ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಕೇಸ್ ನಲ್ಲಿ ಮುಂದೇನಾಗುತ್ತೆ? ಸಂತ್ರಸ್ತರು ದೂರು ಕೊಟ್ಟರೇ ಸಂಕಷ್ಟ!

ಡಿಜಿಪಿ ರಾಮಚಂದ್ರರಾವ್ ರಾಸಲೀಲೆ ಪ್ರಕರಣ ರಾಜ್ಯದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದೆ. ಈಗ ಮುಂದೇನಾಗುತ್ತೆ ಎಂಬ ಕುತೂಹಲವೂ ಇದೆ. ಸಂತ್ರಸ್ತ ಮಹಿಳೆಯರು ದೂರು ಕೊಟ್ಟರೇ, ಎಫ್ಐಆರ್ ದಾಖಲಿಸಿ ಪೊಲೀಸರು ತನಿಖೆ ನಡೆಸುತ್ತಾರೆ. ಜೊತೆಗೆ ಸರ್ಕಾರವು ಸ್ವಪ್ರೇರಣೆಯಿಂದ ಈ ಕೇಸ್ ಬಗ್ಗೆ ತನಿಖೆ ನಡೆಸಬೇಕಾಗುತ್ತೆ.

author-image
Chandramohan
DGP RAMCHANDRA RAO (1)

ಡಿಜಿಪಿ ರಾಮಚಂದ್ರರಾವ್‌ ಗೆ ಸಂಕಷ್ಟ ಶುರು!

Advertisment
  • ಡಿಜಿಪಿ ರಾಮಚಂದ್ರರಾವ್‌ ಗೆ ಸಂಕಷ್ಟ ಶುರು!
  • ಸಂತ್ರಸ್ಥ ಮಹಿಳೆಯರು ದೂರು ಕೊಟ್ಟರೇ, ಎಫ್ಐಆರ್ ದಾಖಲು
  • ಇಲ್ಲದಿದ್ದರೇ, ಸರ್ಕಾರವೇ ತನಿಖೆ ನಡೆಸಿ ಕ್ರಮ ಕೈಗೊಳ್ಳಬಹುದು

ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಇಂದು ಬಿಡುಗಡೆಯಾಗಿದೆ. ರಾಜ್ಯದ ಡಿಜಿಪಿ ದರ್ಜೆಯ ಅಧಿಕಾರಿಯ ಸೆಕ್ಸ್ ಪುರಾಣದ ವಿಡಿಯೋ ರಾಜ್ಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ  ಪ್ರಕರಣದಲ್ಲಿ ಮುಂದೇನಾಗುತ್ತೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.  ಈ ಪ್ರಕರಣದಲ್ಲಿ ಸಂತ್ರಸ್ತ ಮಹಿಳೆಯರು ದೂರು ಕೊಡ್ತಾರಾ? ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.  ಸಂತ್ರಸ್ತ ಮಹಿಳೆಯರು  ದೂರು ಕೊಟ್ಟರೆ ಕ್ರಿಮಿನಲ್ ಕೇಸ್ ದಾಖಲಾಗುತ್ತೆ.  ಯಾವ ಠಾಣೆಗೆ ದೂರು ಕೊಡುತ್ತಾರೋ ಆ ಠಾಣೆ ಪೊಲೀಸರಿಂದ ತನಿಖೆ ನಡೆಸಲಾಗುತ್ತೆ.    ಪ್ರಕರಣದ ತನಿಖೆಯನ್ನ ಆ ಠಾಣೆ ಪೊಲೀಸರು ನಡೆಸುತ್ತಾರೆ. 
ಡಿಜಿಪಿ ರಾಮಚಂದ್ರರಾವ್ ತಮಗೆ ಆಮಿಷವೊಡ್ಡಿದ್ರು ಅಂತ  ಮಹಿಳೆಯರು ದೂರಲ್ಲಿ ಉಲ್ಲೇಖಿಸಿದ್ರೆ ಲೋಕಾಯುಕ್ತಕ್ಕೆ ಕೇಸ್ ಅನ್ನು ವರ್ಗಾವಣೆ ಮಾಡಲಾಗುತ್ತೆ.  ಲೋಕಾಯುಕ್ತ ಪ್ರಿವೆನ್ಶನ್ ಆಫ್ ಕರಪ್ಶನ್ ಌಕ್ಟ್​ನ ಅಡಿ ಪ್ರಕರಣ ದಾಖಲಾಗುತ್ತೆ. 





ಒಂದು ವೇಳೆ ದೂರು ಕೊಡದೇ ಇದ್ರೆ ಮುಂದೆ ಏನಾಗುತ್ತೆ?
ಸಂತ್ರಸ್ತ ಮಹಿಳೆಯರು ದೂರು ಕೊಡದೇ ಇದ್ದರೇ  ಕ್ರಮವೇನು? ಎಂಬ ಪ್ರಶ್ನೆ ಉದ್ಭವವಾಗುತ್ತೆ.  ಸರ್ಕಾರಿ ಕಚೇರಿಯಲ್ಲಿ ಕೃತ್ಯ  ಎಸಗಿರುವ ಹಿನ್ನೆಲೆಯಲ್ಲಿ  ಸರ್ಕಾರದಿಂದಲೇ ತನಿಖೆ ಮಾಡಲಾಗುತ್ತೆ.   ಮೊದಲಿಗೆ ಇದರಲ್ಲಿ ಪ್ರಾಥಮಿಕ ತನಿಖೆ, ವಿಚಾರಣೆ ಮಾಡಲಾಗುತ್ತೆ.  ಆರೋಪಿ ಅಧಿಕಾರಿಯ ಱಂಕಿಂಗ್​ನ ಅಧಿಕಾರಿಯಿಂದ ತನಿಖೆ ನಡೆಸಬಹುದು ಇಲ್ಲವೇ  ಐಎಎಸ್ ಅಧಿಕಾರಿಯಿಂದ ತನಿಖೆ ನಡೆಸಲಾಗುತ್ತೆ. ಸೆಂಟ್ರಲ್ ಆಫೀಸರ್ಸ್ ಕಾಂಡಕ್ಟ್ ರೂಲ್ಸ್ ಅನ್ವಯ ತನಿಖೆ ಮಾಡಲಾಗುತ್ತೆ. 

ಡಿಜಿಪಿ ರಾಮಚಂದ್ರ ರಾವ್​ಗೆ ಸಂಕಷ್ಟ
ಡಿಜಿಪಿ ವಿಡಿಯೋ ಕೇಸ್​ನಲ್ಲಿ ತಪ್ಪು ಸಾಬೀತಾದಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತೆ.  ಸೆಂಟ್ರಲ್ ಆಫೀಸರ್ಸ್ ಕಾಂಡಕ್ಟ್ ರೂಲ್ಸ್ ಅನ್ವಯವೇ ಕ್ರಮ ತೆಗೆದುಕೊಳ್ಳಲಾಗುತ್ತೆ.   ಕರ್ತವ್ಯ ಲೋಪದ ಅಡಿಯಲ್ಲಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ.  ಇದರಲ್ಲಿ ಸೇವೆಯಿಂದ ವಜಾ  ಮಾಡೋದಕ್ಕೂ ಕೂಡ ಅವಕಾಶ ಇರುತ್ತದೆ   ಅಥವಾ ಅವರು ಈಗ ಇರುವುದಕ್ಕಿಂತ ಕಡಿಮೆ ಱಂಕ್​ಗೆ ಹಿಂಬಡ್ತಿ ನೀಡಬಹುದು. ನೇಮಕವಾದಾಗ ಇದ್ದ ಹುದ್ದೆಗೇ  ಹಿಂಬಡ್ತಿ ನೀಡಲು  ಅವಕಾಶ ಇದೆ.  ಜೊತೆಗೆ ಪೆನ್ಶನ್ ಸೌಲಭ್ಯ ಸೇರಿ ಎಲ್ಲಾ ಸೌಲಭ್ಯ ಕಳೆದುಕೊಳ್ಳುತ್ತಾರೆ. 

DGP RAMCHANDRA RAO (2)


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

DGP RAMCHANDRA RAO SEX SCANDAL
Advertisment