶ್ಲೀಲ ಪಂದಪುಂಜಗಳೇ ಹೊರಬರ್ತಾ ಇದ್ವು. ಆರಂಭದಲ್ಲಿ ಚೆಂದವಾಗಿ ಮಾತನಾಡುತ್ತಿದ್ದ ಸ್ವಾಮೀಜಿ ,  ಆಮೇಲೆ ನೇರವಾಗಿ ಮಂಚಕ್ಕೆ ಕರೀತಾ ಇದ್ದ. ಇನ್ನೊಂದ್ ಅಂದ್ರೆ, ಈತನಿಗೆ ವಿದೇಶಿ ಟೂರ್‌ ಹೋಗೋ ಹುಚ್ಚು ಇತ್ತು. ಆ ಸಂದರ್ಭದಲ್ಲಿ ಕಾಲೇಜು ಹುಡ್ಗೀರನ್ನ ಕರ್ಕೊಂಡ್‌ ಹೋಗ್ತಿದ್ದ ಅಂತ ಹೇಳಲಾಗ್ತಿದೆ. ಹೌದು, ಯಾವ ವಿದ್ಯಾರ್ಥಿನಿ ಈತನ ಜೊತೆ ಚಾಟಿಂಗ್‌ ಮಾಡ್ತಾಳೋ ಆಕೆಗೆ ಈತ ಫಾರಿನ್‌ ಟೂರ್‌ ಆಫರ್‌ ಕೊಡ್ತಾ ಇದ್ದ. ನೀನು ನನ್ನ ಜೊತೆ ವಿದೇಶಕ್ಕೆ ಬಾ. ನೀನು ಒಂದ್‌ ರೂಪಾಯಿ ಖರ್ಚು ಮಾಡಬೇಕಾಗಿಲ್ಲ. ಎಲ್ಲವನ್ನು ನಾನು ನೋಡಿಕೊಳ್ತೀನಿ. ಕಾಲೇಜಿನಲ್ಲಿ ನೀನು ಪಾಸಾಗುವುದಕ್ಕೆ ಏನೇನ್‌ ಬೇಕೋ ಅದೆಲ್ಲವನ್ನು ಮಾಡ್ತೀನಿ ಅನ್ನೋ ಆಮಿಷ ಒಡ್ಡುತ್ತಿದ್ದ. ಹಾಗೊಂದು ವೇಳೆ ವಿದ್ಯಾರ್ಥಿನಿಯರು ವಿರೋಧ ವ್ಯಕ್ತಪಡಿಸಿದರೇ, ಅವರಿಗೆ ಬೆದರಿಕೆ ಹಾಕ್ತಿದ್ದ. ವೃತ್ತಿ ಜೀವನವನ್ನೇ ಹಾಳು ಮಾಡೋ ಧಮ್ಕಿ ಹಾಕ್ತಿದ್ದ ಅನ್ನೋ ಆರೋಪ ಕೇಳಿಬರ್ತಿದೆ. 

Advertisment

Swami chaitanyananda swamiji

ಶೃಂಗೇರಿ ಶಾರದಾ ಪೀಠದಿಂದ ಈತನನ್ನು ಮ್ಯಾನೇಜ್ ಮೆಂಟ್ ಕಾಲೇಜಿನಿಂದ ವಜಾ ಮಾಡಿ ಹೇಳಿಕೆ ಬಿಡುಗಡೆ

ವಿಶೇಷ ಪೊಲೀಸ್‌ ತಂಡ ರಚನೆ, ಸ್ವಾಮಿ ಎಸ್ಕೇಪ್‌!
ವೇಷ ಮರೆಸಿಕೊಂಡು ವಿದೇಶಕ್ಕೆ ಪಲಾಯನ ಸ್ಕೇಚ್‌ ಹಾಕಿದ್ನಾ?
ದೆಹಲಿಯ ವಸಂತ್ ಕುಂಜ್‌ನಲ್ಲಿರುವ ಶ್ರೀ ಶಾರದಾ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನ ಡೈರೆಕ್ಟರ್‌ ಆಗಿದ್ದ ಸ್ವಾಮಿಯ ಮೂಲ ಹೆಸರು ಪಾರ್ಥ ಸಾರಥಿ. ಚಿಕಾಗೋ ಬೂತ್ ವಿಶ್ವವಿದ್ಯಾಲಯದಿಂದ ಎಂಬಿಎ ಮತ್ತು ಪಿಎಚ್‌ಡಿ ಪದವಿ ಪಡೆದಿದ್ದಾನೆ. ಸಂತರ ಸಂಪರ್ಕಕ್ಕೆ ಬಂದ್ಮೇಲೆ ಸ್ವಾಮೀಜಿ ಆಗಿದ್ದಾರೆ. ಸುಮಾರು 28 ಪುಸ್ತಕಗಳನ್ನು ಬರೆದಿದ್ದು, ಪುಸ್ತಕದ ಮುನ್ನುಡಿಯನ್ನು  ದೊಡ್ಡ ದೊಡ್ಡ ವ್ಯಕ್ತಿಗಳೇ ಬರೆದಿದ್ದಾರೆ. ಹೀಗಾಗಿ  ಇದುವರೆಗೂ ಈತ ಏನ್‌ ಮಾಡ್ತಿದ್ದ ಅಂದ್ರೆ ತನ್ನ ವಿರುದ್ಧ ಯಾವುದೇ ದೂರು ದಾಖಲಾಗದಂತೆ ನೋಡಿಕೊಳ್ತಿದ್ದ. ಒಂದು ವೇಳೆ ಕಂಪ್ಲೇಂಟ್‌ ದಾಖಲಾದ್ರೂ ತನ್ನ ಪ್ರಭಾವವನ್ನ ಬಳಸಿ ಕ್ಲೋಸ್‌ ಮಾಡಿಸ್ತಿದ್ದ. 2009ರಲ್ಲಿ ಮತ್ತು 2016 ರಲ್ಲಿಯೂ ಲೈಂಗಿಕ ದೌರ್ಜನ್ಯದ ದೂರು ದಾಖಲಾಗಿತ್ತು ಅನ್ನೋದನ್ನ ನಾವು ಇಲ್ಲಿ ನೆನಪಿಸಿಕೊಳ್ಳಬಹುದು. 
ಸ್ವಾಮಿ ವಿರುದ್ಧ ಗಂಭೀರ ಸ್ವರೂಪದ ದೂರು ದಾಖಲಾಗಿರೋ ಹಿನ್ನೆಲೆಯಲ್ಲಿ,  ಹಾಗೇ 17 ವಿದ್ಯಾರ್ಥಿನಿಯರು ಮಾಡಿರೋ ಆರೋಪಕ್ಕೆ ಸುಮಾರು 300 ಪುಟಗಳ ಸಾಕ್ಷ್ಯ ಸಿಕ್ಕಿರೋ ಹಿನ್ನೆಲೆಯಲ್ಲಿ ಪೊಲೀಸರು ವಿಶೇಷ ತನಿಖಾ ತಂಡ ರಚನೆ ಮಾಡಿದ್ದಾರೆ. ವಿವಿಧ ರಾಜ್ಯಗಳಲ್ಲಿರೋ ಸ್ವಾಮಿಯ ಅಡಗು ತಾಣಗಳ ಮೇಲೆ ಪೊಲೀಸರು  ಈಗಾಗಲೇ ದಾಳಿ ಮಾಡಿದ್ದಾರೆ. ಆದ್ರೂ ಸ್ವಾಮೀಜಿ ಪತ್ತೆಯಾಗಿಲ್ಲ. ಅವರ ಮೊಬೈಲ್‌ ಕೂಡ ಸಂಪರ್ಕಕ್ಕೆ  ಸಿಕ್ತಾ ಇಲ್ಲ. ಹೀಗಾಗಿ ಸ್ವಾಮೀಜಿ ಏನಾದ್ರೂ ವಿದೇಶಕ್ಕೆ ಪರಾರಿಯಾಗಿದ್ದಾರಾ? ಇಲ್ಲವೇ ವಿದೇಶಕ್ಕೆ ಪರಾರಿಯಾಗೋದಕ್ಕೆ ವೇಷ ಮರೆಯಿಸಿಕೊಂಡಿದ್ದಾರಾ? ಅನ್ನೋ ಪ್ರಶ್ನೆ ಕಾಣಿಸಿಕೊಳ್ತಿದೆ. ಈ ಸ್ವಾಮಿ ಆಗಾಗ ಬೇರೆ ಬೇರೆ ದೇಶಕ್ಕೆ ಹೋಗ್ತಾ ಇದ್ದವರು. ಹೀಗಾಗಿ ವಿದೇಶಕ್ಕೆ ಪರಾರಿಯಾಗಿದ್ರೂ ಅಚ್ಚರಿ ಇಲ್ಲ. ಇನ್ನು ವೇಷ ಮರೆಯಿಸಿಕೊಂಡಿದ್ರೂ ಇರಬಹುದು.  ಈ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲಾ ಏರ್‌ಪೋರ್ಟ್‌ಗೂ ಸಂದೇಶ ರವಾನಿಸಿದ್ದಾರೆ. ದಾಖಲೆಗಳನ್ನ ನೀಡಿ ಸ್ವಾಮಿ ಕಂಡ್ರೆ ಅಲ್ಲಿಯೇ ವಶಕ್ಕೆ ಪಡೆಯುವಂತೆ ಆದೇಶ ಮಾಡಿದ್ದಾರೆ.
ಒಟ್ಟಾರೆಯಾಗಿ ಹೇಳ್ಬೇಕು ಅಂದ್ರೆ, ಸ್ವಾಮಿ ತಮ್ಮ ಹುದ್ದೆಯನ್ನ ದುರುಪಯೋಗ ಮಾಡಿಕೊಂಡಿದ್ದಾರೆ. 
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಆದಷ್ಟು ಬೇಗ ಪೊಲೀಸರು ಈ ಸ್ವಾಮಿಯನ್ನ ಬಂಧಿಸಿ ನೊಂದ ವಿದ್ಯಾರ್ಥಿನಿಯರಿಗೆ ನ್ಯಾಯ ಕೊಡಿಸ್ಬೇಕಾಗಿದೆ. ಆ ಕೆಲಸವನ್ನ ದೆಹಲಿ ಪೊಲೀಸರು ಮಾಡ್ತಾರೆ ಅನ್ನೋ ಭರವಸೆ ಇಡೋಣ.

ಖಾವಿಧಾರಿಗಳು ಅಂದ್ರೆ ಘನತೆ ಗೌರವ ಇರುತ್ತೆ..ಆದ್ರೆ, ಅದೆಷ್ಟೋ ಜನ ಇಂದು ಖಾವಿತೊಟ್ಟು ಅದರ ಮಹತ್ವ ಹಾಳು ಮಾಡ್ತಿದ್ದಾರೆ. ಇಂತಾ ಸ್ವಾಮಿಗಳನ್ನ ಅರೆಸ್ಟ್‌ ಮಾಡಿ ಕಠಿಣ ಜೈಲು ಶಿಕ್ಷೆ ಆಗುವಂತೆ ಮಾಡ್ಬೇಕು. ಹಾಗಾದ್ರೆ, ಮಾತ್ರ ನೊಂದ ಮಹಿಳೆಯರಿಗೆ ನ್ಯಾಯ ಕೊಡಿಸಲು ಸಾಧ್ಯ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

swami chaitanyananda saraswathi swamiji sex scandal
Advertisment
Advertisment
Advertisment