/newsfirstlive-kannada/media/media_files/2026/01/17/wfh-new-2026-01-17-17-25-56.jpg)
ಬೆಂಗಳೂರು ಮೂಲದ ದೈತ್ಯ ಐಟಿ ಕಂಪನಿ ಅಂದ್ರೆ ಅದು ವಿಪ್ರೋ.. ಈಗ ವಿಪ್ರೋ ತನ್ನ ಉದ್ಯೋಗಿಗಳಿಗೆ ಹೊಸ ರೂಲ್ಸ್​​​ ಪ್ರಕಟಿಸಿದ್ದು, ಹೈಬ್ರಿಡ್ ಕೆಲಸದ ಮಾದರಿಯನ್ನು ಇನ್ನಷ್ಟು ಕಟ್ಟುನಿಟ್ಟುಗೊಳಿಸಿದೆ. 2026ರ ಜನವರಿ 1ರಿಂದಲೇ ಈ ರೂಲ್ಸ್​​ ಜಾರಿಗೆ ಬಂದಿದ್ದು, ಉದ್ಯೋಗಿಗಳು ವಾರದಲ್ಲಿ ಕನಿಷ್ಠ 3 ದಿನ ಕಚೇರಿಗೆ ಬರುವುದು ಕಡ್ಡಾಯವಾಗಿದೆ. ಅಷ್ಟೇ ಅಲ್ಲದೆ, ಕಚೇರಿಯಲ್ಲಿ ಕನಿಷ್ಠ 6 ಗಂಟೆಗಳ ಕಾಲ ಇರಲೇಬೇಕು ಅನ್ನೋ ಹೊಸ ಷರತ್ತನ್ನು ವಿಧಿಸಲಾಗಿದೆ.
ಇನ್ನೂ ಈ ಹೊಸ ರೂಲ್ಸ್​​ನಲ್ಲೇನಿದೆ?
ಉದ್ಯೋಗಿಗಳು ವಾರದ ನಿಗದಿತ ದಿನಗಳಲ್ಲಿ ಕಚೇರಿಗೆ ಬರಲೇಬೇಕು. ಒಂದು ವೇಳೆ ಕಚೇರಿಗೆ ಹಾಜರಾಗದಿದ್ರೆ ಅಥವಾ ಕಚೇರಿಯಲ್ಲಿ 6 ಗಂಟೆಗಳಿಗಿಂತ ಕಡಿಮೆ ಸಮಯ ಇದ್ರೆ ರಜೆಗಳನ್ನು ಕಡಿತಗೊಳಿಸಲಾಗುತ್ತದೆ. ವರದಿ ಪ್ರಕಾರ 6 ಗಂಟೆ ಪೂರೈಸದಿದ್ರೆ ಅರ್ಧ ದಿನದ ರಜೆಯನ್ನು ಕಡಿತಗೊಳಿಸಲು ಕಂಪನಿ ನಿರ್ಧರಿಸಿದೆ. ಸುಮಾರು 2.34 ಲಕ್ಷ ಉದ್ಯೋಗಿಗಳನ್ನು ಹೊಂದಿರುವ ವಿಪ್ರೋ, ಶಿಸ್ತುಬದ್ಧ ಕೆಲಸದ ವಾತಾವರಣಕ್ಕಾಗಿ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.
ಮನೆಯಿಂದಲೇ ಕೆಲಸ ಮಾಡುವ (ರಿಮೋಟ್ ವರ್ಕಿಂಗ್) ಸೌಲಭ್ಯದಲ್ಲೂ ಕಂಪನಿ ಕಡಿತ ಮಾಡಿದೆ. ಈ ಹಿಂದೆ ವೈಯಕ್ತಿಕ ಆರೋಗ್ಯ ಅಥವಾ ತುರ್ತು ಕಾರಣಗಳಿಗಾಗಿ ವರ್ಷಕ್ಕೆ 15 ದಿನಗಳ ಕಾಲ ನೀಡಲಾಗುತ್ತಿದ್ದ ರಿಮೋಟ್ ವರ್ಕ್ ಅವಕಾಶವನ್ನು ಈಗ 12 ದಿನಗಳಿಗೆ ಇಳಿಸಲಾಗಿದೆ. ಕಚೇರಿಯ ವಾತಾವರಣದಲ್ಲಿ ತಂಡಗಳ ನಡುವೆ ಉತ್ತಮ ಸಹಯೋಗ ಮತ್ತು ಸಮನ್ವಯ ಸಾಧಿಸಲು ಈ ಬದಲಾವಣೆ ಅವಶ್ಯಕ ಎಂದು ಕಂಪನಿಯು ತನ್ನ ಆಂತರಿಕ ಇಮೇಲ್‌ನಲ್ಲಿ ತಿಳಿಸಿದೆ.
/filters:format(webp)/newsfirstlive-kannada/media/media_files/2026/01/17/wipro-2026-01-17-17-24-15.jpg)
ಉದ್ಯೋಗಿಗಳು ಕಚೇರಿಯಲ್ಲಿ ಕಳೆಯಬೇಕಾದ 6 ಗಂಟೆಗಳ ಸಮಯವು ಕೇವಲ ಹಾಜರಾತಿಯನ್ನು ದಾಖಲಿಸಲು ಮಾತ್ರ ಸೀಮಿತವಾಗಿದೆ. ಆದರೆ ಒಟ್ಟು ದೈನಂದಿನ ಕೆಲಸದ ಅವಧಿಯು ಮೊದಲಿನಂತೆಯೇ 9.5 ಗಂಟೆಗಳಾಗಿರುತ್ತದೆ. ಇದರರ್ಥ ಉದ್ಯೋಗಿಗಳು ಕಚೇರಿಯಲ್ಲಿ ಆರು ಗಂಟೆ ಕೆಲಸ ಮಾಡಿ, ಉಳಿದ ಸಮಯದ ಕೆಲಸವನ್ನು ಅಂದೇ ಮನೆಯಿಂದ ಪೂರ್ಣಗೊಳಿಸಬೇಕಾಗುತ್ತದೆ ಮತ್ತು ತಮಗೆ ವಹಿಸಿದ ಜವಾಬ್ದಾರಿಗಳನ್ನು ನಿಗದಿತ ಸಮಯದಲ್ಲಿ ಮುಗಿಸಬೇಕಾಗುತ್ತದೆ.
ಐಟಿ ಕ್ಷೇತ್ರದಲ್ಲಿ AI ಅತಿಯಾಗಿ ಬಳಕೆಯೇ ಈ ಬದಲಾವಣೆಗಳಿಗೆ ಕಾರಣವಾಗಿದೆ. ಉದ್ಯೋಗಿಗಳು ಪರಸ್ಪರ ಮುಖಾಮುಖಿಯಾಗಿ ಚರ್ಚಿಸಿ ಕೆಲಸ ಮಾಡುವುದರಿಂದ ಹೆಚ್ಚಿನ ಉತ್ಪಾದಕತೆ ಸಾಧ್ಯ ಎಂಬುದು ಕಂಪನಿಯ ನಂಬಿಕೆಯಾಗಿದೆ. ಹೀಗಾಗಿ ರಿಮೋಟ್ ವರ್ಕಿಂಗ್ ಸಂಸ್ಕೃತಿಯನ್ನು ಕಡಿಮೆ ಮಾಡಿ, ಕಚೇರಿಯಿಂದಲೇ ಕೆಲಸ ಮಾಡುವುದಕ್ಕೆ ವಿಪ್ರೋ ಸೇರಿದಂತೆ ಹಲವು ಐಟಿ ಕಂಪನಿಗಳು ಈಗ ಹೆಚ್ಚಿನ ಆದ್ಯತೆ ನೀಡುತ್ತಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us