ಕರ್ನಾಟಕದಲ್ಲಿ ಇದುವರೆಗೂ ಯಾಱರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಲಾಗಿದೆ? ವಿಷ್ಣುವರ್ಧನ್, ಸರೋಜಾದೇವಿ ಎಷ್ಟನೇ ಕರ್ನಾಟಕ ರತ್ನ ಪುರಸ್ಕೃತರು?

ಕರ್ನಾಟಕದಲ್ಲಿ ಪ್ರತಿ ವರ್ಷ ಕರ್ನಾಟಕ ರತ್ನ ಪುರಸ್ಕಾರ ನೀಡುತ್ತಿಲ್ಲ. 1992 ರಲ್ಲಿ ಮೊದಲ ಭಾರಿಗೆ ರಾಷ್ಟ್ರಕವಿ ಕುವೆಂಪು ಹಾಗೂ ವರನಟ ರಾಜ್ ಕುಮಾರ್ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಲಾಗಿತ್ತು. 2021 ರಲ್ಲಿ ನಟ ಪುನೀತ್ ರಾಜ್ ಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪುರಸ್ಕಾರ ನೀಡಲಾಗಿತ್ತು.

author-image
Chandramohan
saroja devi and vishnuvardhan

ದಿವಂಗತ ಬಿ.ಸರೋಜಾ ದೇವಿ ಹಾಗೂ ನಟ ವಿಷ್ಣುವರ್ಧನ್

Advertisment
  • ಇದುವರೆಗೂ 10 ಮಂದಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿಕೆ
  • ಈಗ 11ನೇಯವರಾಗಿ ನಟ ವಿಷ್ಣುವರ್ಧನ್ ಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿಕೆ
  • 12ನೇಯವರಾಗಿ ನಟಿ ದಿವಗಂತ ಬಿ.ಸರೋಜಾದೇವಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಿಕೆ


ಕರ್ನಾಟಕ ರಾಜ್ಯದಲ್ಲಿ ಇದುವರೆಗೂ 10 ಮಂದಿಗೆ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.

ಈಗ 11ನೇಯವರಾಗಿ ಸಾಹಸ ಸಿಂಹ ನಟ ವಿಷ್ಣುವರ್ಧನ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪುರಸ್ಕಾರ ನೀಡಲಾಗುತ್ತಿದೆ. 12ನೇಯವರಾಗಿ ದಿವಂಗತ ನಟಿ ಬಿ.ಸರೋಜಾದೇವಿ ಅವರಿಗೆ ಮರಣೋತ್ತರ  ಕರ್ನಾಟಕ ರತ್ನ ಪುರಸ್ಕಾರ ನೀಡಲಾಗುತ್ತಿದೆ. 
1992 ರಲ್ಲಿ ಮೊದಲ ಭಾರಿಗೆ ಕರ್ನಾಟಕ ರತ್ನ ಪುರಸ್ಕಾರವನ್ನು ಕರ್ನಾಟಕ ರಾಜ್ಯ ಸರ್ಕಾರ ನೀಡಲು ಆರಂಭಿಸಿತ್ತು. ಆಗ ಮೊದಲ ಕರ್ನಾಟಕ ರತ್ನ ಪುರಸ್ಕಾರವನ್ನು ರಾಷ್ಟ್ರಕವಿ ಕುವೆಂಪು ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ್ದ ಕೊಡುಗೆಯನ್ನು ಪರಿಗಣಿಸಿ ಕರ್ನಾಟಕ ರತ್ನ ಪುರಸ್ಕಾರ ನೀಡಲು ನಿರ್ಧರಿಸಲಾಯಿತು. ಅದೇ ವರ್ಷ ವರನಟ ಡಾಕ್ಟರ್ ರಾಜಕುಮಾರ್ ಅವರು ಸಿನಿಮಾ ರಂಗದಲ್ಲಿ ನೀಡಿದ ಗಣನೀಯ ಕೊಡುಗೆಗಾಗಿ ಕರ್ನಾಟಕ ರತ್ನ ಪುರಸ್ಕಾರ ನೀಡಲಾಗಿತ್ತು. 
ಬಳಿಕ ಮುಂದಿನ 7 ವರ್ಷಗಳ ಕಾಲ ಯಾವುದೇ ಗಣ್ಯರಿಗೂ ಕರ್ನಾಟಕ ರತ್ನ ಪುರಸ್ಕಾರ ನೀಡಿರಲಿಲ್ಲ. 1999 ರಲ್ಲಿ ಮಾಜಿ ಸಿಎಂ ಎಸ್‌.ನಿಜಲಿಂಗಪ್ಪ ಅವರಿಗೆ ಕರ್ನಾಟಕ ರತ್ನ ಪುರಸ್ಕಾರ ನೀಡಲಾಯಿತು.  

ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಪಟ್ಟಿ


ಕುವೆಂಪು - ಸಾಹಿತ್ಯ - 1992
ಡಾ. ರಾಜ್‌ಕುಮಾರ್‌ - ಚಲನಚಿತ್ರ - 1992
ಎಸ್‌.ನಿಜಲಿಂಗಪ್ಪ - ರಾಜಕೀಯ - 1999
ಸಿ.ಎನ್‌.ಆರ್.ರಾವ್ - ವಿಜ್ಞಾನ - 2000
ದೇವಿಪ್ರಸಾದ್ ಶೆಟ್ಟಿ - ವೈದ್ಯಕೀಯ - 2001
ಭೀಮಸೇನ ಜೋಷಿ - ಸಂಗೀತ - 2005
ಶ್ರೀ ಶಿವಕುಮಾರ ಸ್ವಾಮೀಗಳು - ಸಾಮಾಜಿಕ ಸೇವೆ - 2007
ದೇ. ಜವರೇಗೌಡ - ಸಾಹಿತ್ಯ -2008
ಡಿ. ವೀರೇಂದ್ರ ಹೆಗ್ಗಡೆ - ಸಾಮಾಜಿಕ ಸೇವೆ - 2009.
ದಿ. ಪುನೀತ್ ರಾಜ್‌ಕುಮಾರ್- ಸಿನಿಮಾ ಹಾಗೂ ಸಾಮಾಜಿಕ ಸೇವೆ -2021
ದಿ. ಡಾ.ವಿಷ್ಣುವರ್ಧನ್ - ಸಿನಿಮಾ - 2025
ದಿ. ಬಿ.ಸರೋಜಾದೇವಿ ಸಿನಿಮಾ - 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

karnataka ratna awards
Advertisment