/newsfirstlive-kannada/media/media_files/2025/10/20/pushpa-suicide-2025-10-20-14-14-00.jpg)
ವರದಕ್ಷಿಣೆ ಕಿರುಕುಳದಿಂದ ಪುಷ್ಪಾ ಸಾವು
ವಿಡಿಯೋ ಮಾಡಿ ಗೃಹಿಣಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಗಂಡ, ಅತ್ತೆ, ಮಾವ,ಭಾಮೈದುನರಿಂದ ಕಿರುಕುಳದ ಆರೋಪ ಮಾಡಿದ್ದಾರೆ. ಸಾಯುವ ಮುನ್ನ ವಿಡಿಯೋ ಮಾಡಿ ಪುಷ್ಪಾ(28) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ಬಳಿಯ ಘಾಟಿ ಬಳಿಯ ವಿಶ್ವೇಶ್ವರಯ್ಯ ಪಿಕ್ ಅಪ್ ಡ್ಯಾಂಗೆ ಬಿದ್ದು ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲ್ಲೂಕಿನ ಸೋತೇನಹಳ್ಳಿ ಗ್ರಾಮದ ಪುಷ್ಪರನ್ನು ತಪಸೀಹಳ್ಳಿ ಗ್ರಾಮದ ವೇಣು ಜೊತೆ ಕಳೆದ ಒಂದು ವರ್ಷದ ಹಿಂದೆ ವಿವಾಹ ಮಾಡಲಾಗಿತ್ತು. ಪತಿ ಹಾಗೂ ಆತನ ಪೋಷಕರು ಪುಷ್ಪರಿಂದ ವರದಕ್ಷಿಣೆ ಹಾಗೂ ನಿವೇಶನಕ್ಕಾಗಿ ಕಿರಕುಳವನ್ನು ನೀಡಿದ್ದಾರೆ ಎಂದು ಪುಷ್ಪಾ ಆರೋಪಿಸಿದ್ದಾರೆ.
ಮದುವೆ ಆಗಿದ್ದಾಗಿನಿಂದಲೂ ಹೆಂಡತಿ ಜೊತೆ ಗಂಡ ಸಂಸಾರವನ್ನೇ ಮಾಡಿರಲಿಲ್ಲವಂತೆ.
ಗಂಡನಿಂದ ಮಗು ಬೇಕು ಎಂದು ಪುಷ್ಪಾ ಕೇಳಿದರೇ, ಮೈದುನನ ಜೊತೆ ಮಲಗು ಎಂದು ಅತ್ತೆ , ಮಾವ ಹೇಳುತ್ತಿದ್ದಾರಂತೆ. ಜೊತೆಗೆ ಸೈಟ್, ದುಡ್ಡು ಅನ್ನು ತವರು ಮನೆಯಿಂದ ತರುವಂತೆ ಕಿರುಕುಳ ನೀಡಿದ್ದರಿಂದ ನೊಂದು ಗೃಹಿಣಿ ಪುಷ್ಪಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಳಿ ಬೆಳಗಬೇಕಾಗಿದ್ದ ಗೃಹಿಣಿ ಪುಷ್ಪಾ , ಗಂಡ, ಅತ್ತೆ ಮಾವನ ಕಿರುಕುಳದಿಂದಲೇ ಪ್ರಾಣ ಬಿಟ್ಟಿದ್ದಾರೆ. ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ಪುಷ್ಪಾ ಸಾವಿನ ಬಗ್ಗೆ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.