/newsfirstlive-kannada/media/media_files/2025/09/17/blackbuck-2025-09-17-15-06-31.jpg)
ಬ್ಲ್ಯಾಕ್ ಬಕ್ ಕಂಪನಿ ಸಿಇಓ ರಾಜೇಶ್ ಯಾಬಾಜಿ
ಮೂರು ದಿನದ ಹಿಂದೆಯಷ್ಟೇ ಬೆಂಗಳೂರಿನ ಔಟರ್ ರಿಂಗ್ ರೋಡ್ ನಲ್ಲಿರುb ಲಾಜಿಸ್ಟಿಕ್ ಕಂಪನಿ ಬ್ಲ್ಯಾಕ್ ಬಕ್ ಕಂಪನಿಯನ್ನು ಬೇರೆಡೆಗೆ ಸ್ಥಳಾಂತರ ಮಾಡುವುದಾಗಿ ಹೇಳಿದ್ದ ಕಂಪನಿಯ ಸಿಇಓ ರಾಜೇಶ್ ಯಬಾಜಿ ಈಗ ಬೆಂಗಳೂರು ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಬೆಳ್ಳಂದೂರಿನ ಟ್ರಾಫಿಕ್ ಜಾಮ್, ಗುಂಡಿಬಿದ್ದ ರಸ್ತೆಗಳು, ಧೂಳು ಸಮಸ್ಯೆ ಕಾರಣದಿಂದ ಬೆಂಗಳೂರು ಬಿಡುವುದಾಗಿ ರಾಜೇಶ್ ಯಬಾಜಿ ಟ್ವೀಟರ್ ನಲ್ಲಿ ಟ್ವೀಟ್ ಮಾಡಿದ್ದರು. ಬೆಂಗಳೂರಿನ ರಸ್ತೆ ಸಮಸ್ಯೆಯು ಮುಂದಿನ 5 ವರ್ಷದಲ್ಲಿ ಸರಿ ಹೋಗುವ ಲಕ್ಷಣ ಕೂಡ ಕಾಣುತ್ತಿಲ್ಲ ಎಂದಿದ್ದರು.
ಇದು ರಾಜಕೀಯವಾಗಿ ರಾಜ್ಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಐ.ಟಿ, ಬಿಟಿ ವಲಯದ ದಿಗ್ಗಜರು ಕೂಡ ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದ್ದರು. ಒಂದೊಂದೇ ಕಂಪನಿಗಳು ಬೆಂಗಳೂರು ಬಿಟ್ಟು ಹೊರ ರಾಜ್ಯಗಳಿಗೆ ವಲಸೆ ಹೋಗುತ್ತಿವೆ. ಇದಕ್ಕೆ ರಾಜ್ಯ ಸರ್ಕಾರದ ನಿರ್ಲಕ್ಷ್ಯದ ಧೋರಣೆಯೇ ಕಾರಣ ಎಂದು ಕಿಡಿಕಾರಿದ್ದವು. ಉದ್ಯಮಿ, ಹೂಡಿಕೆದಾರ ಮೋಹನ್ ದಾಸ್ ಪೈ, ಐಟಿ, ಬಿಟಿ ವಲಯದ ಕಿರಣ್ ಮಜುಂದಾರ್ ಷಾ ಕೂಡ ಬೆಂಗಳೂರಿನ ರಸ್ತೆ, ಟ್ರಾಫಿಕ್ ಜಾಮ್ ಬಗ್ಗೆ ಕಿಡಿಕಾರಿದ್ದರು.
ಆದರೇ, ಈಗ ಬ್ಲ್ಯಾಕ್ ಬಕ್ ಕಂಪನಿಯ ಸಿಇಓ ರಾಜೇಶ್ ಯಾಬಾಜಿ ನಾವು ಬೆಂಗಳೂರು ಬಿಟ್ಟು ಹೋಗುವುದಿಲ್ಲ. ನಾವು ಬೆಳ್ಳಂದೂರಿನಿಂದ ಮಾತ್ರ ಕಂಪನಿಯನ್ನು ಸ್ಥಳಾಂತರ ಮಾಡುತ್ತಿದ್ದೇವೆ ಅಷ್ಟೇ. ಬೆಂಗಳೂರಿನಲ್ಲಿ ನಾವು ನಮ್ಮ ಕಂಪನಿಯನ್ನು ವಿಸ್ತರಿಸಲು ಬಯಸಿದ್ದೇವೆ. 2015 ರಲ್ಲಿ ಸೋನಿ ಸಿಗ್ನಲ್ ಬಳಿ ಬ್ಲ್ಯಾಕ್ ಬಕ್ ಕಂಪನಿಯು ಆರಂಭವಾಯ್ತು. ಆದಾದ ಬಳಿಕ ಉತ್ತಮ ಸೌಲಭ್ಯಕ್ಕಾಗಿ ಬೆಳ್ಳಂದೂರಿಗೆ 2016 ರಲ್ಲಿ ಶಿಫ್ಟ್ ಆಯ್ತು. ಕಂಪನಿಯು ಬೆಳೆಯಲು ಬೆಂಗಳೂರು ನಗರ, ಸರ್ಕಾರ ಸಹಕಾರ ಕೊಟ್ಟಿದೆ. ಬೆಂಗಳೂರು ನಮಗೆ ಎಷ್ಟು ಸಹಕಾರ ಕೊಟ್ಟಿದೆ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದೇವೆ. ಮುಂದೆ ನಮಗೆ ನಮ್ಮ ಸಾಮರ್ಥ್ಯ ಅನಾವರಣ ಮಾಡಲು ನಗರದ ಮಹತ್ವ ತಿಳಿದಿದ್ದೇವೆ.
— Rajesh Yabaji (@YABAJI) September 18, 2025
ಹಾಗಾಗಿ, ನಮ್ಮ ಕಂಪನಿ ನಗರ ಬಿಟ್ಟು ಹೋಗುತ್ತೇವೆ ಎನ್ನುವುದನ್ನು ನಾವು ಒಪ್ಪಲ್ಲ . ನಾವು ನಗರದಲ್ಲೇ ಬೇರೆಡೆ ಶಿಫ್ಟ್ ಆಗ್ತೇವೆ. ಸಹೋದ್ಯೋಗಿಗಳಿಗೆ ಕಚೇರಿಗೆ ಬಂದು ಹೋಗಲು ಅನುಕೂಲ ಆಗಲಿ ಎನ್ನುವ ಕಾರಣ ಸದ್ಯಕ್ಕೆ ಹೆಚ್ಚಿನ ಕಾರ್ಯಾಚರಣೆ ಬೆಳ್ಳಂದೂರಿನಲ್ಲೇ ಸಾಗಲಿದೆ . ಬೆಂಗಳೂರು ಯಾವತ್ತೂ ನಮ್ಮ ನೆಲೆಯಾಗಲಿದೆ ಎಂದು ರಾಜೇಶ್ ಯಾಬಾಜಿ ಪೋಸ್ಟ್ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.