/newsfirstlive-kannada/media/media_files/2025/09/15/library-and-information-science02-2025-09-15-17-49-37.jpg)
SSLC, ವಿದ್ಯಾರ್ಥಿ ಜೀವನದ ಒನ್ ಆಫ್ ದಿ ಬಿಗ್ಗೆಸ್ಟ್ ಮೈಲ್ಸ್ಟೋನ್. ಇವರಿಗೆ 1 ರಿಂದ SSLCವರೆಗೂ ಯಾವುದೇ ಆಯ್ಕೆಗಳು ಇರೋದಿಲ್ಲ. ಎಲ್ಲರೂ ಎಲ್ಲವನ್ನೂ ಓದಬೇಕು. ಆದ್ರೆ ಮೊದಲ ಬಾರಿಗೆ ತಮಗೆ ಬೇಕಾದ ಕೋರ್ಸ್ ಮಾಡೋ ಅವಕಾಶ ಸಿಗೋದು SSLC ಬಳಿಕವೇ. ಆದ್ರೆ, ಅದ್ರಲ್ಲೂ ಸಾಕಷ್ಟು ಆಪ್ಷನ್ಸ್ ಇರೋದರಿಂದ ಯಾವ ಕೋರ್ಸ್ ಮಾಡಬೇಕು ಅನ್ನೋ ಪ್ರಶ್ನೆ ಅಂತೂ ಇದ್ದೇ ಇರುತ್ತೆ.
ಸಹಜವಾಗಿ SSLC ಬಳಿಕ ಎಲ್ಲರೂ ಚೂಸ್ ಮಾಡೋದು ಪಿಯುಸಿ. ಪಿಯುಸಿಯಲ್ಲಿ ಬೇರೆಬೇರೆ ಕೋರ್ಸ್‌ಗಳಿಗೆ ಪ್ರವೇಶಾತಿ ಪಡೆಯಬಹುದು. ಈ ಕೋರ್ಸ್‌ನಲ್ಲಿ ಮೂರು ವಿಭಾಗಗಳಲ್ಲಿ ಅಂದರೆ ಸೈನ್ಸ್, ಕಾಮರ್ಸ್, ಆರ್ಟ್ಸ ವಿಭಾಗಗಳಲ್ಲಿ ಓದಬಹುದು. ನಿಮಗೆ ಯಾವುದು ಸೂಕ್ತ ಅನಿಸ್ತದೋ ಆ ಕೋರ್ಸ್‌ನಲ್ಲಿ ಅಧ್ಯಯನ ಮಾಡಬಹುದು. ಜೊತೆಗೆ ಡಿಪ್ಲೊಮ ಇಂಜಿನಿಯರಿಂಗ್ ಮಾಡುವುದಕ್ಕೂ ಅವಕಾಶವಿದೆ. ಅದರಲ್ಲೂ ಡಿಪ್ಲೊಮ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಭಾರೀ ಡಿಮ್ಯಾಂಡ್ ಇದೆ. ಹೊರದೇಶದಲ್ಲಿ ಕೆಲಸ ಮಾಡಬೇಕು ಅನ್ನೋರಿಗೆ ಇದು ಬೆಸ್ಟ್ ಕೋರ್ಸ್. ಆ ಕೋರ್ಸ್ ಮತ್ಯಾವುದು ಅಲ್ಲ Library and Information Science.
Library and Information Science ಸರ್ಟಿಫಿಕೇಟ್ ಕೋರ್ಸ್ ಅಂದ್ರೇನು? ಇದಕ್ಕೆ ಯಾಕೆ ವಿದೇಶದಲ್ಲಿ ಹೆಚ್ಚು ಡಿಮ್ಯಾಂಡ್ ಅಂತಾ ನೋಡೋದಾದ್ರೆ..!
ಪುಸ್ತಕಗಳನ್ನು ಇಷ್ಟಪಡುವವರಿಗೆ ಲೈಬ್ರರಿ ಮತ್ತು ಮಾಹಿತಿ ವಿಜ್ಞಾನ ಅತ್ಯುತ್ತಮ ವೃತ್ತಿ. ಈ ಕೋರ್ಸ್ ನಂತರ Librarian ಆಗಬಹುದು. ಲೈಬ್ರರಿ ಅಟೆಂಡೆಂಟ್, ಲೈಬ್ರರಿ ಅಸಿಸ್ಟೆಂಟ್, ಜೂನಿಯರ್ ಲೈಬ್ರರಿಯನ್ ಮತ್ತು ಲೈಬ್ರರಿಯನ್ ಆಗಿ ಕೆಲಸ ಮಾಡಬಹುದು. ಲೈಬ್ರರಿ ಮತ್ತು ಮಾಹಿತಿ ವಿಜ್ಞಾನ ಕೋರ್ಸ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ದಾಖಲಾತಿ, ಹಸ್ತಪ್ರತಿಗಳು, ಗ್ರಂಥಾಲಯ ಮತ್ತು ಮಾಹಿತಿ ವ್ಯವಸ್ಥೆಗಳ ನಿರ್ವಹಣೆ, ಕ್ಯಾಟಲಾಗ್‌ಗಳು ಮತ್ತು ಗ್ರಂಥಸೂಚಿಗಳಂತಹ ವಿಷಯಗಳ ಬಗ್ಗೆ ಕಲಿಸಲಾಗುತ್ತದೆ.
ವಿದೇಶದಲ್ಲಿ ಭಾರತದ ಇತಿಹಾಸದ ಕುರಿತು ಹೆಚ್ಚು ಅಧ್ಯಯನ ನಡೆಯುತ್ತಿದೆ. ಹಾಗಾಗಿ ವಿದೇಶಿಗರು ಭಾರತದ ಹಿಸ್ಟರಿ ಸ್ಟಡಿ ಮಾಡಲು ಯಾವ ಬುಕ್ ಓದಬೇಕು ಅನ್ನೋ ಸೂಕ್ತ ಮಾಹಿತಿ ಭಾರತೀಯರಿಗೆ ಮಾತ್ರ ಗೊತ್ತಿರುತ್ತದೆ. ಹಾಗಾಗಿ ಭಾರತದ ಪಾಲಿಸಿಗಳು, ಅಡ್ಮಿನಿಸ್ಟ್ರೇಷನ್, ಹಿಸ್ಟರಿ, ಫಿಲಾಸಫಿಗಳ ಬಗ್ಗೆ ಜ್ಞಾನ ಇರೋ ಲೈಬ್ರೇರಿಯನ್ಸ್ಗೆ ಹೆಚ್ಚು ಡಿಮ್ಯಾಂಡ್ ಇದೆ. ಶಾಲೆ, ಕಾಲೇಜು, ವಿಶ್ವವಿದ್ಯಾಲಯ, ಖಾಸಗಿ ಸಂಸ್ಥೆ, ಖಾಸಗಿ ಗ್ರಂಥಾಲಯ, ವಸ್ತುಸಂಗ್ರಹಾಲಯ ಇತ್ಯಾದಿಗಳಲ್ಲಿ ಗ್ರಂಥಪಾಲಕರಾಗಿ ಕೆಲಸ ಮಾಡಬಹುದು.
ತಮ್ಮ ವೃತ್ತಿಜೀವನದ ಆರಂಭದಲ್ಲಿ ತಿಂಗಳಿಗೆ ಸುಮಾರು 15 ಸಾವಿರ ಡಾಲರ್ಸ್ ಪಡೆಯಬಹುದು. ಇದು ಸಂಸ್ಥೆ ಮತ್ತು ಅರ್ಹತೆ ಆಧಾರದ ಮೇಲೆ ಅವಲಂಬಿತವಾಗಿರುತ್ತದೆ. ಕೆಲವು ವರ್ಷಗಳ ಅನುಭವದ ನಂತರ, ವಾರ್ಷಿಕ ಪ್ಯಾಕೇಜ್ 2 ಲಕ್ಷ ಡಾಲರ್ಸ್ವರೆಗೆ ತಲುಪಬಹುದು.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮತ್ತು ಆಫ್‌ಲೈನ್‌ನ ಈ ಕೋರ್ಸ್‌ಗೆ ಅರ್ಜಿಗಳನ್ನು ಸಲ್ಲಿಸಬಹುದು. 10+2 ತರಗತಿಯಲ್ಲಿ ಉತ್ತಿರ್ಣರಾದ ಅರ್ಹ ಅಭ್ಯರ್ಥಿಗಳು ಕೋರ್ಸ್‌ಗೆ ಸೇರಬಹುದು. ಅರ್ಜಿ ಸಲ್ಲಿಕೆ ಪೂರ್ಣಗೊಂಡು ಅಭ್ಯರ್ಥಿಗಳು ಫೈನಲ್ ಆದ ಮೇಲೆ ಕೋರ್ಸ್‌ನ ತರಗತಿಗಳು ಆರಂಭವಾಗಲಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.