BREAKING : ಲ್ಯಾಂಡಿಂಗ್​ ವೇಳೆ ಮತ್ತೊಂದು ವಿಮಾನ ಪತನ, 80 ಪ್ರಯಾಣಿಕರಿದ್ದರು

author-image
Ganesh
Updated On
BREAKING : ಲ್ಯಾಂಡಿಂಗ್​ ವೇಳೆ ಮತ್ತೊಂದು ವಿಮಾನ ಪತನ, 80 ಪ್ರಯಾಣಿಕರಿದ್ದರು
Advertisment
  • Toronto ವಿಮಾನ ನಿಲ್ದಾಣದಲ್ಲಿ ದುರ್ಘಟನೆ
  • ಡೆಲ್ಟಾ ಏರ್​​ಲೈನ್ಸ್ ವಿಮಾನ-4819 ಪತನಗೊಂಡಿದೆ
  • ಘಟನೆಗೆ ಕಾರಣ ತಿಳಿದುಬಂದಿಲ್ಲ, ತನಿಖೆ ಆರಂಭ

ಡೆಲ್ಟಾ ಏರ್​​ಲೈನ್ಸ್ ವಿಮಾನ-4819 (Delta Air Lines) ಅಪಘಾತಕ್ಕೀಡಾಗಿದೆ. ವಿಮಾನದಲ್ಲಿ 76 ಪ್ರಯಾಣಿಕರು ಹಾಗೂ ನಾಲ್ವರು ಸಿಬ್ಬಂದಿ ಸೇರಿ ಒಟ್ಟು 80 ಪ್ರಯಾಣಿಕರಿದ್ದರು.

ವಿಮಾನವು ಅಮೆರಿಕದ ಮಿನ್ನಿಯಾಪೋಲಿಸ್-ಸೇಂಟ್ ಪಾಲ್ (Minneapolis) ನಿಲ್ದಾಣದಿಂದ ಟೊರೊಂಟೊ ಪಿಯರ್ಸನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Toronto pearson international airport) ಹೊರಟಿತ್ತು. ಟೊರೊಂಟೊ ನಿಲ್ದಾಣದಲ್ಲಿ ಲ್ಯಾಂಡಿಗ್ ಆಗುವಾಗ ಪತನಗೊಂಡಿದೆ. ಸ್ಥಳೀಯ ಸಮಯದ ಪ್ರಕಾರ ಮಧ್ಯಾಹ್ನ 2:45 ಕ್ಕೆ ಸಂಭವಿಸಿದೆ. ವಿಮಾನ ಹೇಗೆ ಉರುಳಿತು ಅನ್ನೋದಕ್ಕೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ತನಿಖೆ ಮುಂದುವರಿದಿದೆ.

ಇದನ್ನೂ ಓದಿ: ವಿಚಿತ್ರ ಸಾಹಸಕ್ಕೆ ಕೈಹಾಕಿದ ಚೀನಾ! ಸಮುದ್ರ ಆಳದಲ್ಲಿ ಸ್ಪೇಸ್ ಸ್ಟೇಷನ್, ಭಯ ಹುಟ್ಟಿಸಿದ ಈ ಕಡಲ ಬೇಟೆ..!

ಎಲ್ಲಾ ಪ್ರಯಾಣಿಕರನ್ನು ವಿಮಾನದಿಂದ ಸುರಕ್ಷಿತವಾಗಿ ರಕ್ಷಣೆ ಮಾಡಲಾಗಿದೆ. ದುರ್ಘಟನೆಯಲ್ಲಿ ಅನೇಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಲ್ಲಿ 15 ಮಂದಿಗೆ ತೀವ್ರತರ ಗಾಯವಾಗಿದ್ದು, ಒಂದು ಮಗು ಕೂಡ ಸೇರಿದೆ ಎಂದು ವರದಿಯಾಗಿದೆ. ಗಾಯಗೊಂಡ 60 ವರ್ಷದ ವೃದ್ಧನನ್ನು ಟೊರೊಂಟೊದ ಸೇಂಟ್ ಮೈಕೆಲ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಕ್ಷಣಾ ಕಾರ್ಯಾಚರಣೆ

ವಿಮಾನ ಪತನಗೊಳ್ಳುತ್ತಿದ್ದಂತೆಯೇ ಅಗ್ನಿಶಾಮಕ ದಳ, ಅರೆವೈದ್ಯರು ಸೇರಿದಂತೆ ಇತರೆ ರಕ್ಷಣಾ ತಂಡ ವಿಮಾನ ನಿಲ್ದಾಣಕ್ಕೆ ದೌಡಾಯಿಸಿದೆ. ಸದ್ಯ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರನ್ನು ರಕ್ಷಣೆ ಮಾಡಲಾಗಿದೆ. ಬೆನ್ನಲ್ಲೇ ವಿಮಾನ ನಿಲ್ದಾಣದಿದ ಹೇಳಿಕೆ ಹೊರಬಿದ್ದಿದ್ದು, ಎಲ್ಲಾ ಪ್ರಯಾಣಿಕರು ಮತ್ತು ಸಿಬ್ಬಂದಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಅಪಘಾತ ಗಂಭೀರವಾಗಿದ್ದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದಿದೆ.

ಇದನ್ನೂ ಓದಿ: ನೂತನ ಮುಖ್ಯ ಚುನಾವಣಾಧಿಕಾರಿ ನೇಮಕ.. ಯಾರು ಜ್ಞಾನೇಶ್ ಕುಮಾರ್? ದೇಶಕ್ಕೆ ಇವರ ಕೊಡುಗೆ ಅಪಾರ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment