/newsfirstlive-kannada/media/media_files/2025/08/07/shashi-tharoor-with-modi-2025-08-07-17-08-31.jpg)
ಪ್ರಧಾನಿ ಮೋದಿ ಜೊತೆ ಸಂಸದ ಶಶಿ ತರೂರ್
ಅಮೆರಿಕಾವು ಭಾರತದ ಉತ್ಪನ್ನಗಳ ಮೇಲೆ ಶೇ.50 ರಷ್ಟು ಅಮದು ಸುಂಕ ವಿಧಿಸಿರುವುದಕ್ಕೆ ಕಾಂಗ್ರೆಸ್ ಲೋಕಸಭಾ ಸದಸ್ಯ ಶಶಿ ತರೂರ್ ತೀವ್ರವಾಗಿ ಆಕ್ಷೇಪಿಸಿದ್ದಾರೆ. ಭಾರತವು ಕೂಡ ಈಗ ಅಮೆರಿಕಾದ ಉತ್ಪನ್ನಗಳ ಮೇಲೆ ಅಷ್ಟೇ ಪ್ರಮಾಣದ ಅಮದು ಸುಂಕವನ್ನು ವಿಧಿಸಬೇಕು. ಪರ್ಯಾಯ ಮಾರುಕಟ್ಟೆಗಳನ್ನು ಭಾರತದ ಉತ್ಪನ್ನಗಳಿಗೆ ಹುಡುಕಬೇಕು ಎಂದು ಶಶಿ ತರೂರ್ ಹೇಳಿದ್ದಾರೆ.
ನನಗೆ ಅನ್ನಿಸಿದ ಪ್ರಕಾರ, ಅಮೆರಿಕಾದಿಂದ ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸಿರುವುದು ಅನೇಕ ರೀತಿಯಲ್ಲಿ ಸರಿಯಲ್ಲ. ಆರೋಪ ಇರೋದು ನಾವು ರಷ್ಯಾದ ಕಚ್ಚಾತೈಲ, ಗ್ಯಾಸ್ ಖರೀದಿಸುತ್ತಿರುವುದಕ್ಕೆ ಅಲ್ಲ. ನಿಯಮಗಳಿಗೆ ಗೌರವ ಕೊಟ್ಟು, ಮುಕ್ತ ಮಾರುಕಟ್ಟೆಯಲ್ಲಿ ನಾವು ಕಚ್ಚಾತೈಲ ಖರೀದಿ ಮಾಡುತ್ತಿದ್ದೇವೆ. ಬೆಲೆಯ ಮಿತಿಯನ್ನು ನಾವು ಕೂಡ ಗಮನಿಸುತ್ತಿದ್ದೇವೆ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ಶೇ.50 ರಷ್ಟು ಸುಂಕ ವಿಧಿಸಿದಂತೆ, ಚೀನಾ, ಯೂರೋಪಿಯನ್ ಯೂನಿಯನ್ ಮೇಲೆ ಸುಂಕ ವಿಧಿಸಿಲ್ಲ. ಇವೆರೆಡೂ ಭಾರತಕ್ಕಿಂತ ಹೆಚ್ಚಿನ ಕಚ್ಚಾತೈಲವನ್ನು ರಷ್ಯಾದಿಂದ ಖರೀದಿಸಿ ವ್ಯಾಪಾರ ಮಾಡುತ್ತಿವೆ. ವಿಪರ್ಯಾಸವೆಂದರೇ, ಅಮೆರಿಕಾವೇ, ರಷ್ಯಾದಿಂದ ಯುರೇನಿಯಂ, ಹೆಕ್ಸಪ್ಲೋರೈಡ್, ಪಲೋಡಿಯಂ ಮತ್ತು ಇತರೆ ಕೆಮಿಕಲ್ ಗಳನ್ನು ತನ್ನ ಕೈಗಾರಿಕೆಗಳಿಗಾಗಿ ಖರೀದಿಸುತ್ತಿದೆ. ಭಾರತ ಸರ್ಕಾರವು ಅಮೆರಿಕಾದ ಮೇಲೆ ಪ್ರತಿಯಾಗಿ ಇಷ್ಟೇ ತೆರಿಗೆಯನ್ನು ವಿಧಿಸಬೇಕು. ಅಮೆರಿಕಾದ ಆಚೆಗೂ ವ್ಯಾಪಾರ ಸಂಬಂಧಗಳನ್ನು ಭಾರತ ಬೆಳೆಸಬೇಕು ಎಂದು ಶಶಿ ತರೂರ್ ಹೇಳಿದ್ದಾರೆ. ಭಾರತವು ಎಲ್ಲ ಕಡೆ ಹೋಗಿ ಬೆದರಿಕೆ ಹಾಕುವ ರಾಷ್ಟ್ರವಲ್ಲ. ಆದರೇ, ನನ್ನ ದೃಷ್ಟಿಕೋನದಲ್ಲಿ ವೈವಿಧ್ಯಮಯ ಮಾರುಕಟ್ಟೆಗಳನ್ನು ನಾವು ಹುಡುಕಿಕೊಳ್ಳಬೇಕು. ಅದೇ ವೇಳೆ ನಾವು ಅಮೆರಿಕಾದ ನಮ್ಮ ಸ್ನೇಹಿತರಿಗೂ ಸ್ಪಷ್ಟಪಡಿಸಬೇಕಾಗಿದೆ. ಅಮೆರಿಕಾವು ನಮ್ಮ ಮೇಲೆ ಶೇ.50 ರಷ್ಟು ಅಮದು ಸುಂಕ ವಿಧಿಸಿದರೇ, ನಾವು ಅಮೆರಿಕಾದ ಉತ್ಪನ್ನಗಳ ಮೇಲೆ ಸದ್ಯ ಸರಾಸರಿ ಶೇ.17 ರಷ್ಟು ಸುಂಕ ವಿಧಿಸುತ್ತಿದ್ದೇವೆ. ಅದನ್ನು ನಾವು ಶೇ.50 ಕ್ಕೆ ಏರಿಸುತ್ತೇವೆ ಎಂದು ಹೇಳಬೇಕು ಎಂದಿದ್ದಾರೆ.
https://truthsocial.com/@realDonaldTrump/114971053091282290
ಮಹೀಂದ್ರಾ ಕಂಪನಿಯ ಮುಖ್ಯಸ್ಥ ಆನಂದ್ ಮಹೀಂದ್ರಾ ಹೇಳಿದ್ದೇನು?
ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಶೇ.50 ರಷ್ಟು ಅಮದು ಸುಂಕ ವಿಧಿಸಿರುವುದರಿಂದ ಸೃಷ್ಟಿಯಾಗಿರುವ ಅವಕಾಶಗಳನ್ನು ಭಾರತ ಬಳಸಿಕೊಳ್ಳಬೇಕು ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಉದ್ಯಮ ಸರಳೀಕರಣವನ್ನು ಮತ್ತಷ್ಟು ಸುಧಾರಿಸುವಂಥ ಕ್ರಮಗಳನ್ನು ಭಾರತ ಕೈಗೊಳ್ಳಬೇಕು. ಜಾಗತಿಕ ಬಂಡವಾಳ ಹೂಡಿಕೆಗೆ ಭಾರತವನ್ನೇ ಪ್ರಾಶಸ್ತ್ಯ ತಾಣವಾಗಿ ಮಾಡಬೇಕು ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.
ಆದರೆ ಇವು ಜಾಗತಿಕ ಬೆಳವಣಿಗೆಗೆ ದೀರ್ಘಕಾಲೀನ ಸಕಾರಾತ್ಮಕತೆಯಾಗುವ ಸಾಮರ್ಥ್ಯವನ್ನು ಹೊಂದಿವೆ. "ಭಾರತವು ತನಗಾಗಿ ಸದ್ಗುಣಶೀಲ ಪರಿಣಾಮವನ್ನು ರೂಪಿಸಲು ಈ ಕ್ಷಣವನ್ನು ಬಳಸಿಕೊಳ್ಳಬೇಕು " ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.
ಇನ್ನೂ ನೀತಿ ಆಯೋಗದ ಮಾಜಿ ಸಿಇಓ ಅಮಿತಾಬ್ ಕಾಂತ್ ಕೂಡ ಆನಂದ್ ಮಹೀಂದ್ರಾ ಅವರು ಹೇಳಿದ ಧಾಟಿಯಲ್ಲೇ ಹೇಳಿದ್ದಾರೆ. ಅಮೆರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ತಲೆಮಾರಿನಲ್ಲಿ ಒಮ್ಮೆ ಸಿಗುವ ಅವಕಾಶವನ್ನು ಈಗ ನೀಡಿದ್ದಾರೆ. ಸುಧಾರಣೆಯ ನಿಟ್ಟಿನಲ್ಲಿ ಮುಂದಿನ ಹೆಜ್ಜೆ, ತೀರ್ಮಾನವನ್ನು ಈಗ ಕೈಗೊಳ್ಳಬೇಕು. ಬಿಕ್ಕಟ್ಟು ಅನ್ನು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ಅಮಿತಾಬ್ ಕಾಂತ್ ಟ್ವೀಟ್ ಮಾಡಿದ್ದಾರೆ.
Trump has provided us a once in a generation opportunity to take the next big leap on reforms.
— Amitabh Kant (@amitabhk87) August 6, 2025
Crisis must be fully utilised.
ಭಾರತವು ಅಮೆರಿಕಾಕ್ಕೆ ಆರ್ಗ್ಯಾನಿಕ್ ಕೆಮಿಕಲ್ಸ್ , ಕಾರ್ಪೆಟ್ಸ್ , ಅಪೇರಲ್, ಟೆಕ್ಸ್ ಟೈಲ್ಸ್, ಜೆಮ್ಸ್, ಜ್ಯುವೆಲ್ಲರಿ, ಸ್ಟೀಲ್, ಅಲ್ಯೂಮಿನಿಯಂ, ಕಾಪರ್, ಮೆಷಿನರಿ ಮತ್ತು ಮೆಕ್ಯಾನಿಕಲ್ ಅಪ್ಲೈಯನ್ಸಸ್, ಪರ್ನೀಚರ್ ಗಳನ್ನು ರಫ್ತು ಮಾಡುತ್ತೆ. ಇವುಗಳ ಮೇಲೆ ಈಗ ಶೇ.50 ರಷ್ಟು ಸುಂಕ ವಿಧಿಸಲಾಗುತ್ತೆ.
ಜೊತೆಗೆ ಕಾರ್ ಗಳನ್ನು ಉತ್ಪಾದಿಸಿ ಭಾರತವು ಅಮೆರಿಕಾಕ್ಕೆ ರಫ್ತು ಮಾಡುತ್ತೆ. ಆದರೇ, ಕಾರ್ ಮೇಲೆ ಶೇ.26 ರಷ್ಟು ಸುಂಕ ಅನ್ವಯವಾಗುತ್ತೆ. ಪೆಟ್ರೋಲಿಯಂ ಉತ್ಪನ್ನಗಳನ್ನು ಭಾರತವು ಅಮೆರಿಕಾಕ್ಕೆ ರಫ್ತು ಮಾಡುತ್ತೆ. ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಶೇ.6.9 ರಷ್ಟು ಸುಂಕವಾಗಿ ವಿಧಿಸಲಾಗುತ್ತೆ.