/newsfirstlive-kannada/media/media_files/2025/12/10/income-tax-department02-2025-12-10-16-29-12.jpg)
ಆದಾಯ ತೆರಿಗೆ ಇಲಾಖೆಯಿಂದ ರೇಡ್ ಆಗೋದು ಯಾವಾಗ?
ಆದಾಯ ತೆರಿಗೆ ಇಲಾಖೆಯ ರೇಡ್ ಎಂದರೇ, ಜನರು ಭಯ ಬೀಳುತ್ತಾರೆ. ಹೆಚ್ಚು ಆದಾಯ ಇದ್ದು, ಆದಾಯ ತೆರಿಗೆ ಪಾವತಿಸದೇ, ತೆರಿಗೆ ವಂಚಿಸುವವರ ಮೇಲೆಯೇ ಆದಾಯ ತೆರಿಗೆ ದಾಳಿ ನಡೆಸುತ್ತೆ. ಆದಾಯ ತೆರಿಗೆ ಇಲಾಖೆಯಿಂದ ಯಾವುದೇ ದಾಳಿಯಾಗದೇ ಇರಬೇಕು ಅಂದರೇ, ಜನರು ಕೂಡ ತಮ್ಮ ಹಣಕಾಸು ವ್ಯವಹಾರಗಳ ಬಗ್ಗೆ ಆಲರ್ಟ್ ಆಗಿರಬೇಕು.
ಆದಾಯ ತೆರಿಗೆ ಇಲಾಖೆಯು ಜನರ ಎಲ್ಲ ಹಣಕಾಸು ವ್ಯವಹಾರಗಳ ಮೇಲೆ ಸಂಪೂರ್ಣ ಹದ್ದಿನ ಕಣ್ಣು ಇಟ್ಟಿರುತ್ತೆ. ಬ್ಯಾಂಕ್ ಮೂಲಕ ನಡೆಯುವ ಹಣಕಾಸು ವ್ಯವಹಾರ, ದೊಡ್ಡ ದೊಡ್ಡ ಭೂಮಿ ಖರೀದಿ, ಮಾರಾಟದ ವ್ಯವಹಾರ, ಕೋಟಿಗಟ್ಟಲೇ ಚಿನ್ನ ಖರೀದಿ, ದುಬಾರಿ ಕಾರ್ ಖರೀದಿ ಮಾಡುವವರು ಸರಿಯಾಗಿ ಆದಾಯ ತೆರಿಗೆ ಪಾವತಿಸುತ್ತಿದ್ದಾರೆಯೇ ಇಲ್ಲವೇ ಎಂದು ಯಾವಾಗಲೂ ನಿಗಾ ಇಟ್ಟಿರುತ್ತೆ. ಸರಿಯಾಗಿ ಆದಾಯ ತೆರಿಗೆ ಪಾವತಿಸದೇ, ಆದಾಯವನ್ನು ಸರಿಯಾಗಿ ಘೋಷಿಸಿಕೊಳ್ಳದೇ ಕಪ್ಪು ಹಣದ ವ್ಯವಹಾರ ನಡೆಸುವವರನ್ನು ಪತ್ತೆ ಹಚ್ಚಿ ದಾಳಿ ನಡೆಸುತ್ತೆ.
ಜೊತೆಗೆ ಕೆಲವೊಂದು ವ್ಯವಹಾರಗಳು ಸುಲಭವಾಗಿ ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದು ಬಿಡುತ್ತೇವೆ. ಅಂಥವುಗಳನ್ನು ಐ.ಟಿ. ಇಲಾಖೆ ಕೂಡ ತೀವ್ರ ಸ್ಕ್ರೂಟಿನಿ ಮಾಡುತ್ತೆ.
ಅಂಥ ಅನುಮಾನಾಸ್ಪದ ವ್ಯವಹಾರಗಳು ಯಾವ್ಯಾವು ಅಂತ ಈಗ ವಿವರಿಸುತ್ತೇವೆ. ಓದಿ.
1-ಉಳಿತಾಯ ಖಾತೆಗೆ 10 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ಹಣವನ್ನು ಠೇವಣಿ ಮಾಡುವುದು
2- ಚಾಲ್ತಿ ಖಾತೆಗೆ 50 ಲಕ್ಷ ರೂ/ ಅದಕ್ಕಿಂತ ಹೆಚ್ಚಿನ ನಗದು ಹಣ ಠೇವಣಿ
3-ತಿಂಗಳಿಗೆ 1 ಲಕ್ಷ ರೂಪಾಯಿಗಿಂತ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ನಗದು ಮೂಲಕ ಪಾವತಿಸುವುದು
4- ಒಟ್ಟಾರೆ ಕ್ರೆಡಿಟ್ ಕಾರ್ಡ್ ಬಿಲ್ ಬೇರೆ ಮೋಡ್ ಮೂಲಕವೂ 10 ಲಕ್ಷ ರೂ, ಅದಕ್ಕಿಂತ ಹೆಚ್ಚಾಗುವುದು
5-30 ಲಕ್ಷ ರೂ.ಗಿಂತ ಹೆಚ್ಚಿನ ಮೌಲ್ಯದ ಆಸ್ತಿ ಖರೀದಿ ಅಥವಾ ಮಾರಾಟ
6- 10 ಲಕ್ಷ ರೂ, ಹೆಚ್ಚಿನ ಫಿಕ್ಸೆಡ್ ಡಿಫಾಸಿಟ್
7- ವಿದೇಶಿ ಪ್ರವಾಸ, ಫಾರೆಕ್ಸ್ ಹಣ ವರ್ಗಾವಣೆಯಲ್ಲಿ 10 ಲಕ್ಷ ರೂ.ಗಿಂತ ಹೆಚ್ಚು ವರ್ಗಾವಣೆ
8-ಷೇರುಗಳು, ಬಾಂಡ್ ಗಳ ಮೇಲೆ 10 ಲಕ್ಷ ಅಥವಾ ಹೆಚ್ಚಿನ ಹಣ ಹೂಡಿಕೆ
9-ರಸೀದಿ ಇಲ್ಲದೇ, 50 ಸಾವಿರ ರೂ.ಗಿಂತ ಹೆಚ್ಚಿನ ಗಿಫ್ಟ್ ಅನ್ನು ಬೇರೆಯವರಿಗೆ ನೀಡುವುದು
10-ವ್ಯಕ್ತಿಯೊಬ್ಬರಿಂದ ನಗದು ರೂಪದಲ್ಲಿ ದಿನವೊಂದಕ್ಕೆ 2 ಲಕ್ಷಕ್ಕಿಂತ ಹೆಚ್ಚಿನ ಹಣ ಸ್ವೀಕಾರ!
ಮೇಲೆ ವಿವರಿಸಿದ ಈ ಎಲ್ಲ ಹಣಕಾಸು ವ್ಯವಹಾರಗಳನ್ನು ಆದಾಯ ತೆರಿಗೆ ಇಲಾಖೆಯು ಗಮನಿಸುತ್ತಿರುತ್ತೆ. ಇಂಥ ವ್ಯವಹಾರಗಳನ್ನು ಮಾಡಿದಾಗ, ಆದಾಯ ತೆರಿಗೆ ಇಲಾಖೆಯು ಇವುಗಳನ್ನು ಆಗ್ಗಾಗ್ಗೆ ಪರಿಶೀಲಿಸುತ್ತಿರುತ್ತೆ. ಸರಿಯಾದ ಮಾರ್ಗದ ಆದಾಯ ಇಲ್ಲದೇ, ಹಣ ಖರ್ಚು ಮಾಡಿದ್ದರೂ, ಐ.ಟಿ. ಇಲಾಖೆಯ ಬಳಿ ಸಾಕ್ಷಿ ಸಮೇತ ಸಿಕ್ಕಿಬೀಳಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us