/newsfirstlive-kannada/media/media_files/2025/08/09/icici-bank-2025-08-09-21-32-38.jpg)
ಬ್ಯಾಂಕ್ ಗಳಲ್ಲಿ ಜೀರೋ ಬ್ಯಾಲೆನ್ಸ್ ಖಾತೆ ಗ್ರಾಹಕರಿಗೆ ವರದಾನ. ಆದರೇ, ನಮ್ಮ ದೇಶದಲ್ಲಿ ಕೆಲ ವಾಣಿಜ್ಯ ಬ್ಯಾಂಕ್ ಗಳು ಮಿನಿಮಮ್ ಬ್ಯಾಲೆನ್ಸ್ ಅನ್ನು ತಿಂಗಳಿಗೆ ಬರೋಬ್ಬರಿ 50 ಸಾವಿರ ರೂಪಾಯಿಗೆ ಏರಿಸಿವೆ. ಆಗಸ್ಟ್ 1 ರಿಂದ ದೇಶದಲ್ಲಿ ಐಸಿಐಸಿಐ ಬ್ಯಾಂಕ್ ಹೊಸ ಗ್ರಾಹಕರು ಉಳಿತಾಯ ಖಾತೆ ತೆರೆದ ಬಳಿಕ ತಿಂಗಳ ಕನಿಷ್ಠ ಸರಾಸರಿ ಬ್ಯಾಲೆನ್ಸ್ ನಗರ ಮತ್ತು ಮೆಟ್ರೋ, ಆರ್ಬನ್ ಪ್ರದೇಶಗಳಲ್ಲಿ 50 ಸಾವಿರ ಸಾವಿರ ಹೊಂದಿರಲೇಬೇಕು. ಇಲ್ಲದಿದ್ದರೇ, ಶೇ.6 ರಷ್ಟು ದಂಡ ಅಥವಾ 500 ರೂಪಾಯಿ ದಂಡ ವಿಧಿಸಲಾಗುತ್ತೆ. ಇವುಗಳಲ್ಲಿ ಯಾವುದು ಕಡಿಮೆಯೋ ಅದನ್ನು ವಿಧಿಸಲಾಗುತ್ತೆ ಎಂದು ಹೇಳಿದೆ. ಗ್ರಾಮೀಣಾ ಭಾಗದಲ್ಲೂ ಗ್ರಾಹಕರು ಹೊಸ ಉಳಿತಾಯ ಖಾತೆ ತೆರೆದರೇ, ಕನಿಷ್ಠ ಬ್ಯಾಲೆನ್ಸ್ 10 ಸಾವಿರೂ ರೂಪಾಯಿ ಹೊಂದಿರಬೇಕು ಎಂದು ವೆಬ್ ಸೈಟ್ ನಲ್ಲಿ ಹೇಳಿದೆ. ಐಸಿಐಸಿಐ ಬ್ಯಾಂಕ್ ತನ್ನ ಮಿನಿಮಮ್ ಬ್ಯಾಲೆನ್ಸ್ ಮೊತ್ತವನ್ನು ಗ್ರಾಮೀಣಾ ಮತ್ತು ನಗರ ಪ್ರದೇಶಗಳಲ್ಲಿ ಒಂದೇ ಬಾರಿಗೆ ಎರಡು ಪಟ್ಟು ಏರಿಸಿದೆ. ಇದು ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಎಲ್ಲ ಗ್ರಾಹಕರು ಈ ಮಾಸಿಕ ಬ್ಯಾಲೆನ್ಸ್ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಲು ಸಾಧ್ಯವಾಗಲ್ಲ.
ನಮ್ಮ ದೇಶದಲ್ಲಿ ಜೀರೋ ಬ್ಯಾಲೆನ್ಸ್ ಬ್ಯಾಂಕ್ ಖಾತೆಯನ್ನು ತೆರೆಯಲು ಹಾಗೂ ಬ್ಯಾಂಕ್ ಖಾತೆ ಹೊಂದಲು ಕೆಲ ರಾಷ್ಟ್ರೀಕೃತ ಬ್ಯಾಂಕ್ ಗಳು ಅವಕಾಶ ಕೊಟ್ಟಿವೆ. ದೇಶದ ನಂಬರ್ ಒನ್ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, 2020ರಿಂದ ಜೀರೋ ಬ್ಯಾಲೆನ್ಸ್ ಖಾತೆಯ ನಿಯಮ ಜಾರಿಗೆ ತಂದಿದೆ. ಇದಕ್ಕೂ ಮೊದಲು ಎಸ್‌ಬಿಐ ಕೂಡ ಇಂತಿಷ್ಟೇ ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು ಎಂಬ ನಿಯಮ ಹೊಂದಿತ್ತು. ಬಳಿಕ 2020 ರಲ್ಲಿ ಆ ನಿಯಮ ತೆಗೆದು ಹಾಕಿ ಜೀರೋ ಬ್ಯಾಲೆನ್ಸ್ ನಿಯಮ ಜಾರಿಗೆ ತಂದಿದೆ.
ಇದೇ ರೀತಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಕೆನರಾ ಬ್ಯಾಂಕ್ ಗಳೂ ಕೂಡ ಎಲ್ಲ ಉಳಿತಾಯ ಖಾತೆಗಳಲ್ಲಿ ಇಂತಿಷ್ಟೇ ಕನಿಷ್ಠ ಬ್ಯಾಲೆನ್ಸ್ ಹೊಂದಿರಲೇಬೇಕೆಂಬ ನಿಯಮವನ್ನು ರದ್ದುಪಡಿಸಿವೆ. ಹೀಗಾಗಿ ಎಸ್‌ಬಿಐ, ಪಂಜಾಬ್ ನ್ಯಾಷನಲ್ ಬ್ಯಾಂಕ್, ಕೆನರಾ ಬ್ಯಾಂಕ್ ಗ್ರಾಹಕರಿಗೆ ಕನಿಷ್ಠ ಬ್ಯಾಲೆನ್ಸ್ ನಿಯಮದಿಂದ ರೀಲೀಫ್ ಸಿಕ್ಕಿದೆ. ಬ್ಯಾಂಕ್ ದಂಡದಿಂದಲೂ ಪಾರಾಗಿದ್ದಾರೆ.
ಇನ್ನೂ ದೇಶದಲ್ಲಿ ವಾಣಿಜ್ಯ, ರಾಷ್ಟ್ರೀಕೃತ ಬ್ಯಾಂಕ್ ಗಳು ಮಿನಿಮಮ್ ಬ್ಯಾಲೆನ್ಸ್ ಆಗಿ 10 ಸಾವಿರದಿಂದ 50 ಸಾವಿರ ರೂಪಾಯಿ ಹೊಂದಿರಲೇಬೇಕೆಂದು ನಿಯಮ ರೂಪಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಆರ್‌ಬಿಐ ಗರ್ವನರ್ ಸಂಜಯ್ ಮಲ್ಹೋತ್ರಾ, ಈ ಬಗ್ಗೆ ಆರ್‌ಬಿಐ ಮಧ್ಯಪ್ರವೇಶ ಮಾಡಲಾಗಲ್ಲ. ಕನಿಷ್ಠ ಬ್ಯಾಲೆನ್ಸ್ ವಿಷಯದಲ್ಲಿ ತೀರ್ಮಾನ ಕೈಗೊಳ್ಳುವುದು ಆಯಾ ಬ್ಯಾಂಕ್ ಗಳಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ. ಕನಿಷ್ಠ ಬ್ಯಾಲೆನ್ಸ್ ಖಾತೆಯ ವಿಷಯದಲ್ಲಿ ಬ್ಯಾಂಕ್ ಗಳು ಮುಕ್ತ ಸ್ವಾತಂತ್ರ್ಯ ಹೊಂದಿವೆ ಎಂದು ಆರ್‌ಬಿಐ ಗರ್ವನರ್ ಸಂಜಯ್ ಮಲ್ಹೋತ್ರಾ ಹೇಳಿದ್ದಾರೆ.
ಇದೇ ರೀತಿ ಬೇರೆ ಯಾವ್ಯಾವ ಬ್ಯಾಂಕ್ ಗಳಲ್ಲಿ ಎಷ್ಟೆಷ್ಟು ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು ಎಂಬ ನಿಯಮ ಇದೆ ಎಂಬ ಮಾಹಿತಿ ಇಲ್ಲಿದೆ, ಓದಿ.
ಬ್ಯಾಂಕ್ ಗ್ರಾಮೀಣಾ ಪ್ರದೇಶ ನಗರ, ಮೆಟ್ರೋ ಪ್ರದೇಶ
SBI ಜಿರೋ ಬ್ಯಾಲೆನ್ಸ್ ಜಿರೋ ಬ್ಯಾಲೆನ್ಸ್
Bank of india ಜಿರೋ ಬ್ಯಾಲೆನ್ಸ್ ಜಿರೋ ಬ್ಯಾಲೆನ್ಸ್
HDFC Rs. 2,500 Rs. 2,500
AXIS BANK Rs. 2,500 Rs. 12,000
Bank of Baroda Rs. 500 Rs. 2,000
Union bank of india Rs. 250 Rs. 1,000
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ..