/newsfirstlive-kannada/media/media_files/2026/02/14/priyanaka-missing-in-hassan-2026-02-14-15-49-44.jpg)
30 ಲಕ್ಷ ಚಿನ್ನಾಭರಣ ಧರಿಸಿದ್ದ ಪ್ರಿಯಾಂಕಾ ನಾಪತ್ತೆ!
ಮದುವೆಗೆ ಬಂದಿದ್ದ ಮಹಿಳೆ ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ. ತುಮಕೂರು ಜಿಲ್ಲೆ ಕುಣಿಗಲ್ ನಿಂದ ಚಿಕ್ಕಮಗಳೂರು ಮದುವೆಗೆ ಬಂದಿದ್ದ ಮಹಿಳೆ ಪ್ರಿಯಾಂಕ(29) ನಿಗೂಢ ರೀತಿಯಲ್ಲಿ ಕಣ್ಮರೆಯಾಗಿದ್ದಾರೆ. ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕಲ್ಕೆರೆ ಬಳಿ ಮಹಿಳೆಯ ಒಳ ಉಡುಪು ಚಪ್ಪಲಿ, ವ್ಯಾನಿಟಿ ಬ್ಯಾಗ್ ಪತ್ತೆಯಾಗಿದೆ. ನಿನ್ನೆಯಿಂದ ದೂರು ನೀಡಲು ಪರದಾಡಿದರೂ ಪೊಲೀಸರು ಸ್ಪಂದಿಸಿಲ್ಲ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅರೇಹಳ್ಳಿ ಹಾಗು ಬೇಲೂರು ಪೊಲೀಸರ ವಿರುದ್ಧ ಪ್ರಿಯಾಂಕ ಕುಟುಂಬ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ಸ್ಥಳದಲ್ಲಿ ನೋಡಿದಾಗ ಮಹಿಳೆಯ ಬಟ್ಟೆ ಇರಲಿಲ್ಲ. ಇಂದು ನೋಡಿದರೆ ಬಟ್ಟೆ, ಒಳ ಉಡುಪು, ಬ್ಯಾಗ್ ಸಿಕ್ಕಿದೆ. ನಿನ್ನೆಯೇ ಪೊಲೀಸರು ದೂರು ಸ್ವೀಕಾರ ಮಾಡಿ ತನಿಖೆ ಕೈಗೊಂಡಿದ್ದರೇ, ಮಹಿಳೆ ಬದುಕುತ್ತಿದ್ದರೋ ಏನೋ ಎಂಬ ಅನುಮಾನವನ್ನು ಕುಟುಂಬಸ್ಥರು ವ್ಯಕ್ತಪಡಿಸುತ್ತಿದ್ದಾರೆ.
ಪ್ರಿಯಾಂಕ ಮೈ ಮೇಲೆ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇದ್ದವು. ಒಡವೆ ಸಮೇತ ಪ್ರಿಯಾಂಕಾ ನಾಪತ್ತೆಯಾಗಿದ್ದರು. ಫೆಬ್ರವರಿ 12ರ ರಾತ್ರಿ 8 ಗಂಟೆಗೆ ಪ್ರಿಯಾಂಕಾ ಮಿಸ್ಸಿಂಗ್ ಆಗಿದ್ದಾರೆ. ಫೆಬ್ರವರಿ 12 ರ ರಾತ್ರಿ 7.30 ರ ಸುಮಾರಿಗೆ ಕುಟುಂಬ ಸದಸ್ಯರಿಗೆ ಕರೆ ಮಾಡಿ ಕೊನೆಯ ಭಾರಿಗೆ ಪ್ರಿಯಾಂಕಾ ಮಾತನಾಡಿದ್ದಾರೆ. ಆದಾದ ಬಳಿಕ ಕುಟುಂಬಸ್ಥರ ಸಂಪರ್ಕಕ್ಕೆ ಸಿಕ್ಕಿಲ್ಲ.
ಯಾರೋ ದುಷ್ಕರ್ಮಿಗಳು ಪ್ರಿಯಾಂಕಾರನ್ನು ಕೊಲೆ ಮಾಡಿ ಕಲ್ಕೆರೆ ಗ್ರಾಮದ ಕೆರೆಗೆ ಶವ ಎಸೆದಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ. ಕೆರೆಯ ಪಕ್ಕದಲ್ಲೇ ಪ್ರಿಯಾಂಕಾರ ಉಡುಪುಗಳು ಬಿದ್ದಿವೆ. ಕೆರೆಯಲ್ಲಿ ಮಹಿಳೆಯ ಶವಕ್ಕಾಗಿ ಹುಡುಕಾಟ ನಡೆದಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಕೆರೆಯಲ್ಲಿ ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಕಲ್ಕೆರೆ ಗ್ರಾಮದ ಕೆರೆಯ ಬಳಿಯೇ ಪ್ರಿಯಾಂಕಾ ಉಡುಪುಗಳು ಪತ್ತೆಯಾಗಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us