ಭೂಮಿ ಖರೀದಿಗೆ 25 ಲಕ್ಷ ರೂಪಾಯಿವರೆಗೆ ಸಾಲ ಸಿಗುತ್ತೆ! ಎಲ್ಲಿ ಸಿಗುತ್ತೆ, ಯಾವ ಸ್ಕೀಮ್ ? ವಿವರ ಇಲ್ಲಿದೆ ನೋಡಿ.

ಕರ್ನಾಟಕದಲ್ಲಿ ಜನರ ಅನುಕೂಲಕ್ಕಾಗಿ ಹತ್ತಾರು ಸರ್ಕಾರಿ ಯೋಜನೆಗಳಿವೆ. ಅವುಗಳಲ್ಲಿ ಭೂ ಒಡೆತನ ಯೋಜನೆಯೂ ಒಂದು. ಈ ಯೋಜನೆಯಡಿ ಭೂರಹಿತರು ಭೂಮಿ ಖರೀದಿಗೆ ಸಾಲ ನೀಡಲಾಗುತ್ತೆ. ಯಾರಿಗೆ ಸಾಲ ಸಿಗುತ್ತೆ? ಅರ್ಹತೆಗಳೇನು? ಅನ್ನೋ ವಿವರ ಇಲ್ಲಿದೆ ಓದಿ.

author-image
Chandramohan
land buying scheme

ಭೂ ಒಡೆತನ ಯೋಜನೆಯ ವಿವರ

Advertisment
  • ರಾಜ್ಯ ಸರ್ಕಾರದಿಂದ ಭೂ ಒಡೆತನ ಯೋಜನೆ ಜಾರಿ
  • ದಲಿತ ಮಹಿಳಾ ಕೃಷಿ ಕಾರ್ಮಿಕರಿಗೆ ಭೂ ಮಾಲೀಕತ್ವ ನೀಡುವ ಯೋಜನೆ
  • ಭೂಮಿ ಖರೀದಿಗೆ 25 ಲಕ್ಷ ರೂಪಾಯಿವರೆಗೂ ಹಣ ನೀಡುವ ಸರ್ಕಾರ


ಇಂದು ಭೂಮಿಯ ಬೆಲೆ ಗಗನಕ್ಕೇರಿದೆ. ಅದ್ರಲ್ಲೂ ಬಡವ್ರು ಭೂಮಿ ಖರೀದಿ ಮಾಡುವುದು ಕನಸಿನ ಮಾತೇ ಸರಿ. ಇದನ್ನು ಮನಗಂಡು ರಾಜ್ಯ ಸರ್ಕಾರ, ಭೂ ಒಡೆತನ ಯೋಜನೆಯನ್ನು ಜಾರಿಗೊಳಿಸಿದೆ. ಈ ಸ್ಕೀಮ್​ ಅಡಿಯಲ್ಲಿ ಭೂಮಿಯಿಲ್ಲದ ಬಡವರಿಗೆ ಭೂಮಿ ಖರೀದಿಸಲು ಸರ್ಕಾರ ಆರ್ಥಿಕ ನೆರವು ಕೊಡುತ್ತೆ. ಹಾಗಾದ್ರೆ ಏನಿದು ಸ್ಕೀಮ್​​? ಇದರಿಂದಾಗೋ ಉಪಯೋಗಗಳೇನು? ಅಂತಾ ಹೇಳ್ತೀವಿ ಕೇಳಿ. 
ಮೊದಲಿಗೆ ಭೂ -ಒಡೆತನ ಸ್ಕೀಮ್​ ಏನು? ಅಂತಾ ನೋಡೋದಾದ್ರೆ
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡದವ್ರು ಭೂಮಿ ಖರೀದಿಸಲು ಆರ್ಥಿಕ ನೆರವು ನೀಡುವುದು ಈ ಸ್ಕೀಮ್​ನ​​ ಮುಖ್ಯ ಉದ್ದೇಶ. ಈ ಯೋಜನೆಯಡಿ ರಾಜ್ಯದ 27 ಜಿಲ್ಲೆಗಳ ಫಲಾನುಭವಿಗಳಿಗೆ 20 ಲಕ್ಷ ರೂಪಾಯಿ ನೀಡಲಾಗುವುದು. ಹಾಗೆಯೇ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಯಲ್ಲಿ ಇರೋರಿಗೆ 25 ಲಕ್ಷ ನೀಡಲಾಗುವುದು. ಅದ್ರಲ್ಲಿ ಶೇ 50ರಷ್ಟು ಸಹಾಯಧನ ಮತ್ತು ಶೇ 50 ರಷ್ಟು ಸಾಲ ಇರಲಿದೆ. 
ಫಲಾನುಭವಿ ವಾಸಿಸುತ್ತಿರೋ ಸ್ಥಳದಿಂದ ಗರಿಷ್ಠ 10 ಕಿ. ಮೀ. ವ್ಯಾಪ್ತಿಯೊಳಗೆ ಭೂಮಿ ಖರೀದಿ ಮಾಡಿ ನೀಡಲಾಗುವುದು. ಸಾಲದ ಮೊತ್ತವನ್ನು 10 ವಾರ್ಷಿಕ ಸಮ ಕಂತುಗಳಲ್ಲಿ ವಾರ್ಷಿಕ ಶೇ 6ರ ಬಡ್ಡಿ ದರದಲ್ಲಿ ಪಾವತಿ ಮಾಡಬೇಕಾಗುತ್ತದೆ. ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರವಲ್ಲ ಭೂರಹಿತ ಕೃಷಿ ಕಾರ್ಮಿಕರಿಗೂ ಈ ಸ್ಕೀಮ್​ ಅಡಿಯಲ್ಲಿ ಆರ್ಥಿಕ ಸಹಾಯ ಮಾಡಲಾಗುತ್ತದೆ. 
ಇನ್ನೂ ಈ ಭೂ ಒಡೆತನ ಯೋಜನೆಯ ಸೌಲಭ್ಯಗಳು ಏನು ಅಂತಾ ನೋಡೋದಾದ್ರೆ
ಬಡವರನ್ನು ಭೂ ಒಡೆಯರನ್ನಾಗಿ ಮಾಡುವ ಉದ್ದೇಶ ಈ ಯೋಜನೆಯದ್ದು. ಫಲಾನುಭವಿ ವಾಸಿಸುತ್ತಿರೋ 10 ಕಿ. ಮೀ. ವ್ಯಾಪ್ತಿಯೊಳಗೆ ಭೂಮಿ ಖರೀದಿ ಮಾಡಬೇಕು. ಕನಿಷ್ಠ 2 ಎಕರೆ ಖುಷ್ಕಿ, 1 ಎಕರೆ ನೀರಾವರಿ, 1/2 ಎಕರೆ ಭಾಗಾಯ್ತು ಖರೀದಿಸಿ ಫಲಾನುಭವಿ ಹೆಸರಿನಲ್ಲಿ ನೊಂದಾಯಿಸಲಾಗುವುದು. ಫಲಾನುಭವಿಗಳ ಆಯ್ಕೆ ಅಧಿಕಾರವನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ನೀಡಲಾಗಿರುತ್ತದೆ. 
ಜಮೀನು ಮಾರಾಟ ಮಾಡುವ ಭೂ ಮಾಲೀಕರು ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಗೆ ಸೇರಿರಬಾರದು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲೇ ಜಮೀನಿನ ದರ ನಿಗದಿ ಮಾಡಲಾಗುತ್ತದೆ. 



ಸೌಲಭ್ಯ ಪಡೆಯಲು ಅರ್ಜಿದಾರರಿಗೆ ಇರಬೇಕಾದ ಅರ್ಹತೆಗಳು ಏನು ಅಂತಾ ನೋಡೋದಾದ್ರೆ
ಅರ್ಜಿದಾರರು ಭೂ ರಹಿತ ಕೃಷಿ ಕಾರ್ಮಿಕ ಕುಟುಂಬದವರಾಗಿರಬೇಕು. ವಿಶೇಷವಾಗಿ ಅರ್ಜಿದಾರರು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಸೇರಿರಬೇಕು. ಜಾತಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅರ್ಜಿದಾರರು/ಕುಟುಂಬಸ್ಥರು ಯಾವುದೇ ಸರ್ಕಾರಿ/ಅರೆ ಸರ್ಕಾರಿ ನೌಕರಿಯಲ್ಲಿರಬಾರದು. ಸೌಲಭ್ಯ ಪಡೆಯಲು ಫಲಾಪೇಕ್ಷಿಯು ಭೂರಹಿತ ಮಹಿಳಾ ಕೃಷಿ ಕಾರ್ಮಿಕರಾಗಿರಬೇಕು. 
ಅಗತ್ಯವಿರೋ ದಾಖಲೆಗಳು ಏನು ಅಂತಾ ನೋಡೋದಾದ್ರೆ
ಫಲಾನುಭವಿಯ ಆಧಾರ್‌ ಕಾರ್ಡ್‌ ಪ್ರತಿ ಬೇಕು. ಫಲಾನುಭವಿಯು ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ ನೀಡಬೇಕು. ಆದಾಯ ಪ್ರಮಾಣಪತ್ರ, ಭೂ ರಹಿತ ಕೃಷಿ ಕಾರ್ಮಿಕರ ಪತ್ರ, ರೇಷನ್ ಕಾರ್ಡ್, ಭೂ ಮಾಲೀಕರ ಭೂ ಮಾರಾಟ ಮಾಡಲು ಮುಚ್ಚಳಿಕೆ ಪತ್ರ, ಭೂ ಮಾಲೀಕರ ವಂಶಾವಳಿ ನೀಡಬೇಕು. ಹಾಗೆಯೇ ಭೂ ಮಾಲೀಕ, ಕುಟುಂಬ ಸದಸ್ಯರ, ನಿರಾಕ್ಷೇಪಣಾ ಪತ್ರ ಅಂದ್ರೆ NOCಯನ್ನ ವಂಶಾವಳಿಯಲ್ಲಿರುವ ಸದಸ್ಯರು, ನೋಟರಿ ಮಾಡಿಸಿ ಸಲ್ಲಿಸತಕ್ಕದ್ದು. ಭೂ ಮಾಲೀಕರಿಂದ ಪಹಣಿ ಮತ್ತು ಹಕ್ಕು ಬದಲಾವಣೆ ಪ್ರತಿ ಬೇಕು. ಭೂ ಮಾಲೀಕರಿಂದ ಕಳೆದ 13 ವರ್ಷಗಳ ಇ.ಸಿ ಕೂಡ ನೀಡಬೇಕು. ಫಲಾನುಭವಿಯ ಭಾವಚಿತ್ರ ಕೂಡ ಕಡ್ಡಾಯ. 

land buying scheme022




ಅರ್ಜಿ ಸಲ್ಲಿಸುವುದು ಹೇಗೆ? ಅಂತಾ ನೋಡೋದಾದ್ರೆ.
ಭೂ ಒಡೆತನ ಯೋಜನೆಗೆ ಸೇವಾ ಸಿಂಧು ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಸಿಂಧು ವೆಬ್‌ಸೈಟ್ https://sevasindhu.karnataka.gov.in ಗೆ ಭೇಟಿ ನೀಡಿ. ನಿಮ್ಮ ಆಧಾರ್ ಸಂಖ್ಯೆ, ಇಮೇಲ್ ಮತ್ತು ಮೊಬೈಲ್ ಸಂಖ್ಯೆ ಬಳಸಿ ರಿಜಿಸ್ಟರ್​ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ಮತ್ತು ಪಾಸ್‌ವರ್ಡ್/OTP ಯೊಂದಿಗೆ ಲಾಗಿನ್ ಮಾಡಿ. ಭೂ ಮಾಲೀಕತ್ವ ಯೋಜನೆಗಾಗಿ "ಆನ್‌ಲೈನ್‌ನಲ್ಲಿ ಅನ್ವಯಿಸು" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಿ. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ. 




ಬಳಿಕ ಟೋಕನ್ ಸಂಖ್ಯೆಯನ್ನು ಸ್ವೀಕರಿಸುತ್ತೀರಿ. ಸೇವಾ ಸಿಂಧು ಪೋರ್ಟಲ್‌ನ ಡ್ಯಾಶ್‌ಬೋರ್ಡ್‌ನಲ್ಲಿ ಅರ್ಜಿ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಟೋಕನ್ ಸಂಖ್ಯೆ ಬಳಸಬಹುದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

bhoo odethana yojana
Advertisment