/newsfirstlive-kannada/media/media_files/2025/08/16/vice-president-probables-2025-08-16-16-53-08.jpg)
ಓಂ ಮಾಥೂರ್, ವಿ.ಕೆ.ಸಕ್ಸೇನಾ, ಥಾವರ್ ಚಂದ್ ಗೆಹ್ಲೋಟ್
ದೇಶದಲ್ಲಿ ಮುಂದಿನ ಉಪರಾಷ್ಟ್ರಪತಿ ಯಾರಾಗ್ತಾರೆ ಎಂಬ ಕುತೂಹಲ ಇದೆ. ಸೆಪ್ಟೆಂಬರ್ 9 ಕ್ಕೆ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಎನ್‌ಡಿಎ ಮೈತ್ರಿಕೂಟ ಮತ್ತು ಇಂಡಿಯಾ ಮೈತ್ರಿಕೂಟಗಳೆರಡೂ ತಮ್ಮ ಅಭ್ಯರ್ಥಿಗಳನ್ನು ಚುನಾವಣಾ ಕಣಕ್ಕೆ ಇಳಿಸಲಿವೆ. ಆದರೇ, ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಎನ್‌ಡಿಎ ಗೆ ಬಹುಮತ ಇರೋದರಿಂದ ಎನ್‌ಡಿಎ ಅಭ್ಯರ್ಥಿ ಗೆಲ್ಲೋದು ಪಕ್ಕಾ. ಹೀಗಾಗಿ ಎನ್‌ಡಿಎ ನಲ್ಲಿ ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿ ಯಾರಾಗ್ತಾರೆ ಎಂಬ ಬಗ್ಗೆ ಹೆಚ್ಚು ಕುತೂಹಲ ಇದೆ. ಉಪರಾಷ್ಟ್ರಪತಿ ಸ್ಥಾನದ ಆಕಾಂಕ್ಷಿಗಳು ಈಗಾಗಲೇ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾರನ್ನು ಭೇಟಿಯಾಗುತ್ತಿದ್ದಾರೆ. ಅನೇಕ ರಾಜ್ಯಗಳ ಗರ್ವನರ್ ಗಳು ಉಪರಾಷ್ಟ್ರಪತಿ ಸ್ಧಾನದ ಆಕಾಂಕ್ಷಿಗಳಾಗಿದ್ದಾರೆ.
ಬಿಜೆಪಿ ಪಕ್ಷದಿಂದಲೇ ಈ ಭಾರಿ ಉಪರಾಷ್ಟ್ರಪತಿ ಆಯ್ಕೆಯಾಗುತ್ತಾರೆ ಎಂದು ಬಿಜೆಪಿ ಈಗಾಗಲೇ ತನ್ನ ಮಿತ್ರ ಪಕ್ಷಗಳಿಗೆ ಸ್ಪಷ್ಟಪಡಿಸಿದೆ. ಬಿಜೆಪಿ ಪಕ್ಷವು ತನ್ನ ಪಕ್ಷದ ತತ್ವ, ಸಿದ್ದಾಂತಗಳಿಂದ ಬದ್ದರಾದವರನ್ನೇ ಉಪರಾಷ್ಟ್ರಪತಿ ಆಗಿ ಆಯ್ಕೆ ಮಾಡಲು ನಿರ್ಧರಿಸಿದೆ. ಪಕ್ಷದ ಸಿದ್ದಾಂತ ಹಾಗೂ ಆರ್‌ಎಸ್ಎಸ್ ನಿಲುವುಗಳಿಗೆ ಬದ್ದರಾಗಿರುವವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೇರಿಸಲು ಬಿಜೆಪಿ ನಿರ್ಧರಿಸಿದೆ.
ಈಗಾಗಲೇ ಉಪರಾಷ್ಟ್ರಪತಿ ಸ್ಥಾನಕ್ಕೆ ಕೆಲವರ ಹೆಸರು ಅನ್ನು ಪರಿಗಣಿಸಿ, ಬಿಜೆಪಿ ಪಕ್ಷವು ಅಂತರಿಕವಾಗಿ ಚರ್ಚೆಯನ್ನು ನಡೆಸುತ್ತಿದೆ.
ಬಿಜೆಪಿ ನಾಯಕರ ಚರ್ಚಿಸುತ್ತಿರುವ ಹೆಸರುಗಳೆಂದರೇ, ದೆಹಲಿ ಲೆಫ್ಟಿನೆಂಟ್ ಗರ್ವನರ್ ವಿ.ಕೆ.ಸಕ್ಸೇನಾ, ಬಿಹಾರ ಗರ್ವನರ್ ಆರೀಫ್ ಮೊಹಮ್ಮದ್ ಖಾನ್, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್, ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಸಿಕ್ಕಿಂ ರಾಜ್ಯಪಾಲ ಓಂ ಮಾಥೂರ್, ಜಮ್ಮು ಕಾಶ್ಮೀರದ ಲೆಫ್ಟಿನೆಂಟ್ ಗರ್ವನರ್ ಮನೋಜ್ ಸಿನ್ಹಾ ಹೆಸರುಗಳ ಬಗ್ಗೆ ಬಿಜೆಪಿ ವರಿಷ್ಠ ನಾಯಕರು ಚರ್ಚೆ ನಡೆಸುತ್ತಿದ್ದಾರೆ.
ಆರ್‌ಎಸ್‌ಎಸ್‌ನ ಶೇಷಾದ್ರಿ ಚಾರಿ ಹೆಸರು ಕೂಡ ಪರಿಗಣನೆಯಲ್ಲಿದೆ. ರಾಜ್ಯಸಭೆಯ ಹಾಲಿ ಉಪಸಭಾಪತಿ ಹರಿವಂಶ ರಾಯ್ ಹೆಸರು ಕೂಡ ಪರಿಗಣನೆಯಲ್ಲಿದೆ. ಆದರೇ, ಹರಿವಂಶ್ ರಾಯ್ ಜೆಡಿಯು ಪಕ್ಷದವರು.
ಉಪರಾಷ್ಟ್ರಪತಿ ಸ್ಥಾನಕ್ಕೆ ಜಗದೀಪ್ ಧನಕರ್ ಕಳೆದ ತಿಂಗಳು ಧೀಡೀರನೇ ರಾಜೀನಾಮೆ ನೀಡಿದ ಬಳಿಕ ಅನೇಕ ರಾಜ್ಯಗಳ ರಾಜ್ಯಪಾಲರು, ಲೆಫ್ಟಿನೆಂಟ್ ಗರ್ವನರ್ ಗಳು ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್ ಸಿಂಗ್ ರನ್ನು ಭೇಟಿಯಾಗಿದ್ದಾರೆ. ಉಪರಾಷ್ಟ್ರಪತಿ ಸ್ಥಾನಕ್ಕೆ ತಮ್ಮನ್ನು ಪರಿಗಣಿಸುವಂತೆ ಪ್ರಧಾನಿ ಮೋದಿ, ಅಮಿತ್ ಶಾಗೆ ಮನವಿ ಮಾಡಿದ್ದಾರೆ. ಅಂತಿಮವಾಗಿ ನೂತನ ಉಪರಾಷ್ಟ್ರಪತಿ ಯಾರಾಗಬೇಕೆಂಬುದನ್ನು ಪ್ರಧಾನಿ ಮೋದಿ, ಅಮಿತ್ ಶಾ, ನಡ್ಡಾ, ರಾಜನಾಥ್ ಸಿಂಗ್ ಅವರೇ ಅಂತಿಮಗೊಳಿಸುವರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.