ಮೆಕ್ಕಾ, ಮದೀನಾದಲ್ಲಿ ರೆಡ್ ಅಲರ್ಟ್​.. ಭೀಕರ ಮಳೆಗೆ ಬೆಚ್ಚಿ ಬಿದ್ದ ಐಷಾರಾಮಿ ನಗರಗಳು

author-image
Bheemappa
Updated On
ಮೆಕ್ಕಾ, ಮದೀನಾದಲ್ಲಿ ರೆಡ್ ಅಲರ್ಟ್​.. ಭೀಕರ ಮಳೆಗೆ ಬೆಚ್ಚಿ ಬಿದ್ದ ಐಷಾರಾಮಿ ನಗರಗಳು
Advertisment
  • ಮರುಳುಗಾಡಿನಲ್ಲಿ ಬಿಟ್ಟು ಬಿಡದೇ ಸುರಿಯುತ್ತಿರುವ ಮಳೆರಾಯ
  • ವರುಣನ ಆರ್ಭಟಕ್ಕೆ ನಲುಗಿ ಹೋಗಿರುವ ಸೌದಿ ಅರೇಬಿಯಾ
  • ಮಳೆ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಕಾರು, ಬೈಕ್, ವ್ಯಾನ್

ಸೌದಿ ಅರೇಬಿಯಾ ಹೇಳಿ ಕೇಳಿ ಮರಳುಗಾಡು. ಇಲ್ಲಿ ನೀರೇ ಅಪರೂಪದ ವಸ್ತು. ಆದ್ರೆ ಇಲ್ಲೇ ಪದೇ ಪದೇ ವರುಣನ ಆರ್ಭಟ ಜೋರಾಗಿದೆ. ಮುಸ್ಲಿಮರ ಪವಿತ್ರ ಭೂಮಿ ಸೌದಿ ಅರೇಬಿಯಾ ಮೆಕ್ಕಾದಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ನಗರ ಪ್ರದೇಶಗಳು ಜಲಾವೃತಗೊಂಡು ಜನ ತತ್ತರಿಸಿ ಹೋಗಿದ್ದಾರೆ.

ಸಂಪೂರ್ಣ ಮರುಭೂಮಿಯಲ್ಲೆ ಅರೇಬಿಯಾ ನಿರ್ಮಾಣಗೊಂಡಿದೆ. ಇಲ್ಲಿನ ಜನಕ್ಕೆ ಪ್ರವಾಹ, ಜಲಾವೃತ ಅಂದ್ರೆ ಏನಂತ ಗೊತ್ತೇ ಇರಲ್ಲ. ಅದನ್ನ ಒಂದೋ ವಿಡಿಯೋ ನೋಡಿಯೋ ಅಥವಾ ಬೇರೆ ದೇಶಕ್ಕೆ ಭೇಟಿ ನೀಡಿದಾಗ ನೋಡಿ ಕಂಗಾಲಾಗಿರ್ತಾರೆ. ಆದ್ರೆ ಇತ್ತೀಚೆಗೆ ಮಧ್ಯಪ್ರಾಚ್ಯ ದೇಶಗಳೂ ಕೂಡ ಜಲ ಗಂಡಾಂತರಕ್ಕೆ ತುತ್ತಾಗಿವೆ. ಈಗ ಮತ್ತೆ ಸೌದಿ ಅರೇಬಿಯಾ ಪ್ರವಾಹದಿಂದ ನಲುಗಿದೆ.

publive-image

ಮರುಭೂಮಿ ಸೌದಿ ಅರೇಬಿಯಾದಲ್ಲಿ ಭಾರೀ ಮಳೆಯಾಗುತ್ತಿದೆ. ಜೆಡ್ಡಾ ನಗರ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ, ಮೆಕ್ಕಾ ಮತ್ತು ಮದೀನಾದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಮೆಕ್ಕಾ, ಮದೀನಾ ಮತ್ತು ಬಂದರು ನಗರವಾದ ಜೆಡ್ಡಾದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.

ಅಬ್ಬರದ ಮಳೆ, ಪ್ರವಾಹದಿಂದ ರಸ್ತೆಗಳು ಜಲಾವೃತ

ಇನ್ನು ಭಾರೀ ಮಳೆಗೆ ಜೆಡ್ಡಾ, ಮೆಕ್ಕಾ ಮತ್ತು ಮದೀನಾದಲ್ಲಿ ಪ್ರವಾಹ ಉಕ್ಕಿ ಹರಿದಿದ್ದು ಹಲವು ವಾಹನಗಳು ತರಗೆಲೆಯಂತೆ ಕೊಚ್ಚಿಹೋಗಿವೆ. ಮೆಕ್ಕಾದ ಆಗ್ನೇಯದ ಅಲ್-ಅವಾಲಿ ಪ್ರದೇಶದಲ್ಲಿ ಒಬ್ಬ ಡೆಲಿವರಿ ಹುಡುಗ ತನ್ನ ಬೈಕ್‌ನಿಂದ ನೀರಿಗೆ ಬಿದ್ದಿದ್ದಾನೆ. ಆತನ ರಕ್ಷಣೆಗೆ ಸ್ಥಳೀಯರೊಬ್ಬರು ಧಾವಿಸಿ, ಬೈಕ್ ಮೇಲೆತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ ದೊಡ್ಡ ದೊಡ್ಡ ಮರಗಳು, ಮನೆ ಬಳಕೆ ವಸ್ತುಗಳು ರಸ್ತೆ ಮೇಲೆ ಹರಿದು ನೀರಿನಲ್ಲಿ ತೇಲಿಕೊಂಡು ಹೋಗಿವೆ.

publive-image

ಇದನ್ನೂ ಓದಿಈ ಜಿಲ್ಲೆಗಳಲ್ಲಿ ಎಂಡೋಸಲ್ಫಾನ್ ಪೀಡಿತರ ಸಂಖ್ಯೆ ಹೆಚ್ಚಳ.. ಸರ್ಕಾರದ ಸಮೀಕ್ಷೆಗೆ ಒತ್ತಾಯ

ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಿದ್ದ ಕಾರುಗಳು ರಭಸವಾಗಿ ಹರಿದು ಬಂದ ಮಳೆ ನೀರಿನಲ್ಲಿ ಕೊಚ್ಚಿ ಹೋದ ದೃಶ್ಯಗಳು ಬೆಚ್ಚಿ ಬೀಳಿಸುವಂತಿದೆ. ಇನ್ನೂ ಪಾರ್ಕಿಂಗ್​ನಲ್ಲಿ ನಿಲ್ಲಿಸಿದ್ದ ಕಾರುಗಳು ಕೂಡ ಜಲಾವೃತವಾಗಿದ್ದು, ಬಿಲ್ಡಿಂಗ್​ಗಳ ಬೇಸ್​ಮೆಂಟ್​ನಲ್ಲಿ ಸುಮಾರು ಮೂರರಿಂದ 4 ಅಡಿಗಳಷ್ಟು ನೀರು ನಿಂತಿದೆ.

ಭಾರೀ ಮಳೆ ಹಿನ್ನೆಲೆ ಸೌದಿಯ ಪೂರ್ವ ಪ್ರಾಂತ್ಯ ಮತ್ತು ರಿಯಾದ್‌ನಲ್ಲಿ ಶಾಲೆಗಳನ್ನ ಆನ್‌ಲೈನ್‌ ಮೂಲಕ ನಡೆಸಲಾಗುತ್ತಿದೆ. ಕೆಲ ವಿಮಾನಯಾನಗಳೂ ರದ್ದಾಗಿವೆ. ಸಿರಾಜ್ ಅಲ್-ಖುರಾಶಿಯಿಂದ ಮೆಕ್ಕಾದ ಪಶ್ಚಿಮದಲ್ಲಿರುವ ಅಲ್-ಶಮ್ಸಿ ಸೇತುವೆ ಮಹಾ ಪ್ರವಾಹದಲ್ಲಿ ಮುಳುಗಿದೆ. ಸೌದಿ ಅರೇಬಿಯಾದಲ್ಲಿ ಅಬ್ಬರದ ಮಳೆಯಾಗ್ತಿದೆ. ಸದ್ಯ ಸಾರ್ವಜನಿಕರು ಮನೆಗಳಿಂದ ಹೊರಬಾರದಂತೆ ಸ್ಥಳೀಯ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment